Mahashivaratri 2021: ರಾಶಿಗೆ ಅನುಗುಣವಾಗಿ ಮಹಾಶಿವನನ್ನು ಹೇಗೆ ಪೂಜಿಸಬೇಕೆಂದು ತಿಳಿಯಿರಿ

ಮಹಾಶಿವರಾತ್ರಿಯ ದಿನದಂದು ಭೋಲೆನಾಥ್ ಪೂಜೆಯ ಸಮಯದಲ್ಲಿ ಶಿವಲಿಂಗದ ಪವಿತ್ರೀಕರಣವು ಅನೇಕ ಶುಭ ಫಲಿತಾಂಶಗಳನ್ನು ನೀಡಲಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ರಾಶಿಚಕ್ರದ ಪ್ರಕಾರ ನೀವು ಯಾವ ರೀತಿ ಶಿವನಿಗೆ ಅಭಿಷೇಕ ಮಾಡಬೇಕೆಂದು ತಿಳಿಯಿರಿ. ಇದರಿಂದ ನಿಮ್ಮ ಆಸೆ ಈಡೇರುತ್ತದೆ.

Written by - Yashaswini V | Last Updated : Mar 11, 2021, 11:35 AM IST
  • ಮಹಾಶಿವರಾತ್ರಿಯಂದು ರಾಶಿಚಕ್ರದ ಪ್ರಕಾರ ಶಿವನನ್ನು ಆರಾಧಿಸಿ
  • ರಾಶಿಚಕ್ರದ ಪ್ರಕಾರ ಶಿವಲಿಂಗಕ್ಕೆ ಯಾರು ಏನನ್ನು ಅರ್ಪಿಸಬೇಕು ಎಂದು ತಿಳಿಯಿರಿ
  • ಈ ದಿನ ಭಕ್ತಿಯಿಂದ ಶಿವನನ್ನು ಆರಾಧಿಸಿ ಭೋಲೆನಾಥನ ಕೃಪೆಗೆ ಪಾತ್ರರಾಗಿ
Mahashivaratri 2021: ರಾಶಿಗೆ ಅನುಗುಣವಾಗಿ ಮಹಾಶಿವನನ್ನು ಹೇಗೆ ಪೂಜಿಸಬೇಕೆಂದು ತಿಳಿಯಿರಿ title=
Know according to the zodiac sign how to worship Shivling

ಬೆಂಗಳೂರು : ಇಂದು ಮಾರ್ಚ್ 11 ರಂದು ದೇಶಾದ್ಯಂತ ಮಹಾಶಿವರಾತ್ರಿಯ (Mahashivaratri) ಹಬ್ಬವನ್ನು ಆಚರಿಸಲಾಗುತ್ತಿದೆ. ಶಿವ (Lord Shiva) ಮತ್ತು ಪಾರ್ವತಿ (Goddess Parvati) ಈ ದಿನ ವಿವಾಹವಾದರು ಎಂದು ನಂಬಿರುವ ಕಾರಣ ಶಿವನ ಜೊತೆಗೆ, ತಾಯಿ ಪಾರ್ವತಿಯನ್ನೂ ಈ ದಿನ ಪೂಜಿಸಲಾಗುತ್ತದೆ. ಈ ಪ್ರಪಂಚದ ಸೃಷ್ಟಿ ಈ ದಿನದಿಂದ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಮಹಾಶಿವರಾತ್ರಿಯ ದಿನದಂದು, ನಿಮ್ಮ ರಾಶಿಚಕ್ರದ ಪ್ರಕಾರ ನೀವು ಶಿವನನ್ನು ಪೂಜಿಸಿದರೆ, ಭೋಲೆನಾಥ್ ಶೀಘ್ರದಲ್ಲೇ ಸಂತೋಷಗೊಂಡು ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಮಹಾಶಿವರಾತ್ರಿ ದಿನದಂದು ನೀವು ಶಿವಲಿಂಗಕ್ಕೆ ಏನು ಅರ್ಪಿಸಬೇಕು ಮತ್ತು ನಿಮ್ಮ ರಾಶಿಗೆ ಅನುಸಾರವಾಗಿ ಯಾವ ಮಂತ್ರವು ಫಲಪ್ರದವಾಗಲಿದೆ ಎಂದು ತಿಳಿಯಿರಿ.

ಮೇಷ ರಾಶಿ (Aries)- 

ARIES
ಈ ರಾಶಿಚಕ್ರದ ಜನರು ಗುಲಾಬಿಯಿಂದ ಶಿವನನ್ನು ಭಕ್ತಿಯಿಂದ ಪೂಜಿಸಬೇಕು. ಶಿವರಾತ್ರಿಯ ದಿನದಂದು ಓಂ ಮಾಮಲೇಶ್ವರೈ ನಮಃ ಮಂತ್ರವನ್ನೂ ಪಠಿಸಿ.

ವೃಷಭ ರಾಶಿ (Taurus)- 


ಈ ರಾಶಿಚಕ್ರದ ಜನರು ಶಿವನಿಗೆ ಹಾಲಿನಿಂದ ಅಭಿಷೇಕ ಮಾಡಿ ಓಂ ನಾಗೆಶ್ವರಾಯ ನಮಃ ಎಂಬ ಮಂತ್ರವನ್ನು ಜಪಿಸಬೇಕು.

ಮಿಥುನ ರಾಶಿ (Gemini)  - 


ಈ ರಾಶಿಚಕ್ರದ ಜನರು ಓಂ ಭೂತೇಶ್ವರಾಯ ನಮಃ ಎಂದು ಜಪಿಸುತ್ತಾ ಶಿವನಿಗೆ ಕಬ್ಬಿನ ಹಾಲಿನ ಅಭಿಷೇಕ ಮಾಡಬೇಕು.

ಕಟಕ ರಾಶಿ (Cancer) - 


ಈ ರಾಶಿಚಕ್ರದ ಜನರು ಮಹಾಶಿವರಾತ್ರಿಯ (Mahashivaratri) ದಿನ ಶಿವನ ದ್ವಾದಶ ನಾಮಗಳನ್ನು ಸ್ಮರಿಸುತ್ತಾ ಶಿವನಿಗಾ ಪಂಚಾಮೃತದಿಂದ ಅಭಿಷೇಕ ಮಾಡಿ ಶಿವನನ್ನು ಭಕ್ತಿಯಿಂದ ಆರಾಧಿಸಬೇಕು.

ಇದನ್ನೂ ಓದಿ - Mahashivaratri 2021: ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವುದರ ಹಿಂದಿನ ಮಹತ್ವ ಏನೆಂದು ತಿಳಿಯಿರಿ

ಸಿಂಹ ರಾಶಿ (Leo) - 


ಈ ರಾಶಿಚಕ್ರದ ಜನರು ಓಂ ನಮಃ ಶಿವಾಯ ಎಂದು ಜಪಿಸುತ್ತಾ ಶಿವನಿಗೆ ಜೇನುತುಪ್ಪದಿಂದ ಅಭಿಷೇಕ ಮಾಡಬೇಕು.

ಕನ್ಯಾ ರಾಶಿ (Virgo) - 

ಈ ರಾಶಿಚಕ್ರದ ಜನರು ಶಿವ ಚಾಲಿಸಾ ಪಠಿಸಿ ಶಿವನನ್ನು ಶುದ್ಧ ನೀರಿನಿಂದ ಅಭಿಷೇಕಿಸಬೇಕು.

ತುಲಾ ರಾಶಿ (Libra) - 


ಈ ರಾಶಿಚಕ್ರದ ಜನರು ಶಿವಷ್ಟಕವನ್ನು ಓದಬೇಕು ಮತ್ತು ಶಿವನಿಗೆ ಮೊಸರಿನಿಂದ ಅಭಿಷೇಕ ಮಾಡಿ ಭಕ್ತಿಯಿಂದ ಪೂಜಿಸಬೇಕು.

ವೃಶ್ಚಿಕ ರಾಶಿ (Scorpio) - 


ಈ ರಾಶಿಚಕ್ರದ ಜನರು ಓಂ ಅಂಗರೇಶ್ವರಾಯ ನಮಃ ಮಂತ್ರವನ್ನು ಜಪಿಸುತ್ತಾ ಶಿವನನ್ನು ಹಾಲು ಮತ್ತು ತುಪ್ಪದಿಂದ ಅಭಿಷೇಕ ಮಾಡಿ ಪೂಜಿಸಬೇಕು.

ಇದನ್ನೂ ಓದಿ - Mahashivaratri ದಿನ ಬುಧ ಗ್ರಹದ ಸ್ಥಾನ ಬದಲಾವಣೆ ಯಾವ ರಾಶಿಗೆ ಅದೃಷ್ಟ ಎಂದು ತಿಳಿಯಿರಿ

ಧನು ರಾಶಿ (Sagittarius) - 


ಈ ರಾಶಿಚಕ್ರದ ಜನರು ಓಂ ಸೋಮೆಶ್ವರಾಯ ನಮಃ ಎಂಬ ಮಂತ್ರವನ್ನು ಪಠಿಸುತ್ತಾ ಶಿವನಿಗೆ ಹಾಲಿನಿಂದ ಅಭಿಷೇಕ ಮಾಡಬೇಕು.

ಮಕರ ರಾಶಿ (Capricorn) - 


ಈ ರಾಶಿಚಕ್ರದ ಜನರು ಶಿವನನ್ನು ದಾಳಿಂಬೆ ರಸದಿಂದ ಅಭಿಷೇಕ ಮಾಡಿ ಶಿವ ಸಹಸ್ರ ನಾಮವನ್ನು ಪಠಿಸಬೇಕು.

ಇದನ್ನೂ ಓದಿ - Mahashivaratri 2021 : ಇಂದು ಮಹಾಶಿವರಾತ್ರಿ, ತಪ್ಪಿಯೂ ಮಾಡಬೇಡಿ ಈ ಹತ್ತು ತಪ್ಪು.!

ಕುಂಭ ರಾಶಿ (Aquarius) - 


ಈ ರಾಶಿಚಕ್ರದ ಜನರು ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪವನ್ನು ಪ್ರತ್ಯೇಕ ಶಿವನ ಮೂರ್ತಿಗೆ ಅಭಿಷೇಕ ಮಾಡುತ್ತಾ ಓಂ ಶಿವಾಯ ನಮಃ ಎಂಬ ಮಂತ್ರವನ್ನು ಪಠಿಸಬೇಕು.

ಮೀನ ರಾಶಿ (Pisces)  - 


ಈ ರಾಶಿಚಕ್ರದ ಜನರು ಹಣ್ಣುಗಳಿಂದ ಶಿವನಿಗೆ ಅಭಿಷೇಕ ಮಾಡಿ ಓಂ ಭೀಮೆಶ್ವರಾಯ ನಮಃ ಮಂತ್ರವನ್ನು ಪಠಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News