Summer Foods For Weight Loss: ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ, ಬೊಜ್ಜು, ಸ್ಥೂಲಕಾಯತೆ ಒಂದು ಸರ್ವೇ ಸಾಮಾನ್ಯವಾದ ಹಾಗೂ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ. ಆಹಾರದಲ್ಲಿ ಡಯಟ್, ವಾಕಿಂಗ್, ಯೋಗ, ವ್ಯಾಯಾಮ, ಜಿಮ್ ಹೀಗೆ ನಾನಾ ಕಸರತ್ತುಗಳನ್ನು ನಡೆಸಿದರೂ ತೂಕ ಇಳಿಕೆ ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಬೇಸರಗೊಳ್ಳುತ್ತಾರೆ. ಆದರೆ, ನೀವು ಬೇಸಿಗೆಯಲ್ಲಿ ಕೇವಲ ಮೂರೇ ಮೂರು ಆಹಾರ ಪದಾರ್ಥಗಳ ಸಹಾಯದಿಂದ ಸುಲಭವಾಗಿ ಬೊಜ್ಜು ಕರಗಿಸಿ ತೂಕ ಇಳಿಸಬಹುದು ಎಂದು ತಿಳಿದರೆ ಅಚ್ಚರಿಯಾಗಬಹುದು.
ಆರೋಗ್ಯ ತಜ್ಞರಾದ ಎಂಬಿಬಿಎಸ್ ಎಂಡಿ ಡಾ. ಅಪರಾಜಿತಾ ಲಂಬಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಬೇಸಿಗೆಯಲ್ಲಿ (Summer) ಕೇವಲ ಈ ಮೂರು ಆಹಾರ ಪದಾರ್ಥಗಳಿಂದ ತೂಕ ಇಳಿಕೆ ಸಾಧ್ಯ, ಅಷ್ಟೇ ಅಲ್ಲ ಇದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳುವಲ್ಲಿಯೂ ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ. ಆ ಆಹಾರ ಪದಾರ್ಥಗಳೆಂದರೆ ಕಲ್ಲಂಗಡಿ, ಬಿಲ್ವಪತ್ರೆ ಮತ್ತು ಸೌತೆಕಾಯಿ.
ತೂಕ ಇಳಿಕೆಗಾಗಿ (Weight Loss) ಡಾ. ಅಪರಾಜಿತಾ ಲಂಬಾ ಅವರು ಸಲಹೆ ನೀಡಿರುವ ಕಲ್ಲಂಗಡಿ, ಬಿಲ್ವಪತ್ರೆ ಹಾಗೂ ಸೌತೆಕಾಯಿಗಳು ನೀರು ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಈ ಆಹಾರಗಳು ದೇಹವನ್ನು ಹೈಡ್ರೀಕರಿಸುವುದರೊಂದಿಗೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಕೂಡ ಪ್ರಯೋಜನಕಾರಿ ಆಗಿವೆ. ಆದರೆ, ತೂಕ ಇಳಿಕೆಗಾಗಿ ಇವುಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ತಿಳಿದಿರುವುದು ಅಗತ್ಯವಾಗಿದೆ.
ಇದನ್ನೂ ಓದಿ- Hair Loss Problem: ಕಡುಕಪ್ಪಾದ, ಉದ್ದವಾದ ಕೂದಲಿಗಾಗಿ ಆಹಾರದಲ್ಲಿ ಇರಲೇಬೇಕು ಈ 5 ಸೂಪರ್‌ಫುಡ್‌ಗಳು
ಕಲ್ಲಂಗಡಿ ಹಣ್ಣು:
ಬೇಸಿಗೆಯಲ್ಲಿ ಕಲ್ಲಂಗಡಿ (Watermelon In Summer) ಹಣ್ಣನ್ನು ತಿನ್ನುವುದರಿಂದ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. ಕಲ್ಲಂಗಡಿ ಹಣ್ಣು ಕಾಡಿಮ್ಬೆ ಕ್ಯಾಲೋರಿ, ಹೆಚ್ಚಿನ ಫೈಬರ್ ನಿಂದ ಕೂಡಿರುವುದರಿಂದ ಇದನ್ನು ತಿಂದ ಬಳಿಕ ಹೆಚ್ಚು ಹಸಿವಾಗುವುದಿಲ್ಲ. ಹಾಗಾಗಿ, ಇದು ತೂಕ ನಿರ್ವಹಣೆಗೆ ಸಹಕಾರಿ ಆಗಿದೆ. ಇದಲ್ಲದೆ, ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಎ, ಸಿ ಸಮೃದ್ಧವಾಗಿರುವುದರಿಂದ ಇದು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿಯೂ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಬಿಲ್ವಪತ್ರೆ ಜ್ಯೂಸ್:
ಬಿಲ್ವಪತ್ರೆ ಹಣ್ಣು ನೈಸರ್ಗಿಕವಾಗಿ ದೇಹವನ್ನು ಹೈಡ್ರೀಕರಿಸಲು ಪ್ರಯೋಜನಕಾರಿ ಆಗಿದೆ. ಬೇಸಿಗೆಯಲ್ಲಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬಿಲ್ವಪತ್ರೆ ಜ್ಯೂಸ್ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಬೊಜ್ಜು ಕರಗಿಸಲು ಸಹಕಾರಿಯಾಗಿದೆ. ನಿಯಮಿತವಾಗಿ ಈ ಜ್ಯೂಸ್ ಕುಡಿಯುವುದರಿಂದ ತೂಕ ಇಳಿಕೆ ಸುಲಭವಾಗುತ್ತದೆ.
ಇದನ್ನೂ ಓದಿ- Weight Loss: ನಿತ್ಯ 20 ನಿಮಿಷ ಈ ಒಂದು ಕೆಲಸ ಮಾಡಿದರೆ ಕೆಲವೇ ದಿನಗಳಲ್ಲಿ ತೂಕ ಇಳಿಕೆ ಗ್ಯಾರಂಟಿ
ಸೌತೆಕಾಯಿ:
ಬೇಸಿಗೆಯಲ್ಲಿ ತೂಕ ಇಳಿಕೆಗೆ (Weight Loss In Summer) ಪ್ರಯೋಜನಕಾರಿ ಆಗಿರುವ ಮತ್ತೊಂದು ಆಹಾರ ಸೌತೆಕಾಯಿ. ಸೌತೆಕಾಯಿಯೊಂದಿಗೆ ಶುಂಠಿಯನ್ನು ಬೆರೆಸಿ ಜ್ಯೂಸ್ ತಯಾರಿಸಿ ನಿತ್ಯ ಸೇವಿಸುವುದರಿಂದ ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ರಕ್ತಪರಿಚಲನೆಯನ್ನು ಉತ್ತೇಜಿಸಲು ಸಹಕಾರಿ ಆಗಿದೆ. ಸೌತೆಕಾಯಿ ಶುಂಠಿ ರಸವು ಬೇಸಿಗೆಯಲ್ಲಿ ಅತ್ಯುತ್ತಮ ಜಲಸಂಚಯನವಾಗಿರುವುದರಿಂದ ಇದು ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.