Health Tips: ನಿಮ್ಮ ದೇಹದ ಈ ಭಾಗದಲ್ಲಿ ನೋವು ಇದೆಯೇ? ಇದು ಕಿಡ್ನಿ ವೈಫಲ್ಯದ ಲಕ್ಷಣವಾಗಿರಬಹುದು

ವರದಿಗಳ ಪ್ರಕಾರ ಮೂತ್ರಪಿಂಡವು ದೇಹದಲ್ಲಿನ ಪೊಟ್ಯಾಸಿಯಮ್, ಉಪ್ಪಿನ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದಲ್ಲದೆ ಮೂತ್ರಪಿಂಡದ ಮುಖ್ಯ ಕೆಲಸವೆಂದರೆ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದು.

Written by - Puttaraj K Alur | Last Updated : Mar 15, 2022, 07:32 PM IST
  • ಕಿಡ್ನಿ ವೈಫಲ್ಯದಿಂದ ನಿಮ್ಮ ದೇಹದ ಯಾವ ಭಾಗದಲ್ಲಿ ನೋವು ಉಂಟಾಗುತ್ತದೆ ಗೊತ್ತೆ?
  • ಮೂತ್ರಪಿಂಡ ದೇಹದಲ್ಲಿನ ಪೊಟ್ಯಾಸಿಯಂ & ಉಪ್ಪಿನ ಮಟ್ಟವನ್ನು ಸಮತೋಲನಗೊಳಿಸುತ್ತದೆ
  • ದೇಹದ ಪ್ರಮುಖ ಅಂಗ ಕಿಡ್ನಿಯ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕು
Health Tips: ನಿಮ್ಮ ದೇಹದ ಈ ಭಾಗದಲ್ಲಿ ನೋವು ಇದೆಯೇ? ಇದು ಕಿಡ್ನಿ ವೈಫಲ್ಯದ ಲಕ್ಷಣವಾಗಿರಬಹುದು title=
ಮೂತ್ರಪಿಂಡಕ್ಕೆ ಹೆಚ್ಚಿನ ಕಾಳಜಿ ಅಗತ್ಯ

ನವದೆಹಲಿ: ಕಿಡ್ನಿ ವೈಫಲ್ಯ(Kidney Failure)ದಿಂದಾಗಿ ವ್ಯಕ್ತಿಯ ಜೀವನವೇ ಡೋಲಾಯಮಾನವಾಗುತ್ತದೆ. ಮೂತ್ರಪಿಂಡ ಸಮಸ್ಯೆಯಿಂದ ಮೊದಲಿನಂತೆ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಕಿಡ್ನಿ ಮಾನವ ದೇಹದಲ್ಲಿ ವಿಶೇಷ ಮತ್ತು ಪ್ರಮುಖ ಭಾಗವಾಗಿದೆ. ಇದು ನಮ್ಮ ದೇಹದಲ್ಲಿ ಫಿಲ್ಟರ್‌ನಂತೆ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿಯೇ ಮೂತ್ರಪಿಂಡದ(Healthy Kidney) ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ.

ಕಿಡ್ನಿ ವೈಫಲ್ಯ(Kidney Failure Symptoms)ದಿಂದ ನಿಮ್ಮ ದೇಹದ ಯಾವ ಭಾಗದಲ್ಲಿ ನೋವು ಉಂಟಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹಾಗಾದರೆ ಕಿಡ್ನಿ ವೈಫಲ್ಯದಿಂದ ಎಲ್ಲಿ ನೋವು ಉಂಟಾಗುತ್ತದೆ ಮತ್ತು ಕಿಡ್ನಿಯನ್ನು ಹೇಗೆ ಫಿಟ್ ಆಗಿ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

ಇದನ್ನೂ ಓದಿ: Health Tips: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಪ್ರತಿದಿನವೂ ಈ ಹಣ್ಣುಗಳನ್ನು ಸೇವಿಸಿ

ಮೂತ್ರಪಿಂಡಕ್ಕೆ ಹೆಚ್ಚಿನ ಕಾಳಜಿ ಅಗತ್ಯ

ವರದಿಗಳ ಪ್ರಕಾರ ಮೂತ್ರಪಿಂಡ(Kidney Problems)ವು ದೇಹದಲ್ಲಿನ ಪೊಟ್ಯಾಸಿಯಂ, ಉಪ್ಪಿನ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದಲ್ಲದೆ ಮೂತ್ರಪಿಂಡದ ಮುಖ್ಯ ಕೆಲಸವೆಂದರೆ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದು. ಮನುಷ್ಯನಿಗೆ 2 ಮೂತ್ರಪಿಂಡಗಳಿರುತ್ತದೆ. ಯಾವುದೋ ಸಮಸ್ಯೆಯಿಂದ ಒಂದು ಕಿಡ್ನಿಗೆ ಹಾನಿಯುಂಟಾಂದರೆ ಮನುಷ್ಯ ಮತ್ತೊಂದು ಕಿಡ್ನಿಯ ಸಹಾಯದಿಂದ ಬದುಕಬಹುದು. ಆದರೆ ಏಕೈಕ ಕಿಡ್ನಿ ಹೊಂದಿರುವ ವ್ಯಕ್ತಿ ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗಿರುತ್ತದೆ.

ಕಿಡ್ನಿ ವೈಫಲ್ಯದ ಆರಂಭಿಕ ಲಕ್ಷಣಗಳು

ನಿಮ್ಮ ಮೂತ್ರಪಿಂಡ(Kidney Disease)ವು ಹಾನಿಗೊಳಗಾದರೆ ನೀವು ಹಸಿವಿನ ಕೊರತೆಯನ್ನು ಅನುಭವಿಸಬಹುದು. ಇದು ತೂಕ ನಷ್ಟ, ಊದಿಕೊಂಡ ಪಾದಗಳು ಮತ್ತು ಚರ್ಮದಲ್ಲಿನ ಶುಷ್ಕತೆ ಮತ್ತು ತುರಿಕೆಗೆ ಕಾರಣವಾಗುತ್ತದೆ. ಇದಲ್ಲದೇ ದೌರ್ಬಲ್ಯ ಮತ್ತು ದಣಿವಿನ ಜೊತೆಗೆ ಪದೇ ಪದೇ ಮೂತ್ರ ವಿಸರ್ಜನೆಯ ಸಮಸ್ಯೆಯೂ ಇರುತ್ತದೆ. ಯಾವುದೇ ವ್ಯಕ್ತಿಗೆ ಕಿಡ್ನಿ(Kidney Failure Treatment) ತುಂಬಾ ಮುಖ್ಯವಾಗಿರುತ್ತದೆ. ಹೀಗಾಗಿ ಮೂತ್ರಪಿಂಡಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ. ನಿಮ್ಮಲ್ಲಿಯೂ ಕಿಡ್ನಿ ವೈಫಲ್ಯದ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೆ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಸ್ಟೀಮ್ ತೆಗೆದುಕೊಳ್ಳುವುದು ಶೀತಕ್ಕೆ ಮಾತ್ರವಲ್ಲ ಅನೇಕ ರೀತಿಯಲ್ಲಿ ಪ್ರಯೋಜನಕಾರಿ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News