International Women's Day 2024: ಉತ್ತಮ ಆರೋಗ್ಯಕ್ಕಾಗಿ ಮಹಿಳೆಯರು ನಿತ್ಯ ಮಾಡಲೇಬೇಕಾದ ಯೋಗಾಸನಗಳಿವು

International Women's Day 2024: ಇಂದು (ಮಾರ್ಚ್ 08) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ, ಕಚೇರಿಯಲ್ಲಿ ಎಲ್ಲೆಡೆ ಸದಾ ಆಕ್ಟಿವ್ ಆಗಿರುವ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಕೂಲವಾಗುವ ಕೆಲವು ಯೋಗ ಆಸನಗಳ ಬಗ್ಗೆ ತಿಳಿಯೋಣ... 

Written by - Yashaswini V | Last Updated : Mar 8, 2024, 12:23 PM IST
  • ಪ್ರತಿದಿನ ಯೋಗಾಸನ ಮಾಡುವುದರಿಂದ ಇದು ದೇಹವನ್ನು ಸದೃಢವಾಗಿರಿಸುತ್ತದೆ.
  • ಮಾತ್ರವಲ್ಲ, ಅದು ಒತ್ತಡವನ್ನು ಕೂಡ ನಿವಾರಿಸುತ್ತದೆ.
  • ಹಾಗಾಗಿ, ಯೋಗಾಸನವು ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
International Women's Day 2024: ಉತ್ತಮ ಆರೋಗ್ಯಕ್ಕಾಗಿ ಮಹಿಳೆಯರು ನಿತ್ಯ ಮಾಡಲೇಬೇಕಾದ ಯೋಗಾಸನಗಳಿವು  title=

International Women's Day 2024: ಇಂದು ಇಡೀ ವಿಶ್ವದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಮಹಿಳೆಯರು ಪ್ರತಿ ಕುಟುಂಬದ ಕಣ್ಣು. ಸದಾ ಮನೆಯವರಿಗಾಗಿ ಅವರ ಏಳ್ಗೆಗಾಗಿ ಕಾರ್ಯನಿರತರಾಗಿರುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಅಷ್ಟಾಗಿ ಗಮನ ಹರಿಸುವುದೇ ಇಲ್ಲ. ಸಾಮಾನ್ಯವಾಗಿ, ವಯಸ್ಸಾದಂತೆ, ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಇದು ಅವರ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. 

ಈ ಬದಲಾದ ಜೀವನ ಶೈಲಿಯಲ್ಲಿ ಮಹಿಳೆಯರು ಮನೆಗಷ್ಟೇ ಸೀಮಿತವಾಗಿಲ್ಲ. ಹೊರಗೂ ಕೂಡ ದುಡಿಯುತ್ತಾರೆ. ಈ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಅವರು ತಮಗಾಗಿ ಸಮಯ ಕಂಡುಕೊಳ್ಳುವುದು ತುಂಬಾ ಕಷ್ಟಕರ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಅವರ ದೇಹವು ರೋಗಗಳ ಉಗ್ರಾಣವಾಗಬಹುದು. ಇದನ್ನು ತಪ್ಪಿಸಲು ನಿತ್ಯ ಕೆಲ ಸಮಯ ಯೋಗವನ್ನು ಮಾಡುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

ತಜ್ಞರ ಪ್ರಕಾರ,  ಪ್ರತಿದಿನ ಯೋಗಾಸನ ಮಾಡುವುದರಿಂದ ಇದು ದೇಹವನ್ನು ಸದೃಢವಾಗಿರಿಸುವುದು ಮಾತ್ರವಲ್ಲ, ಅದು ಒತ್ತಡವನ್ನು ಕೂಡ ನಿವಾರಿಸುತ್ತದೆ. ಹಾಗಾಗಿ, ಯೋಗಾಸನವು ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- White Hair Remedy: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ತುಂಬಾ ಲಾಭದಾಯಕ ಈ 4 ಪದಾರ್ಥ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರು ಈ ಯೋಗಾಸನಗಳನ್ನು ನಿತ್ಯ ಮಾಡಿ: 
ಭುಜಂಗಾಸನ: 

ಭುಜಂಗಾಸನ- ಈ ಯೋಗ ಭಂಗಿಯು ಕಿಬ್ಬೊಟ್ಟೆಯ ಸ್ನಾಯುಗಳನ್ನು ಟೋನ್ ಮಾಡುವುದರ ಜೊತೆಗೆ ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಹಾಗಾಗಿ ಈ ಆಸನವನ್ನು ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದರ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.  

ಬಾಲಾಸನ: 
ಬಾಲಾಸನವು ಸಹ ಬೆನ್ನು ಮೂಳೆಯನ್ನು ಹೊಂದಿಕೊಳ್ಳುವಂತೆ ಮಾಡಲು ಪ್ರಯೋಜನಕಾರಿ ಆಗಿದೆ. ಅಷ್ಟೇ ಅಲ್ಲ, ಮಹಿಳೆಯರು ನಿತ್ಯ ಈ ಆಸನವನ್ನು ಮಾಡುವುದರಿದ್ನ ಒತ್ತಡ, ಆತಂಕದ ಭಾವನೆ ಕಡಿಮೆಯಾಗುತ್ತದೆ. 

ಪಶ್ಚಿಮೋತ್ತನಾಸನ: 
ಮಹಿಳೆಯರು ನಿತ್ಯ ಪಶ್ಚಿಮೋತ್ತನಾಸನವನ್ನು ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. 

ಇದನ್ನೂ ಓದಿ- International Women's Day 2024: ಉದ್ಯೋಗಸ್ಥ ಮಹಿಳೆಯರು ಜೀವನಶೈಲಿಯಲ್ಲಿ ಮರೆತೂ ಈ ಮಿಸ್ಟಕ್ ಮಾಡಬಾರದು!

ತ್ರಿಕೋನಾಸನ: 
ಮಹಿಳೆಯರು ಪ್ರತಿನಿತ್ಯ ತ್ರಿಕೋನಾಸನವನ್ನು ಮಾಡುವುದರಿಂದ ಅವರ ಬೆನ್ನುಮೂಳೆ ಜೊತೆಗೆ ಕಾಲುಗಳು ಕೂಡ ಬಲಗೊಳ್ಳುತ್ತ್ಕವೆ. ಮಾತ್ರವಲ್ಲ, ಈ ಆಸನವು ಏಕಾಗ್ರತೆಯ ಶಕ್ತಿಯು ಹೆಚ್ಚಾಗುತ್ತದೆ.

ಶವಾಸನ: 
ಪ್ರತಿದಿನ ಯೋಗಾಸನವನ್ನು ಮಾಡುವವರಿ ಈ ಆಸನವನ್ನು ಕೊನೆಯಲ್ಲಿ ಮಾಡಬೇಕು. ಶವಾಸನವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತವಾಗಿಸುತ್ತದೆ. ಹಾಗಾಗಿ, ವೈದ್ಯರು ಮಹಿಳೆಯರಿಗೆ ಈ ಆಸನವನ್ನು ತಪ್ಪದೇ ಮಾಡುವಂತೆ ಶಿಫಾರಸ್ಸು ಮಾಡುತ್ತಾರೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News