ಈ ನಾಲ್ಕು ಕಾರಣಗಳಿಂದ ಹೆಚ್ಚುತ್ತದೆ ಹೃದಯಾಘಾತದ ಅಪಾಯ .! ಇಂದೇ ಎಚ್ಚೆತ್ತುಕೊಳ್ಳಿ

Factors Of Heart Attack:ಹೃದಯ ತನ್ನ ಕೆಲಸ ನಿಲ್ಲಿಸುವುದಕ್ಕೂ ಮುನ್ನ ಸೂಚನೆಗಳನ್ನು ನೀಡುತ್ತದೆ. ಆ ಸೂಚನೆಗಳನ್ನು ನಿರ್ಲಕ್ಷಿಸದೇ ಹೋದರೆ ಹೃದಯಾಘಾತದ ಅಪಾಯವನ್ನು ತಪ್ಪಿಸಬಹುದು.

Written by - Ranjitha R K | Last Updated : Jul 15, 2022, 11:49 AM IST
  • ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
  • ಬದಲಾಗುತ್ತಿರುವ ಜೀವ ಶೈಲಿ ಮತ್ತು ಆಹಾರ ಪದ್ಧತಿ ಹೃದಯಾಘತಕ್ಕೂ ಕಾರಣ.
  • ಈ ಕಾರಣಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ
ಈ ನಾಲ್ಕು ಕಾರಣಗಳಿಂದ ಹೆಚ್ಚುತ್ತದೆ ಹೃದಯಾಘಾತದ ಅಪಾಯ .! ಇಂದೇ ಎಚ್ಚೆತ್ತುಕೊಳ್ಳಿ  title=
Factors Of Heart Attack (file photo)

Factors Of Heart Attack :ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಿರಿಯ ವಯಸ್ಸಿನಲ್ಲಿಯೇ ಅನೇಕ ಮಂದಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಬದಲಾಗುತ್ತಿರುವ ಜೀವ ಶೈಲಿ ಮತ್ತು ಆಹಾರ ಪದ್ಧತಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೃದಯಾಘತಕ್ಕೂ ಇದೇ ಮುಖ್ಯ ಕಾರಣ. ಆದರೆ ಹೃದಯ ತನ್ನ ಕೆಲಸ ನಿಲ್ಲಿಸುವುದಕ್ಕೂ ಮುನ್ನ ಸೂಚನೆಗಳನ್ನು ನೀಡುತ್ತದೆ. ಆ ಸೂಚನೆಗಳನ್ನು ನಿರ್ಲಕ್ಷಿಸದೇ ಹೋದರೆ ಹೃದಯಾಘಾತದ ಅಪಾಯವನ್ನು ತಪ್ಪಿಸಬಹುದು. ಇನ್ನು ಹೃದಯಾಘಾತಕ್ಕೆ ಕಾರಣವಾಗುವ ಅಭ್ಯಾಸಗಳನ್ನು ಸರಿ ಮಾಡಿಕೊಂಡರೆ ಕೂಡಾ ನಮ್ಮ ಹೃದಯದ  ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.  

ಈ ಕಾರಣಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ :
1. ಸ್ಲೀಪ್ ಡಿಸಾರ್ಡರ್ :
ಆರೋಗ್ಯವಂತ  ವ್ಯಕ್ತಿ ದಿನಕ್ಕೆ ಕನಿಷ್ಠ 8 ಗಂಟೆಗಳ ನಿದ್ದೆಯನ್ನು ಮಾಡಲೇಬೇಕು. ಮನುಷ್ಯನ ಜೀವನದಲ್ಲಿ ನಿದ್ದೆಗೆ ಕೊರೆತೆಯಾದರೆ ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.  ಅವುಗಳಲ್ಲಿ ಒಂದು ಹೃದಯಾಘಾತ. ನಿದ್ರೆಯ ಕೊರತೆಯಿಂದಾಗಿ, ರಕ್ತದೊತ್ತಡ ಹೆಚ್ಚಲು ಆರಂಭವಾಗುತ್ತದೆ. ಇದು ಹೀಗೆ ಮುಂದುವರೆದರೆ ಹೃದಯಾಘಾತವಾಗುತ್ತದೆ. 

ಇದನ್ನೂ ಓದಿ :  ಬೆಳ್ಳಗಿನ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ ಈ ಮೂರು ಉಪಾಯಗಳು

2. ಮಾಲಿನ್ಯ :
ಕಳೆದ ಹಲವಾರು ದಶಕಗಳಿಂದ,  ಸಣ್ಣ ನಗರವೇ ಆಗಿರಲಿ ದೊಡ್ಡ ನಗರವಾಗಿರಲಿ ಇದಕ್ಕೆ ವಾಯು ಮಾಲಿನ್ಯ ಕಾರಣವಾಗುತ್ತದೆ. ವಾಯು ಮಾಲಿನ್ಯವು ಆತಂಕಕಾರಿ ಮಟ್ಟವನ್ನು ತಲುಪಿದೆ ಎಂದರೂ ತಪ್ಪಾಗುವುದಿಲ್ಲ. ಅದರಲ್ಲೂ ಮೆಟ್ರೋ ನಗರಗಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ತುಂಬಾ ಕಳಪೆಯಾಗಿರುತ್ತದೆ. ಹೀಗಾದಾಗ ಉಸಿರಾಟದ ತೊಂದರೆ ಉಂಟಾಗುತ್ತದೆ. ಜೊತೆಗೆ ನಮ್ಮ ಹೃದಯವು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಭವಿಷ್ಯದಲ್ಲಿ ಈ ಸಮಸ್ಯೆ ಹೃದಯಾಘಾತವಾಗಿ ಬದಲಾಗುತ್ತದೆ.

3. ಅಧಿಕ ಕೊಲೆಸ್ಟ್ರಾಲ್:
ಭಾರತದಲ್ಲಿ ಎಣ್ಣೆಯುಕ್ತ ಆಹಾರವನ್ನು ತಿನ್ನುವ ಪ್ರವೃತ್ತಿಯು  ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದಾಗಿ ನಮ್ಮ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗಲು ಪ್ರಾರಂಭಿಸುತ್ತದೆ.  ಇದು ಕ್ರಮೇಣ ಅಪಧಮನಿಗಳಲ್ಲಿತೊಂದರೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ರಕ್ತದೊತ್ತಡ ತುಂಬಾ ಹೆಚ್ಚಾಗುತ್ತದೆ. ಯಾವಾಗ ರಕ್ತವು ಹೃದಯವನ್ನು ತಲುಪಲು ಬಲ ಪ್ರಯೋಗಿಸಬೇಕಾಗುತ್ತದೆಯೋ ಆ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸುತ್ತದೆ.  

ಇದನ್ನೂ ಓದಿ : ಕೆಲವೇ ದಿನಗಳಲ್ಲಿ ಡಯಾಬಿಟೀಸ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರುತ್ತದೆ ಈ ಒಂದು ತರಕಾರಿ

4. ಪ್ರೋಸೆಸ್ದ್ ಮೀಟ್ : 
ಆಹಾರ ಸಂರಕ್ಷಣಾ ತಂತ್ರಗಳ ಅಭಿವೃದ್ಧಿಯಿಂದಾಗಿ, ಮಾಂಸವನ್ನು ದೀರ್ಘಕಾಲದವರೆಗೆ ಕೊಳೆಯದಂತೆ ಉಳಿಸಬಹುದು. ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕ್ ಮಾಡಿದ ಮಾಂಸವನ್ನು ಸಂಸ್ಕರಿಸಲಾಗಿರುತ್ತದೆ. ಅದು ಹೃದಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಪ್ರೋಸೆಸ್ದ್ ಮೀಟ್ ತಿನ್ನದೇ ಇರುವುದು ಒಳ್ಳೆಯದು.  

 

( ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News