Donation: ಇಲ್ಲಿವೆ ದಾನದ 5 ಪ್ರಮುಖ ಪ್ರಕಾರಗಳು

Donation: ಶಾಸ್ತ್ರಗಳಲ್ಲಿ ದಾನದ ಮಹತ್ವ ವರ್ಣಿಸಲಾಗಿದೆ. ಸಮಾಜೋತ್ಥಾನದಲ್ಲಿ ದಾನದ ಕೊಡುಗೆ ಮಹತ್ತರವಾಗಿದೆ. ಯೋಗ್ಯ ವ್ಯಕ್ತಿಗಳಿಗ ಮಾತ್ರ ದಾನ ನೀಡಲಾಗುತ್ತದೆ. ನಮ್ಮ ಧರ್ಮ ಶಾಸ್ತ್ರಗಳಲ್ಲಿ ಒಟ್ಟು ಐದು ಪ್ರಕಾರದ ದಾನಗಳ ಕುರಿತು ವರ್ಣಿಸಲಾಗಿದೆ. ಸನಾತನ ಪರಂಪರೆಯಲ್ಲಿ ದಾನವನ್ನು ಸರ್ವೋತ್ತಮ ಎಂದು ಹೇಳಲಾಗಿದೆ.

Written by - Nitin Tabib | Last Updated : Jan 12, 2021, 06:55 PM IST
  • ಶಾಸ್ತ್ರಗಳಲ್ಲಿ ದಾನದ ಮಹತ್ವ ವರ್ಣಿಸಲಾಗಿದೆ.
  • ಸಮಾಜೋತ್ಥಾನದಲ್ಲಿ ದಾನದ ಕೊಡುಗೆ ಮಹತ್ತರವಾಗಿದೆ.
  • ಯೋಗ್ಯ ವ್ಯಕ್ತಿಗಳಿಗ ಮಾತ್ರ ದಾನ ನೀಡಲಾಗುತ್ತದೆ.
Donation: ಇಲ್ಲಿವೆ ದಾನದ 5 ಪ್ರಮುಖ ಪ್ರಕಾರಗಳು title=
Donation (Representational Image)

Donaltion - ನವದೆಹಲಿ: ಇಂದಿನ ಯುಗದಲ್ಲಿ, ಧನ ದಾನಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗುತ್ತದೆ. ಸನಾತನ ಧರ್ಮದಲ್ಲಿ ಐದು ರೀತಿಯ ದಾನಗಳ ಕುರಿತು ವಿವರಿಸಲಾಗಿದೆ. ಶಿಕ್ಷಣ, ಭೂಮಿ, ಕನ್ಯೆ, ಹಸು ಮತ್ತು ಆಹಾರ ದಾನವನ್ನು ಯಾವಾಗಲೂ ಯೋಗ್ಯರಿಗೆ ನೀಡಬೇಕು. ವಿದ್ಯಾ ದಾನವನ್ನು ಗುರುಗಳು ಅರ್ಹ ಮತ್ತು ನಿರ್ಗತಿಕರಿಗೆ ನೀಡುತ್ತಾರೆ. ಜ್ಞಾನದಿಂದ ಒಳ್ಳೆಯ ಗುಣಗಳನ್ನು ಹೆಚ್ಚುತ್ತವೆ. ವಿನಯ- ವಿವೇಕ ಬರುತ್ತದೆ. ಸಮಾಜ ಮತ್ತು ವಿಶ್ವ ಕಲ್ಯಾಣವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ, ಗುರು-ಶಿಷ್ಯ ಪರಂಪರೆಯಲ್ಲಿ ಕಲಿಕೆ ಶತಮಾನಗಳಿಂದ ಕ್ರಮೇಣವಾಗಿ ಹೆಚ್ಚಾಗುತ್ತಲೇ ಬಂದಿದೆ.

ಪುರಾತನ ಕಾಲದಲ್ಲಿ ರಾಜರುಗಳು ಯೋಗ್ಯ ಹಾಗೂ ಶ್ರೇಷ್ಠ ವ್ಯಕ್ತಿಗಳಿಗೆ ಭೂದಾನ ನೀಡುತ್ತಿದ್ದರು. ಇಂದಿಗೂ ಕೂಡ ಈ ದಾನಕ್ಕೆ ಭಾರಿ ಮಹತ್ವವಿದೆ. ವಿಭಿನ್ನ ಆಶ್ರಮ, ವಿದ್ಯಾಲಯ, ಭವನ ಇತ್ಯಾದಿಗಳು ಇದರಡಿ ಬರುತ್ತವೆ. ಇಂದು ಸರ್ಕಾರಗಳು ಕೂಡ  ವಿಭಿನ್ನ ಜನಪರ  ಕಲ್ಯಾಣ ಯೋಜನೆಗಳ ರೂಪದಲ್ಲಿ ಇದನ್ನು ಮುನ್ನಡೆಸಿಕೊಂಡು ಹೋಗುತ್ತಿವೆ.  ವೈಯಕ್ತಿಕ ಮಟ್ಟದಲ್ಲಿ ಭೂದಾನದಿಂದ ಗೋಶಾಲೆ ಹಾಗೂ ಧರ್ಮಶಾಲೆಗಳನ್ನು ನಿರ್ಮಿಸಬಹುದು.

ಗೋದಾನ ಪಶುಧನ ದಾನವಾಗಿದೆ. ಇದನ್ನು ಚರಾಸ್ತಿ ಅರ್ಥಾತ್ ಮುದ್ರಾ ದಾನದ (Dana) ರೂಪದಲ್ಲಿಯೂ ಕೂಡ ನೀಡಲಾಗುತ್ತದೆ. ಸನಾತನ ಸಂಸ್ಕೃತಿಯಲ್ಲಿ ಗೋ ದಾನಕ್ಕೆ ವಿಶೇಷ ಮಹತ್ವವಿದೆ. ಶ್ರೀರಾಮ ಅಶ್ವಮೇಧ ಯಾಗದ ವೇಳೆ ಅಸಂಖ್ಯ ಗೋವುಗಳನ್ನು ದಾನದ ರೂಪದಲ್ಲಿ ನೀಡಿದ್ದ. ವರ್ತಮಾನದಲ್ಲಿ ಧನ ದಾನ, ವಾಹನ ಸೇವೆ, ಪಶುಧನ ಹಾಗೂ ಇತರೆ ಸೇವೆಗಳ ದಾನ ಇದರಡಿ ಬರುತ್ತವೆ.

ಇದನ್ನು ಓದಿ- ASTRO : ಶನಿದೇವರ ವಾಹನ ಕಾಗೆ ಸತ್ತು ಬೀಳುತ್ತಿರುವುದು ಮಹಾ ಗಂಡಾಂತರದ ಮುನ್ಸೂಚನೆಯೇ..?

ಅನ್ನ ದಾನ ಭೋಜನದ ಮಹತ್ವ ಸಾರಿ ಹೇಳುತ್ತದೆ. ಎಲ್ಲ ವರ್ಗಗಳಲ್ಲಿ ಈ ದಾನ ಪ್ರಚಲಿತದಲ್ಲಿದೆ. ಪ್ರಾಚೀನ ಕಾಲದಿಂದ ಎಲ್ಲಾ ರೀತಿಯ ಖಾದ್ಯ ಸಾಮಗ್ರಿಗಳು ಇದರಲ್ಲಿ ಶಾಮೀಲಾಗಿವೆ. ಯೋಗ್ಯವ್ಯಕ್ತಿಗಳು ಸೇರಿದಂತೆ ಹೆಚ್ಚುವರಿಯಾಗಿ ಭಿಕ್ಷಾಟನೆ ವೃತ್ತಿಯ ಮೇಲೆ ಅವಲಂಭಿಸಿದವರಿಗೆ ಈ ದಾನ ನೀಡಲಾಗುತ್ತದೆ. ಭಿಕ್ಷುಕರಿಗೆ ನೀಡಲಾಗುವ ಹಾಗೂ ಮಾನ್ಯತೆ ಪಡೆದ ಏಕೈಕ ದಾನ ಇದಾಗಿದೆ.

ಇದನ್ನು ಓದಿ- ಈ ದೇವಸ್ಥಾನದ ಬಂಡೆಗಳಿಂದ ಹೊರಹೊಮ್ಮುತ್ತೆ ಡಮರುಗದ ನಾದ

ಕನ್ಯಾದಾನ ಪಾಣಿಗ್ರಹಣ ಸಂಸ್ಕಾರ. ಧಾರ್ಮಿಕ, ಸಾಮಾಜಿಕ, ಪಿತೃ ಹಾಗೂ ಮಾತೃ ಪರಂಪರೆಯನ್ನು ಸುಲಲಿತವಾಗಿ ರೂಢಿಯಲಿಡಲು ಕನ್ಯೆಯ ತಂದೆ ಯೋಗ್ಯ ವರನಿಗಾಗಿ ಹುಡುಕಾಟ ನಡೆಸುತ್ತಾನೆ. ತನ್ನ ಒಡಹುಟ್ಟಿದ ಮಗಳನ್ನು ವರನಿಗೆ ನೀಡುವ ಸಂಕಲ್ಪಮಾಡಿ, ಅವನು ಈ ದಾನವನ್ನು ಪೂರ್ಣಗೊಳಿಸುತ್ತಾನೆ. ಸನಾತನ ಪರಂಪರೆಯಲ್ಲಿ ಈ ದಾನವನ್ನು ಸರ್ವೋತ್ತಮ ದಾನ ಎಂದು ಹೇಳಲಾಗಿದೆ.

ಇದನ್ನು ಓದಿ- ಅಕಾಲ ಮೃತ್ಯು ಭಯ ನಿವಾರಣೆಗೆ ಶನಿವಾರ ಈ ಕೆಲಸ ತಪ್ಪದೆ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News