ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಲಗುವ ಮುನ್ನ ಪ್ರತಿದಿನ ಈ ವ್ಯಾಯಾಮ ಮಾಡಿ

ಮಲಗುವ ಮೊದಲು ಈ ವ್ಯಾಯಾಮ ಮಾಡಿದರೆ, ನೀವು ಉತ್ತಮ ಫಲಿತಾಂಶಗಳನ್ನು ನೋಡುತ್ತೀರಿ. ಇದರಿಂದ ನಿಮ್ಮ ಮುಖ ಫ್ರೆಶ್ ಆಗಿರುತ್ತದೆ. ಮುಖದ ಅಂದ ಹೆಚ್ಚಾಗುತ್ತದೆ. 

Written by - Chetana Devarmani | Last Updated : Apr 12, 2022, 01:28 PM IST
  • ಮಲಗುವ ಮುನ್ನ ಕೇವಲ ಮೂರು ನಿಮಿಷಗಳ ಕಾಲ ಈ ವ್ಯಾಯಾಮವನ್ನು ಮಾಡಿ
  • ಈ ವ್ಯಾಯಾಮಗಳಿಂದ ಮುಖವು ಸುಂದರವಾಗಿ ಕಾಣುತ್ತದೆ
  • ದಣಿವು ಕಾಣುವುದಿಲ್ಲ, ಫ್ರೆಶ್ ಆಗಿ ಉಳಿಯುತ್ತದೆ
ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಲಗುವ ಮುನ್ನ ಪ್ರತಿದಿನ ಈ ವ್ಯಾಯಾಮ ಮಾಡಿ title=
ಮುಖದ ಸೌಂದರ್ಯ

ನವದೆಹಲಿ:  ಆಧುನಿಕ ಯುಗದ ಭರಾಟೆಯಲ್ಲಿ ಸೆಲ್ಫ್‌ ಕೇರ್‌ಗಾಗಿ ಸಮಯವನ್ನು ತೆಗೆದಿಡುವುದು ತುಂಬಾ ಕಷ್ಟಕರವಾಗಿದೆ. ಈ ಕಾರಣದಿಂದಲೇ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಆಗಾಗ್ಗೆ ಗಮನ ಹರಿಸುವುದಿಲ್ಲ. ಪ್ರಸ್ತುತ ಕಾರ್ಯಶೈಲಿಯಿಂದಾಗಿ ಅನೇಕರಿಗೆ ಸಮಯ ಸಿಗುತ್ತಿಲ್ಲ.

ಇದನ್ನೂ ಓದಿ:Samudrik Shastra: ನಿಮ್ಮ ಶರೀರ ಸಂರಚನೆ ಈ ರೀತಿ ಇದ್ದರೆ, ಅಪಾರ ಧನವೃಷ್ಟಿಯ ಜೊತೆಗೆ ಸಫಲತೆ ನಿಮ್ಮದಾಗಲಿದೆ

ಆದರೆ ಕೇವಲ ಮೂರು ನಿಮಿಷಗಳಲ್ಲಿ ನಿಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಮಲಗುವ ಮುನ್ನ ಮೂರು ನಿಮಿಷಗಳ ಕಾಲ ಈ ವ್ಯಾಯಾಮ ಮಾಡಬೇಕಷ್ಟೆ. ರಾತ್ರಿ ಮಲಗುವ ಮುನ್ನ ಕೇವಲ 3 ನಿಮಿಷಗಳ ಕಾಲ ಈ ವ್ಯಾಯಾಮ ಮಾಡಿದರೆ, ಮುಖದ ಹೊಳಪು ಹೆಚ್ಚಾಗುತ್ತದೆ.  ನಿಮ್ಮ ಚರ್ಮವು ಪ್ರತಿದಿನ ಬೆಳಿಗ್ಗೆ ಆರೋಗ್ಯಕರವಾಗಿ ಕಾಣುತ್ತದೆ. 

ಕಣ್ಣುಗಳ ಬಳಿ ಮಸಾಜ್ ಮಾಡಿ: ಮೊದಲಿಗೆ, ಕಣ್ಣುಗಳ ಬಳಿ ಕೆನೆಯೊಂದಿಗೆ ನಿಮ್ಮ ಮುಖವನ್ನು ನಿಧಾನವಾಗಿ ಮಸಾಜ್ ಮಾಡಿ. ಇದು ದಿನವಿಡೀ ದಣಿದ ಕಣ್ಣುಗಳಿಗೆ ಸ್ವಲ್ಪ ವಿಶ್ರಾಂತಿಯನ್ನು ನೀಡುತ್ತದೆ. ಏಕೆಂದರೆ ದಿನವಿಡೀ ನಿಮ್ಮ ದೇಹದಂತೆ, ಕಣ್ಣುಗಳು ಸಹ ಆಯಾಸಗೊಂಡಿರುತ್ತವೆ.

ಕುತ್ತಿಗೆ ಮಸಾಜ್ ಮಾಡಿ: ದಿನವಿಡೀ ಕಚೇರಿಯಲ್ಲಿ ಕೆಲಸ ಮಾಡುವಾಗ ನಿಮ್ಮ ಕುತ್ತಿಗೆಯೂ ಸುಸ್ತಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾಧ್ಯವಾದರೆ, ಈ ವ್ಯಾಯಾಮವನ್ನು ಸಹ ಮಾಡಿ. ಇದಕ್ಕಾಗಿ, ಮೊದಲು ನೀವು ನಿಮ್ಮ ಕೈಗಳಿಂದ ನಿಮ್ಮ ಕುತ್ತಿಗೆಯ ಮೇಲ್ಭಾಗಕ್ಕೆ ಹೋಗಬೇಕು. ಅದರ ನಂತರ ಅದನ್ನು ನಿಧಾನವಾಗಿ ಒತ್ತಿಕೊಳ್ಳಬೇಕು . ಪ್ರತಿನಿತ್ಯ 30 ಸೆಕೆಂಡುಗಳ ಕಾಲ ಈ ರೀತಿ ವ್ಯಾಯಾಮ ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ಪ್ರಯೋಜನವಾಗುತ್ತದೆ.

ಇದನ್ನೂ ಓದಿ: Health Tips: ಊಟದ ನಂತರ ವಾಕಿಂಗ್ ಮಾಡುವುದು ಎಷ್ಟು ಮುಖ್ಯ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News