ಬ್ಲೂ ಫಿಲ್ಮ್​ನಲ್ಲಿ ನಟಿಸುವ ಆಫರ್! ತಾಯಿಗೆ ತಿಳಿಸಿದಾಗ ಏನ್‌ ಮಾಡಿದ್ರು ನೋಡಿ; ವಿಡಿಯೋ ವೈರಲ್‌!!

Viral Video: ʼಮಮ್ಮಿ ನನಗೆ ನೀಲಿ ಚಿತ್ರದ ಆಫರ್ ಬಂದಿದೆʼ ಅಂತಾ ಅಶ್ವಿನ್ ಹೇಳಿದಾಗ ಟ್ವಿಸ್ಟ್ ಬರುತ್ತದೆ. ಆತನ ತಾಯಿ ಕೂಡಲೇ ಕೋಪಗೊಂಡು ಆತನಿಗೆ ಗದರಿಸುತ್ತಾಳೆ. ಇಂತಹ ವಿಷಯಗಳನ್ನು ಪೋಷಕರ ಮುಂದೆ ಹೇಳಬಾರದು. ಏನಪ್ಪ ನೀನು, ಏನೋ ಖುಷಿ ಸುದ್ದಿ ಹೇಳ್ತೀಯಾ ಅಂದ್ರೆ ಹೀಗೆ ಹೇಳ್ತಾ ಇದ್ದಿಯಲ್ಲʼ ಅಂತಾ ಹೇಳುತ್ತಾರೆ. ​

Written by - Puttaraj K Alur | Last Updated : Dec 29, 2024, 05:18 PM IST
  • ಬ್ಲೂ ಫಿಲ್ಮ್​ನಲ್ಲಿ ನಟಿಸುವ ಆಫರ್​ ಸಿಕ್ಕಿದೆ ಎಂದ ಮಗ!
  • ಮಗನಿಗೆ ಸಿಕ್ಕ ಆಫರ್‌ ಬಗ್ಗೆ ತಾಯಿ ಹೇಳಿದ್ದೇನು ನೋಡಿ
  • ಕಂಟೆಂಟ್ ಕ್ರಿಯೇಟರ್ ಅಶ್ವಿನ್ ಉನ್ನಿ ವಿಡಿಯೋ ವೈರಲ್
ಬ್ಲೂ ಫಿಲ್ಮ್​ನಲ್ಲಿ ನಟಿಸುವ ಆಫರ್! ತಾಯಿಗೆ ತಿಳಿಸಿದಾಗ ಏನ್‌ ಮಾಡಿದ್ರು ನೋಡಿ; ವಿಡಿಯೋ ವೈರಲ್‌!! title=
ವಿಡಿಯೋ ಸಖತ್‌ ವೈರಲ್

Viral Video: ನಿಮಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ ಅಂತಾ ಹೇಳಿದ್ರೆ ನಿಮ್ಮ ಪೋಷಕರ ಪ್ರತಿಕ್ರಿಯೆ ಹೇಗಿರುತ್ತದೆ..? ಕೆಲವರು ಆಶ್ಚರ್ಯ ವ್ಯಕ್ತಪಡಿಸಬಹುದು, ಇನ್ನೂ ಕೆಲವರು ಸಂತೋಷದಿಂದ ಕುಣಿದು ಕುಪ್ಪಳಿಸಬಹುದು... ಕೆಲವರಿಗೆ ಖುಷಿಗೆ ಪಾರವೇ ಇರುವುದಿಲ್ಲ, ಅಷ್ಟು ಖುಷಿ ವ್ಯಕ್ತಪಡಿಸಬಹುದು. ಆದರೆ ನೀಲಿ ಚಿತ್ರ ಅಂದ್ರೆ ಬ್ಲೂ ಫಿಲ್ಮ್​ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಅಂತಾ ಹೇಳಿದ್ರೆ ಏನಾಗಬಹುದು? ಅದನ್ನ ಊಹಿಸಲಾಗದು.. ಇದೀಗ ಇಂತಹ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 

ಹೌದು, ಕೇರಳ ಮೂಲದ ಕಂಟೆಂಟ್ ಕ್ರಿಯೇಟರ್ ಅಶ್ವಿನ್ ಉನ್ನಿ ಅವರು ತಾಯಿಯ ಜೊತೆಗಿರುವ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ unniiverse_ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಆರಂಭದಲ್ಲಿ ಅಶ್ವಿನ್ ತಮ್ಮ ತಾಯಿಗೆ "ಮಾ" ಅಂತಾ ಕರೆಯುತ್ತಾನೆ. ಈ ವೇಳೆ ಅವರು ಆತನ ಬಳಿ ಬಂದು ಏನು ಅಂತಾ ಕೇಳುತ್ತಾರೆ. ಅಶ್ವಿನ್ ತನ್ನ ಬಳಿ ಒಂದು ಸುದ್ದಿ ಇದೆ ಅಂತಾ ಹೇಳುತ್ತಾನೆ. ಆಯ್ತು ಅದೇನು ಸುದ್ದಿ ಹೇಳು ಅಂತಾ ಆತನ ತಾಯಿ ಹೇಳುತ್ತಾಳೆ. ನಂತರ ತಾಯಿಯನ್ನು ಖುರ್ಚಿಯಲ್ಲಿ ಕುರಿಸಿ ಆತ ಹಿಂದೆ ನಿಲ್ಲುತ್ತಾನೆ. 

ಇದನ್ನೂ ಓದಿ: ಪ್ಯಾರಸಿಟಮಾಲ್ ನಿಂದ ಮಹಿಳೆ ಸಾವು..! ನೀವೂ ಈ ಮಾತ್ರೆಯನ್ನು ಹೆಚ್ಚು ಸೇವಿಸುತ್ತೀರಾ..? ತಕ್ಷಣ ಈ ವಿಷಯ ತಿಳಿಯಿರಿ..

ಬಳಿಕ ತನಗೆ ಸಿನಿಮಾದಲ್ಲಿ ನಟಿಸುವ ಆಫರ್ ಸಿಕ್ಕಿದೆ ಅಂತಾ ಅಶ್ವಿನ್ ತಾಯಿಗೆ ತಿಳಿಸುತ್ತಾನೆ. ಇದನ್ನು ಕೇಳಿದ ಆತನ ತಾಯಿಗೆ ತುಂಬಾ ಸಂತೋಷವಾಯಿತು. ಅವರು ಹೇ... ಅಂತಾ ಖುಷಿ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ತನ್ನ ಮಗನ ಬಳಿ ಹೆಚ್ಚಿನ ಮಾಹಿತಿ ಕೇಳುತ್ತಾಳೆ. ನಾನು ಇದೀಗ ಸತ್ಯವನ್ನು ಹೇಳುತ್ತಿದ್ದೇನೆ ಅಮ್ಮ ಅಂತಾ ಹೇಳುತ್ತಾನೆ. ಈ ವೇಳೆ ತಾಯಿ ಆತನನ್ನು ತಬ್ಬಿಕೊಂಡು ಚುಂಬಿಸುತ್ತಾಳೆ, ಸಿಹಿಸುದ್ದಿ ತಿಳಿದು ಸಂಭ್ರಮಿಸುತ್ತಾಳೆ. 

ʼಮಮ್ಮಿ ನನಗೆ ನೀಲಿ ಚಿತ್ರದ ಆಫರ್ ಬಂದಿದೆʼ ಅಂತಾ ಅಶ್ವಿನ್ ಹೇಳಿದಾಗ ಟ್ವಿಸ್ಟ್ ಬರುತ್ತದೆ. ಆತನ ತಾಯಿ ಕೂಡಲೇ ಕೋಪಗೊಂಡು ಆತನಿಗೆ ಗದರಿಸುತ್ತಾಳೆ. ಇಂತಹ ವಿಷಯಗಳನ್ನು ಪೋಷಕರ ಮುಂದೆ ಹೇಳಬಾರದು. ಏನಪ್ಪ ನೀನು, ಏನೋ ಖುಷಿ ಸುದ್ದಿ ಹೇಳ್ತೀಯಾ ಅಂದ್ರೆ ಹೀಗೆ ಹೇಳ್ತಾ ಇದ್ದಿಯಲ್ಲʼ ಅಂತಾ ಹೇಳುತ್ತಾರೆ. ಕೊನೆಯಲ್ಲಿ ಅಶ್ವಿನ್ ಅವರು ನನಗೆ ಬಂದಿದ್ದ ೪ ಲಕ್ಷದ ಆಫರ್ ಅನ್ನು ತಿರಸ್ಕರಿಸಿದೆ ಅಂತಾ ಹೇಳುತ್ತಾರೆ. ತಮಗೆ ಬಂದಿರೋ ಆಫರ್‌ನ ಸ್ಕ್ರೀನ್‌ ಶಾಟ್‌ಅನ್ನು ಅವರು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಮತ್ತೊಂದು ರಣಭೀಕರ ವಿಮಾನ ದುರಂತ... 179 ಮಂದಿ ಪ್ರಯಾಣಿಕರ ದಾರುಣ ಸಾವು! ಆಘಾತಕಾರಿ ಲೈವ್‌ ವಿಡಿಯೋ ಇಲ್ಲಿದೆ

ಇನ್ನು ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ೧೬ ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ನೂರಾರು ಜನರು ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ. ಕೆಲವರು ʼಸಿಕ್ಕಿದ್ದ ಉತ್ತಮ ಆಫರ್‌ಅನ್ನ ಏಕೆ ತಿರಸ್ಕರಿಸಿದಿರಿ?ʼ ಎಂದು ಪ್ರಶ್ನಿಸಿದರೆ, ಇಂತಹ ವಿಷಯಗಳನ್ನು ಪೋಷಕರ ಬಳಿ ಹೇಳುವುದು ತಪ್ಪು ಅಂತಾ ಸಲಹೆ ನೀಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News