ಅತ್ಯಂತ ಕಡಿಮೆ ಸಮಯದಲ್ಲಿ ಉದ್ದನೆಯ ಕೂದಲು ಪಡೆಯಲು ಐದು ಸರಳ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಮಾಲಿನ್ಯ, ಕೆಟ್ಟ ಜೀವನಶೈಲಿ ಇವೆಲ್ಲವೂ ಕೂದಲಿನ ಬೆಳವಣಿಗೆ ಮೇಲೆ ಕೂಡಾ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಅತಿಯಾದ ರಾಸಾಯನಿಕಯುಕ್ತ ಶಾಂಪೂ ಬಳಸುವುದರಿಂದ ಕೂದಲು ನಿರ್ಜೀವವಾಗುತ್ತದೆ. ಇದರಿಂದಾಗಿ ಕೂದಲು ಒಡೆಯಲು ಪ್ರಾರಂಭಿಸುತ್ತದೆ.

Written by - Ranjitha R K | Last Updated : Aug 1, 2022, 01:22 PM IST
  • ಉದ್ದನೆಯ ಕೂದಲಿಗೆ ಸರಳ ಟಿಪ್ಸ್
  • ಕೂದಲಿನ ಆರೋಗ್ಯಕ್ಕೆ ಏನು ಮಾಡಬೇಕು ?
  • ಎರಡು ತಿಂಗಳ ಒಳಗೆ ಉದ್ದನೆಯ ಕೂದಲು ಪಡೆಯುವುದು ಹೇಗೆ ?
ಅತ್ಯಂತ ಕಡಿಮೆ ಸಮಯದಲ್ಲಿ ಉದ್ದನೆಯ ಕೂದಲು ಪಡೆಯಲು ಐದು ಸರಳ ಟಿಪ್ಸ್  title=
hair care tips (file photo)

Hair Growth Tips : ಉದ್ದನೆಯ ಕಪ್ಪು ಕೂದಲು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಹೆಚ್ಚಿನ ಹೆಣ್ಣು ಮಕ್ಕಳು, ಉದ್ದವಾದ, ಕಪ್ಪು ಮತ್ತು ದಪ್ಪ ಕೂದಲು ಹೊಂದಲು ಬಯಸುತ್ತಾರೆ. ಇನ್ನು ಮಾಡೆಲಿಂಗ್  ಕ್ಷೇತ್ರಕ್ಕೆ ಕಾಲಿಟ್ಟರಂತೂ ಉದ್ದನೆಯ ಕೂದಲಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಉದ್ದ ಕೂದಲಿನ ಮೇಲಿನ ಆಸೆಯಿಂದ ಹೆಣ್ಣು ಮಕ್ಕಳು ನಾನಾ ರೀತಿಯ  ಪ್ರಯತ್ನಗಳನ್ನು ಮಾಡುತ್ತಾರೆ. ಆದರೂ, ಕೆಲವೊಮ್ಮೆ ಕೂದಲು ಬೆಳೆಯುವುದೇ ಇಲ್ಲ.  ಉದ್ದ ಮತ್ತು ದಪ್ಪ ಕೂದಲು ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಇತ್ತೀಚಿನ ದಿನಗಳಲ್ಲಿ ಮಾಲಿನ್ಯ, ಕೆಟ್ಟ ಜೀವನಶೈಲಿ ಇವೆಲ್ಲವೂ ಕೂದಲಿನ ಬೆಳವಣಿಗೆ ಮೇಲೆ ಕೂಡಾ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಅತಿಯಾದ ರಾಸಾಯನಿಕಯುಕ್ತ ಶಾಂಪೂ ಬಳಸುವುದರಿಂದ ಕೂದಲು ನಿರ್ಜೀವವಾಗುತ್ತದೆ.  ಇದರಿಂದಾಗಿ ಕೂದಲು ಒಡೆಯಲು ಪ್ರಾರಂಭಿಸುತ್ತದೆ.

ಉದ್ದನೆಯ ಕೂದಲನ್ನು ಇಷ್ಟಪಡುತ್ತಿದ್ದರೆ, ಕೆಲವು ನೈಸರ್ಗಿಕ ಪರಿಹಾರಗಳೊಂದಿಗೆ ಒಂದರಿಂದ ಎರಡು ತಿಂಗಳೊಳಗೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಬಹುದು. ಒಂದರಿಂದ ಎರಡು ತಿಂಗಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಈ ಕೆಳಗೆ ಹೇಳಲಾದ ವಿಧಾನಗಳನ್ನು ಅನುಸರಿಸಿ.  

ಇದನ್ನೂ ಓದಿ : Health Tips: ಮೂತ್ರಪಿಂಡದ ಆರೋಗ್ಯ ರಕ್ಷಣೆಗೆ ಇಲ್ಲಿವೆ ಮೂರು ಹೆಲ್ದಿ ಲೆಮನ್ ಡ್ರಿಂಕ್ಸ್

ಉದ್ದ ಕೂದಲಿಗೆ ಪರಿಹಾರ
1 . ಕೊಬ್ಬರಿ ಎಣ್ಣೆಯನ್ನು ಹಚ್ಚಬೇಕು : 
ಕೂದಲಿಗೆ ಎಣ್ಣೆ ಹಚ್ಚದ ಕಾರಣ ಕೂದಲಿನ ಬೆಳವಣಿಗೆ ನಿಲ್ಲುತ್ತದೆ. ಕೂದಲಿನ ಬೆಳವಣಿಗೆಗೆ ತೆಂಗಿನ ಎಣ್ಣೆ ಅತ್ಯಂತ ಪ್ರಯೋಜನಕಾರಿ . ಎಣ್ಣೆಯನ್ನು ತಲೆಗೆ ಹಚ್ಚಿ 15 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. ವಾರದಲ್ಲಿ ಎರಡು ಮೂರು ಬಾರಿ ಹೀಗೆ ಮಾಡಿ.

2. ಪ್ರತಿದಿನ  ತಲೆ ಸ್ನಾನ ಬೇಡ : 
ಕೆಲವು ಹುಡುಗಿಯರು ಪ್ರತಿದಿನ ತಲೆ ಸ್ನಾನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಕೂದಲು ಬಲಿಷ್ಠವಾಗಿರುತ್ತದೆ ಎಂದು ಭಾವಿಸುತ್ತಾರೆ.  ಹೀಗೆ ಮಾಡುವುದರಿಂದ ಕೂದಲು ಆರೋಗ್ಯಕರವಾಗಿರುವುದಿಲ್ಲ. ಪ್ರತಿದಿನ ಕೂದಲು ತೊಳೆಯುವುದರಿಂದ ನೆತ್ತಿಯ ಮೇಲಿರುವ ನೈಸರ್ಗಿಕ ಎಣ್ಣೆ ಕಡಿಮೆಯಾಗುತ್ತದೆ.  ಹಾಗಾಗಿ ಕೂದಲು ಉದುರಲು ಆರಂಭವಾಗುತ್ತದೆ. 

3.  ಕೂದಲನ್ನು ಟ್ರಿಮ್ ಮಾಡಿಸುತ್ತಾ ಇರಿ : 
ಕೂದಲು ಉದ್ದವಾಗಿ ಬೆಳೆಯಬೇಕಾದರೆ ನಿಯಮಿತವಾಗಿ ಟ್ರಿಮ್ ಮಾಡುವುದು ಅವಶ್ಯಕ. ಹೀಗೆ ಮಾಡುವುದರಿಂದ ಕೂದಲು ದಪ್ಪವಾಗುತ್ತದೆ. ಕೂದಲಿನ ಬೇರುಗಳು ಬಲಗೊಳ್ಳುತ್ತವೆ ಮತ್ತು ಕೂದಲಿನ ಬೆಳವಣಿಗೆಯು ವೇಗವಾಗಿರುತ್ತದೆ. 

ಇದನ್ನೂ ಓದಿ :Weight Loss: ಪನೀರ್ ಮತ್ತು ಮೊಟ್ಟೆ ಒಟ್ಟಿಗೆ ಸೇವಿಸಿದ್ರೆ ತೂಕ ಇಳಿಕೆಯಾಗುತ್ತಾ..?

4. ಬಾಳೆಹಣ್ಣಿನ ಮಾಸ್ಕ್ ಅನ್ನು ಹಚ್ಚಿ : 
 ಕೂದಲಿನ ಆರೋಗ್ಯಕ್ಕೆ ಬಾಳೆಹಣ್ಣು ಬಹಳ ಪ್ರಯೋಜನಕಾರಿ.  ಇದನ್ನು ತಿನ್ನುವುದರಿಂದ ಕೂದಲಿನ ಬೆಳವಣಿಗೆಯು ವೇಗಗೊಳ್ಳುತ್ತದೆ. ಅಲ್ಲದೆ, ಅದರಿಂದ ತಯಾರಿಸಿದ ಹೇರ್ ಮಾಸ್ಕ್ ಕೂಡ ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಇ ಹೊರತಾಗಿ ಅನೇಕ ಖನಿಜಗಳು ಸಹ ಇವೆ. ಇದು ಕೂದಲಿಗೆ ತೇವಾಂಶ ಮತ್ತು ಶಕ್ತಿಯನ್ನು ನೀಡುತ್ತದೆ. ಬಾಳೆಹಣ್ಣಿನ  ಹೇರ್ ಮಾಸ್ಕ್ ಮಾಡಲು, ಬಾಳೆಹಣ್ಣು ತೆಗೆದುಕೊಳ್ಳಿ. ಅದನ್ನು ಮ್ಯಾಶ್ ಮಾಡಿ. ಈಗ ಅದಕ್ಕೆ 2 ಚಮಚ ಮೊಸರು, 2 ಚಮಚ ರೋಸ್ ವಾಟರ್ ಸೇರಿಸಿ. ಇದನ್ನು ಕೂದಲು ಮತ್ತು ನೆತ್ತಿಯ ಮೇಲೆ ಚೆನ್ನಾಗಿ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ಕೂದಲನ್ನು ನೀರಿನಿಂದ ತೊಳೆಯಿರಿ.

5. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಿ :
ಕೆಲವರು ಕಡಿಮೆ ನೀರು ಕುಡಿಯುತ್ತಾರೆ. ಕೂದಲ ಪೋಷಣೆಗೆ ನೀರು ಕೂಡ ಅಗತ್ಯ. ಇದು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ನೀರು ಕುಡಿಯುವುದರಿಂದ ಕೂದಲು ದಪ್ಪವಾಗುತ್ತದೆ. ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯಿರಿ.

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News