Weight Lose tips : ಈ ಕೆಂಪು ಹೂವನ್ನು ಈ ರೀತಿ ಬಳಸಿ ನೋಡಿ ! ಏಳೇ ದಿನಗಳಲ್ಲಿ ಆಗುವುದು ತೂಕ ಇಳಿಕೆಯ ಅನುಭವ

Home Remedies for Weight Lose : ನೀವು ತೂಕ ಇಳಿಸಿಕೊಳ್ಳಲು ಹಲವಾರು ವಿಧದ ಪಾನೀಯಗಳ ಬಗ್ಗೆ ಕೇಳಿರಬಹುದು. ಆದರೆ ಇಂದು ನಾವು ಕೆಂಪು ಹೂವಿನ ಚಹಾದ ಬಗ್ಗೆ ಹೇಳಲಿದ್ದೇವೆ. ಇದರ ಸೇವನೆ ಮೂಲಕ ನಿಮ್ಮ ತೂಕವನ್ನು ತ್ವರಿತವಾಗಿ ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.

Written by - Ranjitha R K | Last Updated : Mar 12, 2024, 12:31 PM IST
  • ದಾಸವಾಳದ ಹೂವಿನ ಚಹಾ ನೈಸರ್ಗಿಕ ಗಿಡಮೂಲಿಕೆ
  • ತೂಕ ಇಳಿಕೆಗೆ ದಾಸವಾಳದ ಹೂವು
  • ದಾಸವಾಳದ ಚಹಾದ ಆರೋಗ್ಯ ಪ್ರಯೋಜನಗಳು
Weight Lose tips : ಈ ಕೆಂಪು ಹೂವನ್ನು ಈ ರೀತಿ ಬಳಸಿ ನೋಡಿ ! ಏಳೇ ದಿನಗಳಲ್ಲಿ ಆಗುವುದು ತೂಕ ಇಳಿಕೆಯ ಅನುಭವ title=

Weight Lose easy tips : ನಾವು ತೂಕ ಇಳಿಸಿಕೊಳ್ಳಲು ಮುಂದಾದಾಗ, ನಮ್ಮ ಸುತ್ತಮುತ್ತಲು ಇರುವವರು ಅನೇಕ ಸಲಹೆಗಳನ್ನು ನೀಡುತ್ತಾರೆ. ಅವುಗಳಲ್ಲಿ ಕೇಳಿ ಬರುವ ಮುಖ್ಯ ಸಲಹೆಗಳೆಂದರೆ ವಿವಿಧ ರೀತಿಯ ಚಹಾವನ್ನು ಸೇವಿಸುವಂತೆ ಹೇಳುವುದು.  ಬ್ಲಾಕ್ ಟೀ, ಗ್ರೀನ್ ಟೀ, ಲೆಮನ್ ಟೀ,  ಶುಂಠಿ ಚಹಾ ಇತ್ಯಾದಿ.ಆದರೆ ನಾವಿಲ್ಲಿ ತೂಕ ಇಳಿಸುವುದರ ಹೊರತಾಗಿ ಇತರ ಹಲವು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಚಹಾದ ಬಗ್ಗೆ ಹೇಳಲಿದ್ದೇವೆ. 

ತೂಕ ಇಳಿಕೆಗೆ ದಾಸವಾಳದ ಹೂವು : 
ಹೌದು, ದಾಸವಾಳದ ಚಹಾವನ್ನು ಕುಡಿಯುವುದರಿಂದ, ತೂಕವನ್ನು ಕಳೆದುಕೊಳ್ಳುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ದಾಸವಾಳದ ಹೂವು ನೋಡಲು ಎಷ್ಟು ಸುಂದರವಾಗಿದೆಯೋ ನಮ್ಮ ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿಯಾಗಿದೆ. ದಾಸವಾಳದ ಹೂವಿನಿಂದ ತಯಾರಿಸಿದ ಚಹಾವು ನೈಸರ್ಗಿಕ ಗಿಡಮೂಲಿಕೆ ಚಹಾವಾಗಿದೆ. ಇದು ಸಂಪೂರ್ಣವಾಗಿ ಕೆಫೀನ್ ಮುಕ್ತವಾಗಿದೆ. ಇದಲ್ಲದೆ, ಇದರಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : ಕಾಂಡೋಮ್ ಬಳಕೆಯ ನಂತರ ಏನಾದ್ರೂ ಸಮಸ್ಯೆ ಕಾಣಿಸ್ತಿದೀಯಾ ? ಕಾರಣ ಇಲ್ಲಿದೆ ತಿಳಿದುಕೊಳ್ಳಿ

ದಾಸವಾಳದ ಚಹಾದ ಆರೋಗ್ಯ ಪ್ರಯೋಜನಗಳು : 
ತೂಕ ನಷ್ಟಕ್ಕೆ ಸಹಾಯ  : 

ದೇಹ ತೂಕ ಹೆಚ್ಚಾಗಿದ್ದು, ತೂಕ ನಷ್ಟ ಮಾಡಲು ಪ್ರಯತ್ನಿಸುತ್ತಾ ಇದ್ದೀರಾ? ಹಾಗಿದ್ದರೆ ದಾಸವಾಳದ ಹೂವಿನ ಚಹಾ ನಿಮಗೆ ಪ್ರಯೋಜನಕಾರಿಯಾಗಬಹುದು. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ತ್ವರಿತವಾಗಿ ಕರಗಲು ಆರಂಭವಾಗುತ್ತದೆ. ನಮ್ಮ ಬಾಡಿ ಮಾಸ್ ಇಂಡೆಕ್ಸ್ ಕೂಡಾ ಕಡಿಮೆಯಾಗುತ್ತದೆ. ದಿನಕ್ಕೆ 1-2 ಬಾರಿ ಈ ಚಹಾವನ್ನು ಸೇವಿಸುವ ಮೂಲಕ ದೇಹ ತೂಕವನ್ನು ಬಹಳ ಸುಲಭವಾಗಿ ನಿಯಂತ್ರಿಸಿಕೊಳ್ಳಬಹುದು.  

ಒತ್ತಡ ನಿವಾರಣೆಗೆ : 
ದಾಸವಾಳದ ಹೂವುಗಳಿಂದ ತಯಾರಿಸಿದ ಚಹಾವು ನಮ್ಮ ಮಾನಸಿಕ ಒತ್ತಡವನ್ನು ತೊಡೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳೇ ಇದಕ್ಕೆ ಕಾರಣ. ಇದು ನಮ್ಮ ಮಾನಸಿಕ ಒತ್ತಡವನ್ನು ನಿವಾರಿಸುವ ಮೂಲಕ ಒತ್ತಡ ಮುಕ್ತವಾಗಿರಲು ಸಹಾಯ ಮಾಡುತ್ತದೆ . 

ಇದನ್ನೂ ಓದಿ : ಈ ನೀರನ್ನಷ್ಟೇ ಕೂದಲಿಗೆ ಹಚ್ಚಿ, ಒಂದೇ ವಾರದಲ್ಲಿ ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗುವುದು!

ಸೋಂಕು ನಿವಾರಣೆಗೆ ಸಹಾಯ : 
ದಾಸವಾಳವು ನಮ್ಮ ದೇಹವನ್ನು ಬಾಹ್ಯ ಸೋಂಕುಗಳಿಂದ ರಕ್ಷಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ನಿಮ್ಮ ದೇಹವನ್ನು ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು  ವೈರಸ್ ಗಳಿಂದ ರಕ್ಷಿಸಬೇಕಾದರೆ ದಾಸವಾಳದ ಚಹಾ ತುಂಬಾ ಉಪಯುಕ್ತವಾಗಿದೆ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕನ್ನು ತಡೆಗಟ್ಟಲು  ಪ್ರತಿದಿನ ಒಂದು ದಾಸವಾಳ ಕಪ್ ಚಹಾವನ್ನು ಸೇವಿಸಬೇಕು.

ಕೂದಲು ಉದುರುವಿಕೆ  ತಡೆಗಟ್ಟಲು :
ಬಹಳ ದಿನಗಳಿಂದ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದರೆ, ಒಂದು ಕಪ್ ದಾಸವಾಳದ ಚಹಾವನ್ನು ಸೇವಿಸಬೇಕು. ದಾಸವಾಳದ ಚಹಾವು ಕೂದಲು ಉದುರುವಿಕೆಯನ್ನು ತಡೆಗಟ್ಟುತ್ತದೆ. ಮಾತ್ರವಲ್ಲ ಕೂದಲು ರೇಷ್ಮೆಯಂತೆ ಹೊಳೆಯಲು ಸಹಾಯ ಮಾಡುತ್ತದೆ. 

 (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News