ಯಾರ ಹಸ್ತದಲ್ಲಿ ಈ ರೇಖೆ ಸಂಪೂರ್ಣ ರೂಪದಲ್ಲಿರುತ್ತದೆಯೋ ಅವರಿಗೆ ಜೀವನದಲ್ಲಿ ಸಿಗುತ್ತದೆ ಭಾರೀ ಯಶಸ್ಸು

ಅಂಗೈಯಲ್ಲಿನ ಮಧ್ಯದ ಬೆರಳಿನ ಕೆಳಗಿನ ಭಾಗವನ್ನು ಶನಿ ಪರ್ವತ ಎಂದು ಕರೆಯಲಾಗುತ್ತದೆ. ಶನಿ ಪರ್ವತವು ಕೈಯಲ್ಲಿ ಮಂಗಳಕರ ಸ್ಥಾನದಲ್ಲಿದ್ದರೆ, ಅದು ವ್ಯಕ್ತಿಯನ್ನು ಅಪಾರ ಸಂಪತ್ತಿನ ಒಡೆಯನನ್ನಾಗಿ ಮಾಡುತ್ತದೆ ಮತ್ತು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ನೀಡುತ್ತದೆ. 

Written by - Ranjitha R K | Last Updated : May 30, 2022, 12:35 PM IST
  • ಹಸ್ತದಲ್ಲಿರುವ ಈ ಚಿಹ್ನೆಗಳು ವ್ಯಕ್ತಿಯ ಭವಿಷ್ಯ ಮತ್ತು ಸ್ವಭಾವವನ್ನು ಹೇಳುತ್ತದೆ.
  • ಶನಿ ಪರ್ವತವು ಉತ್ತಮವಾಗಿ ವಿಕಸನಗೊಂಡಿದ್ದರೆ, ವ್ಯಕ್ತಿಯು ತುಂಬಾ ಅದೃಷ್ಟಶಾಲಿ
  • ಜೀವನದಲ್ಲಿ ತಾವು ಏನಾಗಬೇಕು ಎಂದು ಬಯಸುತ್ತಾರೆ ಅದನ್ನು ಸಾಧಿಸಿಯೇ ತೀರುತ್ತಾರೆ.
ಯಾರ ಹಸ್ತದಲ್ಲಿ ಈ ರೇಖೆ ಸಂಪೂರ್ಣ ರೂಪದಲ್ಲಿರುತ್ತದೆಯೋ ಅವರಿಗೆ ಜೀವನದಲ್ಲಿ ಸಿಗುತ್ತದೆ ಭಾರೀ ಯಶಸ್ಸು  title=
Shani parvath on palm (file photo)

ಬೆಂಗಳೂರು : ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಸ್ತದ ರೇಖೆಗಳ ಜೊತೆಗೆ, ಅಂಗೈಯಲ್ಲಿರುವ   ಪರ್ವತಗಳು, ಮಂಗಳಕರ ಮತ್ತು ಅಶುಭಕರ ಗುರುತುಗಳು, ಆಕಾರಗಳು, ಚಿಹ್ನೆಗಳು ಸಹ ಬಹಳ ಮುಖ್ಯವಾಗಿರುತ್ತದೆ. ಹಸ್ತದಲ್ಲಿರುವ ಈ ಚಿಹ್ನೆಗಳು, ಪರ್ವತ, ರೇಖೆ ವ್ಯಕ್ತಿಯ ಜೀವನದ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮಾತ್ರವಲ್ಲ, ಇದು ವ್ಯಕ್ತಿಯ ಭವಿಷ್ಯ ಮತ್ತು ಸ್ವಭಾವವನ್ನು ಹೇಳುತ್ತದೆ. ಈ ರೇಖೆಗಳು ಮತ್ತುಪರ್ವತಗಳು ಶನಿ ರೇಖೆ ಮತ್ತು ಶನಿ ಪರ್ವತವನ್ನು ಸಹ ಒಳಗೊಂಡಿವೆ. ಶನಿ ಪರ್ವತ ಮತ್ತು ಶನಿ ರೇಖೆಯ ಶುಭ ಮತ್ತು ಅಶುಭ ಸ್ಥಾನವು ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. 

ಅಂಗೈಯಲ್ಲಿನ ಮಧ್ಯದ ಬೆರಳಿನ ಕೆಳಗಿನ ಭಾಗವನ್ನು ಶನಿ ಪರ್ವತ ಎಂದು ಕರೆಯಲಾಗುತ್ತದೆ. ಶನಿ ಪರ್ವತವು ಕೈಯಲ್ಲಿ ಮಂಗಳಕರ ಸ್ಥಾನದಲ್ಲಿದ್ದರೆ, ಅದು ವ್ಯಕ್ತಿಯನ್ನು ಅಪಾರ ಸಂಪತ್ತಿನ ಒಡೆಯನನ್ನಾಗಿ ಮಾಡುತ್ತದೆ ಮತ್ತು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ನೀಡುತ್ತದೆ. 

ಇದನ್ನೂ ಓದಿ : ಇಂದು ಶನಿ ದೇವರಿಗೆ ಈ 5 ವಸ್ತುಗಳನ್ನು ಅರ್ಪಿಸಿದರೆ ದುರಾದೃಷ್ಟ ಕೂಡಾ ಅದೃಷ್ಟವಾಗಿ ಬದಲಾಗುತ್ತದೆ

ಶನಿ ಪರ್ವತವು ಉತ್ತಮವಾಗಿ ವಿಕಸನಗೊಂಡಿದ್ದರೆ, ವ್ಯಕ್ತಿಯು ತುಂಬಾ ಅದೃಷ್ಟಶಾಲಿ ಎನ್ನಲಾಗುತ್ತದೆ. ಅಂತಹ ವ್ಯಕ್ತಿಯು ಜೀವನದಲ್ಲಿ ಉನ್ನತ ಸ್ಥಾನ ಮತ್ತು ಗೌರವವನ್ನು ಪಡೆಯುತ್ತಾನೆ. ಅಲ್ಲದೆ, ಇವರು ಜೀವನದಲ್ಲಿ ತಾವು ಏನಾಗಬೇಕು ಎಂದು ಬಯಸುತ್ತಾರೆಯೋ ಅದನ್ನು ಸಾಧಿಸಿಯೇ ತೀರುತ್ತಾರೆ. 

ಶನಿ ಪರ್ವತವು ಹೆಚ್ಚು ಸ್ಪಷ್ಟವಾಗಿದ್ದರೆ ವ್ಯಕ್ತಿಯ ಸ್ವಭಾವವು ಒಂದೇ ಆಗಿರುವುದಿಲ್ಲ. ಆತನ ನಡವಳಿಕೆಯಲ್ಲಿ ಆಗಾಗ ಬದಲಾವಣೆಗಳಾಗುತ್ತವೆ. ಅಂಥವರನ್ನು ಅರ್ಥ ಮಾಡಿಕೊಳ್ಳುವುದು ಕೂಡಾ ಅಷ್ಟು ಸುಲಭವಲ್ಲ ಎನ್ನಲಾಗುತ್ತದೆ.   

ಇದನ್ನೂ ಓದಿ: Shani Jayanti 2022: ಶನಿ ಜಯಂತಿಯಂದು ರೂಪುಗೊಳ್ಳುತ್ತಿದೆ ರಾಜಯೋಗ, ಈ ರಾಶಿಯವರಿಗೆ ಅದೃಷ್ಟ

ಯಾರ ಅಂಗೈಯಲ್ಲಿ ಶನಿಯು ಪರ್ವತದಲ್ಲಿ ಚೆನ್ನಾಗಿ ರೂಪುಗೊಂಡಿರುತ್ತದೆ ಮತ್ತು   ಸೂರ್ಯ ಮತ್ತು ಗುರು ಪರ್ವತವೂ ಸರಿಯಾಗಿ ವಿಕಸನಗೊಂಡಿರುತ್ತದೆ ಅಂತಹ ವ್ಯಕ್ತಿಯು ಜೀವನದಲ್ಲಿ ಬಹಳಷ್ಟು ಸಂಪತ್ತನ್ನು ಪಡೆಯುತ್ತಾನೆ. ಜೀವನದಲ್ಲಿ ಕೈತುಂಬಾ ಹಣ ಸಂಪಾದಿಸಿ ತಾವು ಹೋದ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನೂಏರುತ್ತಾನೆ. 

ಶನಿ ಪರ್ವತದ ಜೊತೆಗೆ, ಅದರ ಮೇಲಿರುವ ಚಿಹ್ನೆಗಳು ಸಹ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತವೆ. ಶನಿ ಪರ್ವತದ ಮೇಲೆ ತ್ರಿಕೋನವು ರೂಪುಗೊಂಡರೆ, ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಮತ್ತೊಂದೆಡೆ, ಶನಿ ಪರ್ವತದ ಮೇಲೆ ಶಿಲುಬೆ ಅಥವಾ ದ್ವೀಪದ ಗುರುತು ಇರುವುದು ಅಶುಭವೆಂದು ಪರಿಗಣಿಸಲಾಗಿದೆ.  

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News