ಮಹಾಪುರುಷ ರಾಜಯೋಗ ರೂಪಿಸುತ್ತಿರುವ ಶನಿದೇವ , ಮೂರು ರಾಶಿಯವರಿಗೆ ಕರುಣಿಸಲಿದ್ದಾನೆ ಭಾರೀ ಅದೃಷ್ಟ

Shani Margi 2022 Rajyog : ಶನಿಯ ಚಲನೆಯಲ್ಲಿ ಬದಲಾವಣೆಯು 3 ರಾಶಿಗಳಲ್ಲಿ ಪಂಚ ಮಹಾಪುರುಷ ರಾಜಯೋಗವನ್ನು ಉಂಟುಮಾಡುತ್ತದೆ. ಇದು ಬಹಳ ಮಂಗಳಕರ ಯೋಗವಾಗಿದ್ದು, ಮಹಾಪುರುಷ ರಾಜಯೋಗವು ಈ ರಾಶಿಯವರಿಗೆ ಬಹಳಷ್ಟು ಹಣವನ್ನು ಮತ್ತು ಪ್ರಗತಿಯನ್ನು ನೀಡುತ್ತದೆ.

Written by - Ranjitha R K | Last Updated : Sep 14, 2022, 08:36 AM IST
  • ಶನಿ ದೇವನಿಗೆ ಜ್ಯೋತಿಷ್ಯದಲ್ಲಿ ಬಹಳ ಮುಖ್ಯವಾದ ಸ್ಥಾನ
  • ಕ್ಷಣಮಾತ್ರದಲ್ಲಿ ಅದೃಷ್ಟವನ್ನು ಬದಲಾಯಿಸುವ ಸಾಮರ್ಥ್ಯವುಳ್ಳವನು ಶನಿ
  • ಮಹಾಪುರುಷ ರಾಜಯೋಗದಿಂದ ಈ ರಾಶಿಯವರಿಗೆ ಸಿಗುವುದು ಶುಭ ಫಲ
 ಮಹಾಪುರುಷ ರಾಜಯೋಗ ರೂಪಿಸುತ್ತಿರುವ ಶನಿದೇವ , ಮೂರು ರಾಶಿಯವರಿಗೆ ಕರುಣಿಸಲಿದ್ದಾನೆ ಭಾರೀ ಅದೃಷ್ಟ title=
Shani Margi 2022 Rajyog (file photo)

Shani Margi 2022 Rajyog : ಶನಿ ದೇವನಿಗೆ ಜ್ಯೋತಿಷ್ಯದಲ್ಲಿ ಬಹಳ ಮುಖ್ಯವಾದ ಸ್ಥಾನವನ್ನು ನೀಡಲಾಗಿದೆ. ಏಕೆಂದರೆ ಶನೀಶ್ವರ  ಅಂದರೆ ಆತ ನ್ಯಾಯದ ದೇವರು. ಕರ್ಮಕ್ಕನುಗುಣವಾಗಿ ಫಲವನ್ನು ಕೊಡುವಾತ. ಹಾಗೆಯೇ  ಕ್ಷಣಮಾತ್ರದಲ್ಲಿ ವ್ಯಕ್ತಿಯ ಅದೃಷ್ಟವನ್ನು ಬದಲಾಯಿಸುವ ಸಾಮರ್ಥ್ಯವುಳ್ಳವನು.  ಅಕ್ಟೋಬರ್ 23 ರಂದು  ಶನಿಯ ಸ್ಥಾನದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ಸದ್ಯ ಶನಿ ಮಹಾತ್ಮ  ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಅಕ್ಟೋಬರ್ 23 ರಿಂದ ಶನಿಯ ನೇರ ನಡೆ ಆರಂಭವಾಗಲಿದೆ. ಶನಿಯ ಚಲನೆಯಲ್ಲಿ ಬದಲಾವಣೆಯು 3 ರಾಶಿಗಳಲ್ಲಿ ಪಂಚ ಮಹಾಪುರುಷ ರಾಜಯೋಗವನ್ನು ಉಂಟುಮಾಡುತ್ತದೆ. ಇದು ಬಹಳ ಮಂಗಳಕರ ಯೋಗವಾಗಿದ್ದು, ಮಹಾಪುರುಷ ರಾಜಯೋಗವು ಈ ರಾಶಿಯವರಿಗೆ ಬಹಳಷ್ಟು ಹಣವನ್ನು ಮತ್ತು ಪ್ರಗತಿಯನ್ನು ನೀಡುತ್ತದೆ. 

ಮೇಷ, ಧನು, ಮೀನ ರಾಶಿಯ ಭವಿಷ್ಯ ಬದಲಾಯಿಸುತ್ತಾನೆ ಶನಿ ದೇವ : 
ಮೇಷ ರಾಶಿ: ಮಕರ ರಾಶಿಯಲ್ಲಿ ಶನಿದೇವನ ಸಂಕ್ರಮಣದಿಂದ ಮೇಷ ರಾಶಿಯಲ್ಲಿ ಪಂಚ ಮಹಾಪುರುಷ ರಾಜಯೋಗ ಉಂಟಾಗುತ್ತದೆ. ಈ ಕಾರಣದಿಂದಾಗಿ, ಈ ರಾಶಿಯ ಜನರು ವೃತ್ತಿ ಮತ್ತು ಹಣದ ವಿಷಯದಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಹೊಸ ಉದ್ಯೋಗವನ್ನು ಪಡೆಯಬಹುದು ಅಥವಾ ಈಗಿರುವ ಉದ್ಯೋಗದಲ್ಲಿಯೇ ಬಡ್ತಿ ಹೊಂದಬಹುದು. ವ್ಯಾಪಾರದಲ್ಲಿ ಬಲವಾದ ಲಾಭವಾಗುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. 

ಇದನ್ನೂ ಓದಿ : Astrology: ಜನ್ಮ ಜಾತಕದಲ್ಲಿ ಈ ಯೋಗ ಇರುವವರ ಭಾಗ್ಯ ಬಂಬಾಟಾಗಿರುತ್ತದೆ, ಪಂಚ ಮಹಾಪುರುಷ ಯೋಗಗಳಲ್ಲಿ ಇದೂ ಒಂದು

ಧನು ರಾಶಿ : ಮಾರ್ಗಿ ಶನಿಯು ಧನು ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಇಲ್ಲಿಯವರೆಗೆ, ವೃತ್ತಿಜೀವನದಲ್ಲಿ ನಿರೀಕ್ಷೆಯಲ್ಲಿದ್ದ ಪ್ರಗತಿ, ಬಡ್ತಿ ಈ  ಸಮಯದಲ್ಲಿ ಸಿಗಲಿದೆ. ವೇತನ ಹೆಚ್ಚಾಗಲಿದೆ. ಕೈ ಸೇರದೇ ಬಾಕಿ ಉಳಿದಿರುವ ಹಣ ಕೈ ಸೇರಲಿದೆ. ಅನಿರೀಕ್ಷಿತ ಧನಲಾಭವಿರುತ್ತದೆ. ವ್ಯಾಪಾರದಲ್ಲಿಯೂ ಲಾಭವಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಜನರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. 

ಮೀನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯ ನೇರ ಸಂಚಾರವು ಮೀನ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಅವರ ಆದಾಯ ಹೆಚ್ಚಾಗುತ್ತದೆ. ಆದಾಯದ ಹೊಸ ಹೊಸ ಮಾರ್ಗಗಳು ಹುಟ್ಟಿಕೊಳ್ಳುತ್ತವೆ. ವ್ಯಾಪಾರಿಗಳಿಗೂ ಲಾಭವಾಗಲಿದೆ. ಹೊಸ ಸಂಪರ್ಕಗಳು ವ್ಯಾಪಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಾರು-ಆಸ್ತಿ ಖರೀದಿಸಲು  ಉತ್ತಮ ಸಮಯ. 

ಇದನ್ನೂ ಓದಿ : Jupiter Retrograde 2022: 12 ವರ್ಷಗಳ ಬಳಿಕ ಈ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಡೆ, ಈ ಜನರಿಗೆ ಲಾಭವೇ ಲಾಭ

 

( ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News