Saif Ali Khan: ಜನವರಿ 16 ರ ಮುಂಜಾನೆ, ಸೈಫ್ ಅಲಿ ಖಾನ್ ಅವರ ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿ ದರೋಡೆ ಯತ್ನ ನಡೆದಿತ್ತು, ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿದ್ದ, ದುಷ್ಕರಮಿಯ ಜೊತೆ ಹೋರಾಡುವ ಸಂದರ್ಭದಲ್ಲಿ ಆತ ನಟನಿಗೆ ಚಾಕು ಇರಿದಿದ್ದ, ಈ ವಿಚಾರ ಇಡೀ ಬಾಲಿವುಡ್ ಇಂಡಸ್ಟ್ರಿಯನ್ನೆ ಬೆಚ್ಚಿಬೀಳಿಸಿತ್ತು.
ಚಾಕುವಿನಿಂದ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರಗೆ ದಾಖಲಿಸಬೇಕಿತ್ತು, ನಟನ ಮೊದನೆಯ ಪತ್ನಿ ಪುತ್ರನಾದ ಇಬ್ರಹಿಂ ಖಾನ್ ಹೊರಗೆ ಓಡಿ ಬಂದು ಸಹಾಯಕ್ಕಾಗಿ ಆಟೋ ಚಾಲಕನ ಬಳಿ ಕೈಚಾಚಿದ್ದರು, ಇಂದೂ ಮುಂದೂ ಯೋಚಿಸದೆ, ಆಟೋ ಚಾಲಕ ಸೈಫ್ ಅಲಿ ಖಾನ್ ಅವರನ್ನು ತಮ್ಮ ಆಟೋ ರಿಕ್ಷಾದಲ್ಲಿ ಕೂರಿಸಿಕೊಂಡ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾವಿಸಿದ್ದ.
ನಿಖರವಾಗಿ ಅಂದು ಮುಂಚಾನೆ ಏನಾಯಿತು ಎಂಬುದನ್ನು ವಿವರಿಸಿದ ಆಟೋ ಚಾಲಕ.."ಮೊದಲಿಗೆ ನಾನು ಸೈಫ್ ಅಲಿ ಖಾನ್ ಅವರು ನನ್ನ ಆಟೋ ರಿಕ್ಷಾ ಏರಿದಾಗ ಅವರನ್ನು ನಾನು ಗುರುತಿಸಲಿಲ್ಲ, ಅವರ ಬೆನ್ನಲ್ಲಿ ತೀವ್ರವಾದ ರಕ್ತಸ್ರಾವವಾಗುತಯ್ತಿತ್ತು, ಆದ್ದರಿಂದ ನನ್ನ ಆಟೋದಲ್ಲಿ ಕೂತಿರುವ ವ್ಯಕ್ತಿಯನ್ನು ನಾನು ಬೇಗನೆ ಆಸ್ಪತ್ರೆ ತಲುಪಿಸಬೇಕು ಎಂಬುದಷ್ಟೆ ನನ್ನ ಗುರಿಯಾಗಿತ್ತು. ಆದರೆ, ಆಸ್ಪತ್ರೆಯ ಹತ್ತಿರ ತಲುಪಿದಾಗಲೇ ನನಗೆ ಗೊತ್ತಾಗಿದ್ದು, ಅಷ್ಟು ಹೊತ್ತು ನನ್ನ ರಿಕ್ಷಾದಲ್ಲಿ ಕೂತಿದ್ದು ಸೈಫ್ ಅಲಿ ಖಾನ್ ಎಂದು" ಎಂದು ರಿಕ್ಷಾ ಚಾಲಕ ಹೇಳಿದ್ದಾರೆ.
"ಇನ್ನೂ, ಆಟೋದ ಬಳಿ ಸೈಫ್ ಅಲಿ ಖಾನ್ ಅವರನ್ನು ಆಟೋಗೆ ಹತ್ತಿಸಲು ಸೈಫ್ ಅಲಿ ಖಾನ್ ಅವರ ಇಬ್ಬರ ಕಿರಿಯ ಪುತ್ರರು ಹಾಗೂ ಇಬ್ಬರು ಮಹಿಳೆಯರು ಬಂದಿದ್ದರು, ನಾನು ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಅವರಿಂದ ಯಾವುದೆ ದುಡ್ಡು ಪಡೆದುಕೊಂಡಿಲ್ಲ, ರಿಕ್ಷಾಗೆ ಕೂಲಿ ಸಹ ಪಡೆದುಕೊಳ್ಳದೆ ನಾನು ಅವರನ್ನು ಆಸ್ಪತ್ರೆಗೆ ದಾಖಲಿಸಿದೆ. ಈವರೆಗೂ ಅವರ ಕಡೆಯಿಂದ ಯಾರೂ ಕೂಡ ನನ್ನನ್ನು ಸಂಪರ್ಕಿಸಲಿಲ್ಲ ಅಥವಾ ಭೆಟಿ ಮಾಡಿಲ್ಲ" ಎಂದು ಆಟೋ ಚಾಲಕ ಹೇಳಿದ್ದಾರೆ.
ಇದೀಗ ನಿನ್ನೆಯಷ್ಟೆ ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಸ್ವಲ್ಪ ಚೇತರಿಸಿಕೊಂಡು ತಮ್ಮ ಪ್ರಾಣ ಉಳಿಸಿ ಸಾಹಸ ಮೆರೆದ ಆಟೋ ಚಾಲಕನಿಗೆ ಸೈಪ್ ಅಲಿ ಖಾನ್ ಅವರು ಹಣದ ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದಾರೆ, ಸದ್ಯ ಈ ಆಟೋ ಚಾಲಕ ಸೆನ್ಸೇಶನಲ್ ಆಗಿದ್ದಾರೆ.
#WATCH | Mumbai: Bhajan Singh, the auto-rickshaw driver who took Actor Saif Ali Khan to Lilavati Hospital, says "I was called there (Bandra Police Station) for questioning...I did not think about money that night...I have not been contacted by Kareena Kapoor or anyone else so… pic.twitter.com/pXHPsSkOp2
— ANI (@ANI) January 18, 2025
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.