ಜುಲೈ 12ರ ನಂತರ ಈ ರಾಶಿಯವರ ಮೇಲಿರಲಿದೆ ಶನಿಯ ಕೃಪಾ ದೃಷ್ಟಿ

ಜುಲೈ 12, 2022 ರಿಂದ ಶನಿಯು ಮಕರ ರಾಶಿಯಲ್ಲಿ  ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತಾನೆ.  ಈ ಸಮಯದಲ್ಲಿ, ಶನಿಯು ಕೆಲವು ರಾಶಿಯವರ ಮೇಲೆ ತುಂಬಾ ದಯೆ ತೋರುತ್ತಾನೆ. 

Written by - Ranjitha R K | Last Updated : Jun 27, 2022, 01:54 PM IST
  • ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಶನಿ
  • ಜುಲೈ 12, 2022 ರಿಂದ ಮಕರ ರಾಶಿಯಲ್ಲಿ ಹಿಮ್ಮುಖ ಚಲನೆ
  • ಈ ರಾಶಿಯವರಿಗೆ ಆಗಲಿದೆ ಭಾರೀ ಲಾಭ
ಜುಲೈ  12ರ ನಂತರ ಈ ರಾಶಿಯವರ ಮೇಲಿರಲಿದೆ ಶನಿಯ ಕೃಪಾ ದೃಷ್ಟಿ  title=
Shani transit (file photo)

ಬೆಂಗಳೂರು : ಜ್ಯೋತಿಷ್ಯದಲ್ಲಿ, ಗ್ರಹಗಳ ಸಾಗಣೆ ಅಥವಾ ಸ್ಥಾನ ಪಲ್ಲಟಕ್ಕೆ ಬಹಳ ಪ್ರಾಮುಖ್ಯತೆ ಇದೆ.  ಶನಿಯಂತಹ ಪ್ರಮುಖ ಗ್ರಹದ ಸ್ಥಾನ ಪಲ್ಲಟ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ಶನಿಯು  ತನ್ನದೇ ಆದ ರಾಶಿಚಕ್ರವಾದ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಜುಲೈ 12, 2022 ರಿಂದ ಶನಿಯು ಮಕರ ರಾಶಿಯಲ್ಲಿ  ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತಾನೆ. ಈ ಸಮಯದಲ್ಲಿ, ಶನಿಯು ಕೆಲವು ರಾಶಿಯವರ ಮೇಲೆ ತುಂಬಾ ದಯೆ ತೋರುತ್ತಾನೆ. 

ಮೇಷ ರಾಶಿ :  ಶನಿಯ ಹಿಮ್ಮುಖ ಸಂಚಾರವು ಮೇಷ ರಾಶಿಯವರಿಗೆ ದೊಡ್ಡ ಆರ್ಥಿಕ ಲಾಭವನ್ನು ನೀಡುತ್ತದೆ. ಶನಿ ಸಂಚಾರವು ಈ ಜನರಿಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ನಿಂತು ಹೋಗಿದ್ದ ಕೆಲಸ ಚುರುಕು ಪಡೆಯುತ್ತದೆ. ಉದ್ಯೋಗಾಕಾಂಕ್ಷಿಗಳ ನಿರೀಕ್ಷೆ ಕೊನೆಗೊಳ್ಳಲಿದೆ. ವ್ಯಾಪಾರಿಗಳಿಗೂ ಹೆಚ್ಚಿನ ಲಾಭವಾಗಲಿದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲ  ಸಿಗಲಿದೆ. 

ಇದನ್ನೂ ಓದಿ : ಲಕ್ಷ್ಮೀಯ ಕೃಪೆ ಬೇಕಾದರೆ ತುಳಸಿ ಗಿಡವನ್ನು ಈ ದಿಕ್ಕಿನಲ್ಲಿ ನೆಡಬೇಕು

ಸಿಂಹ : ಮಕರ ರಾಶಿಯಲ್ಲಿ ಶನಿಯ ಪ್ರವೇಶವು ಸಿಂಹ ರಾಶಿಯ ಜನರ ಜೀವನದಲ್ಲಿ ಬಹು ದೊಡ್ಡ ಬದಲಾವಣೆಯನ್ನು ತರುತ್ತದೆ. ಬಡ್ತಿ-ವೇತನ ಹೆಚ್ಚಳವಾಗುವ ಸಂಪೂರ್ಣ ಅವಕಾಶಗಳಿವೆ. ಹೊಸ ಉದ್ಯೋಗವೂ ಸಿಗಬಹುದು. ಕೆಲಸದ ಸ್ಥಳದಲ್ಲಿ ಉತ್ತಮವಾಗಿ ವರ್ತಿಸಿ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ಸರ್ವತೋಮುಖ ಲಾಭವೂ ಆಗಲಿದೆ ಎನ್ನಬಹುದು. 

ಕನ್ಯಾರಾಶಿ  : ಶನಿಯ ರಾಶಿ ಬದಲಾವಣೆಯು ಕನ್ಯಾ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಉದ್ಯೋಗದಲ್ಲಿರುವವರು ದೊಡ್ಡ ಹುದ್ದೆ ಅಲಂಕರಿಸುವ ಸಾಧ್ಯತೆ ಇದೆ. 

ತುಲಾ : ಶನಿ ಸಂಕ್ರಮವು ತುಲಾ ರಾಶಿಯವರಿಗೆ ಪ್ರತಿಷ್ಠೆ ಮತ್ತು ಹಣ ಎಲ್ಲವನ್ನೂ ನೀಡುತ್ತದೆ. ಹೊಸ ಕೆಲಸ ಸಿಗುವುದು ಖಚಿತ. ಆರ್ಥಿಕ ಪ್ರಗತಿ ಇರುತ್ತದೆ. ಆದಾಯ ಹೆಚ್ಚಲಿದೆ. ಸಿಲುಕಿ ಹಾಕಿಕೊಂಡಿದ್ದ ಹಣ ಕೈ ಸೇರುತ್ತದೆ. ಸಮಸ್ಯೆಗಲೆಲ್ಲಾ ಬಗೆಹರಿಯುವುದು. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ. 

ಇದನ್ನೂ ಓದಿ :  Navgrah Upay : ನೀರಿನಲ್ಲಿ ಈ ವಸ್ತು ಬೆರೆಸಿ ಸ್ನಾನ ಮಾಡಿ, ನಿಮ್ಮ ಜಾತಕ ದೋಷಗಳು ದೂರಾಗುತ್ತವೆ!

ಧನು ರಾಶಿ :  ಶನಿಯ ಹಿಮ್ಮುಖ ಸಂಚಾರವು ಧನು ರಾಶಿಯವರ ಪ್ರಗತಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಯಶಸ್ಸುಗಳು ಒಂದರ ಹಿಂದೆ ಒಂದರಂತೆ ಬರುತ್ತವೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಗೌರವ ಹೆಚ್ಚಾಗಲಿದೆ. ವ್ಯಾಪಾರಿಗಳಿಗೂ ಲಾಭವಾಗಲಿದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

Trending News