Maha Shivratri 2022: ಜಲ ಹಾಗೂ ಬೆಲಪತ್ರಿ ಅರ್ಪಿಸುವುದರಿಂದ ಶಿವ ಏಕೆ ಬೇಗ ಪ್ರಸನ್ನನಾಗುತ್ತಾನೆ, ಇಲ್ಲಿದೆ ರೋಚಕ ಕಥೆ

Maha Shivratri 2022 - ಮಹಾಶಿವರಾತ್ರಿಯ (Maha Shivratri) ಹಬ್ಬವನ್ನು ಈ ವರ್ಷ ಮಾರ್ಚ್ 1 ರಂದು (Maha Shivratri 2022 Date) ಅಂದರೆ ಮಂಗಳವಾರ ಆಚರಿಸಲಾಗುತ್ತಿದೆ. ಶಿವನನ್ನು ಭಕ್ತರು ಭೋಲೆನಾಥ್ ಎಂದೂ ಕೂಡ ಕರೆಯುತ್ತಾರೆ. ಇದಕ್ಕೆ ಕಾರಣ ಎಂದರೆ, ಭಕ್ತರು ಶಿವನ ಮೇಲೆ ಅತ್ಯಲ್ಪ ಭಕ್ತಿ ತೋರಿದರೆ ಸಾಕು, ಶಿವ ತನ್ನ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಭಕ್ತರು ಅರ್ಪಿಸುವ ಜಲ  ಮತ್ತು ಬೆಲಪತ್ರಿಯಿಂದಲೇ ಶಿವ ಪ್ರಸನ್ನನಾಗುತ್ತಾನೆ ಎಂದು ನಮ್ಮ ಗ್ರಂಥಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.  

Written by - Nitin Tabib | Last Updated : Feb 19, 2022, 01:28 PM IST
  • ಬೆಲ್ಪತ್ರಿಯ ಕಾರಣ ಭಿಲ್ಲನಿಗೆ ಮೋಕ್ಷಪ್ರಾಪ್ತಿಯಾಗುತ್ತದೆ.
  • ಶಿವಪುರಾಣದಲ್ಲಿ ಈ ಕುರಿತು ಉಲ್ಲೇಖವಿದೆ.
  • ಸ್ವಲ್ಪವೇ ಭಕ್ತಿ ತೋರಿದರು ಸಾಕು ಶಿವ ಪ್ರಸನ್ನನಾಗುತ್ತಾನೆ.
Maha Shivratri 2022: ಜಲ ಹಾಗೂ ಬೆಲಪತ್ರಿ ಅರ್ಪಿಸುವುದರಿಂದ ಶಿವ ಏಕೆ ಬೇಗ ಪ್ರಸನ್ನನಾಗುತ್ತಾನೆ, ಇಲ್ಲಿದೆ ರೋಚಕ ಕಥೆ title=
Maha Shivratri 2022 (File Photo)

Maha Shivratri 2022: ಮಹಾಶಿವರಾತ್ರಿ ಹಬ್ಬವನ್ನು ಮಾರ್ಚ್ 1 ರಂದು ಮಂಗಳವಾರ ಆಚರಿಸಲಾಗುತ್ತಿದೆ. ಶಿವನನ್ನು ಪ್ರೀತಿಯಿಂದ ಭೋಲೆನಾಥ್ ಎಂದೂ ಕೂಡ ಕರೆಯಲಾಗುತ್ತದೆ. ಏಕೆಂದರೆ ಆತ ಕೇವಲ ಸ್ವಲ್ಪ ಭಕ್ತಿ ತೋರಿದರೂ ಸಾಕು ಭಕ್ತರ  ಭಕ್ತಿಯಿಂದ ಸಂತುಷ್ಟರಾಗಿ ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾರೆ. ಕೇವಲ ನೀರು ಮತ್ತು ಬಳಪತ್ರಿ ಎಲೆಗಳಿಂದಲೇ ಶಿವನು ಪ್ರಸನ್ನನಾಗುತ್ತಾನೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣಕ್ಕಾಗಿಯೇ ಭಕ್ತರು ಆತನಿಗೆ ನೀರು ಮತ್ತು ಬೆಲಪತ್ರಿ ಎಲೆಗಳನ್ನು (Why We Offer Water And Belpatra To Shivling) ಭಕ್ತಿ ಮತ್ತು ನಂಬಿಕೆಯಿಂದ ಅರ್ಪಿಸುತ್ತಾರೆ. ಆದರೆ, ಭೋಲೆನಾಥ್ ಈ ಎರಡೂ ವಸ್ತುಗಳನ್ನು ಅತಿ ಇಷ್ಟಪಡುವುದು ಯಾಕೆ ಅಂತ ನಿಮಗೆ ತಿಳಿದಿದೆಯಾ? ಈ ಕುರಿತು ಪುರಾಣಗಳಲ್ಲಿ ಏನನ್ನು ಉಲ್ಲೇಖಿಸಲಾಗಿದೆ ತಿಳಿದುಕೊಳ್ಳೋಣ ಬನ್ನಿ,

ಇದನ್ನೂ ಓದಿ-Ketu Gochar 2022: ಈ 7 ರಾಶಿಗಳ ಜನರ ಜೀವನದಲ್ಲಿ ಕೇತು ಸಂಕಷ್ಟ ಎದುರಾಗಲಿದೆ, ನಿಮ್ಮ ರಾಶಿ ಇದೆಯಾ ಪರೀಕ್ಷಿಸಿ

ನಾವು ಶಿವಲಿಂಗಕ್ಕೆ ನೀರು ಮತ್ತು ಎಲೆಗಳನ್ನು ಏಕೆ ಅರ್ಪಿಸುತ್ತೇವೆ?
ಶಿವಪುರಾಣದ (Shiv Puran) ಪ್ರಕಾರ, ಸಾಗರ ಮಂಥನದ ಸಮಯದಲ್ಲಿ, ಕಾಲಕೂಟ ಎಂಬ ವಿಷವು ಹೊರಬಂದಿತ್ತು. ಇದರಿಂದಾಗಿ ಎಲ್ಲಾ ದೇವತೆಗಳು ಮತ್ತು ಪ್ರಾಣಿಗಳು ತೊಂದರೆಗೊಳಗಾಗಲು ಪ್ರಾರಂಭಿಸಿದವು. ಇಡೀ ವಿಶ್ವದಲ್ಲಿಯೇ ಹಾಹಾಕಾರ ಸೃಷ್ಟಿಯಾಗಿತ್ತು. ಬ್ರಹ್ಮಾಂಡದ ರಕ್ಷಣೆಗಾಗಿ, ದೇವತೆಗಳು ಮತ್ತು ರಾಕ್ಷಸರು ಒಟ್ಟಾಗಿ ಶಿವನನ್ನು ಪ್ರಾರ್ಥಿಸುತ್ತಾರೆ. ಆಗ ಶಿವ ಪ್ರತ್ಯಕ್ಷನಾಗಿ ವಿಷವನ್ನು ಅಂಗೈಯ ಮೇಲೆ ಇಟ್ಟು ಕುಡಿಯುತ್ತಾನೆ. ವಿಷದ ಪರಿಣಾಮಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಶಿವನು ತನ್ನ ಗಂಟಲಿನಲ್ಲಿ ಅದನ್ನು ಇಟ್ಟುಕೊಳ್ಳುತ್ತಾನೆ. ಆಗ ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಇದೆ ಕಾರಣ ಆತನನ್ನು ಇಂದಿಗೂ ಕೂಡ  ನೀಲಕಂಠ ಎಂದು ಕರೆಯಲಾಗುತ್ತದೆ. ವಿಷದ ಜ್ವಾಲೆಯು ಎಷ್ಟು ಪ್ರಬಲವಾಗಿತ್ತು ಎಂದರೆ ಭೋಲೇನಾಥನ ಮಸ್ತಿಷ್ಕ ಬಿಸಿಯಾಗುತ್ತದೆ. ಈ ಪರಿಸ್ಥಿತಿಯಲ್ಲಿ, ದೇವತೆಗಳು ಶಿವನ ತಲೆ ಮೇಲೆ ನೀರನ್ನು ಅರ್ಪಿಸಲು ಪ್ರಾರಂಭಿಸುತ್ತಾರೆ. ಅದೇ ಸಮಯದಲ್ಲಿ, ಬೆಲ್ಪತ್ರೆಯ ಗುಣಗಳಿಂದಾಗಿ, ಅವರು ಅದನ್ನು ಶಿವನಿಗೆ ಅರ್ಪಿಸಲು ಆರಂಭಿಸುತ್ತಾರೆ.ಅಂದಿನಿಂದ ಶಿವನಿಗೆ ನೀರು ಮತ್ತು ಬೆಲ್ಪತ್ರಿ  ಅರ್ಪಿಸುವ ಸಂಪ್ರದಾಯವಿದೆ. ಈ ಕಾರಣದಿಂದ ಶಿವನಿಗೆ ನೀರು ಮತ್ತು ಬೇಲ್ಪತ್ರದಿಂದ ಪೂಜೆ ಮಾಡುವುದರಿಂದ ವಿಶೇಷ ಕೃಪೆ ಪ್ರಾಪ್ತಿಯಾಗುತ್ತದೆ. ಇದರೊಂದಿಗೆ ಬಡತನ ದೂರವಾಗಿ ಜೀವನದಲ್ಲಿ ಅದೃಷ್ಟ ಬಲ ಹೆಚ್ಚಾಗುತ್ತದೆ.

ಇದನ್ನೂ ಓದಿ-PALMISTRY: ಅಂಗೈಯಲ್ಲಿ ಈ ರೇಖೆ ಇರುವ ಜನರು ಬಹಳಷ್ಟು ಹಣವನ್ನು ಗಳಿಸುತ್ತಾರೆ

ಬೆಲ್ಪತ್ರೆಯ ವೈಭವ
ಮಹಾಶಿವರಾತ್ರಿಯ ಕಥೆಯಲ್ಲಿ ಬರುವ ಒಂದು ಪ್ರಸಂಗದ ಪ್ರಕಾರ ಶಿವರಾತ್ರಿಯ ದಿನ ಸುತ್ತಲು ಕತ್ತಲೆ ಆವರಿಸಿದ ಕಾರಣ ಭಿಲ್ಲನೋರ್ವ ಮನೆಗೆ ಹೋಗಲಾರದೆ ಕಾಡಿನಲ್ಲಿಯೇ ಬೆಲ್ಪತ್ರಿ ಮರವೊಂದರ ಮೇಲೆ ರಾತ್ರಿ ಕಳೆಯುತ್ತಾನೆ. ನಿದ್ರೆಯಿಂದಾಗಿ ಮರದಿಂದ ಕೆಳಗೆ ಬೀಳುವ ಭಯದಿಂದ ಆತ ರಾತ್ರಿಯಿಡೀ ಮರದ ಎಲೆಗಳನ್ನು ಕಿತ್ತು ಕೆಳಕ್ಕೆ ಎಸೆಯಲು ಪ್ರಾರಂಭಿಸುತ್ತಾನೆ. ಆದರೆ, ಪ್ರಾಸಂಗಿಕವಾಗಿ ಆ ಮರದ ಕೆಳಗೆ ಒಂದು ಶಿವಲಿಂಗ ಇರುತ್ತದೆ. ಬೇಲ್ಪತ್ರವು ಶಿವಲಿಂಗದ ಮೇಲೆ ಬಿದ್ದಾಗ ಶಿವನು ಪ್ರಸನ್ನನಾಗಿ ಭಿಲ್ಲನ ಮುಂದೆ ಪ್ರತ್ಯಕ್ಷನಾಗುತ್ತಾನೆ ಮತ್ತು ಅವನಿಗೆ ಮೋಕ್ಷ ಪ್ರಾಪ್ತಿಯ ವರವನ್ನು ನೀಡುತ್ತಾನೆ. ಬೆಲ್ಪತ್ರೆಯ ಮಹಿಮೆಯಿಂದ ಆ ಭಿಲ್ಲನಿಗೆ ಶಿವಲೋಕ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ-Maha Shivratri 2022: ಮಹಾಶಿವರಾತ್ರಿಯ ದಿನದಂದು ತಪ್ಪಿಯೂ ಶಿವಲಿಂಗಕ್ಕೆ ಈ ವಸ್ತುವನ್ನು ಅರ್ಪಿಸಬೇಡಿ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News