ಆಚಾರ್ಯ ಚಾಣಕ್ಯರ ಈ 3 ನಿಯಮಗಳನ್ನು ಅನುಸರಿಸಿದರೆ ಪತಿ-ಪತ್ನಿ ನಡುವೆ ಎಂದಿಗೂ ಬಿರುಕು ಮೂಡಲ್ಲ

ಆಚಾರ್ಯ ಚಾಣಕ್ಯರು ತನ್ನು ನೀತಿಯಲ್ಲಿ ಅತ್ಯುತ್ತಮ ಜೀವನ ನಡೆಸಲು ಬೇಕಾಗುವಂತಹ ಹಲವು ನೀತಿಗಳನ್ನು ಉಲ್ಲೇಖಿಸಿದ್ದಾರೆ. ಅವರು ಸುಖ ದಾಂಪತ್ಯ ಜೀವನಕ್ಕೆ 'ತ್ರಿವಳಿ ಸೂತ್ರ'ವನ್ನು ಕೂಡ ನೀಡಿದ್ದಾರೆ.

Written by - Yashaswini V | Last Updated : Feb 15, 2023, 03:14 PM IST
  • ಕೆಲವೊಮ್ಮೆ ಕೆಲವು ಕಾರಣಗಳಿಂದಾಗಿ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.
  • ಬಿರುಕು ಹೆಚ್ಚಾದಂತೆ ಉದ್ವಿಗ್ನತೆಯೂ ಹೆಚ್ಚಾಗುತ್ತದೆ, ಮಾತ್ರವಲ್ಲ ವಿಚ್ಚೇದನದೊಂದಿಗೆ ದಾಂಪತ್ಯ ಅಂತ್ಯವೂ ಆಗುತ್ತದೆ.
  • ಆದರೆ, ಮೂರು ಗಂಟಿನೊಂದಿಗೆ ಬೆಸೆಯುವ ಈ ದಾಂಪತ್ಯ ಜೀವನದಲ್ಲಿ 'ತ್ರಿವಳಿ ಸೂತ್ರ'ವನ್ನು ಅನುಸರಿಸಿದರೆ ಪತಿ-ಪತ್ನಿ ನಡುವೆ ಎಂದಿಗೂ ಕೂಡ ಬಿರುಕು ಮೂಡುವುದಿಲ್ಲ ಎನ್ನುತ್ತಾರೆ ಆರ್ಚಾರ್ಯ ಚಾಣಕ್ಯ
ಆಚಾರ್ಯ ಚಾಣಕ್ಯರ ಈ 3 ನಿಯಮಗಳನ್ನು ಅನುಸರಿಸಿದರೆ ಪತಿ-ಪತ್ನಿ ನಡುವೆ ಎಂದಿಗೂ ಬಿರುಕು ಮೂಡಲ್ಲ  title=
Chanakya Niti for Marriage

ಬೆಂಗಳೂರು: ಎಲ್ಲೋ ಹುಟ್ಟಿ ಬೆಳೆದ ಎರಡು ಜೀವಗಳನ್ನು ಒಂದು ಮಾಡುವ ಬಂಧನವೇ ದಾಂಪತ್ಯ. ಬೇರೆ ಸಂಬಂಧಗಳಂತೆ ಪತಿ-ಪತ್ನಿಯರ ನಡುವೆಯೂ ಜಗಳ, ಕೋಪ, ಮುನಿಸು ಎಲ್ಲವೂ ಇರುತ್ತದೆ. ನಿಜ ಹೇಳಬೇಕೆಂದರೆ, ಇವೆಲ್ಲವೂ ಕೊಂಚ ಹೆಚ್ಚಾಗಿಯೇ ಇರುತ್ತವೆ. ಆದರೆ, ಪರಸ್ಪರರ ತಪ್ಪು-ಒಪ್ಪುಗಳೊಂದಿಗೆ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಾಗ ಮಾತ್ರವೇ ದಾಂಪತ್ಯ ಸುಖವಾಗಿರುತ್ತದೆ.  

ಆಚಾರ್ಯ ಚಾಣಕ್ಯರ ಪ್ರಕಾರ, ಮೂರು ಗಂಟಿನೊಂದಿಗೆ ಬೆಸೆಯುವ ಈ ದಾಂಪತ್ಯ ಜೀವನದಲ್ಲಿ 'ತ್ರಿವಳಿ ಸೂತ್ರ'ವನ್ನು ಅನುಸರಿಸಿದರೆ ಪತಿ-ಪತ್ನಿ ನಡುವೆ ಎಂದಿಗೂ ಕೂಡ ಬಿರುಕು ಮೂಡುವುದಿಲ್ಲ. ಆ ಸೂತ್ರಗಳು ಯಾವುವು? ಎಂದು ತಿಳಿಯೋಣ...

ಸುಖ ದಾಂಪತ್ಯ ಜೀವನಕ್ಕೆ ಆಚಾರ್ಯ ಚಾಣಕ್ಯರ 'ತ್ರಿವಳಿ ಸೂತ್ರ':
* ನಂಬಿಕೆ:

ಚಾಣಕ್ಯ ನೀತಿಯ ಪ್ರಕಾರ, ಗಂಡ-ಹೆಂಡತಿ ನಡುವೆ ಮದುವೆಯ ಹೊಸದರಲ್ಲಿ ಕಾಣುವ ಪ್ರೀತಿ ಬರುಬರುತ್ತಾ ಕಡಿಮೆ ಆಗುತ್ತದೆ. ಪ್ರೀತಿಗೆ ಕೊರತೆ ಆದಾಗ ಅಲ್ಲಿ ನಂಬಿಕೆಯೂ ದುರ್ಬಲಗೊಳ್ಳುತ್ತಾ ಹೋಗುತ್ತದೆ. ಹುಣಸೆ ಮುಪ್ಪಾದರೂ ಹುಳಿ ಮುಪ್ಪೇ ಎಂಬಂತೆ, ದಂಪತಿಗಳ ನಡುವೆ ಯಾವಾಗಲೂ ಕೂಡ ಪ್ರೀತಿ, ವಿಶ್ವಾಸ, ನಂಬಿಕೆಗೆ ಕೊರತೆ ಆಗಲೇಬಾರದು. ಪರಸ್ಪರರ ನಡುವೆ ಪ್ರೀತಿ ಇದ್ದಾಗ ನಂಬಿಕೆಯೂ ಗಟ್ಟಿಯಾಗುತ್ತದೆ. ನಂಬಿಕೆ ಇರುವ ಕಡೆ ಬಿರುಕು ಸೃಷ್ಟಿಯಾಗುವುದಿಲ್ಲ.

ಇದನ್ನೂ ಓದಿ- Chanakya Niti: ಜೀವನದ ಯಶಸ್ಸಿನ ಹಾದಿಗೆ ಮುಳ್ಳಾಗಲಿವೆ ನಿಮ್ಮ ಈ ಗುಣಗಳು

* ಪರಸ್ಪರರನ್ನು ಗೌರವಿಸಿ:
ದಾಂಪತ್ಯ ಎಂಬ ಬಂಡಿಯಲ್ಲಿ ಪತಿ-ಪತ್ನಿ ಇಬ್ಬರೂ ಕೂಡ ಜೋಡೆತ್ತಿನಂತೆ ಇರಬೇಕು. ಇಬ್ಬರಲ್ಲೂ ಪರಸ್ಪರರ ನಡುವೆ ಗೌರವ ಭಾವ ಇರಬೇಕು. ಇಬ್ಬರಲ್ಲಿ ಯಾರೇ ಒಬ್ಬರಿಗೆ ನಾನೇ ಹೆಚ್ಚು ಎಂಬ ಅಹಂ ಬಂದರೂ ಕೂಡ ಸಂಸಾರ ನೌಕೆ ಮುಳುಗಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಇದನ್ನೂ ಓದಿ- Chanakya Niti: ಇಂತಹವರ ಬಳಿ ಎಂದಿಗೂ ಹಣ ನಿಲ್ಲಲ್ಲ

* ಮಾತು ಬಿಡಬಾರದು:
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ನಾಣ್ನುಡಿ ಇದೆ. ಆಚಾರ್ಯ ಚಾಣಕ್ಯರು ಕೂಡ ಅದನ್ನೇ ಹೇಳುತ್ತಾರೆ. ಗಂಡ-ಹೆಂಡತಿ ನಡುವೆ ಎಂತಹದ್ದೇ ಕೋಪ, ಮುನಿಸು ಏನೇ ಇರಲಿ ಅದನ್ನು ಹೆಚ್ಚು ಮುಂದುವರೆಸುವುದಾಗಲಿ ಅಥವಾ ದೀರ್ಘ ಸಮಯ ಮಾತು ಬಿಡುವುದಾಗಲೀ ಮಾಡಲೇಬಾರದು. ಎಷ್ಟೇ ತೊಂದರೆ ಬಂದರೂ ಪತಿ ಪತ್ನಿಯರು ಪರಸ್ಪರ ಮಾತನಾಡುವುದನ್ನು ನಿಲ್ಲಿಸಬಾರದು. ಏಕೆಂದರೆ, ಎಷ್ಟೋ ಸಮಸ್ಯೆಗಳಿಗೆ ಮಾತಾಡುವುದರಿಂದಲೇ ಪರಿಹಾರ ದೊರೆಯುತ್ತದೆ. ಮಾತು ಬಿಟ್ಟಾಗ ಅಪನಂಬಿಕೆಗಳು ಹೆಚ್ಚಾಗಿ, ಸಂಬಂಧದಲ್ಲಿ ಬಿರುಕುಂಟಾಗುವ ಸಾಧ್ಯತೆಯೇ ಹೆಚ್ಚು. 

ಈ ಮೂರು ಸೂತ್ರಗಳನ್ನು ನಿಮ್ಮ ದಾಂಪತ್ಯ ಜೀವನದಲ್ಲಿ ಆನುಸರಿಸಿದರೆ ಸುಖ ದಾಂಪತ್ಯ ನಿಮ್ಮದಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಮಾತ್ರ ಆಧರಿಸಿದೆ. ಇದನ್ನು Zee ನ್ಯೂಸ್ ಕನ್ನಡ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News