Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹಲ್-ಚಲ್ ಸೃಷ್ಟಿಸಿದ 'ಪುಷ್ಪಾ' ಗಣಪತಿ

Ganeshotsav Idols 2022: ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ, ಶ್ರೀಗಣೇಶನಿಗೂ ಕೂಡ 'ಪುಷ್ಪರಾಜ್' ಫೀವರ್ ಆವರಿಸತೊಡಗಿದೆ. ಸಾರ್ವಜನಿಕರಲ್ಲಿ ಅತ್ಯಂತ ಸಂಭ್ರಮದ ಹಬ್ಬಗಳಲ್ಲಿ ಗಣೇಶ ಚತುರ್ಥಿ ಕೂಡ ಒಂದು.  

Written by - Nitin Tabib | Last Updated : Aug 30, 2022, 06:39 PM IST
  • ದಕ್ಷಿಣ ಚಿತ್ರರಂಗದ ಖ್ಯಾತ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ 'ಪುಷ್ಪ: ದಿ ರೈಸ್' ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫಿಸ್ ನಲ್ಲಿ ಭಾರಿ ದೂಳೆಬ್ಬಿಸಿದ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ.
  • ಅಷ್ಟೇ ಅಲ್ಲ ಇದೀಗ ಗಣಪತಿ ಹಬ್ಬದಲ್ಲೂ ಪುಷ್ಪಾ ಲುಕ್ ವೈರಲ್ ಆಗುತ್ತಿದೆ.
  • ಹಲವೆಡೆ ಗಣೇಶನ ವಿಗ್ರಹಗಳಿಗೆ ಪುಷ್ಪ ಗಡ್ಡದ ಮೇಲೆ ಕೈತಿರುಗಿಸುವ ಲುಕ್ ನೀಡಲಾಗಿದೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹಲ್-ಚಲ್ ಸೃಷ್ಟಿಸಿದ 'ಪುಷ್ಪಾ' ಗಣಪತಿ  title=
Ganesh In Pushpa Raj Look

Ganeshotsav Pushpa Idols 2022: ದಕ್ಷಿಣ ಚಿತ್ರರಂಗದ ಖ್ಯಾತ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ 'ಪುಷ್ಪ: ದಿ ರೈಸ್' ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫಿಸ್ ನಲ್ಲಿ ಭಾರಿ ದೂಳೆಬ್ಬಿಸಿದ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಚಿತ್ರದಲ್ಲಿ ಪುಷ್ಪಾ ಅವರ ‘ಝುಖೇಗಾ ನಹಿ’ ಶೈಲಿ ಪ್ರೇಕ್ಷಕರ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರೂ ಪುಷ್ಪಾ ಸ್ಟೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದಾರೆ. ಹಲವು ಹಿರಿಯ ಸೆಲೆಬ್ರಿಟಿಗಳು ಸಹ ಅಲ್ಲು ಅರ್ಜುನ್ ಅವರ ಪುಷ್ಪಾ ಶೈಲಿಯನ್ನು ಅನುಕರಿಸಿದ್ದನ್ನು ನೀವು ನೋಡಿರಬಹುದ. ಅಷ್ಟೇ ಅಲ್ಲ ಇದೀಗ ಗಣಪತಿ ಹಬ್ಬದಲ್ಲೂ ಪುಷ್ಪಾ ಲುಕ್ ವೈರಲ್ ಆಗುತ್ತಿದೆ. ಹಲವೆಡೆ ಗಣೇಶನ ವಿಗ್ರಹಗಳಿಗೆ ಪುಷ್ಪ ಗಡ್ಡದ ಮೇಲೆ ಕೈತಿರುಗಿಸುವ ಲುಕ್ ನೀಡಲಾಗಿದೆ. ಈ ಕುರಿತಾದ ಒಂದು ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ.

ಪುಷ್ಪ ಶೈಲಿಯಲ್ಲಿ ಗಣಪ 
'ಪುಷ್ಪ: ದಿ ರೈಸ್' ಬಿಡುಗಡೆಯಾದಾಗಿನಿಂದ ಅಲ್ಲು ಅರ್ಜುನ್ ಬಗ್ಗೆ ಪ್ರೇಕ್ಷಕರಲ್ಲಿ ಅಸಾಧಾರಣ ಕ್ರೇಜ್ ನಿರ್ಮಾಣಗೊಂಡಿದೆ. ಈ ಚಿತ್ರ ಭಾರೀ ಟ್ರೆಂಡನ್ನೇ ಸೃಷ್ಟಿಸಿದೆ. ಪುಷ್ಪಾ ಮಾನತಾಡುವ ಶೈಲಿ ಅಷ್ಟೇ ಅಲ್ಲ ಪುಷ್ಪಾ ರಾಜ್ ಬಾಡಿ ಲ್ಯಾಂಗ್ವೇಜ್ ಕೂಡ ಭಾರಿ ಟ್ರೆಂಡ್ ಸೃಷ್ಟಿಸಿದೆ.

ಇದನ್ನೂ ಓದಿ-Viral Video : ದಾರಿಯುದ್ದಕ್ಕೂ ಯುವಕನನ್ನು ಅಟ್ಟಾಡಿಸಿಕೊಂಡು ಬಂದು ಮದುವೆಯಾದ ಯುವತಿ

ಪುಷ್ಪಾ ರಾಜ್ ಫೀವರ್ 
ಇದೀಗ ಗಣಪತಿ ಹಬ್ಬ ಸಮೀಪಿಸುತ್ತಿದ್ದಂತೆ ಗಣಪತಿ ವಿಗ್ರಹಗಳಿಗೂ ಕೂಡ ಪುಷ್ಪ ರಾಜ್ ಫೀವರ್ ಆವರಿಸತೊಡಗಿದೆ. ಗಣಪತಿ ಹಬ್ಬವು ಸಾರ್ವಜನಿಕರಲ್ಲಿ ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಈ ವರ್ಷ ಪುಷ್ಪರಾಜ್ ಶೈಲಿಯಲ್ಲಿ ಮೂರ್ತಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಎಲ್ಲಿ ನೋಡಿದಲೆಲ್ಲಾ ಅಂತಹ ವಿಗ್ರಹಗಳು ಕಂಡುಬಂದಿವೆ, ಅವುಗಳಲ್ಲಿ ಗಣಪತಿ ಪುಷ್ಪ ರಾಜ ಶೈಲಿಯಲ್ಲಿ ಕುಳಿತಿರುವುದು ಕಂಡುಬಂದಿದೆ.

ಇದನ್ನೂ ಓದಿ-Viral Video: ಬೆಕ್ಕಿಗೆ ಮುತ್ತಿಡಲು ಆರಂಭಿಸಿದ ಹಾವು.! ಬೆಕ್ಕಿನ ಪ್ರತಿಕ್ರಿಯೆ ಹೇಗಿದೆ ನೋಡಿ

ಪುಷ್ಪಾ ರಾಜ್ ಕ್ರೇಜ್ ಕಡಿಮೆಯಾಗುತ್ತಿಲ್ಲ
ಇದು ಅಲ್ಲು ಅರ್ಜುನ್‌ನ ಕ್ರೇಜ್ ಮತ್ತು ಸ್ಟಾರ್‌ಡಮ್‌ಗೆ ಜೀವಂತ ಉದಾಹರಣೆಯಾಗಿದೆ. ಇಷ್ಟು ದಿನ ಕಳೆದರೂ ಸ್ಟೈಲಿಶ್ ಸ್ಟಾರ್ ಕ್ರೇಜ್ ಕಮ್ಮಿ ಕಾಣದೇ ಸದಾ ಜನಪ್ರಿಯತೆಯ ಹೊಸ ಉದಾಹರಣೆಗಳನ್ನು ನಿರ್ಮಿಸುತ್ತಿರುವುದು ಜನರಲ್ಲಿ ನಿಜಕ್ಕೂ ಅಚ್ಚರಿ ಮೂಡಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News