ಬೆಂಗಳೂರು : How To Remove Underarm Smell : ಭಾರತದಲ್ಲಿ, ಬಿಸಿಲ ಧಗೆ ದಿನೇ ದಿನೇ ಏರುತ್ತಿದೆ. ಈ ಋತುವಿನಲ್ಲಿ, ಬೆವರಿನ ಸಮಸ್ಯೆ ಅತಿಯಾಗಿ ಕಾಡುತ್ತದೆ. ಇದರಿಂದಾಗಿ ಕಂಕುಳ ಅಡಿ ಒದ್ದೆಯಾಗುತ್ತದೆ. ಕಂಕುಳ ಅಡಿಯ ಬೆವರಿನಿಂದ ಅತಿಯಾದ ದುರ್ನಾತ ಕಾಡುತ್ತದೆ. ದೇಹದ ದುರ್ವಾಸನೆ ಸುತ್ತಮುತ್ತಲಿನ ಜನರಿಗೆ ಕೂಡಾ ಬಹಳಷ್ಟು ತೊಂದರೆಯನ್ನು ಉಂಟುಮಾಡುತ್ತದೆ. ಹೀಗಾಗಿ ಜನ ಕೂಡಾ ನಿಮ್ಮಿಂದ ಅಂತರ ಕಾಯ್ದುಕೊಳ್ಳುತ್ತಾರೆ.
ಬೆವರು ವಾಸನೆ ಏಕೆ?
ಬೆವರುವುದು ಕೆಟ್ಟದ್ದಲ್ಲ, ಇದು ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯಲ್ಲಿ ಬೆವರುವುದರಿಂದ, ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುತ್ತದೆ. ಹೀಗಾದಾಗ, ಶಾಖದ ಅಲೆಯಿಂದ ದೇಹಕ್ಕೆ ಆರಾಮ ಸಿಗುತ್ತದೆ. ಆದರೆ, ಹೆಚ್ಚು ಬೆವರು ಮತ್ತು ತೀವ್ರವಾದ ವಾಸನೆ ಹೊಂದಿದ್ದರೆ, ಅದನ್ನು ನಿರ್ಲಕ್ಷಿಸ ಬಾರದು.
ಇದನ್ನೂ ಓದಿ : Omicron ಹೊಸ ರೂಪಾಂತರಿಗಳು ಸಂಕಷ್ಟ ಹೆಚ್ಚಿಸಲಿವೆ, ಅಪಾಯಕಾರಿ ಸಾಬೀತಾಗಬಹುದು 4ನೆ ಅಲೆ
ಅಂಡರ್ ಆರ್ಮ್ ವಾಸನೆಯನ್ನು ತೊಡೆದುಹಾಕುವುದು ಹೇಗೆ ?
1. ಟೊಮೆಟೊ :
ಟೊಮೆಟೊ ರಸವನ್ನು ನಿಂಬೆ ರಸದೊಂದಿಗೆ ಬೆರೆಸಿ ನಂತರ ಅದನ್ನು ಕಂಕುಳಿನ ಜಾಗಕ್ಕೆ ಹಚ್ಚಿ ಒಣಗಲು ಬಿಡಿ. ನಂತರ ಸುಮಾರು 15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
2. ಲ್ಯಾವೆಂಡರ್ ಎಣ್ಣೆ :
ಲ್ಯಾವೆಂಡರ್ ಎಣ್ಣೆಯನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಹಾಗೆಯೇ ಇದನ್ನು ಅಂಡರ್ ಆರ್ಮ್ ವಾಸನೆಯನ್ನು ತೆಗೆದುಹಾಕಲು ಕೂಡಾ ಬಳಸಬಹುದು. ಲ್ಯಾವೆಂಡರ್ ಎಣ್ಣೆಯನ್ನು ಹಚ್ಚುವುದರಿಂದ ಪರಿಣಾಮ ಕೂಡಾ ಬಹಳ ಬೇಗನೇ ಕಾಣಿಸುತ್ತದೆ.
3. ಅಡಿಗೆ ಸೋಡಾ :
ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಅನೇಕ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಈ ಎರಡು ವಸ್ತುಗಳನ್ನು ಮಿಶ್ರಣ ಮಾಡಿ, ಪೇಸ್ಟ್ ತಯಾರಿಸಿ ಅದನ್ನು ಅಂಡರ್ ಆರ್ಮ್ ಗೆ ಹಚ್ಚಿ. ಇದು ಕಂಕುಳಲ್ಲಿನ ಎಲ್ಲಾ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
ಇದನ್ನೂ ಓದಿ : Ear Pain: ಕಿವಿ ನೋವಿನ ತೊಂದರೆಗೆ ಮನೆಯಲ್ಲಿಯೇ ಇದೆ ಪರಿಹಾರ!
4. ಆಲೂಗಡ್ಡೆ :
ಬೆವರಿನ ವಾಸನೆಯನ್ನು ಹೋಗಲಾಡಿಸಲು ಆಲೂಗಡ್ಡೆ ನಿಮಗೆ ಉತ್ತಮ ಸಹಾಯ ಮಾಡುತ್ತದೆ. ಇದಕ್ಕಾಗಿ, ಆಲೂಗಡ್ಡೆಯನ್ನು ಹೋಳುಗಳಾಗಿ ಕತ್ತರಿಸಿ ಅದನ್ನು ಅಂಡರ್ ಆರ್ಮ್ ನಲ್ಲಿ ಉಜ್ಜಿಕೊಳ್ಳಿ. ಹೀಗೆ ಮಾಡಿದರೆ ಪರಿಣಾಮ ಕೆಲವೇ ದಿನಗಳಲ್ಲಿ ಕಾಣಿಸುತ್ತದೆ.
5. ತೆಂಗಿನ ಎಣ್ಣೆ :
ಬೆವರಿನ ವಾಸನೆಯನ್ನು ಹೋಗಲಾಡಿಸುವಲ್ಲಿ ತೆಂಗಿನೆಣ್ಣೆ ಕೂಡ ದಿವ್ಯೌಷಧಕ್ಕಿಂತ ಕಡಿಮೆಯಿಲ್ಲ. ಈ ಎಣ್ಣೆಯನ್ನು ತೋಳುಗಳ ಮೇಲೆ ಮಸಾಜ್ ಮಾಡಿ ಮತ್ತು ಅರ್ಧ ಘಂಟೆಯವರೆಗೆ ಬಿಡಿ. ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.
6. ಅಲೋವೆರಾ ಜೆಲ್ :
ಅಲೋವೆರಾ ಜೆಲ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಕಂಕುಳಿನ ಸುತ್ತ ಹಚ್ಚಿ ನಂತರ ತೊಳೆದರೆ ಶೀಘ್ರವೇ ಇದರ ಪರಿಣಾಮ ಗೋಚರಿಸುತ್ತದೆ.
ಇದನ್ನೂ ಓದಿ : Drinking Water: ಸ್ನಾನವಾದ ಬಳಿಕ ನೀರು ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನ ಗೊತ್ತಾ?
7. ಆಪಲ್ ವಿನೆಗರ್ :
ಆಪಲ್ ಸೈಡರ್ ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಕೂಡಿದೆ. ಇದು ಕಂಕುಳಿನ ವಾಸನೆಯನ್ನು ಹೋಗಲಾಡಿಸುತ್ತದೆ. ಹಾಗಾಗಿ ಇದನ್ನೂ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ತೊಳೆಯಿರಿ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.