/kannada/photo-gallery/biggboss-11-first-elimination-yamuna-srinidhi-husband-and-children-249346 ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌  ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌ ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌ ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌ 249346

Luckiest Girls: ಇವರೇ ಈ ವರ್ಷದ ಲಕ್ಕಿ ಹುಡುಗಿಯರು, ಹೇಗೆ ತಿಳಿಯಬೇಕೆ? ಲೇಖನ ಓದಿ

Lucky Girls By Zodiac Signs - ನಾಲ್ಕು ರಾಶಿಯ ಯುವತಿಯರ ಪಾಲಿಗೆ ವರ್ಷ 2022 ತುಂಬಾ ಉತ್ತಮವಾಗಿರಲಿದೆ. ಕೆಲಸದ ವಿಷಯದಲ್ಲಿ ಬಡ್ತಿಯ ಜೊತೆಗೆ ಅವಿವಾಹಿತ ಯುವತಿಯರ ಕಂಕಣ ಬಲ ಕೂಡ ಕೂಡಿ ಬರಲಿದೆ.

Written by - Nitin Tabib | Last Updated : Jan 4, 2022, 05:18 PM IST
  • ಶುಭವಾಗಿರಲಿದೆ ವರ್ಷ 2022
  • 4 ರಾಶಿಯ ಯುವತಿಯರ ಭಾಗ್ಯ ಬೆಳಗಲಿದೆ.
  • ಲಭಿಸಲಿದೆ ಹಣ ಮತ್ತು ಯಶಸ್ಸು
Luckiest Girls: ಇವರೇ ಈ ವರ್ಷದ ಲಕ್ಕಿ ಹುಡುಗಿಯರು, ಹೇಗೆ ತಿಳಿಯಬೇಕೆ? ಲೇಖನ ಓದಿ title=
Lucky Girls By Zodiac Signs (Representational Image)

ನವದೆಹಲಿ: Horoscope 2022 - ಹೊಸ ವರ್ಷ ಶುರುವಾಗಿದೆ. ಜ್ಯೋತಿಷ್ಯದ ಲೆಕ್ಕಾಚಾರದ ಆಧಾರದ ಮೇಲೆ, ಈ ವರ್ಷವು ಕೆಲವರಿಗೆ ಉತ್ತಮವಾಗಿರಲಿದೆ. ಆದರೆ ಕೆಲವರ ಪಾಲಿಗೆ ನಿರಾಶೆಯೂ ಕೂಡ ಇರಲಿದೆ. ಲಿಂಗದ ಆಧಾರದ ಮೇಲೆ ಜ್ಯೋತಿಷ್ಯ ಲೆಕ್ಕಾಚಾರಗಳನ್ನು ಸಹ ಮಾಡಲಾಗುತ್ತದೆ. ಇದರ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳನ್ನು ಹೊಂದಿರುವ ಯುವತಿಯರಿಗೆ (Lucky Girls) ಈ ವರ್ಷವು ತುಂಬಾ ಮಂಗಳಕರವಾಗಿರುತ್ತದೆ. ಈ ವರ್ಷದ ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈ ರಾಶಿಯ ಜಾತಕ ಹೊಂದಿದ ಯುವತಿಯರ ಭಾಗ್ಯ ಬೆಳಗಲಿದೆ
ಮೇಷ ರಾಶಿ (Aries) -
ಮೇಷ ರಾಶಿಯ ಹುಡುಗಿಯರಿಗೆ 2022 ರ ವರ್ಷವು ತುಂಬಾ ಒಳ್ಳೆಯದು ಸಾಬೀತಾಗಲಿದೆ. ಇವರಿಗೆ ತಮ್ಮ ಇಷ್ಟದ ಕೆಲಸ ಸಿಗಲಿದೆ. ನೀವು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ಆ ಕನಸು ಕೂಡ ಈ ವರ್ಷ ಈಡೇರುತ್ತದೆ.

ಕರ್ಕರಾಶಿ  (Cancer) - ಕರ್ಕಾಟಕ ರಾಶಿಯ ಹುಡುಗಿಯರಿಗೆ, ಈ ವರ್ಷವು ಅನೇಕ ಕನಸುಗಳು ಮತ್ತು ಆಸೆಗಳನ್ನು ಪೂರೈಸುತ್ತದೆ. ಮದುವೆ ವಿಳಂಬವಾಗುತ್ತಿರುವ ಹುಡುಗಿಯರಿಗೆ ಈ ವರ್ಷ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ವೃತ್ತಿಜೀವನವೂ ಉತ್ತಮವಾಗಿರಲಿದೆ.

ಕನ್ಯಾರಾಶಿ (Virgo) - ಕನ್ಯಾ ರಾಶಿಯ ಯುವತಿಯರು ಈ ವರ್ಷ ಅಧ್ಯಯನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ನೀವು ಸಂದರ್ಶನವನ್ನು ನೀಡಲು ಹೋದರೆ, ಅದರಲ್ಲಿ ಉತ್ತೀರ್ಣರಾಗಲು ಬಲವಾದ ಅವಕಾಶಗಳಿವೆ. ನಿಮಗೆ ಮನಮೆಚ್ಚಿದ ಸಂಗಾತಿ ಸಿಗಲಿದ್ದಾನೆ. ಬಡ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. 

ಇದನ್ನೂ ಓದಿ-Financial Crisis: ಆರ್ಥಿಕ ಬಿಕ್ಕಟ್ಟನ್ನು ಕೊನೆಗೊಳಿಸುತ್ತದೆ ವೀಳ್ಯದೆಲೆಯ ಒಂದು ಸಣ್ಣ ಪರಿಹಾರ

ಧನು ರಾಶಿ (Sagittarius) - 2022 ರ ವರ್ಷವು ಧನು ರಾಶಿಯ ಹುಡುಗಿಯರಿಗೆ ಬಹಳಷ್ಟು ಸಾಧನೆಗಳು ಮತ್ತು ಸಂತೋಷವನ್ನು ಹೊತ್ತು ತರುತ್ತಿದೆ. ದುಡಿಯುವ ಹೆಂಗಸರು-ಹುಡುಗಿಯರು ವ್ಯಾಪಾರದಲ್ಲಾಗಲಿ, ಉದ್ಯೋಗದಲ್ಲಾಗಲಿ ಹಣ ಗಳಿಸುವುದು ಖಚಿತ. ನೀವು ಶಿಸ್ತಿನ ಜೀವನವನ್ನು ನಡೆಸಿದರೆ, ನೀವು ಅನೇಕ ಪಟ್ಟು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ-Money Plant Tips : ಮನೆಯಲ್ಲಿ ಮರೆತು ಕೂಡ ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡಬೇಡಿ! ಇಲ್ಲದಿದ್ದರೆ ತಪ್ಪಿದಲ್ಲ ಸಮಸ್ಯೆ

(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Shani Dhaiya 2022 : ಶನಿದೇವನ ವಕ್ರ ಕಣ್ಣಿನಿಂದ ಸಿಗಲಿದೆ ಮೋಕ್ಷ : 5 ರಾಶಿಯವರು ಪ್ರಾಬಲ್ಯ ಹೊಂದಿದ್ದಾರೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.