Holi ಹಬ್ಬ ಹಾಗೂ ಬಣ್ಣಗಳ ಕುರಿತಾದ ಈ ಕನಸು ಬಿದ್ದರೆ ಏನರ್ಥ?

Holi 2022 - ಹೋಳಿ ಹಬ್ಬ ಜೀವನದಲ್ಲಿ ಕೇವಲ ಸುಖ-ಸಂತೋಷ ಹಾಗೂ ಹರ್ಷೋಲ್ಲಾಸಗಳನ್ನು ಮಾತ್ರ ಬೆರೆಸುವುದಿಲ್ಲ. ಕನಸಿನಲ್ಲಿಯೂ ಕೂಡ ಒಂದು ವೇಳೆ ನಿಮಗೆ ಹೋಳಿ  (Holi In Dreams) ಕಾಣಿಸಿಕೊಂಡರೆ, ಸಕಾರಾತ್ಮಕ ಪರಿಣಾಮಗಳು ಜೀವನದ ಮೇಲೆ ಕಂಡುಬರುತ್ತವೆ. ಆದರೆ, ಕನಸಿನಲ್ಲಿ ಕಾಣುವ ಕೆಲ ಬಣ್ಣಗಳು (Holi Dream) ಅಶುಭ ಸಂಕೇತಗಳಾಗಿವೆ ಎನ್ನಲಾಗುತ್ತದೆ.  

Written by - Nitin Tabib | Last Updated : Mar 18, 2022, 02:13 PM IST
  • ಈ ರೀತಿಯ ಕನಸು ಬೀಳುವುದು ಶುಭಕರ
  • ದೊಡ್ಡ ಸಾಧನೆಯನ್ನು ಮಾಡಿಸುತ್ತವೆ
  • ಹೋಳಿ ಹಾಗೂ ಬಣ್ಣಗಳ ಜೊತೆ ಕನಸು ನೇರ ಸಂಬಂಧ ಹೊಂದಿದೆ
Holi ಹಬ್ಬ ಹಾಗೂ ಬಣ್ಣಗಳ ಕುರಿತಾದ ಈ ಕನಸು ಬಿದ್ದರೆ ಏನರ್ಥ? title=
holi 2022:dream interpretation (File Photo)

ನವದೆಹಲಿ: Holi Color Dream - ಇಂದು ಬಣ್ಣಗಳ ಹಬ್ಬ ಹೋಳಿಹಬ್ಬ (Holi) ಆಚರಿಸಲಾಗುತ್ತದೆ, ಜನರು ಬಣ್ಣ-ಅಬೀರ್-ಗುಲಾಲ್‌ನಲ್ಲಿ (Color) ಮಿಂದೇಳುತ್ತಿದ್ದಾರೆ. ಸಾಮಾನ್ಯವಾಗಿ ಈ ಹಬ್ಬವನ್ನು ತುಂಬಾ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಜನರು ಕಾತರದಿಂದ ಕಾಯುವ ಹಬ್ಬಗಳಲ್ಲಿ ಹೋಳಿ ಹಬ್ಬ ಕೂಡ ಒಂದು. ಆದರೂ ಕೂಡ ಕೆಲವರು ಬಣ್ಣಗಳಿಗೆ ಹೆದರುತ್ತಾರೆ ಮತ್ತು ಅವರು ಹೋಳಿ ಆಡುವುದನ್ನು ತಪ್ಪಿಸುತ್ತಾರೆ. ಬಣ್ಣದೋಕುಳಿ ಆಡುವುದು ಅತ್ಯಂತ ಮಂಗಳಕರವಾಗಿದ್ದರೂ, ಕನಸಿನಲ್ಲಿ ಹೋಳಿ ಆಡುವುದರ ಅರ್ಥ ಇನ್ನೂ ಮಂಗಳಕರವಾಗಿದೆ. ಸ್ವಪ್ನಶಾಸ್ತ್ರದಲ್ಲಿ, ಕನಸಿನಲ್ಲಿ ಬಣ್ಣಗಳನ್ನು ನೋಡುವುದರ ಹಿಂದಿನ ಅರ್ಥಗಳನ್ನು ವಿವರಿಸಲಾಗಿದೆ.

ಹೋಳಿ ಆಡುವುದು ಮತ್ತು ಕನಸಿನಲ್ಲಿ ಬಣ್ಣಗಳನ್ನು ನೋಡುವುದರ ಅರ್ಥ
1. ಕನಸಿನಲ್ಲಿ ಇತರರು ಹೋಳಿ ಆಡುವುದನ್ನು ನೋಡುವುದರ ಅರ್ಥ -
ನಿಮ್ಮ ಕನಸಿನಲ್ಲಿ ಇತರರು ಹೋಳಿ ಆಡುವುದನ್ನು ನೀವು ನೋಡಿದರೆ ಅದು ತುಂಬಾ ಮಂಗಳಕರವಾಗಿರುತ್ತದೆ. ಇದು ಕೆಲ ಒಳ್ಳೆಯ ಸುದ್ದಿಗಳು ಸಿಗುವುದರ ಸಂಕೇತವಾಗಿದೆ. ಮತ್ತೊಂದೆಡೆ, ಅವಿವಾಹಿತರಿಗೆ ಇಂತಹ ಕನಸು ಬಿದ್ದರೆ,  ಶೀಘ್ರದಲ್ಲೇ ಅವರಿಗೆ ಕಂಕಣಭಾಗ್ಯ ಕೂಡಿಬರುತ್ತದೆ. ಆದರೆ, ಕನಸಿನಲ್ಲಿ ನಿಮ್ಮನ್ನು ನೀವೇ ಹೋಳಿ ಆಡುವುದನ್ನು ನೋಡುವುದು, ಒಳ್ಳೆಯ ಸಂಕೇತವಲ್ಲ ನೆನಪಿರಲಿ.

2. ನಿಮ್ಮ ಕನಸಿನಲ್ಲಿ ಕೆಂಪು ಬಣ್ಣದಿಂದ ಹೋಳಿ ಆಡುವುದರ ಅರ್ಥ - ನಿಮ್ಮ ಕನಸಿನಲ್ಲಿ ನೀವು ಅಥವಾ ಬೇರೆ ಯಾರಾದರೂ ಕೆಂಪು ಬಣ್ಣದಿಂದ ಹೋಳಿ ಆಡುವುದನ್ನು ನೀವು ನೋಡಿದರೆ, ಅದು ಮುಂಬರುವ ದಿನಗಳಲ್ಲಿ ನೀವು ಜಾಗರೂಕರಾಗಿರಬೇಕು ಎಂಬುದರ ಸಂಕೇತವಾಗಿದೆ.

3. ಕನಸಿನಲ್ಲಿ ಗುಲಾಬಿ ಬಣ್ಣವನ್ನು ನೋಡುವುದರ ಅರ್ಥ - ನಿಮ್ಮ ಕನಸಿನಲ್ಲಿ ಗುಲಾಬಿ ಬಣ್ಣವನ್ನು ಕಂಡರೆ ಅಥವಾ ನೀವು ಅಥವಾ ಬೇರೆ ಯಾರಾದರು ಗುಲಾಬಿ ಬಣ್ಣದಿಂದ ಹೋಳಿ ಆಡುವುದನ್ನು ನೋಡಿದರೆ ಆತಂಕ ಪಡಬೇಡಿ. ಇಂತಹ ಕನಸು (Holi Dreams) ಕೆಲ ಒಳ್ಳೆಯ ಸುದ್ದಿಗಳನ್ನು ತರುತ್ತದೆ ಅಥವಾ ನೀವು ದೊಡ್ಡ ಸಾಧನೆ ಮಾಡಲಿರುವಿರಿ ಎಂಬುದರ ಸಂಕೇತ. 

ಇದನ್ನೂ ಓದಿ-ಈ ವರ್ಷ 2 ಬಾರಿ ‘ಶನಿ’ ರಾಶಿ ಬದಲಾವಣೆ; 4 ರಾಶಿಯವರಿಗೆ ಅದೃಷ್ಟದ ಜೊತೆಗೆ ಧನಲಾಭ

4. ಕನಸಿನಲ್ಲಿ ಕಪ್ಪು ಬಣ್ಣದಿಂದ ಹೋಳಿ ಆಡುವುದರ ಅರ್ಥ -  ಕನಸಿನಲ್ಲಿ ಕಪ್ಪು ಬಣ್ಣದಿಂದ ಹೋಳಿ ಆಡುವುದನ್ನು ಕಂಡರೆ ಅದು ಖಂಡಿತ ಒಳ್ಳೆಯದಲ್ಲ. ವ್ಯಕ್ತಿಯು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂಬುದರ ಸಂಕೇತ ಇದಾಗಿದೆ.

ಇದನ್ನೂ ಓದಿ-ಹೊಳಿ ಹಬ್ಬ: ರಾಶಿಚಕ್ರದ ಪ್ರಕಾರ ಈ ಮಂತ್ರಗಳನ್ನು ಪಠಿಸಿದರೆ ಅದೃಷ್ಟ ಖುಲಾಯಿಸಲಿದೆ

5, ನಿಮ್ಮ ಕನಸಿನಲ್ಲಿ ಹಳದಿ ಬಣ್ಣವನ್ನು ನೋಡುವುದರ ಅರ್ಥ - ನಿಮ್ಮ ಕನಸಿನಲ್ಲಿ ಹಳದಿ ಬಣ್ಣದಿಂದ ಹೋಳಿ ಆಡುವುದನ್ನು ನೀವು ನೋಡಿದರೆ, ನಿಮಗೆ ಜೀವನದಲ್ಲಿ ದೊಡ್ಡ ಜವಾಬ್ದಾರಿ ಸಿಗಲಿದೆ ಎಂಬುದರ ಸಂಕೇತ ಅದು  ಈ ಜವಾಬ್ದಾರಿಯು ಉದ್ಯೋಗ-ವ್ಯವಹಾರ ಅಥವಾ ಕುಟುಂಬಕ್ಕೆ ಸಂಬಂಧಿಸಿರಬಹುದು.

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
 

ಇದನ್ನೂ ಓದಿ-Horoscope Today: ಬಣ್ಣಗಳ ಹಬ್ಬದೊಂದಿಗೆ ಈ ರಾಶಿಯವರ ಅದೃಷ್ಟವು ಖುಲಾಯಿಸಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News