Mahashivaratri 2021 : ಶಿವರಾತ್ರಿ ದಿನ ಈ ನಾಲ್ಕು ಹೊತ್ತು ಮಹಾದೇವನ ಪೂಜಿಸಿ.! ಪೂಜಾಫಲ ನೋಡಿ

ಶಿವರಾತ್ರಿಯಂದು  ಶಿವಪೂಜೆಗೆ ಪ್ರತಿಕ್ಷಣವೂ ಪ್ರಶಸ್ತವೇ. ಆದರೆ ಅತ್ಯಂತ ಪ್ರಶಸ್ತ ಅಥವಾ ಮಹತ್ವಪೂರ್ಣ ಶಿವಘಳಿಗೆ ಅಂದರೆ ಅದು ನಾಲ್ಕು ಪ್ರಹರದಲ್ಲಿ ನಡೆಯುವ ಪೂಜೆ.   

Written by - Ranjitha R K | Last Updated : Mar 10, 2021, 09:30 AM IST
  • ಶಿವಪೂಜೆಗೆ ಅತ್ಯಂತ ಪ್ರಶಸ್ತ ನಾಲ್ಕು ಪ್ರಹರದಲ್ಲಿ ನಡೆಯುವ ಪೂಜೆ.
  • ಪ್ರಹರ ಎಂದರೆ ಮೂರು ಗಂಟೆಗಳ ಅವಧಿ
  • ಪರಮ ಭಕ್ತಿಯಿಂದ ಹೇಗೆ ಪೂಜೆ ಮಾಡಿದರೂ ಅದು ಶಿವನಿಗೆ ಅರ್ಪಿತ
Mahashivaratri 2021 :  ಶಿವರಾತ್ರಿ ದಿನ ಈ ನಾಲ್ಕು ಹೊತ್ತು ಮಹಾದೇವನ ಪೂಜಿಸಿ.!  ಪೂಜಾಫಲ ನೋಡಿ title=
ಶಿವಪೂಜೆಗೆ ಅತ್ಯಂತ ಪ್ರಶಸ್ತ ನಾಲ್ಕು ಪ್ರಹರದಲ್ಲಿ ನಡೆಯುವ ಪೂಜೆ (file photo)

ಬೆಂಗಳೂರು :  ಶಿವರಾತ್ರಿಯಂದು (Mahashivaratri) ಶಿವಪೂಜೆಗೆ ಪ್ರತಿಕ್ಷಣವೂ ಪ್ರಶಸ್ತವೇ. ಆದರೆ ಅತ್ಯಂತ ಪ್ರಶಸ್ತ ಅಥವಾ ಮಹತ್ವಪೂರ್ಣ ಶಿವಘಳಿಗೆ ಅಂದರೆ ಅದು ನಾಲ್ಕು ಪ್ರಹರದಲ್ಲಿ ನಡೆಯುವ ಪೂಜೆ. ಈ ಪೂಜೆ ಸಂಧ್ಯಾಕಾಲದಲ್ಲಿ ಶುರುವಾಗಿ ಬ್ರಾಹ್ಮಿ ಮುಹೂರ್ತದ ತನಕ ಇರುತ್ತದೆ. ಅಂದರೆ ಸಂಪೂರ್ಣವಾಗಿ ರಾತ್ರಿ ನಡೆಯುವ ಪೂಜೆ. ಇದರಿಂದ ಜೀವನದ ಪುರುಷಾರ್ಥ ಅಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈಡೇರುತ್ತದೆಯಂತೆ. ಪ್ರಹರ ಎಂದರೆ ಮೂರು ಗಂಟೆಗಳ ಅವಧಿ. ಒಂದು ದಿನಕ್ಕೆ 8 ಪ್ರಹರಗಳಿರುತ್ತದೆ. ದಿನಕ್ಕೆ ನಾಲ್ಕು ಪ್ರಹರ ಮತ್ತು ರಾತ್ರಿ ನಾಲ್ಕು ಪ್ರಹರ. ರಾತ್ರಿಯ ನಾಲ್ಕು ಪ್ರಹರದಲ್ಲಿ ಮಹಾದೇವ (Lord Shiva) ವಿಶ್ರಾಂತಿ ಪಡೆಯುತ್ತಾರೆ ಎಂದು ನಂಬಲಾಗಿದೆ. 

ಪ್ರಥಮ ಪ್ರಹರದ ಪೂಜೆ :
ಇದಕ್ಕೆ ಶುಭಮುಹೂರ್ತ ಸಂಜೆ ಆರು ಗಂಟೆಯಿಂದ 9 ಗಂಟೆಯ ತನಕ. ನೀವು ಶಿವಪೂಜೆಯನ್ನು (Shiva pooja) ಹೀಗೆ ಮಾಡಬಹುದು.
1. ಶಿವಲಿಂಗಕ್ಕೆ (Shivalinga) ಹಾಲು ಅರ್ಪಿಸಬಹುದು.
2. ಲಿಂಗಕ್ಕೆ ಜಲಾಭಿಷೇಕ ಮಾಡಬೇಕು. 
3. ಪೂಜೆ ಸಮಯದಲ್ಲಿ ಶಿವಮಂತ್ರ ಮಠಿಸಬೇಕು
4. ಬೇಕಾದರೆ ಶಿವಸ್ತುತಿ, ಭಜನೆ ಮಾಡಬಹುದು.
ಈ ಪೂಜೆಯಿಂದ ಮಹೇಶ್ವರನ ಕೃಪೆ ಪಾಪ್ತವಾಗುತದೆಯಂತೆ.

ಇದನ್ನೂ ಓದಿ:Mahashivaratri 2021 Date - ಗುರುವಾರದ ಶಿವ ಹಾಗೂ ಸಿದ್ಧಿ ಯೋಗದಲ್ಲಿ ಶಿವರಾತ್ರಿ, ಈ ದಿನ ಶಿವಪೂಜೆಯಿಂದ ಸಿಗುತ್ತೆ ಅಭಿಷ್ಟ ಲಾಭ

ಎರಡನೇ ಪ್ರಹರದ ಪೂಜೆ :
ಇದಕ್ಕೆ ಪ್ರಶಸ್ತ ಸಮಯ ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯ ತನಕ
1. ಈ ಪೂಜೆಯಲ್ಲಿ ಮಹೇಶ್ವರನಿಗೆ ಮೊಸರು (curd) ಅರ್ಪಿಸಲಾಗುತ್ತದೆ.
2. ಲಿಂಗಕ್ಕೆ ಜಲಾಭಿಷೇಕ ಮಾಡಬೇಕು
3. ಮಹಾಶಿವನಿಗೆ ಹೂವು, ಹಣ್ಣು, (Fruits) ಅಲಂಕಾರ ನಿಮಗಿಷ್ಟದಂತೆ ಮಾಡಿ
4. ಶಿವಮಂತ್ರದ ಪಠಣೆ ಮಾಡಿ
ಈ ಕಾಲದಲ್ಲಿ ಪೂಜೆ ಮಾಡುವುದರಿಂದ ಧನ, ಕನಕ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ.

ಮೂರನೇ ಪ್ರಹರ :
1. ಈ ಪ್ರಹರದ ಪೂಜೆಯ ಅವಧಿ ಮಧ್ಯರಾತ್ರಿ 12 ಗಂಟೆಯಿಂದ 3 ಗಂಟೆಯ ತನಕ. 
2. ಈ ಪೂಜೆಯಲ್ಲಿ ಪರಮೇಶ್ವರನಿಗೆ ತುಪ್ಪ (Ghee) ಅರ್ಪಿಸಿ.
2. ನಂತರ ಜಲಾಭಿಷೇಕ ಮಾಡಿ
3. ಈ ಹೊತ್ತಿನಲ್ಲಿ ಶಿವಸ್ತುತಿ ಮತ್ತು ಶಿವಧ್ಯಾನ ಮಾಡಲೇಬೇಕು. 
4. ನಿಮ್ಮ ಎಲ್ಲಾ ಮನೋಕಾಮನೆ ಪೂರ್ಣಗೊಳ್ಳುವ ಪೂಜೆ ಇದು.

ಇದನ್ನೂ ಓದಿ: Mahashivaratri : ಮಹಾಶಿವನ ಪೂಜೆಯಲ್ಲಿ ಈ ಐದು ವಸ್ತುಗಳನ್ನು ಯಾವತ್ತೂ ಬಳಸಬೇಡಿ

ನಾಲ್ಕನೇ ಪ್ರಹರದ ಪೂಜೆ :
1. ಬೆಳಗ್ಗಿನ ಜಾವ 3 ಗಂಟೆಯಿಂದ 6 ಗಂಟೆಯ ತನಕ ಇದರ ಮುಹೂರ್ತ
2. ಮಹಾರುದ್ರನಿಗೆ ಜೇನು ತುಪ್ಪ (Honey) ಅರ್ಪಿಸಿ
3. ನಂತರ ಜಲಾಭಿಷೇಕ ಮಾಡಬೇಕು
4. ಶಿವಮಂತ್ರ ಪಠಿಸಿ, ಶಿವಸ್ತುತಿ ಮಾಡಿ.
ಈ ಪೂಜೆಯಿಂದ ವ್ಯಕ್ತಿಯ ಪಾಪ ನಿವಾರಣೆಯಾಗುತ್ತದೆ. 

ಗೊತ್ತಿರಲಿ, ಮಹಾದೇವ ಭಕ್ತರ ದೇವ. ಆತ ಭಕ್ತರಾಧೀನ. ಶಿವನ ಪುರಾಣ ಕಥೆಗಳನ್ನು ಓದಿದರೆ ಅರ್ಥವಾಗುವ ಒಂದು ಸಂಗತಿಯೆಂದರೆ ಶಿವನಿಗೆ (Lord Shiva) ಇಷ್ಟವಾಗುವುದು ಭಕ್ತರ ಪರಮ ಭಕ್ತಿ. ಪರಮ ಭಕ್ತಿಯಿಂದ ಮಾಡಿದ ಶಿವಪೂಜೆ ಅದು ಹೇಗಿದ್ದರೂ ಮಹಾದೇವನಿಗೆ (Mahadev) ಅತ್ಯಂತ ಪ್ರಿಯವಾಗುತ್ತದೆ. ಹಾಗಾಗಿ, ಪರಮ ಭಕ್ತಿಯಿಂದ ಹೇಗೆ  ಪೂಜೆ ಮಾಡಿದರೂ ಅದು ಶಿವನಿಗೆ ಅರ್ಪಿತವಾಗುತ್ತದೆ. ಪೂಜೆಯಲ್ಲಿ ಕೇವಲ ಡಾಂಭಿಕತನ ಪ್ರದರ್ಶನ ಮಾಡಿದರೆ, ಕೋಟಿ ಪೂಜೆ ಮಾಡಿದರೂ ಪ್ರಯೋಜನವಿಲ್ಲ.

ಇದನ್ನೂ ಓದಿ: Mahashivaratri Muhurtha: ಮಾರ್ಚ್ 11ಕ್ಕೆ ಮಹಾಶಿವರಾತ್ರಿ: ಮಹಾಶಿವನ ಪೂಜೆಗೆ ಇಲ್ಲಿದೆ ಶುಭಮುಹೂರ್ತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News