ಈ ಗುಣಗಳಿರುವ ಹುಡುಗರತ್ತ ಹುಡುಗಿಯರು ಹೆಚ್ಚು ಆಕರ್ಷಿತರಾಗುತ್ತಾರೆಯಂತೆ.!

Woman Loves about Man : ಮೊದಲ ನೋಟದಲ್ಲೇ ಹೆಣ್ಣು ಗಂಡಿನತ್ತ ಆಕರ್ಷಿತ ವಾಗಿರಬಹುದು, ಅಥವಾ ಗಂಡು ಹೆಣ್ಣಿನತ್ತ ಆಕರ್ಷಿಸಲ್ಪಡಬಹುದು.  ಹೌದು, ಹುಡುಗಿಯರು ಕೆಲವು ಗುಣಗಳಿರುವ ಹುಡುಗರತ್ತ ಬಹಳ ಬೇಗ ಆಕರ್ಷಿತರಾಗುತ್ತಾರೆಯಂತೆ. 

Written by - Ranjitha R K | Last Updated : Nov 21, 2022, 02:16 PM IST
  • ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಬಹಳ ಮುಖ್ಯವಾಗಿರುತ್ತದೆ.
  • ಅದೆಷ್ಟೋ ಜನರ ಪ್ರೇಮ ಕತೆ ಮೊದಲ ನೋಟದಿಂದಲೇ ಆರಂಭವಾಗುತ್ತದೆ
  • ಹುಡುಗರಲ್ಲಿ ಈ ಗುಣಗಳಿದ್ದರೆ ಹುಡುಗಿಯರಿಗೆ ಇಷ್ಟ
ಈ  ಗುಣಗಳಿರುವ ಹುಡುಗರತ್ತ ಹುಡುಗಿಯರು ಹೆಚ್ಚು  ಆಕರ್ಷಿತರಾಗುತ್ತಾರೆಯಂತೆ.!  title=
Woman Loves about Man

Woman Loves about Man : ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಬಹಳ ಮುಖ್ಯವಾಗಿರುತ್ತದೆ. ಒಬ್ಬ ವ್ಯಕ್ತಿಯನ್ನು ನೋಡುವಾಗ  ಮೊದಲು ಯಾವ ಭಾವ ಮೂಡುತ್ತದೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಅದೆಷ್ಟೋ ಜನರ ಪ್ರೇಮ ಕತೆ ಮೊದಲ ನೋಟದಿಂದಲೇ ಆರಂಭವಾಗಿರುವುದನ್ನು ಕೇಳಿರುತ್ತೇವೆ. ಮೊದಲ ನೋಟದಲ್ಲೇ ಹೆಣ್ಣು ಗಂಡಿನತ್ತ ಆಕರ್ಷಿತ ವಾಗಿರಬಹುದು, ಅಥವಾ ಗಂಡು ಹೆಣ್ಣಿನತ್ತ ಆಕರ್ಷಿಸಲ್ಪಡಬಹುದು.  ಹೌದು, ಹುಡುಗಿಯರು ಕೆಲವು ಗುಣಗಳಿರುವ ಹುಡುಗರತ್ತ ಬಹಳ ಬೇಗ ಆಕರ್ಷಿತರಾಗುತ್ತಾರೆಯಂತೆ. 

ಟ್ರಿಮ್ ಮಾಡಿದ ಗಡ್ಡವನ್ನು ಹೊಂದಿರುವ ಹುಡುಗರು :
ಇತ್ತೀಚಿನ ದಿನಗಳಲ್ಲಿ ಟ್ರಿಮ್ಡ್ ಗಡ್ಡದ ಟ್ರೆಂಡ್ ಹೆಚ್ಚುತ್ತಿದೆ. ಹುಡುಗಿಯರು ಅಂತಹ ಹುಡುಗರತ್ತ ಹೆಚ್ಚು ಆಕರ್ಷಿತರಾಗುತ್ತಾರೆಯಂತೆ. ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದ ಅಧ್ಯಯನದಲ್ಲಿ, ಟ್ರಿಮ್ ಮಾಡಿದ ಗಡ್ಡವನ್ನು ಹೊಂದಿರುವ ಪುರುಷರತ್ತ ಮಹಿಳೆಯರಿಗೆ ಹೆಚ್ಚು ಆಕರ್ಷಿತರಾಗುತ್ತಾರೆ ಎನ್ನುವುದು ಸಾಬೀತಾಗಿದೆ.

ಇದನ್ನೂ ಓದಿ Delay In Marriage: ಕಂಕಣ ಬಲ ಕೂಡಿಬರುತ್ತಿಲ್ಲವೇ? ಈ ಉಪಾಯ ಮಾಡಿ ಸಂಬಂಧ ಖುದ್ದಾಗಿ ನಿಮ್ಮ ಮನೆಬಾಗಿಲಿಗೆ ಬರುತ್ತದೆ

ತಮಗಿಂತ ಹೆಚ್ಚಿನ ವಯಸ್ಸಿನ ಪುರುಷರು :
ಹುಡುಗಿಯರು ಹೆಚ್ಚಾಗಿ ತಮ್ಮ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನ  ಪುರುಷರನ್ನು ಇಷ್ಟಪಡುತ್ತಾರೆಯಂತೆ . 2010 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಹೆಚ್ಚಿನ ಮಹಿಳೆಯರು ವಯಸ್ಸಾದ ಪುರುಷರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ ಎನ್ನುವ ಅಂಶ ತಿಳಿದು ಬಂದಿದೆ. 

ದೈಹಿಕವಾಗಿ ಸದೃಢ ಹುಡುಗರು :
ದೈಹಿಕವಾಗಿ ಸದೃಢರಾಗಿರುವ ಹುಡುಗರು ಯಾವಾಗಲೂ ಹುಡುಗಿಯರ ಮೊದಲ ಆಯ್ಕೆಯಾಗಿರುತ್ತಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ಅಂಶ  ಬೆಳಕಿಗೆ ಬಂದಿದೆ. ಈ ಅಧ್ಯಯನದ ಪ್ರಕಾರ, ಮಹಿಳೆಯರು ದೈಹಿಕವಾಗಿ ಸದೃಢವಾಗಿರುವ ಪುರುಷರನ್ನು ಹೆಚ್ಚು ಇಷ್ಟಪಡುತ್ತಾರೆಯಂತೆ. 

ಇದನ್ನೂ ಓದಿ : Gemstone : ಈ ರತ್ನವನ್ನು ಧರಿಸಿದರೆ ತಕ್ಷಣ ದೂರಗಲಿವೆ ನಿಮ್ಮ ಸಮಸ್ಯೆಗಳು! 

ನೈರ್ಮಲ್ಯ ಕಾಪಾಡಿಕೊಳ್ಳುವ ಪುರುಷರು :
ಸೌಂದರ್ಯದ ಜೊತೆಗೆ ಯಾವ ಹುಡುಗರು ನೈರ್ಮಲ್ಯ ಕಾಪಾಡಿಕೊಳ್ಳುತ್ತಾರೆ ಎನ್ನುವುದನ್ನು ಕೂಡಾ ಹುಡುಗಿಯರು ಬಹಳವಾಗಿ ಗಮನಿಸುತ್ತಾರೆ. ಅಂದ ಮತ್ತು ಡ್ರೆಸ್ಸಿಂಗ್ ಸೆನ್ಸ್ ಹೊರತಾಗಿ, ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವ ಹುಡುಗರು ಹುಡುಗಿಯರನ್ನು ಆಕರ್ಷಿಸುವಲ್ಲಿ ಯಶಸ್ಸು ಕಾಣುತ್ತಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News