ಸಾಲ ಕೊಟ್ಟ ಸ್ನೇಹಿತನ ಪತ್ನಿಯನ್ನೇ ಪಟಾಯಿಸಿದ ಭೂಪ! ದುಡ್ಡು, ಹೆಂಡ್ತಿ ಕಳೆದುಕೊಂಡ ವ್ಯಕ್ತಿ ಕಂಗಾಲು!!

Belagavi: ಬಸವರಾಜ ಹಾಗೂ ವಾಣಿಶ್ರೀ ದಂಪತಿಗೆ ಮೂವರು ಮಕ್ಕಳಿದ್ದಾರೆ. ಪತಿಯ ಪರಸ್ತ್ರೀ ವ್ಯಾಮೋಹ ತಡೆಯಲು ಹೋಗಿ ವಾಣಿಶ್ರೀ ಅನೇಕ ಬಾರಿ ಹಲ್ಲೆಗೆ ಒಳಗಾಗಿದ್ದಳಂತೆ. 8 ವರ್ಷಗಳಿಂದ ಗಂಡ ಬಸವರಾಜನಿಂದ ನಿರಂತರ ಕಿರುಕುಳ ಸಹಿಸಿಕೊಂಡಿದ್ದಳಂತೆ.

Written by - Puttaraj K Alur | Last Updated : Jan 7, 2025, 07:17 PM IST
  • ಸಾಲ ಕೊಟ್ಟ ಸ್ನೇಹಿತನ ಪತ್ನಿಯನ್ನೇ ಪಟಾಯಿಸಿದ ಭೂಪ!
  • ಚಿನ್ನ, ಹಣ, ಸೈಟ್‌ & ಹೆಂಡ್ತಿ ಕಳೆದುಕೊಂಡು ವ್ಯಕ್ತಿ ಕಂಗಾಲು
  • ಕಿಡ್ನಾಪ್ ಕೇಸ್ ದಾಖಲಿಸಿರುವ ಪತಿಯಿಂದ ನ್ಯಾಯ ಕೊಡಿಸುವಂತೆ ಖಾಕಿಗೆ ಮನವಿ
ಸಾಲ ಕೊಟ್ಟ ಸ್ನೇಹಿತನ ಪತ್ನಿಯನ್ನೇ ಪಟಾಯಿಸಿದ ಭೂಪ! ದುಡ್ಡು, ಹೆಂಡ್ತಿ ಕಳೆದುಕೊಂಡ ವ್ಯಕ್ತಿ ಕಂಗಾಲು!! title=
ಸ್ನೇಹಿತನ ಹೆಂಡ್ತಿ ಜೊತೆ ಪರಾರಿ!!

Belagavi Love Case: ಮೊಬೈಲ್‌ನಲ್ಲಿ ರಮ್ಮಿ ಗೀಳಿನ ಜೊತೆಗೆ ಜೂಜಾಟದ ಚಟಕ್ಕೆ ಬಿದ್ದಿದ್ದ ವ್ಯಕ್ತಿಯೊಬ್ಬ ಎರಡು ಸೈಟ್‌, ಕಾರು, ಚಿನ್ನಾಭರಣ ಹೊಂದಿದ್ದ ಪರಸ್ತ್ರೀ ಜೊತೆಗೆ ಪರಾರಿಯಾಗಿದ್ದಾನೆ. ಈ ಕಿಲಾಡಿ ಗಂಡನ ವರ್ತನೆಗೆ ಆತನ ಪತ್ನಿ ಶಾಕ್ ಆಗಿದ್ದಾಳೆ. ಮತ್ತೊಂದೆಡೆ ಓಡಿಹೋದ ಮಹಿಳೆಯ ಪತಿ ತನ್ನ ಆಸ್ತಿ, ಹಣ ಹಾಗೂ ಹೆಂಡತಿಯನ್ನ ಕಳೆದುಕೊಂಡು ಕಂಗಾಲಾಗಿದ್ದಾನೆ. ಈ ಘಟನೆ ನಡೆದಿರುವ ಕುಂದಾನಗರಿ ಬೆಳಗಾವಿಯಲ್ಲಿ. 

ಮದುವೆಯಾಗಿ ಮೂವರು ಮಕ್ಕಳಿದ್ದರೂ ಸಹ ಸ್ನೇಹಿತನ ಹೆಂಡತಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮದ ಮಾಸಾಬಿ ಎಂಬಾಕೆಯೊಂದಿಗೆ ಬಸವರಾಜ ಸೀತಿಮನಿ ಎಂಬಾತ ಎಸ್ಕೇಪ್‌ ಆಗಿದ್ದಾನೆ. ಆಕೆಯ ಇಬ್ಬರು ಮಕ್ಕಳು ಹಾಗೂ ತನ್ನೊಬ್ಬ ಪುತ್ರನ ಜೊತೆಗೆ ಬಸವರಾಜ ಪರಾರಿಯಾಗಿದ್ದಾನೆ. ಇದೀಗ ಬಸವರಾಜನ ಪತ್ನಿ ವಾಣಿಶ್ರೀ ಎರಡು ಪುಟ್ಟ ಮಕ್ಕಳ ಜೊತೆಗೆ ಬೀದಿಪಾಲಾಗಿದ್ದಾಳೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ನಡೆಸಲು ಸಾಧ್ಯವಾಗ್ತಿಲ್ಲ

ಬಸವರಾಜ ಹಾಗೂ ವಾಣಿಶ್ರೀ ದಂಪತಿಗೆ ಮೂವರು ಮಕ್ಕಳಿದ್ದಾರೆ. ಪತಿಯ ಪರಸ್ತ್ರೀ ವ್ಯಾಮೋಹ ತಡೆಯಲು ಹೋಗಿ ವಾಣಿಶ್ರೀ ಅನೇಕ ಬಾರಿ ಹಲ್ಲೆಗೆ ಒಳಗಾಗಿದ್ದಳಂತೆ. 8 ವರ್ಷಗಳಿಂದ ಗಂಡ ಬಸವರಾಜನಿಂದ ನಿರಂತರ ಕಿರುಕುಳ ಸಹಿಸಿಕೊಂಡಿದ್ದಳಂತೆ. ಆದರೆ ಮಾಸಾಬಿ ಮನೆಯಲ್ಲಿದ್ದ 60 ಗ್ರಾಂ ಚಿನ್ನ, ಐದು ಲಕ್ಷ ಹಣ, ಸೈಟ್ ದಾಖಲೆ, ಕಾರು, ಮನೆಯ ಸಿಲಿಂಡರ್ ಸೇರಿ ಎಲ್ಲಾ ವಸ್ತುಗಳ ಸಮೇತ ಈತನ ಓಡಿಹೋಗಿದ್ದಾಳಂತೆ. ಇದರಿಂದ ಆಕೆಯ ಗಂಡ ಆಸೀಫ್ ಕಂಗಾಲಾಗಿ ಹೋಗಿದ್ದಾನೆ. . 

ಮಾಸಾಬಿ ಪತಿ ಆಸಿಫ್ ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ನಿವಾಸಿ. ಪತ್ನಿಗಾಗಿ ಅಪ್ಪ-ಅಮ್ಮನನ್ನು ದೂರ ಮಾಡಿ ಮಾರಿಹಾಳಕ್ಕೆ ಬಂದು ನೆಲೆಸಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಆಸೀಫ್ ತನ್ನ ಪತ್ನಿಯ ಹೆಸರಲ್ಲಿ ಬಾಳೆಕುಂದ್ರಿ ಹಾಗೂ ನಂದಗಢದಲ್ಲಿ ಎರಡು ಸೈಟ್ ಮಾಡಿದ್ದ. ಜನವರಿ 1ರ ರಾತ್ರಿ ೯ ಗಂಟೆ ವೇಳೆ ಆ ಎಲ್ಲಾ ದಾಖಲೆಗಳನ್ನ ತೆಗೆದುಕೊಂಡ ಮಾಸಾಬಿ, ಪತಿಯ ಮನೆಗೆ ಹೋಗುವುದಾಗಿ ಹೇಳಿ ಬಸವರಾಜನೊಂದಿಗೆ ಪರಾರಿಯಾಗಿದ್ದಾಳೆಂದು ಆರೋಪಿಸಲಾಗಿದೆ. 

ಇದನ್ನೂ ಓದಿ: ಈಗಾಗಲೇ ಸರ್ಕಾರ ಆದೇಶಿಸಿದೆ, ಲೀಗಲ್ ಟೀಮ್‌ಗೆ ಹೇಳಿದೆ

ಬಸವರಾಜ ಸೀತಿಮನಿ ಜೊತೆ ಮಾಸಾಬಿ ಕಾರಿನಲ್ಲಿ ಪರಾರಿಯಾಗಿದ್ದಾಳಂತೆ. ಇವರಿಬ್ಬರಿಂದ ಕಂಗಾಲಾಗಿರುವ ಆಸೀಫ್, ತನ್ನ ಪತ್ನಿ ಹಾಗೂ ಮಕ್ಕಳನ್ನು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾನೆ. ಜನವರಿ 2ರಂದು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾನೆ. ಈ ಬಗ್ಗೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಎಸ್ಕೇಪ್‌ ಅಗಿರೋ ಬಸವರಾಜ ಮತ್ತು ಮಾಸಾಬಿ ಪತ್ತೆಗೆ ಶೋಧಕಾರ್ಯ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News