ಭಾರತದ ಯಾವ ಪ್ರದೇಶಗಳಲ್ಲಿ ಗೋಚರಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ: ಇಲ್ಲಿದೆ ವಿಶೇಷ ಮಾಹಿತಿ

Lunar Eclipse: ದಿನಾಂಕ- 8 ನವೆಂಬರ್ 2022, ವಾರ-ಮಂಗಳವಾರ, ನಕ್ಷತ್ರ- ಭರಣಿ, ತಿಥಿ-ಕಾರ್ತಿಕ/ ದೊಡ್ಡ ಗೌರಿ ಹುಣ್ಣಿಮೆ, ಯೋಗ-ವ್ಯತಿಪಾತ, ಕರಣ- ಬವಕರಣ 

Written by - Yashaswini V | Last Updated : Nov 8, 2022, 10:19 AM IST
  • ಗ್ರಹಣ ಕಾಲದಲ್ಲಿ ಸೂತಕದ ಅವಧಿಯಲ್ಲಿ ಆಹಾರ ಸೇವನೆ ನಿಷಿದ್ಧ.
  • ಹಾಗಾಗಿ, ಗ್ರಹಣದ ಸೂತಕದ ಅವಧಿ ಆರಂಭವಾಗುವ ಮೊದಲು ಆಹಾರ ಸೇವಿಸಬಹುದು.
  • ಭಾರತದಲ್ಲಿ ಎಲ್ಲೆಲ್ಲಿ ಗ್ರಹಣ ಗೋಚರಿಸಲಿದೆ ತಿಳಿಯಿರಿ
ಭಾರತದ ಯಾವ ಪ್ರದೇಶಗಳಲ್ಲಿ ಗೋಚರಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ: ಇಲ್ಲಿದೆ ವಿಶೇಷ ಮಾಹಿತಿ  title=
CHANDRA GRAHAN

Chandra Grahan: ಇಂದು ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸುತ್ತಿದೆ. ಭಾರತದಲ್ಲಿಯೂ ಗ್ರಹಣ ಕಾಣಿಸಿಕೊಳ್ಳುವುದರಿಂದ ಸೂತಕದ ಅವಧಿ ಮಾನ್ಯವಾಗಿರುತ್ತದೆ. ಇಂದಿನ ಪಂಚಾಂಗ, ಗ್ರಹಣ ಕಾಲ, ಎಲ್ಲೆಲ್ಲಿ ಗ್ರಹಣ ಗೋಚರಿಸಲಿದೆ ಎಂಬ ಬಗ್ಗೆ  ಆಚಾರ್ಯ ಡಾ.ಮುರುಳಿಧರ್ ಅವರಿಂದ ಇಲ್ಲಿದೆ ಪ್ರಮುಖ ಮಾಹಿತಿ.

ಇಂದಿನ ಪಂಚಾಂಗ:
ದಿನಾಂಕ-  8 ನವೆಂಬರ್ 2022, ವಾರ-ಮಂಗಳವಾರ, ನಕ್ಷತ್ರ- ಭರಣಿ, ತಿಥಿ-ಕಾರ್ತಿಕ/ ದೊಡ್ಡ ಗೌರಿ ಹುಣ್ಣಿಮೆ, ಯೋಗ-ವ್ಯತಿಪಾತ, ಕರಣ- ಬವಕರಣ 

ಇದನ್ನೂ ಓದಿ- Lunar Eclipse 2022: ಕಾರ್ತಿಕ ಪೂರ್ಣಿಮೆಯಂದು ಚಂದ್ರಗ್ರಹಣ, ಸೂರ್ಯನಂತೆ ಬೆಳಗಲಿದೆ ಈ ರಾಶಿಯವರ ಅದೃಷ್ಟ

ವಿಶೇಷ ಮಾಹಿತಿ: 1) ಚಂದ್ರ ಗ್ರಹಣ 2) ಗುರುನಾನಕ್ ಜಯಂತಿ 

ಗ್ರಹಣ: ರಾಹುಗ್ರಸ್ತಗ್ರಸ್ತೋದಯ ಚಂದ್ರಗ್ರಹಣ

ಗ್ರಹಣ ಕಾಲ:-
ಗ್ರಹಣ ಸ್ಪರ್ಶ- ಮಧ್ಯಾಹ್ನ 02:38
ಮಧ್ಯ ಕಾಲ- ಸಂಜೆ 04:29
ಮೋಕ್ಷ ಕಾಲ- ಸಂಜೆ 06:19

ಭಾರತದಲ್ಲಿ ಗ್ರಹಣ ಗೋಚರಿಸುವ ಸ್ಥಳಗಳು:
ಅಗರ್ತಲ, ಅಜವಾಲ್, ಗಯಾ, ಪಾಟ್ನ, ಭುವನೇಶ್ವರ, ಶಿಲ್ಲಾಂಗ್, ಗ್ಯಾಂಗ್ ಟಕ್, ರಾಂಚಿ, ಪಾಂಡೀಚೇರಿ, ಮುಂಬೈ, ಭೂಪಾಲ್, ದೆಹಲಿ, ಗಾಂಧಿನಗರ, ಶ್ರೀನಗರ, ಶಿಮ್ಲಾ, ತಿರುವನಂತಪುರ, ಹೈದರಾಬಾದ್, ಪಣಜಿ, ರಾಯಪುರ.

ಇದನ್ನೂ ಓದಿ- Lunar Eclipse 2022: ಚಂದ್ರಗ್ರಹಣ, ಸೂತಕದ ಅವಧಿಯಲ್ಲಿ ಏನು ಮಾಡಬಾರದು ಗೊತ್ತಾ..?

ಭೋಜನ ವಿಚಾರ: ಗ್ರಹಣ ಕಾಲದಲ್ಲಿ ಸೂತಕದ ಅವಧಿಯಲ್ಲಿ ಆಹಾರ ಸೇವನೆ ನಿಷಿದ್ಧ. ಹಾಗಾಗಿ, ಗ್ರಹಣದ ಸೂತಕದ ಅವಧಿ ಆರಂಭವಾಗುವ ಮೊದಲು ಬೆಳಿಗ್ಗೆ 11:50ರವರೆಗೆ ಆಹಾರ ಸೇವಿಸಬಹುದು. ಗ್ರಹಣ ಮೋಕ್ಷ ಮುಗಿದ ನಂತರ ಸ್ನಾನ ಮಾಡಿ, ನಂತರ ಹೊಸದಾಗಿ ಉಪಹಾರವನ್ನು ಸಿದ್ಧಪಡಿಸಿಕೊಂಡು, ದೇವರಿಗೆ ಅರ್ಪಿಸಿ ಬಳಿಕ ಆಹಾರ ಸೇವಿಸಬಹುದು.

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News