ದಶಕದ ಬಳಿಕ ಭರಚುಕ್ಕಿಯಲ್ಲಿ ಜಲಪಾತೋತ್ಸವ ಆಯೋಜನೆ

Jalapatotsava in Bharachukki: ಧುಮ್ಮಿಕ್ಕುವ ಜಲಪಾತಕ್ಕೆ ಶಬ್ಧ ಮತ್ತು ಬೆಳಕಿನ ಸಂಯೋಜನೆ ಮಾಡಲಿದ್ದು ಜಲಪಾತ ಮತ್ತಷ್ಟು ಆಕರ್ಷಕವಾಗಿರಲಿದೆ. ಇನ್ನು, ಖ್ಯಾತ ಗಾಯಕಿ ಅನನ್ಯ ಭಟ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. 

Written by - Yashaswini V | Last Updated : Aug 8, 2024, 01:44 PM IST
  • ಮೈದುಂಬಿದ ಭರಚುಕ್ಕಿಯಲ್ಲಿ ಆ.10 ರಂದು ಜಲಪಾತೋತ್ಸವ
  • ಆ.10 ರ ಸಂಜೆ 6 ಕ್ಕೆ ಜಲಪಾತೋತ್ಸವಕ್ಕೆ ಸಿಎಂ‌ ಸಿದ್ದರಾಮಯ್ಯ ಚಾಲನೆ
  • 10 ವರ್ಷಗಳ ಬಳಿಕ ಭರಚುಕ್ಕಿಯಲ್ಲಿ ಉತ್ಸವ ಆಯೋಜನೆ
ದಶಕದ ಬಳಿಕ ಭರಚುಕ್ಕಿಯಲ್ಲಿ ಜಲಪಾತೋತ್ಸವ ಆಯೋಜನೆ title=

Jalapatotsava in Bharachukki: ಕಾವೇರಿ ಮೈದುಂಬಿ ಹರಿಯುತ್ತಿರುವ ಪರಿಣಾಮ‌ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ವೈಯ್ಯಾರದಿಂದ ಧುಮ್ಮಿಕ್ಕುತ್ತಿದ್ದು ದಶಕದ ಬಳಿಕ ಜಿಲ್ಲಾಡಳಿತ ಜಲಪಾತೋತ್ಸವ ಆಯೋಜನೆ ಮಾಡಿದೆ.

10 ವರ್ಷಗಳ ಬಳಿಕ ಭರಚುಕ್ಕಿಯಲ್ಲಿ ಜಲಪಾತೋತ್ಸವ: 
ಆ.10 ರಂದು ಸಂಜೆ 6 ಕ್ಕೆ ಭರಚುಕ್ಕಿಯಲ್ಲಿ ಜಲಪಾತೋತ್ಸವ (Bharachukki Jalapatotsava) ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)  ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದಾರೆ.  ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar), ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹಾಜರಿರಲಿದ್ದಾರೆ.

ಇದನ್ನೂ ಓದಿ- ಪ್ರವಾಸಿಗರಿಗೆ ಸಿಹಿಸುದ್ದಿ: ಭಾರತದ ನಯಾಗರ 'ಹೊಗೆನಕಲ್ ಜಲಪಾತ'ಕ್ಕಿಲ್ಲ ನಿರ್ಬಂಧ

ಶಬ್ಧ-ಬೆಳಕಿನ ಜುಗಲ್ಬಂದಿ: 
ಧುಮ್ಮಿಕ್ಕುವ ಜಲಪಾತಕ್ಕೆ (WaterFall) ಶಬ್ಧ ಮತ್ತು ಬೆಳಕಿನ ಸಂಯೋಜನೆ ಮಾಡಲಿದ್ದು ಜಲಪಾತ ಮತ್ತಷ್ಟು ಆಕರ್ಷಕವಾಗಿರಲಿದೆ. ಇನ್ನು, ಖ್ಯಾತ ಗಾಯಕಿ ಅನನ್ಯ ಭಟ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ.  ಜಾನಪದಗಳ ನಾಡು ಎಂದೇ ಚಾಮರಾಜನಗರವನ್ನು ಕರೆಯುವ ಹಿನ್ನೆಲೆ ಜಾನಪದ ಸಂಗೀತ ಸುಧೆಯೂ ಇರಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ- ಲಾಲ್‌ಬಾಗ್‌ನಲ್ಲಿ ಆಗಸ್ಟ್‌ 8 ರಿಂದ 19ರ ವರೆಗೆ ಈ ಥೀಮ್ ನೊಂದಿಗೆ ಫಲಪುಷ್ಪ ಪ್ರದರ್ಶನ..!

ಜಿಲ್ಲಾಡಳಿತದ ವತಿಯಿಂದ 4 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು ಪಾರ್ಕಿಂಗ್ ಹಾಗೂ ಸೂಕ್ತ ಬಂದೋಬಸ್ತ್ ನ್ನು ಕೂಡ ಕೈಗೊಳ್ಳಲಾಗಿದೆ, ಒಂದು ದಿನ ಸಾಂಸ್ಕೃತಿಕ ಕಾರ್ಯಕ್ರಮ, ಎರಡು ದಿನ ಶಬ್ಧ-ಬೆಳಕಿನ ಚಿತ್ತಾರ ಇರಲಿದ್ದು, ಪ್ರವೇಶ ಉಚಿತ ಇರಲಿದೆ ಎಂದು ಡಿಸಿ ಶಿಲ್ಪಾನಾಗ್ (DC Shilpanag) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News