ನವದೆಹಲಿ: ಚೈತ್ರ ಮತ್ತು ಶರದಿಯಾ ನವರಾತ್ರಿಯ (Navaratri) ಸಮಯದಲ್ಲಿ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿಯ 9 ಅವತಾರಗಳಲ್ಲದೆ, ತಾಯಿಯ 10 ಮಹಾವಿದ್ಯಾಗಳನ್ನು ಕೂಡಾ ಪೂಜಿಸಲಾಗುತ್ತದೆ. ಈ 10 ಮಹಾ ವಿದ್ಯಾಗಳಲ್ಲಿ ಚಿನ್ನಮ್ಮಾಸ್ತಿಕ ದೇವಿ (Chhinnamastika Devi) ಕೂಡಾ ಒಂದು. ಇದು ಜಾರ್ಖಂಡ್ ರಾಜಧಾನಿ ರಾಂಚಿಯಿಂದ 80 ಕಿ.ಮೀ ದೂರದಲ್ಲಿರುವ ರಾಜಾರಪ್ಪದಲ್ಲಿ ಮಾ ಚಿನ್ನಮ್ಮಾಸ್ತಿಕ ದೇವಿಯ ದೇವಾಲಯವಿದೆ. ಇಲ್ಲಿನ ದೇವಿಯ ಮೂರ್ತಿಯೇ ಈ ದೇವಾಲಯದ ವೈಶಿಷ್ಟ್ಯ.
ರಾಜರಪ್ಪದಲ್ಲಿರುವ ಮಾ ಚಿನ್ನಮಾಸ್ತಿಕ ದೇವಸ್ಥಾನ :
ಅಸ್ಸಾಂನ ಕಾಮಾಕ್ಯ ದೇವಾಲಯವನ್ನು (Kamakya Temple) ವಿಶ್ವದ ಅತಿದೊಡ್ಡ ಶಕ್ತಿಪೀಠ ಎಂದು ಕರೆಯಲಾಗುತ್ತದೆ, ಇದರ ನಂತರದ ಸ್ಥಾನ ರಾಜರಪ್ಪದಲ್ಲಿರುವ ಮಾ ಚಿನ್ನಮ್ಮಾಸ್ತಿಕಾ ದೇವಾಲಯಕ್ಕೆ ಸಲ್ಲುತ್ತದೆ. ಈ ದೇವಾಲಯದಲ್ಲಿ ನೆಲೆಯಾಗಿರುವ ತಾಯಿಯ ವಿಗ್ರಹವೇ ಇಲ್ಲಿನ ವಿಶೇಷ. ತನ್ನ ಕತ್ತರಿಸಲ್ಪಟ್ಟ ರುಂಡವನ್ನು ಕೈಯಲ್ಲಿ ಹಿಡಿದಿರುವ ದೇವಿಯ (Godess Devi)ಮೂರ್ತಿಗೆ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ದೇವಿಯ ರುಂಡದಿಂದ ರಕ್ತವು ಚಿಮ್ಮುತ್ತಿರುವಂತೆ ಭಾಸವಾಗುತ್ತದೆ. ತಾಯಿಯ ಈ ರೂಪ ಕೆಲವರನ್ನು ಭಯಭೀತಗೊಳಿಸುತ್ತದೆ.
ಇದನ್ನೂ ಓದಿ : ಅಕ್ಷಯ ತೃತೀಯ ದಿನದಂದು ಚಿನ್ನ ಯಾಕೆ ಖರೀದಿಸಬೇಕು..?
ತಾಯಿಯ ಅದ್ಭುತ ರೂಪ :
ಇಲ್ಲಿ ನೆಲೆ ನಿಂತಿರುವ ತಾಯಿಯನ್ನು ಮನೋಕಕಾಮನಾ ದೇವಿ ಎಂದು ಕೂಡಾ ಕರೆಯಲಾಗುತ್ತದೆ. ಇಲ್ಲಿ ವರ್ಷವಿಡೀ ಅಪಾರ ಸಂಖ್ಯೆಯಲ್ಲಿ ಭಕ್ತರು (Devotees)ಇಲ್ಲಿಗೆ ಆಗಮಿಸುತ್ತಾರೆ. ಚೈತ್ರ ನವರಾತ್ರಿ ಮತ್ತು ಶಾರ್ದಿಯಾ ನವರಾತ್ರಿಗಳ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಈ ದೇವಾಲಯಕ್ಕೆ ಸುಮಾರು 6 ಸಾವಿರ ವರ್ಷಗಳ ಇತಿಹಾಸವಿದೆ.
ದೇವಿಯ ಈ ರೂಪದ ಹಿಂದಿನ ಕತೆ :
ಪುರಾಣದ ಪ್ರಕಾರ, ದೇವಿಯು ಒಮ್ಮೆ ತನ್ನ ಸಖಿಯರೊಂದಿಗೆ ನದಿಯಲ್ಲಿ ಸ್ನಾನ ಮಾಡಲು ತೆರಳುತ್ತಾಳೆ. ಈ ಹೊತ್ತಿನಲ್ಲಿ ದೇವಿಯ ಸಖಿಯರಿಗೆ ಹಸಿವು (Hungry)ಮತ್ತು ಬಾಯಾರಿಕೆಯಾಗುತ್ತದೆ. ಅವರು ದೇವಿ ಬಳಿ ತಮ್ಮ ಹಸಿವು ಮತ್ತು ಬಾಯಾರಿಕೆ ಬಗ್ಗೆ ಹೇಳಿಕೊಳ್ಳುತ್ತಾರೆ. ದೇವಿ ಅವರಿಗೆ ಸ್ವಲ್ಪ ಹೊತ್ತು ಕಾಯುವಂತೆ ಸೂಚಿಸುತ್ತಾಳೆ. ಆದರೆ ಸಖಿಯರು ಹಸಿವು ಮತ್ತು ಬಾಯಾರಿಕೆಯಿದ ಬಳಲುತ್ತಾರೆ ಅವರ ದೇಹವು ಕಪ್ಪು ಬಣ್ಣಕ್ಕೆ ತಿರುಗಲು ಆರಂಭವಾಗುತ್ತದೆ. ಇದನ್ನು ಕಂಡ ದೇವಿ ತನ್ನ ಶಿರವನ್ನು ಖಡ್ಗದಿಂದ ತುಂಡರಿಸುತ್ತಾಳೆ. ಈ ವೇಳೆ ದೇವಿಯ ರುಂಡದಿಂದ ಮೂರು ಚಿಲುಮೆಗಳು ಚಿಮ್ಮುತ್ತದೆ. ಇದರಲ್ಲಿ ಎರಡು ಚಿಲುಮೆಗಳಲ್ಲಿನ ರಕ್ತದಿಂದ (Blood) ಸಖಿಯರು ತಮ್ಮ ದಾಹ ನೀಗಿಸಿಕೊಳ್ಳುತ್ತಾರೆ. ಮೂರನೇ ಚಿಲುಮೆಯಿಂದ ಸ್ವತಃ ದೇವಿ ತನ್ನ ದಾಹ ನೀಗಿಸುತ್ತಾಳೆ. ಅಂದಿನಿಂದ ದೇವಿಯು ಚಿನ್ನಮ್ಮಾಸ್ತಿಕ ದೇವಿಯೆಂದೇ ಇಲ್ಲಿ ಪೂಜಿಸಲ್ಪಡುತ್ತಿದ್ದಾಳೆ. ದುಷ್ಟ ಸಂಹಾರಿಯಾಗಿ ಶಿಷ್ಟ ರಕ್ಷಕಿಯಾಗಿ ಇಲ್ಲಿ ನೆಲೆಯಾಗಿದ್ದಾಳೆ. ಹಾಗಾಗಿ ಇಲ್ಲಿ ಭಕ್ತರು ಶೃದ್ದಾಭಕ್ತಿಯಿಂದ ಏನೇ ಕೇಳಿಕೊಂಡರೂ ದೇವಿ (Devi) ಅದನ್ನು ಈಡೇರಿಸುತ್ತಾಳಂತೆ..
ಇದನ್ನೂ ಓದಿ : Ram Navami 2021: ಈ ಮಂತ್ರಗಳನ್ನು ಜಪಿಸಿ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.