ಯಾವುದೇ ಕೆಲಸಕ್ಕೆ ಹೊರಟಾಗ ಇವುಗಳು ಕಣ್ಣಿಗೆ ಬಿದ್ದಲ್ಲಿ ಕೆಲಸ ಕೈಗೂಡುತ್ತದೆಯಂತೆ

ಪ್ರಯಾಣಕ್ಕೆ ಸಂಬಂಧಿಸಿದಂತೆ ಶಕುನ ಶಾಸ್ತ್ರದಲ್ಲಿ ಹಲವು ವಿಚಾರಗಳನ್ನು ಹೇಳಲಾಗಿದೆ. ಪ್ರಯಾಣಕ್ಕೆ ಹೊರಡುವ ಮೊದಲು, ಯಾವ ವಸ್ತುಗಳು ಕಣ್ಣಿಗೆ ಬಿದ್ದರೆ ಶುಭ ಶಕುನ ಯಾವುದು ಅಪಶಕುನ ಎನ್ನುವುದನ್ನು ವಿವರವಾಗಿ ವಿವರಿಸಲಾಗಿದೆ.   

Written by - Ranjitha R K | Last Updated : Jun 9, 2022, 01:17 PM IST
  • ಪ್ರಯಾಣಕ್ಕೆ ಸಂಬಂಧಿಸಿದಂತೆ ಶಕುನ ಶಾಸ್ತ್ರದಲ್ಲಿ ಏನು ಹೇಳಲಾಗಿದೆ
  • ಶಕುನ ಅಪಶಕುನದ ಬಗ್ಗೆ ಹೇಳಲಾಗಿದೆ
  • ಹೊರಗಡೆ ಹೋಗುವಾಗ ಯಾರು ಕಣ್ಣೆದುರು ಬಂದರೆ ಶುಭ
ಯಾವುದೇ ಕೆಲಸಕ್ಕೆ ಹೊರಟಾಗ ಇವುಗಳು ಕಣ್ಣಿಗೆ ಬಿದ್ದಲ್ಲಿ ಕೆಲಸ ಕೈಗೂಡುತ್ತದೆಯಂತೆ title=
Shakuna Apashakuna (file photo)

ಬೆಂಗಳೂರು : ಭಾರತದಲ್ಲಿ ಶಕುನ ಅಪಶಕುನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಹಿಂದೂ ಧರ್ಮದಲ್ಲಿ, ಇಡೀ ಗ್ರಂಥವನ್ನು ಅದರ ಮೇಲೆ ಬರೆಯಲಾಗಿದೆ. ಪ್ರಯಾಣಕ್ಕೆ ಸಂಬಂಧಿಸಿದಂತೆ ಶಕುನ ಶಾಸ್ತ್ರದಲ್ಲಿ ಹಲವು ವಿಚಾರಗಳನ್ನು ಹೇಳಲಾಗಿದೆ. ಪ್ರಯಾಣಕ್ಕೆ ಹೊರಡುವ ಮೊದಲು, ಯಾವ ವಸ್ತುಗಳು ಕಣ್ಣಿಗೆ ಬಿದ್ದರೆ ಶುಭ ಶಕುನ ಯಾವುದು ಅಪಶಕುನ ಎನ್ನುವುದನ್ನು ವಿವರವಾಗಿ ವಿವರಿಸಲಾಗಿದೆ. 

ಪ್ರಯಾಣಿಸುವ ಮುನ್ನ ಈ ವಸ್ತುಗಳು ಕಣ್ಣಿಗೆ ಬಿದ್ದರೆ ಅದನ್ನು ಶುಭ ಶಕುನ ಎಂದು ಪರಿಗಣಿಸಲಾಗುವುದು.  
ನೀರು ತುಂಬಿದ ಪಾತ್ರೆ:  ನೀವು ಎಲ್ಲಾದರೂ ಪ್ರಯಾಣಕ್ಕೆ ಹೋಗುತ್ತಿದ್ದು,  ದಾರಿಯಲ್ಲಿ ನೀರು ತುಂಬಿದ ಪಾತ್ರೆ ಕಣ್ಣಿಗೆ ಬಿದ್ದರೆ, ಅದನ್ನು ಶುಭ ಎಂದು ಹೇಳಲಾಗುತ್ತದೆ.  ಹೀಗಾದರೆ ನೀವು ಯಾವ ಕೆಲಸಕ್ಕೆ ಮನೆಯಿಂದ ಹೊರಟಿದ್ದೀರಿ ಆ ಕೆಲಸ ಕೈಗೂಡುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : ಇನ್ನು ಒಂಭತ್ತು ದಿನಗಳಲ್ಲಿ ಈ ರಾಶಿಯವರ ಎಲ್ಲಾ ಸಮಸ್ಯೆಗಳಿಗೂ ಸಿಗಲಿದೆ ಮುಕ್ತಿ, ಜೀವನದಲ್ಲಿ ಎಲ್ಲವೂ ಸುಖಮಯ

ಬ್ರಾಹ್ಮಣ: ಪ್ರಯಾಣಕ್ಕೆ ಹೊರಡುವ ಮುನ್ನ ಬ್ರಾಹ್ಮಣ ಕಂಡರೆ ಅದು ತುಂಬಾ ಒಳ್ಳೆಯದು ಎನ್ನಲಾಗಿದೆ. ಹಿಂದೂ ಧರ್ಮದಲ್ಲಿ, ಬ್ರಾಹ್ಮಣನನ್ನು ಭಗವಂತನ ರೂಪ ಎಂದು ಹೇಳಲಾಗುತ್ತದೆ. ಆದ್ದರಿಂದ ಯಾವುದೇ ಕೆಲಸಕ್ಕೆ ಹೊರಡುವ ಮುನ್ನ ಬ್ರಾಹ್ಮಣನ ಆಶೀರ್ವಾದ ಪಡೆದುಕೊಳ್ಳುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. 

ಹಳದಿ ಬಟ್ಟೆಯಲ್ಲಿ ಮಹಿಳೆ ಅಥವಾ ಹುಡುಗಿ ಕಾಣಿಸಿಕೊಳ್ಳುವುದು: ಪ್ರಯಾಣಕ್ಕೆ ಹೋಗುವಾಗ, ಹಳದಿ ಬಟ್ಟೆಯನ್ನು ಧರಿಸಿರುವ ಹುಡುಗಿ ಅಥವಾ ಮಹಿಳೆ ಕಾಣಿಸಿಕೊಂಡರೆ, ಅದು ತುಂಬಾ ಒಳ್ಳೆಯ ಸಂಕೇತವಾಗಿರುತ್ತದೆ ಎನ್ನಲಾಗಿದೆ. ಹಳದಿ ಬಣ್ಣವು ಭಗವಾನ್ ವಿಷ್ಣು ಮತ್ತು ಗುರುವಿಗೆ ಸಂಬಂಧಿಸಿದ್ದಾಗಿದೆ. ಇಬ್ಬರ ಅನುಗ್ರಹವು ಅದೃಷ್ಟವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿ ಕೆಲಸದಲ್ಲಿ ಯಶಸ್ಸನ್ನು ನೀಡುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ : Mahalakshmi Yog: ಜೂನ್ 18 ರಿಂದ ಈ 3 ರಾಶಿಗಳ ಜನರ ಭಾಗ್ಯದಲ್ಲಿ ಭಾರೀ ಬದಲಾವಣೆ, ಕಾರಣ ಇಲ್ಲಿದೆ

ತೃತೀಯ ಲಿಂಗಿಗಳು : ಯಾವುದೇ ಕೆಲಸಕ್ಕೆ ಹೊರಗಡೆ ಹೊರಗಡೆ ಹೋಗುವಾಗ ತೃತೀಯ ಲಿಂಗಿಗಳು ಎದುರಾದರೆ ತುಂಬಾ ಶ್ರೇಯಸ್ಕರ. ಅವರಿಗೆ ಏನಾದರೂ ದಾನ ಮಾಡಿ ಅವರ ಆಶೀರ್ವಾದ ಪಡೆದರೆ ಒಳ್ಳೆಯದು. 

ಕರುವಿಗೆ ಹಾಲುಣಿಸುವ ಹಸು: ಹೊರಗಡೆ ಹೋಗುವಾಗ ದಾರಿಯಲ್ಲಿ ಕರುವಿಗೆ ಹಾಲುಣಿಸುತ್ತಿರುವ ಹಸು ಕಣ್ಣಿಗೆ ಬಿದ್ದರೆ  ಯಾವ ಕೆಲಸಕ್ಕೆ ನೀವು ಹೊರಗೆ ಹೋಗುತ್ತಿದ್ದಿರೋ ಆ ಕೆಲಸದಲ್ಲಿ ಯಶಸ್ಸು ಸಿಗುವುದು ಖಚಿತ  ಎಂದು ಹೇಳಲಾಗುತ್ತದೆ. 

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News