Emerald Gem: ನಿಮ್ಮ ಭಾಗ್ಯ ಕೂಡ ನಿಮಗೆ ಸಾಥ್ ನೀಡುತ್ತಿಲ್ಲವೇ? ಈ ರತ್ನ ಧರಿಸಿ!

Benefits Of Wearing Emerald Gem - ಹಣಕಾಸಿನ ಅಗತ್ಯವಿರಲಿ ಅಥವಾ ಜೀವನದಲ್ಲಿ ಅಭಿವೃದ್ಧಿಯಾಗಿರಲಿ ಅಥವಾ ತೀಕ್ಷ್ಣವಾದ ಬುದ್ಧಿಶಕ್ತಿಯಾಗಲಿ, ಒಂದೇ ಒಂದು ರತ್ನವನ್ನು ಧರಿಸುವುದರಿಂದ ಎಲ್ಲವನ್ನೂ ಸಾಧಿಸಬಹುದು. ರತ್ನ ಶಾಸ್ತ್ರದಲ್ಲಿ, ಬುಧ ಗ್ರಹಕ್ಕೆ ಸಂಬಂಧಿಸಿದ ರತ್ನವನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. 

Written by - Nitin Tabib | Last Updated : Mar 6, 2022, 12:40 PM IST
  • ಜೀವನದಲ್ಲಿ ನೆಮ್ಮದಿಗೆ ಪಚ್ಚೆ ಧರಿಸಿ
  • ಕೆಲವೇ ದಿನಗಳಲ್ಲಿ ಭಾಗ್ಯ ಬದಲಾಗಲಿದೆ.
  • ಹಣಕಾಸಿನ ಜೊತೆಗೆ ಭಾರಿ ಯಶಸ್ಸು ಲಭಿಸುತ್ತದೆ
Emerald Gem: ನಿಮ್ಮ ಭಾಗ್ಯ ಕೂಡ ನಿಮಗೆ ಸಾಥ್ ನೀಡುತ್ತಿಲ್ಲವೇ? ಈ ರತ್ನ ಧರಿಸಿ! title=
Benefits of Wearing Emerald Gem (Representational Image)

ನವದೆಹಲಿ: Side Effects Of Wearing Emerald Gem - ಜೀವನದಲ್ಲಿ ಕಷ್ಟಗಳು ಬರುತ್ತವೆ, ನಷ್ಟಗಳು ಸಂಭವಿಸುತ್ತವೆ, ದುಃಖಗಳು ಬರುತ್ತವೆ. ಆದರೆ ಜ್ಯೋತಿಷ್ಯ (Astrology) ಮತ್ತು ಅದರ ಶಾಖೆಗಳಲ್ಲಿ ಅವುಗಳನ್ನು ತಪ್ಪಿಸಲು ಮಾರ್ಗಗಳನ್ನು ಸೂಚಿಸಲಾಗಿದೆ. ಜ್ಯೋತಿಷ್ಯ, ಸಂಖ್ಯಾಶಾಸ್ತ್ರ (Numerology), ರತ್ನ ಶಾಸ್ತ್ರ (Gemology), ಇತ್ಯಾದಿಗಳಲ್ಲಿ, ಈ ಸಮಸ್ಯೆಗಳನ್ನು ನಿವಾರಿಸಲು ಮತ್ತು ಜೀವನವನ್ನು ಸುಖವಾಗಿಸಲು ಅನೇಕ ಪರಿಹಾರಗಳನ್ನು ಸೂಚಿಸಲಾಗಿದೆ. ಇಂದು ರತ್ನ ಶಾಸ್ತ್ರದ ಮೂಲಕ ಹೆಚ್ಚು ಹಣವನ್ನು ಗಳಿಸುವುದು ಮತ್ತು ಯಶಸ್ಸನ್ನು ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ. ಇದಕ್ಕಾಗಿ, ಕೇವಲ ಒಂದು ರತ್ನವನ್ನು ಧರಿಸಬೇಕು ಮತ್ತು ಕೆಲವೇ ದಿನಗಳಲ್ಲಿ ನಿಮಗೆ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸಲಿದೆ.

ಪಚ್ಚೆ ನಿಮ್ಮ ಭಾಗ್ಯವನ್ನೇ ಬದಲಾಯಿಸಲಿದೆ
ರತ್ನ ಶಾಸ್ತ್ರದಲ್ಲಿ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾದ ರತ್ನಗಳಲ್ಲಿ ಬುಧ ಗ್ರಹಕ್ಕೆ ಸಂಬಂಧಿಸಿದ ಪಚ್ಚೆ ಕೂಡ. ಪಚ್ಚೆಯನ್ನು ಧರಿಸುವುದರಿಂದ ಜಾತಕದಲ್ಲಿ ಬುಧ ಗ್ರಹದ ಸ್ಥಾನ ಬಲಿಷ್ಠವಾಗುತ್ತದೆ. ಇದು ಬುದ್ಧಿವಂತಿಕೆ, ತರ್ಕ, ಸಂಭಾಷಣೆ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ. ಬುಧದ ಅಂತರದೆಸೆ  ಅಥವಾ ಮಹಾದೆಸೆ ಸಾಗುತ್ತಿದ್ದರೆ,   ಪಚ್ಚೆಯನ್ನು ಧರಿಸುವುದರಿಂದ ಅಪಾರ ಲಾಭಗಳು ಸಿಗುತ್ತವೆ.

ವ್ಯಾಪಾರಿಗಳಿಗೆ ಬಲವಾದ ಲಾಭ ನೀಡುತ್ತದೆ
ಬುಧ ಗ್ರಹವು ವ್ಯಾಪಾರದ ಕಾರಕ ಗ್ರಹವಾಗಿದೆ. ವ್ಯಾಪಾರಸ್ಥರು ಪಚ್ಚೆಯನ್ನು ಧರಿಸುವುದರಿಂದ ಅವರ ಮೇಲೆ ಬುಧ ಗ್ರಹದ ಆಶೀರ್ವಾದ ಹೆಚ್ಚಾಗುತ್ತದೆ. ಅವರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಾಕಷ್ಟು ಹಣವನ್ನು ಗಳಿಸಲು ಇದರಿಂದ ಸಾಧ್ಯವಾಗುತ್ತದೆ. ಪಚ್ಚೆ ಧರಿಸಿದ ತಕ್ಷಣ ವ್ಯಾಪಾರದಲ್ಲಿ ಹೊಸ ಹೊಳಪು ಬರುತ್ತದೆ ಮತ್ತು ಸಾಕಷ್ಟು ಲಾಭ ಸಿಗುತ್ತದೆ. ಆದರೆ ಈ ರತ್ನವನ್ನು ತಜ್ಞರ ಸಲಹೆಯೊಂದಿಗೆ ಮಾತ್ರ ಧರಿಸಬೇಕು.

ವಿದ್ಯಾರ್ಥಿಗಳಿಗೂ ಕೂಡ ಪಚ್ಚೆ ಧರಿಸುವುದು ತುಂಬಾ ಲಾಭದಾಯಕ ಸಾಬೀತಾಗುತ್ತದೆ. ಇದರಿಂದ ಅವರ ಏಕಾಗ್ರತೆ ಹಾಗೂ ಬುದ್ಧಿಮತ್ತೆ ಹೆಚ್ಚಾಗುತ್ತದೆ. ಅವರ ಸ್ಮರಣಶಕ್ತಿ ಹೆಚ್ಚಾಗುತ್ತದೆ. ಇದರಿಂದ ಅವರು ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಉತ್ತಮ ಸಾಧನೆ ತೋರಬಹುದು.

ಇದನ್ನೂ ಓದಿ-Holi Festival 2022 : ಹೋಳಿ ಮುನ್ನಾ ದಿನ ಈ ಕೆಲಸ ಮಾಡಿ : ವರ್ಷವಿಡೀ ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಿರಿ

ಪಚ್ಚೆಯನ್ನು ಧರಿಸಲು ಬುಧವಾರ ಉತ್ತಮ ದಿನ. ಇದರ ಹೊರತಾಗಿ ಆಶ್ಲೇಷ, ಪೂರ್ವ ಫಾಲ್ಗುಣಿ, ರೇವತಿ ಅಥವಾ ಪುಷ್ಯ ನಕ್ಷತ್ರದಲ್ಲಿ ಇದನ್ನು ಧರಿಸಿದರೆ, ಅದು ಪೂರ್ಣ ಫಲಿತಾಂಶವನ್ನು ನೀಡುತ್ತದೆ. ಚಿನ್ನದ ಉಂಗುರದಲ್ಲಿ ಪಚ್ಚೆಯನ್ನು ಧರಿಸಿದರೆ ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತದೆ.

ಇದನ್ನೂ ಓದಿ-Budh Gochar 2022: ಇಂದಿನಿಂದ ಈ 5 ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Health Tips: ನೀವೂ ಸಹ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುತ್ತೀರಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News