Lizard Falling Meaning : ಹಲ್ಲಿ ಪ್ರತಿ ಮನೆಯಲ್ಲೂ ಸುಲಭವಾಗಿ ಕಂಡುಬರುತ್ತದೆ. ಹಿಂದೂ ಧರ್ಮದಲ್ಲಿ ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹಲ್ಲಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಅದನ್ನು ನೋಡುವುದು ಅನೇಕ ಸಂದರ್ಭಗಳಲ್ಲಿ ಬಹಳ ಮಂಗಳಕರವಾಗಿದೆ. ಅನೇಕ ಜನರು ಹಲ್ಲಿಯನ್ನು ನೋಡಲು ಹೆದರುತ್ತಾರೆ. ಹಲ್ಲಿ ನೆಲದ ಮೇಲೆ ಬೀಳುವುದು ಅಥವಾ ವ್ಯಕ್ತಿಯ ಮೇಲೆ ಬೀಳುವುದು ಒಳ್ಳೆಯ ಅಥವಾ ಕೆಟ್ಟ ಸೂಚನೆಯನ್ನು ನೀಡುತ್ತದೆ. ಹಲ್ಲಿ ಬೀಳುವುದು ಶುಭವೋ ಅಶುಭವೋ ತಿಳಿಯೋಣ.
ಇದನ್ನೂ ಓದಿ : ಕುತ್ತಿಗೆಗೆ ಸುತ್ತಿಕೊಂಡು ಜೀವಂತವಾಗಿ ನುಂಗಲು ಆರಂಭಿಸಿದ ಹೆಬ್ಬಾವು! ಮುಂದೇನಾಯ್ತು?
ಶಕುನ ಶಾಸ್ತ್ರದ ಪ್ರಕಾರ, ಹಲ್ಲಿಯು ನೆಲದ ಮೇಲೆ ಬೀಳುವುದು ಅಶುಭವೆಂದು ಪರಿಗಣಿಸಲಾಗಿದೆ. ಇದರರ್ಥ ಮುಂಬರುವ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆಯಲಿವೆ ಮತ್ತು ನೀವು ಎಚ್ಚರದಿಂದಿರಬೇಕು. ಮತ್ತೊಂದೆಡೆ, ನೆಲದ ಮೇಲೆ ಹಲ್ಲಿ ತೆವಳುತ್ತಿರುವುದನ್ನು ನೀವು ನೋಡಿದರೆ, ಶೀಘ್ರದಲ್ಲೇ ನಿಮಗ ಆರ್ಥಿಕ ಲಾಭವಾಗಲಿದೆ ಎಂದು ಅರ್ಥಮಾಡಿಕೊಳ್ಳಿ.
ಹಲ್ಲಿಯು ಗೋಡೆಯ ಮೇಲೆ ಏರುತ್ತಿರುವುದು ಕಂಡುಬಂದರೆ, ಅದು ಶುಭ ಸಂಕೇತವಾಗಿದೆ ಮತ್ತು ಕೆಲವು ಒಳ್ಳೆಯ ಸುದ್ದಿ ಬರಲಿದೆ ಎಂದರ್ಥ. ಗೋಡೆಯಿಂದ ಹಲ್ಲಿ ಇಳಿಯುವುದನ್ನು ನೀವು ನೋಡಿದರೆ ನೀವು ಜಾಗರೂಕರಾಗಿರಬೇಕು. ಏಕೆಂದರೆ ಅದು ಅಶುಭವೆಂದು ಪರಿಗಣಿಸಲಾಗಿದೆ. ಇದು ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : ಮಧುಮೇಹಿಗಳು ಮರೆತೂ ಈ ಹಣ್ಣುಗಳನ್ನು ತಿನ್ನಬೇಡಿ
ಪೂಜಾ ಮನೆಯಲ್ಲಿ ಹಲ್ಲಿ ಕಂಡರೆ ನಿಮ್ಮ ಆರ್ಥಿಕ ಸ್ಥಿತಿ ಗಟ್ಟಿಯಾಗಲಿದೆ ಎಂದರ್ಥ. ಇದಲ್ಲದೆ, ಹಲ್ಲಿ ವ್ಯಕ್ತಿಯ ತಲೆಯ ಮೇಲೆ ಬಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಆ ವ್ಯಕ್ತಿಯ ಸಾವು ಹತ್ತಿರದಲ್ಲಿದೆ ಅಥವಾ ಯಾವುದಾದರೂ ಗಂಭೀರ ಕಾಯಿಲೆ ಸಂಭವಿಸಲಿದೆ ಎಂಬುದರ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ.
ಅದೇ ಸಮಯದಲ್ಲಿ, ಶಕುನ ಶಾಸ್ತ್ರದಲ್ಲಿ ಹಲ್ಲಿಯು ಮನುಷ್ಯನ ಎದೆಯ ಬಲಭಾಗದಲ್ಲಿ ಬಿದ್ದರೆ ಅದು ಶುಭ ಸಂಕೇತವಾಗಿದೆ ಎಂದು ಹೇಳಲಾಗಿದೆ. ಅಂದರೆ ನಿಮ್ಮ ಮನೆಯಲ್ಲಿ ಸಂತಸ ತುಂಬಲಿದೆ ಎಂದರ್ಥ. ಎದೆಯ ಎಡಭಾಗದಲ್ಲಿ ಹಲ್ಲಿ ಬಿದ್ದರೆ ನಿಮ್ಮ ಮನೆಯಲ್ಲಿ ವಿವಾದ ಉಂಟಾಗಲಿದೆ ಎಂದರ್ಥ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.