Makar Sankranti 2021: ಸುಖ-ಸಮೃದ್ಧಿಗಾಗಿ ಈ 5 ವಸ್ತುಗಳ ದಾನ ಮಾಡಿ

Makar Sankranti 2021: ಸ್ನಾನ ಹಾಗೂ ದಾನದ ಮಹಾಪರ್ವ ಎಂದೇ ಹೇಳಲಾಗುವ ಮಕರ ಸಂಕ್ರಾಂತಿ ಹಬ್ಭ ಈ ಬಾರಿ ಜನವರಿ 14 ರಂದು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು.

Written by - Nitin Tabib | Last Updated : Jan 12, 2021, 08:46 PM IST
  • ಬಾರಿ ಜ.14ರಂದು ಸ್ನಾನ ಹಾಗೂ ದಾನದ ಮಹಾಪರ್ವ ಆಚರಿಸಲಾಗುತ್ತಿದೆ.
  • ಮಕರ ಸಂಕ್ರಾಂತಿಯ ದಿನ ದಾನಕ್ಕೆ ವಿಶೇಷ ಮಹತ್ವವಿದೆ.
  • ಈ ದಿನ ಯಾವ ವಸ್ತುಗಳನ್ನು ದಾನದ ರೂಪದಲ್ಲಿ ನೀಡಬೇಕು ತಿಳಿಯೋಣ ಬನ್ನಿ
Makar Sankranti 2021: ಸುಖ-ಸಮೃದ್ಧಿಗಾಗಿ ಈ 5 ವಸ್ತುಗಳ ದಾನ ಮಾಡಿ title=
Makar Sankranti 2021 (Representational Image)

Makar Sankranti 2021: ಸ್ನಾನ ಹಾಗೂ ದಾನದ ಮಹಾಪರ್ವ ಎಂದೇ ಹೇಳಲಾಗುವ ಮಕರ ಸಂಕ್ರಾಂತಿ ಹಬ್ಭ ಈ ಬಾರಿ ಜನವರಿ 14 ರಂದು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಈ ದಿನ ಖಾರಮಾಸ ಮುಕ್ತಾಯವಾಗುತ್ತಿದೆ. ಈ ಬಾರಿಯ ಮಕರ ಸಂಕ್ರಾಂತಿ ಹಬ್ಬದಂದು ವಿಶೇಷ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಬಾರಿಯ ಸಂಕ್ರಾಂತಿಯಂದು 5 ನಕ್ಷತ್ರಗಳು ಒಟ್ಟಿಗೆ ಬರಲಿವೆ. ಇದರಿಂದ ಈ ಮಹಾಪರ್ವದ ಮಹತ್ವ ಮತ್ತಷ್ಟು ಹೆಚ್ಚಾಗಲಿದೆ. ಈ ದಿನ ದಾನ ಮಾಡಿದರೆ, ಹಲವು ಪಟ್ಟು ಹೆಚ್ಚು ಫಲ ಸಿಗಲಿದೆ.

ಮಕರ ಸಂಕ್ರಾಂತಿಗೂ ಒಂದು ದಿನ ಮೊದಲು ಲೋಹರಿ ಮಹಾಪರ್ವ ಆಚರಿಸಲಾಗುತ್ತಿದೆ. ಮಕರ ಸಂಕ್ರಾಂತಿಯ (Makar Sankranti 2021) ದಿನ ಗುಜರಾತ್ ಜನರು ಗಾಳಿಪಟ ಕೂಡ ಹಾರಿಸುತ್ತಾರೆ. ಈ ದಿನ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಖಿಚಡಿ ಪರ್ವ ಆಚರಿಸಲಾಗುತ್ತದೆ. ಈ ದಿನ ಖಿಚಡಿ ದಾನವಾಗಿ ನೀಡಲಾಗುತ್ತದೆ. ಹಲವೆಡೆ ಖಿಚಡಿ ಭೋಗ ಅರ್ಪಿಸಲಾಗುತ್ತದೆ. ಹೊಸ ಫಸಲು ಬರುವ ಹಿನ್ನೆಲೆ ಪೊಂಗಲ್ ಹಬ್ಬ ಆಚರಿಸಲಾಗುತ್ತದೆ. ಹಾಗಾದರೆ ಬನ್ನಿ ಮಕರ ಸಂಕ್ರಾಂತಿಯ ಶುಭ ದಿನದಂದು ಯಾವ ವಸ್ತುಗಳನ್ನು ದಾನವಾಗಿ ನೀಡಬೇಕು ತಿಳಿದುಕೊಳ್ಳೋಣ.

ಇದನ್ನು ಓದಿ- Donation: ಇಲ್ಲಿವೆ ದಾನದ 5 ಪ್ರಮುಖ ಪ್ರಕಾರಗಳು

- ಮಕರ ಸಂಕ್ರಾಂತಿಯ ದಿನ ಖಿಚಡಿ ದಾನ ನೀಡಿದರೆ ಮನೆಗೆ ಸುಖ-ಶಾಂತಿಯ ಪ್ರವೇಶವಾಗುತ್ತದೆ ಎನ್ನಲಾಗುತ್ತದೆ.
- ಈ ದಿನ ಎಳ್ಳು-ಬೆಲ್ಲ ದಾನ ನೀಡಿದರೆ ಜಾತಕದಲ್ಲಿ ಸೂರ್ಯ ಹಾಗೂ ಶನಿಯ ಸ್ಥಿತಿ ಯಿಂದ ಶಾಂತಿ ಲಭಿಸುತ್ತದೆ.
- ಶನಿ ಸಾಡೆಸಾತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರು ತಾಮ್ರದ ಪಾತ್ರೆಯಲ್ಲಿ - ಕರಿಎಳ್ಳು ತುಂಬಿ ಬಡವರಿಗೆ ದಾನವಾಗಿ ನೀಡಬೇಕು.

ಇದನ್ನು ಓದಿ- Sankranthi : ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಯಾಕೆ ಬೀರುತ್ತಾರೆ ಗೊತ್ತಾ..

- ಈ ದಿನ ಉಪ್ಪಿನ ದಾನ ಕೂಡ ಶುಭ-ಲಾಭ ತರುತ್ತದೆ.
- ಮಾನ್ಯತೆಗಳ ಅನುಸಾರ ಈ ದಿನ ಹಸುವಿನ ತುಪ್ಪವನ್ನು ದಾನ ಮಾಡುವುದರಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. 
- ಈ ದಿನ ಧಾನ್ಯ ದಾನ ಮಾಡುವುದರಿಂದ ಅನ್ನಪೂರ್ಣೆ ಪ್ರಸನ್ನಳಾಗುತ್ತಾಳೆ .

ಇದನ್ನು ಓದಿ- Makar Sankranti 2021: ಸಂಕ್ರಾಂತಿಯ ದಿನ ಈ ಶುಭ ಯೋಗ ನಿರ್ಮಾಣ, 6 ರಾಶಿಯ ಜನರಿಗೆ ಮಹಾಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News