ಡೈ ಬಳಸದೆಯೇ ನಿಮ್ಮ ಬಿಳಿ ತಲೆಯನ್ನು ಕಪ್ಪಾಗಿಸಬೇಕೆ? ಇಲ್ಲಿದೆ ಸೂಪರ್ ಹಿಟ್ ಉಪಾಯ!

Tips To Naturally Black Your White Hairs: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವೂ ಕೂಡ ಬಿಳಿ ಕೂದಲಿನ ಸಮಸ್ಯೆಯಿಂದ ತೊಂದರೆಗೆ ಒಳಗಾಗಿದ್ದಾರೆ, ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಹೇಗೆ ಕಪ್ಪಾಗಿಸಬಹುದು ಎಂಬುದನ್ನು ನಾವು ಇಲ್ಲಿ ಹೇಳಿಕೊಡುತ್ತಿದ್ದೇವೆ (Lifestyle News In Kannada),   

Written by - Nitin Tabib | Last Updated : Aug 10, 2023, 10:54 PM IST
  • ಆಮ್ಲಾ ಮತ್ತು ಶಿಕಾಕಾಯಿಯನ್ನು ಹಲವು ವರ್ಷಗಳಿಂದ ಕೂದಲಿಗೆ ಬಳಸಲಾಗುತ್ತಿದೆ. ಆದರೆ ಇದು ಕೂದಲನ್ನು ಕೂದಲನ್ನು ಕಪ್ಪಾಗಿಸುವ ಕೆಲಸ ಮಾಡುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ?
  • ಇದಕ್ಕಾಗಿ ಒಂದು ಲೋಹದ ಪಾತ್ರೆಯಲ್ಲಿ 4 ಚಮಚ ಆಮ್ಲಾ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಶಿಕಾಕಾಯಿ ಪುಡಿಯನ್ನು ಬೆರೆಸಿ,
  • ನಂತರ ಈ ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ ಅದನ್ನು ಇಡೀ ರಾತ್ರಿ ಹಾಗೆಯೇ ಬಿಡಿ, ಈ ರೀತಿ ಮಾಡುವುದರಿಂದ ಕೂದಲುಗಳು ನೈಸರ್ಗಿಕ ರೀತಿಯಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತವೆ.
ಡೈ ಬಳಸದೆಯೇ ನಿಮ್ಮ ಬಿಳಿ ತಲೆಯನ್ನು ಕಪ್ಪಾಗಿಸಬೇಕೆ? ಇಲ್ಲಿದೆ ಸೂಪರ್ ಹಿಟ್ ಉಪಾಯ! title=

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಷ್ಟೇ ಯಾಕೆ ಬದಲಾಗಿರುವ ಜೀವನಶೈಲಿ ಹಾಗೂ ಹವಾಮಾನದ ಕಾರಣ ಯುವಕರಲ್ಲಿಯೂ ಈ ಸಮಸ್ಯೆ ಕಂಡು ಬರುತ್ತಿದೆ. ಹೀಗಿರುವಾಗ, ಜನರು ಹೇರ್ ಡೈ ಬಳಸಿ ಕೂದಲಿಗೆ ಮತ್ತಷ್ಟು ಹಾನಿಯನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ (Lifestyle News In Kannada), ಏಕೆಂದರೆ ಕೂದಲಿಗೆ ಬಳಸುವ ಡೈನಲ್ಲಿ ನಿಮ್ಮ ಕೂದಲಿಗೆ ಹಾನಿ ಮಾಡುವ ರಾಸಾಯನಿಕಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಬಿಳಿ ಕೂದಲಿನ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಚಿಂತಿಸುವ ಅವಶ್ಯಕತೆ ಇಲ್ಲ. ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುವುದು ಹೇಗೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ, 

ಈ ವಿಧಾನಗಳಿಂದ ನಿಮ್ಮ ಕೂದಲನ್ನು ಕಪ್ಪಾಗಿಸಿ
ಆಮ್ಲಾ ಪುಡಿ ಮತ್ತು ತೆಂಗಿನೆಣ್ಣೆ ಮಿಶ್ರಣ

ಆಮ್ಲಾ ಮತ್ತು ತೆಂಗಿನ ಎಣ್ಣೆ ಕೂದಲಿಗೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಕೂದಲನ್ನು ಕಪ್ಪಾಗಿಸುವ ಜೊತೆಗೆ, ಅವುಗಳನ್ನು ಬಲಪಡಿಸುವ ಕೆಲಸ ಇವು ಮಾಡುತ್ತವೆ. ಇದಕ್ಕಾಗಿ, ಒಂದು ಬೌಲ್ನಲ್ಲಿ 2 ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಆಮ್ಲಾ ಪುಡಿಯನ್ನು ಬೆರೆಸಿ, ಈಗ ಅದನ್ನು ಬಿಸಿ ಮಾಡಿ ತಣ್ಣಗಾಗಿಸಿ ಮತ್ತು ಲಘು ಕೈಗಳಿಂದ ಕೂದಲಿಗೆ ಹಚ್ಚಿ. ಬಳಿಕ 1 ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಸ್ವಾಭಾವಿಕವಾಗಿ ಕಪ್ಪಾಗುತ್ತದೆ ಮತ್ತು ಸ್ಟ್ರಾಂಗ್ ಆಗುತ್ತದೆ.

ಇದನ್ನೂ ಓದಿ-ವೇಗವಾಗಿ ಕೂದಲು ಉದುರುತ್ತಿವೆಯೇ? ಈ ನೀರಿನಿಂದ ಕೂದಲು ತೊಳೆದರೆ ತಕ್ಷಣಕ್ಕೆ ನಿಂತುಹೋಗುತ್ತವೆ!

ಆಮ್ಲಾ ಮತ್ತು ಶಿಕಾಕಾಯಿ 
ಆಮ್ಲಾ ಮತ್ತು ಶಿಕಾಕಾಯಿಯನ್ನು ಹಲವು ವರ್ಷಗಳಿಂದ ಕೂದಲಿಗೆ ಬಳಸಲಾಗುತ್ತಿದೆ. ಆದರೆ ಇದು ಕೂದಲನ್ನು ಕೂದಲನ್ನು ಕಪ್ಪಾಗಿಸುವ ಕೆಲಸ ಮಾಡುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ? ಇದಕ್ಕಾಗಿ ಒಂದು ಲೋಹದ  ಪಾತ್ರೆಯಲ್ಲಿ 4 ಚಮಚ ಆಮ್ಲಾ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಶಿಕಾಕಾಯಿ ಪುಡಿಯನ್ನು ಬೆರೆಸಿ, ನಂತರ ಈ ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ ಅದನ್ನು ಇಡೀ ರಾತ್ರಿ ಹಾಗೆಯೇ ಬಿಡಿ, ಈ ರೀತಿ ಮಾಡುವುದರಿಂದ ಕೂದಲುಗಳು ನೈಸರ್ಗಿಕ ರೀತಿಯಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತವೆ.

ಇದನ್ನೂ ಓದಿ-ದೇಹದಲ್ಲಿರುವ ಕೊಬ್ಬನ್ನು ಬೆಣ್ಣೆಯಂತೆ ಕರಗಿಸಿ ಹೊರಹಾಕುತ್ತದೆ ಈ ಮ್ಯಾಜಿಕಲ್ ಡ್ರಿಂಕ್!

ಇಂಡಿಗೋ ಪೌಡರ್ ಹಾಗೂ ಗೋರಂಟಿ
ಹೆನ್ನಾ ಮತ್ತು ಇಂಡಿಗೋ ಪೌಡರ್ ನಿಂದ ಕೂದಲುಗಳು ನೈಸರ್ಗಿಕವಾಗಿ ಕಪ್ಪಾಗುತ್ತವೆ. ಇದನ್ನು ಮಾಡಲು, ಒಂದು ಬಟ್ಟಲಿನಲ್ಲಿ ಇಂಡಿಗೋ ಪೌಡರ್ ತೆಗೆದುಕೊಂಡು ಅದಕ್ಕೆ ಒಂದು ಚಮಚ ಗೋರಂಟಿ ಸೇರಿಸಿ, ಈಗ ಅದಕ್ಕೆ ಮೊಟ್ಟೆಯನ್ನು ಸೇರಿಸಿ ಮತ್ತು ಅದನ್ನು ಮೊಸರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಇದರ ನಂತರ, ಒಂದು ಗಂಟೆ ಕೂದಲಿಗೆ ಅನ್ವಯಿಸಿ. ತದನಂತರ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲಿನ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News