ಏಪ್ರಿಲ್ ನಲ್ಲಿ ಶನಿ, ರಾಹು ಕೇತುವಿನ ಜೊತೆಗೆ ಈ ಗ್ರಹದ ರಾಶಿ ಪರಿವರ್ತನೆ, ಯಾರ ಮೇಲೆ ಏನಾಗಲಿದೆ ಪರಿಣಾಮ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 14 ರಂದು, ಸೂರ್ಯನು ಮೇಷ ರಾಶಿಯಲ್ಲಿ ಸಾಗುತ್ತಾನೆ. ಇದಕ್ಕೂ ಮುನ್ನ ಏಪ್ರಿಲ್ 7ರಂದು ಮಂಗಳ ಗ್ರಹ ಕುಂಭ ರಾಶಿಯನ್ನು ಪ್ರವೇಶಿಸಲಿದೆ. 

Written by - Ranjitha R K | Last Updated : Jan 3, 2022, 08:30 AM IST
  • ಏಪ್ರಿಲ್ 11 ರಂದು ರಾಹು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ
  • ಏಪ್ರಿಲ್ 29 ರಂದು ಶನಿಯ ರಾಶಿ ಬದಲಾವಣೆ ಆಗಲಿದೆ
  • ಏಪ್ರಿಲ್ 8 ರಂದು ಬುಧ ಸಂಕ್ರಮಣ ಸಂಭವಿಸಲಿದೆ
ಏಪ್ರಿಲ್ ನಲ್ಲಿ ಶನಿ, ರಾಹು ಕೇತುವಿನ ಜೊತೆಗೆ ಈ ಗ್ರಹದ ರಾಶಿ ಪರಿವರ್ತನೆ, ಯಾರ ಮೇಲೆ ಏನಾಗಲಿದೆ ಪರಿಣಾಮ   title=
ಏಪ್ರಿಲ್‌ನಲ್ಲಿ 9 ಗ್ರಹಗಳ ಬದಲಾವಣೆ (file photo)

ನವದೆಹಲಿ : 2022 ವರ್ಷ ಪ್ರಾರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ದೃಷ್ಟಿಯಿಂದ ಈ ವರ್ಷ ಬಹಳ ವಿಶೇಷವಾಗಿರಲಿದೆ. ಯಾಕೆಂದರೆ ಏಪ್ರಿಲ್‌ನಲ್ಲಿ, ಎಲ್ಲಾ ಒಂಬತ್ತು ಗ್ರಹಗಳು ರಾಶಿಚಕ್ರವನ್ನು (Zodiac sign) ಬದಲಾಯಿಸಲಿವೆ. ಈ ನಿಟ್ಟಿನಲ್ಲಿ, ಜ್ಯೋತಿಷಿಗಳು ಹೇಳುವ ಪ್ರಕಾರ, ಈ ಗ್ರಹಗಳ ಸಂಯೋಜನೆಯು ತುಂಬಾ ಅಪರೂಪವಾಗಿರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ, ರಾಹು ಮತ್ತು ಕೇತುಗಳು ಯಾವುದಾದರೂ ಒಂದು ರಾಶಿಯಲ್ಲಿ ಬಹಳ ಕಾಲ ಇರುತ್ತಾರೆ. ಈ ವರ್ಷದ ಅಪರೂಪದ ಗ್ರಹಗಳ ಸಂಯೋಜನೆಯ ಬಗೆಗಿನ ಮಾಹಿತಿ ಇಲ್ಲಿದೆ.  

ಏಪ್ರಿಲ್‌ನಲ್ಲಿ 9 ಗ್ರಹಗಳ ಬದಲಾವಣೆ : 
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಏಪ್ರಿಲ್ 14 ರಂದು, ಸೂರ್ಯನು ಮೇಷ ರಾಶಿಯಲ್ಲಿ ಸಾಗುತ್ತಾನೆ. ಇದಕ್ಕೂ ಮುನ್ನ ಏಪ್ರಿಲ್ 7ರಂದು ಮಂಗಳ ಗ್ರಹ ಕುಂಭ ರಾಶಿಯನ್ನು (Aqarius) ಪ್ರವೇಶಿಸಲಿದೆ. ಏಪ್ರಿಲ್ 8 ರಂದು ಬುಧ ಗ್ರಹ ಮೇಷ ರಾಶಿಯಲ್ಲಿ ಸಾಗಲಿದೆ. ಆದರೆ ಏಪ್ರಿಲ್ 24 ರಂದು, ಮತ್ತೆ ವೃಷಭ ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲದೆ, ಗುರು ಗ್ರಹವು ಏಪ್ರಿಲ್ 13 ರಂದು ಮೀನ ರಾಶಿಯನ್ನು ಪ್ರವೇಶಿಸಲಿದೆ. ಇದಲ್ಲದೇ ಏಪ್ರಿಲ್ 27 ರಂದು ಶುಕ್ರ (Venus) ಕೂಡಾ ಮೀನ ರಾಶಿಗೆ ಹೋಗುತ್ತಾನೆ. ಏಪ್ರಿಲ್ 11 ರಂದು ರಾಹು (Rahu) ಮೇಷ ರಾಶಿಗೆ ಕಾಲಿಟ್ಟರೆ, ಏಪ್ರಿಲ್ 29 ರಂದು ಶನಿಯು ಕುಂಭ ರಾಶಿಗೆ ತೆರಳುತ್ತಾನೆ. ಕೇತು ಏಪ್ರಿಲ್ 11 ರಂದು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಇನ್ನು ಚಂದ್ರ ಗ್ರಹವು ಪ್ರತಿ ಎರಡೂವರೆ ದಿನಗಳಿಗೊಮ್ಮೆ ತನ್ನ ರಾಶಿಯನ್ನು (Zodiac sign) ಬದಲಾಯಿಸುತ್ತದೆ. 

ಇದನ್ನೂ ಓದಿ : ಜನವರಿಯಲ್ಲಿ ಈ 4 ರಾಶಿಯವರ ಮೇಲಿರಲಿದೆ ಸೂರ್ಯ ದೇವರ ಕೃಪೆ.. ಮುಟ್ಟಿದ್ದೆಲ್ಲ ಚಿನ್ನವಾಗುವ ಶುಭಕಾಲ!

ಜ್ಯೋತಿಷ್ಯದ ದೃಷ್ಟಿಯಿಂದ ವಿಶೇಷ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ತಿಂಗಳೊಳಗೆ ಎಲ್ಲಾ 9 ಗ್ರಹಗಳ ರಾಶಿಯ ಬದಲಾವಣೆಯಿಂದಾಗಿ ಈ ತಿಂಗಳು ಬಹಳ ವಿಶೇಷವಾಗಿದೆ. ಈ ಗ್ರಹಗಳ ಬದಲಾವಣೆಯಿಂದ ಎಲ್ಲಾ 12 ರಾಶಿಗಳಲ್ಲಿ ಪ್ರಮುಖ ಬದಲಾವಣೆಗಳಾಗುತ್ತವೆ. 

ಕೈಗೊಳ್ಳಬೇಕಾದ ಪರಿಹಾರ ಯಾವುದು ? 
2022 ರಲ್ಲಿ, ಗ್ರಹಗಳ ದುಷ್ಪರಿಣಾಮಗಳನ್ನು ತಪ್ಪಿಸಲು, ಪ್ರತಿದಿನ ಬೆಳಿಗ್ಗೆ ಸೂರ್ಯನಿಗೆ (Sun) ನೀರನ್ನು ಅರ್ಪಿಸಬೇಕು. ಚಂದ್ರನಿಗೆ ಶಿವಲಿಂಗದ (Shivalinga) ಮೇಲೆ ಹಸುವಿನ ಹಾಲನ್ನು ಅರ್ಪಿಸಿ. ಮಂಗಳನ ಅನುಕೂಲಕರ ಪರಿಣಾಮಕ್ಕಾಗಿ, ಮಂಗಳವಾರ ಶಿವಲಿಂಗಕ್ಕೆ ಕೆಂಪು ಹೂವುಗಳನ್ನು ಅರ್ಪಿಸಬೇಕು. ಬುಧ ಗ್ರಹದ ಅನುಗ್ರಹಕ್ಕಾಗಿ ಗಣೇಶನ (Lord Ganesha) ಪೂಜೆ ಮಾಡಬೇಕು. ಗುರು ಗ್ರಹದ ಕೃಪೆಗಾಗಿ, ಗುರುವಾರದಂದು ಶಿವನಿಗೆ ಬೇಳೆ ಹಿಟ್ಟಿನ ಲಡ್ಡುಗಳನ್ನು ಅರ್ಪಿಸಿ. ಶುಕ್ರನಿಂದ ಶುಭ ಫಲ ಪಡೆಯಲು ಶುಕ್ರವಾರದಂದು ಶಿವಲಿಂಗಕ್ಕೆ ಹಾಲನ್ನು ಅರ್ಪಿಸಿ. ಶನಿ ಗ್ರಹದ (Shani deva) ಪ್ರಕೊಪದಿಂದ ಬಚಾವಾಗಲು ಪ್ರತಿ ಶನಿವಾರ ಎಳ್ಳೆಣ್ಣೆ ದಾನ ಮಾಡಿ. ಇದಲ್ಲದೆ, ರಾಹು ಮತ್ತು ಕೇತುವನ್ನು ಸಮಾಧಾನ ಪಡಿಸಲು ಭೈರವ ಮಹಾರಾಜ ಮತ್ತು ಶನಿಯ ವಿಶೇಷ ಪೂಜೆಯನ್ನು ಮಾಡಬೇಕು.

ಇದನ್ನೂ ಓದಿ : ಮಗ, ಮಗಳು ಅಥವಾ ಅವಳಿ ಮಕ್ಕಳು? ಈ ಹಸ್ತ ರೇಖೆ ಹೇಳುತ್ತೆ ಸಂತಾನ ಭವಿಷ್ಯ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News