ಸದಾ ಮೊಬೈಲ್ ನಲ್ಲೇ ಮುಳುಗಿರುವ ಮಕ್ಕಳ ಅಭ್ಯಾಸವನ್ನು ಈ ರೀತಿ ಬದಲಾಯಿಸಿ

ಎಷ್ಟೋ ಸಲ ತಮ್ಮ ಕೆಲಸ ಸುಲಭವಾಗಲಿ ಎಂಬ ಕಾರಣಕ್ಕೆ ಪೋಷಕರು ಮಗುವಿನ ಕೈಯಲ್ಲಿ ಮೊಬೈಲ್ ಕೊಟ್ಟು ಬಿಡುತ್ತಾರೆ. ಆದರೆ ಇದು ಕ್ರಮೇಣ ಮಗು ಸ್ಮಾರ್ಟ್‌ಫೋನ್‌ ದಾಸರಾಗುವುದಕ್ಕೆ ಕಾರಣವಾಗುತ್ತದೆ.

Written by - Ranjitha R K | Last Updated : Mar 30, 2022, 11:46 AM IST
  • ಮೊಬೈಲ್ ದಾಸರಾಗುತ್ತಿದ್ದಾರೆ ಮಕ್ಕಳು
  • ಪುಸ್ತಕಗಳ ಬಗ್ಗೆ ಪ್ರೀತಿ ಬೆಳೆಸುವುದು ಹೇಗೆ ?
  • ಪ್ರಕೃತಿ ಪ್ರೀತಿಯನ್ನು ಹೆಚ್ಚಿಸಿ
ಸದಾ ಮೊಬೈಲ್ ನಲ್ಲೇ ಮುಳುಗಿರುವ ಮಕ್ಕಳ ಅಭ್ಯಾಸವನ್ನು ಈ ರೀತಿ ಬದಲಾಯಿಸಿ  title=
ಮೊಬೈಲ್ ದಾಸರಾಗುತ್ತಿದ್ದಾರೆ ಮಕ್ಕಳು (file photo)

ಬೆಂಗಳೂರು : 21 ನೇ ಶತಮಾನದಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ, ಇಂಟರ್ನೆಟ್ ಮತ್ತು ಮೊಬೈಲ್ ಫೋನ್ ಗಳು ನಮ್ಮ ಜೀವನದ ಬಹುಮುಖ್ಯ ಭಾಗವಾಗಿದೆ (Mobile phone). ದೈನಂದಿನ ಜೀವನದ ಅನೇಕ ವಿಷಯಗಳು ಈ ಗೆಜೆಟ್ ಗಳು ಬಹಳ ಸರಳವಾಗಿಸಿವೆ. ಆದರೆ ಈ ವಿಶಿಷ್ಟ ತಂತ್ರಜ್ಞಾನವು ಕೆಲವು ಅನಾನುಕೂಲಗಳನ್ನು ಕೂಡಾ ಹೊಂದಿದೆ. ದೊಡ್ಡವರು ಕೆಲಸ ಅಥವಾ ಮನರಂಜನೆಗಾಗಿ ಮೊಬೈಲ್ ಫೋನ್‌ಗಳಿಗೆ ಅಂಟಿಕೊಂಡಿದ್ದರೆ, ಸಣ್ಣ ಮಕ್ಕಳೂ ಕೂಡಾ ಈ ಫೋನ್ ಗೆ ಅಡಿಕ್ಟ್ ಆಗಿದ್ದಾರೆ (Child Mobile Phone Addiction). 

 ಮೊಬೈಲ್ ದಾಸರಾಗುತ್ತಿದ್ದಾರೆ ಮಕ್ಕಳು : 
ಎಷ್ಟೋ ಸಲ ತಮ್ಮ ಕೆಲಸ ಸುಲಭವಾಗಲಿ ಎಂಬ ಕಾರಣಕ್ಕೆ ಪೋಷಕರು ಮಗುವಿನ ಕೈಯಲ್ಲಿ ಮೊಬೈಲ್ (Mobile) ಕೊಟ್ಟು ಬಿಡುತ್ತಾರೆ. ಆದರೆ ಇದು ಕ್ರಮೇಣ ಮಗು  ಸ್ಮಾರ್ಟ್‌ಫೋನ್‌ ದಾಸರಾಗುವುದಕ್ಕೆ ಕಾರಣವಾಗುತ್ತದೆ (Kids Smartphone adiction). ದಿನವಿಡೀ ಮಗು ಈ ಗ್ಯಾಜೆಟ್‌ ಹಿಂದೆಯೇ ಬೀಳುವಂತಾಗುತ್ತದೆ. ನಾವು ನಮ್ಮ ಸುತ್ತ ಮುತ್ತಲು ಇರುವ ಕೆಲವು ಮಕ್ಕಳನ್ನು ನೋಡಿರಬಹುದು.  ಎಷ್ಟೋ ಸಲ ಮಕ್ಕಳು ಕೈಯಲ್ಲಿ ಫೋನ್ ಇಲ್ಲದೆ, ಊಟ ಕೂಡಾ ಮಾಡುವುದಿಲ್ಲ.  ಈ ಸಂದರ್ಭದಲ್ಲಿ ಮಕ್ಕಳು ಬೇಗನೆ ಊಟ ಮುಗಿಸಲಿ ಎಂಬ ಕಾರಣಕ್ಕೆ ಹೆತ್ತವರು ಮಗುವಿನ ಕೈಗೆ ಮೊಬೈಲ್ ಕೊಟ್ಟು ಬಿಡುತ್ತಾರೆ. ಪೋಷಕರಿಗೆ ತನ್ನ ತಪ್ಪಿನ ಅರಿವಾಗುವ ಹೊತ್ತಿಗೆ ಬಹಳ ತಡವಾಗಿರುತ್ತದೆ. ಹಾಗಿದ್ದರೆ ಮೊಬೈಲ್ ದಾಸರಾಗಿರುವ ಮಕ್ಕಳ ಈ ಅಭ್ಯಾಸವನ್ನು ಬಿಡಿಸುವುದು ಹೇಗೆ ? 

ಇದನ್ನೂ ಓದಿ : High BP: BP ಜಾಸ್ತಿಯಾದ ಸಂದರ್ಭದಲ್ಲಿ ತಕ್ಷಣವೆ ಈ 3 ಕೆಲಸಗಳನ್ನು ಮಾಡಿ

1. ಪುಸ್ತಕಗಳ ಬಗ್ಗೆ ಪ್ರೀತಿ ಬೆಳೆಯುವ ಹಾಗೆ ಮಾಡುವುದು : 
ಇಂಟರ್ನೆಟ್ ಯುಗದಲ್ಲಿ ಮಕ್ಕಳು ಪುಸ್ತಕಗಳಿಂದ ದೂರ ಉಳಿಯುತ್ತಿದ್ದಾರೆ.  ಪೋಷಕರು ಮಕ್ಕಳ ಮುಂದೆ ದಿನವಿಡೀ ಮೊಬೈಲ್ ನೋಡುತ್ತಾ ಕುಳಿತರೆ, ‌ಮಕ್ಕಳು ಕೂಡಾ ಅದನ್ನೇ ಅನುಸರಿಸಿಕೊಂಡು ಹೋಗುತ್ತಾರೆ (Child Mobile Phone Addiction). ಹಾಗಾಗಿ ಪೋಷಕರು ಮಕ್ಕಳ ಮುಂದೆ ಮೊಬೈಲ್ ಬದಿಗಿಟ್ಟು, ಪುಸ್ತಕ ಓದಲು ಆರಂಭಿಸಿದರೆ, ಮಕ್ಕಳಿಗೂ ಪುಸ್ತಕದ ಮೇಲೆ ಪ್ರೀತಿ ಬೆಳೆಯುತ್ತದೆ. ಅಲ್ಲದೆ, ಮಕ್ಕಳ ಜೊತೆ ಕುಳಿತು ಹೆತ್ತವರು ಪುಸ್ತಕದ ಬಗ್ಗೆ ಮಾತುಕತೆ ನಡೆಸಲು ಆರಂಭಿಸಿದರೆ, ಮಕ್ಕಳಿಗೂ ಪುಸ್ತಕ ಓದುವ ಬಗ್ಗೆ ಆಸಕ್ತಿ ಮೂಡುತ್ತದೆ.  

2. ಪ್ರಕೃತಿ ಪ್ರೀತಿಯನ್ನು ಹೆಚ್ಚಿಸಿ :
ಮಕ್ಕಳನ್ನು ನಿಸರ್ಗಕ್ಕೆ ಹತ್ತಿರ ತಂದಷ್ಟೂ ಅವರು ಮೊಬೈಲ್ ನಿಂದ ದೂರ ಹೋಗುವುದು ಸಾಧ್ಯವಾಗುತ್ತದೆ. ನೈಸರ್ಗಿಕ ವಸ್ತುಗಳ ಪ್ರಾಮುಖ್ಯತೆಯನ್ನು ಮಕ್ಕಳಿಗೆ ತಿಳಿಸಿ ಹೇಳುವುದು ಅಗತ್ಯ. ಒಂದು ಸಲ ಮಕ್ಕಳು ಪ್ರಕೃತಿಗೆ ಹತ್ತಿರವಾದರೆ ನಂತರ ಮೊಬೈಲ್ ನತ್ತ ಮನಸ್ಸು ನೆಡುವುದಿಲ್ಲ. 

ಇದನ್ನೂ ಓದಿ : BP Control Tips : ಹಠಾತ್ BP ಹೆಚ್ಚಾದಲ್ಲಿ ತಕ್ಷಣ ಈ 3 ಕೆಲಸ ಮಾಡಿ, ಶೀಘ್ರದಲ್ಲೇ ಪರಿಹಾರ ಸಿಗುತ್ತೆ!

3. ಹೊರಾಂಗಣ ಆಟಗಳನ್ನು ಆಡಲು ಕೇಳಿ : 
ಕರೋನವೈರಸ್ (Coronavirus) ಸಾಂಕ್ರಾಮಿಕದ ನಂತರ ಲಾಕ್‌ಡೌನ್‌ನಿಂದಾಗಿ (Lockdown), ಮಕ್ಕಳು ದೀರ್ಘಕಾಲದವರೆಗೆ ಮನೆಯಾ ಒಳಗೇ ಕುಳಿತುಕೊಳ್ಳುವ ಹಾಗೆ ಆಗಿತ್ತು. ಈ ಸಂದರ್ಭದಲ್ಲಿ ಅವರು ಮೊಬೈಲ್‌ಗೆ ಒಗ್ಗಿಕೊಳ್ಳುವಂತಾಗಿದ್ದು, ಸಾಮಾನ್ಯ. ಈ ಸಮಯದಲ್ಲಿ, ಆನ್‌ಲೈನ್ ಕಲಿಕೆಯಲ್ಲಿಯೂ (Online class)ಮೊಬೈಲ್ ಬಳಸುವಂತಾಗಿತ್ತು.  ಇದರೊಂದಿಗೆ ಮಕ್ಕಳು ಹೊರಗೆ ಹೋಗಿ ಆಟ ಆಡುವ ಅಭ್ಯಾಸವನ್ನೂ ಮರೆಯುವಂತಾಗಿತ್ತು. ಹೀಗಾಗಿ ಈಗ ಹೊರಾಂಗಣ ಆಟಗಳಿಗೆ ಪ್ರೋತ್ಸಾಹ ನೀಡುವುದು ಪಾಲಕರ ಜವಾಬ್ದಾರಿಯಾಗಿದೆ. ಮಕ್ಕಳ ಮನಸ್ಸನ್ನು ಮೊಬೈಲ್ ನಿಂದ ಬೇರೆ ಕಡೆಗೆ ಹರಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. 

4. ಮೊಬೈಲ್‌ನಲ್ಲಿ ಪಾಸ್‌ವರ್ಡ್ ಬಳಸಿ : 
ಈ ಪ್ರಯತ್ನಗಳ ಹೊರತಾಗಿಯೂ, ಮಗು ಮೊಬೈಲ್ ಫೋನ್‌ಗಳನ್ನು ಬಳಸುವುದನ್ನು ನಿಲ್ಲಿಸದಿದ್ದರೆ, ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಮಕ್ಕಳು ಫೋನ್ ಬಳಸದಂತೆ ಮೊಬೈಲ್ ನಲ್ಲಿ ಪಾಸ್ ವರ್ಡ್ ಹಾಕಿಡುವುದು ಉತ್ತಮ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News