ಅಡುಗೆ ಮನೆಯಲ್ಲಿ ಈ ವಸ್ತು ಪದೇ ಪದೇ ಕೈಜಾರಿ ಬೀಳುತ್ತಿದೆಯೇ? ಎಚ್ಚರ... ಇದು ಬರಲಿರುವ ತೊಂದರೆಯ ಮುನ್ಸೂಚನೆ!

vastu tips: ವಾಸ್ತು ಶಾಸ್ತ್ರದ ಪ್ರಕಾರ ವಿಶೇಷವಾಗಿ ಅಡುಗೆಮನೆಯಲ್ಲಿ ಕೆಲವು ರೀತಿಯ ವಸ್ತುಗಳು ಕೈಯಿಂದ ಬಿದ್ದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ.  

Written by - Bhavishya Shetty | Last Updated : Sep 10, 2024, 08:23 PM IST
    • ಅಡುಗೆಮನೆಯಲ್ಲಿ ಕೆಲವು ರೀತಿಯ ವಸ್ತುಗಳು ಕೈಯಿಂದ ಬಿದ್ದರೆ ಅದು ಅಶುಭ
    • ಅಡುಗೆಮನೆಯಲ್ಲಿ ಉಪ್ಪು ಪದೇ ಪದೇ ಬಿದ್ದರೆ ಅದು ಒಳ್ಳೆಯ ಸಂಕೇತವಲ್ಲ
    • ಪದೇ ಪದೇ ನಡೆಯುತ್ತಿದ್ದರೆ ಜಾತಕದಲ್ಲಿ ಚಂದ್ರ ದುರ್ಬಲನಾಗುತ್ತಿರುವ ಸಂಕೇತ
ಅಡುಗೆ ಮನೆಯಲ್ಲಿ ಈ ವಸ್ತು ಪದೇ ಪದೇ ಕೈಜಾರಿ ಬೀಳುತ್ತಿದೆಯೇ? ಎಚ್ಚರ... ಇದು ಬರಲಿರುವ ತೊಂದರೆಯ ಮುನ್ಸೂಚನೆ! title=
File Photo

vastu tips: ಮನೆಯಲ್ಲಿ ಕೆಲಸ ಮಾಡುವಾಗ, ಕೆಲವು ವಸ್ತುಗಳು ಪದೇ ಪದೇ ಕೈಯಿಂದ ಜಾರಿಕೊಳ್ಳುತ್ತವೆ. ಇದಕ್ಕೆ ಕಾರಣವೇನೆಂಬುದನ್ನು ನಾವು ಆಲೋಚಿಸುವುದಿಲ್ಲ. ಆದರೆ ಇಂತಹ ಘಟನೆಗಳು ಪದೆ ಪದೆ ನಡೆದರೆ, ಅದಕ್ಕೆ ಸಂಬಂಧಿತ ಕಾರಣವೇನೆಂಬುದನ್ನು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: 13 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 16! ಇಷ್ಟೊಂದು ಅಗ್ಗದ ಬೆಲೆಯಲ್ಲಿ

ವಾಸ್ತು ಶಾಸ್ತ್ರದ ಪ್ರಕಾರ ವಿಶೇಷವಾಗಿ ಅಡುಗೆಮನೆಯಲ್ಲಿ ಕೆಲವು ರೀತಿಯ ವಸ್ತುಗಳು ಕೈಯಿಂದ ಬಿದ್ದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ.

ಉಪ್ಪು : ಅಡುಗೆಮನೆಯಲ್ಲಿ ಉಪ್ಪು ಪದೇ ಪದೇ ಬಿದ್ದರೆ ಅದು ಒಳ್ಳೆಯ ಸಂಕೇತವಲ್ಲ. ಅಹಿತಕರ ಫಲಿತಾಂಶವೆಂದು ಪರಿಗಣಿಸಲಾಗಿದೆ. ಉಪ್ಪು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಉಪ್ಪು ಬೀಳುತ್ತಲೇ ಇದ್ದರೆ, ನಿಮ್ಮ ಜೀವನದಲ್ಲಿ ಏನಾದರೂ ಬಿಕ್ಕಟ್ಟು ಬರುತ್ತಿದೆ ಎಂದರ್ಥ.

ಹಾಲು: ಅಡುಗೆಮನೆಯಲ್ಲಿ ಪದೇ ಪದೇ ಹಾಲು ಚೆಲ್ಲುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ಮನೆಯಲ್ಲಿ ನೆಗೆಟಿವಿಟಿ ಹೆಚ್ಚುತ್ತದೆ ಎಂದರ್ಥ. ಮನೆಯ ಸದಸ್ಯರಿಗೆ ಒಳ್ಳೆಯದಲ್ಲ. ಪದೇ ಪದೇ ನಡೆಯುತ್ತಿದ್ದರೆ ಜಾತಕದಲ್ಲಿ ಚಂದ್ರ ದುರ್ಬಲನಾಗುತ್ತಿರುವ ಸಂಕೇತ. ಯಾರ ಜಾತಕದಲ್ಲಿ ಚಂದ್ರ ದುರ್ಬಲನಾಗುತ್ತಾನೋ ಅವರ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ.

ಅಡುಗೆ ಎಣ್ಣೆ: ಅಡುಗೆ ಎಣ್ಣೆಯು ಶನಿಗೆ ನೇರವಾಗಿ ಸಂಬಂಧಿಸಿದೆ. ಒಂದು ವೇಳೆ ಅಡುಗೆ ಮಾಡುವಾಗ ಎಣ್ಣೆ ಪದೇ ಪದೇ ಬೀಳುತ್ತಿದ್ದರೆ ಎಚ್ಚರದಿಂದಿರಬೇಕು. ಶನಿಯು ಜಾತಕದಲ್ಲಿ ದುರ್ಬಲನಾಗುತ್ತಾನೆ ಮತ್ತು ಜೀವನದಲ್ಲಿ ಹಠಾತ್ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ: ಈ ದಿನದಂದು ತಪ್ಪಿಯೂ ತುಳಸಿಯನ್ನು ಮುಟ್ಟಬೇಡಿ: ಎಷ್ಟೇ ಶ್ರೀಮಂತನಾಗಿದ್ದರೂ ದಾರಿದ್ರ್ಯ ಸುತ್ತಿ ಸಾಲದ ಸುಳಿಗೆ ಬೀಳುವಿರಿ; ಆಯಸ್ಸಿಗೂ ಬರುತ್ತೆ ಕುತ್ತು!

ಸೂಚನೆ: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಖಾತರಿಪಡಿಸುವುದಿಲ್ಲ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧಿತ ಕ್ಷೇತ್ರದಲ್ಲಿ ತಜ್ಞರ ಸಲಹೆಯನ್ನು ಪಡೆಯಲು ಮರೆಯದಿರಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News