ಕೂದಲು ಉದುರುವುದನ್ನು ತಡೆಯಲು ದುಬಾರಿ ಪ್ರಾಡಕ್ಟ್ ಹಿಂದೆ ಬೀಳಬೇಡಿ ! ಹೀಗೆ ನೀರು ಕುಡಿಯಲು ಆರಂಭಿಸಿ ಸಾಕು

ದೇಹದಲ್ಲಿ ನೀರಿನ ಕೊರತೆ ಎದುರಾದರೆ ಚರ್ಮ ಹಾಗೂ ಕೂದಲಿನ ಮೇಲೆ ನೇರ ಪರಿಣಾಮ ಬೀರುತ್ತದೆ. ತಜ್ಞರು ಹೇಳುವ ಪ್ರಕಾರ, ನೀರಿನ ಕೊರತೆಯಿಂದಾಗಿ ಕೂದಲು ನಿರ್ಜೀವವಾಗಿ, ಒರಟಾಗಿ, ಬೇಗ ಒಡೆಯಬಹುದು

Written by - Ranjitha R K | Last Updated : Sep 5, 2023, 10:38 AM IST
  • ಕೂದಲು ಉದುರುವುದಕ್ಕೆ ನಾನಾ ಕಾರಣಗಳಿರಬಹುದು.
  • ಕಡಿಮೆ ನೀರು ಕುಡಿಯುವುದರಿಂದಲೂ ಕೂದಲು ಒಡೆಯುತ್ತದೆ.
  • ದೇಹದಲ್ಲಿ ನೀರಿನ ಕೊರತೆಯಿಂದಲೂ ಕೂದಲು ಉದುರುತ್ತದೆ
ಕೂದಲು ಉದುರುವುದನ್ನು ತಡೆಯಲು ದುಬಾರಿ ಪ್ರಾಡಕ್ಟ್ ಹಿಂದೆ ಬೀಳಬೇಡಿ ! ಹೀಗೆ ನೀರು ಕುಡಿಯಲು ಆರಂಭಿಸಿ ಸಾಕು  title=

ಬೆಂಗಳೂರು : ಕೂದಲು ಉದುರುವುದಕ್ಕೆ ನಾನಾ ಕಾರಣಗಳಿರಬಹುದು. ಕೂದಲು ಉದುರುತ್ತಿದ್ದಂತೆಯೇ ನಾವು ಮಾಡುವ ಮೊದಲ ಕೆಲಸ ಬಳಸುತ್ತಿರುವ ಎಣ್ಣೆ ಶಾಂಪೂ, ಕಂಡೀಶನರ್ ಬದಲಾಯಿಸುವುದು. ಕೆಲವೊಮ್ಮೆ ಇದು ಪರಿಹಾರ ಸೂಚಿಸಬಹುದು. ಆದರೆ ಮತ್ತೆ ಕೆಲವೊಮ್ಮೆ ಎಣ್ಣೆ, ಶಾಂಪೂ ಕಂಡೀಶನರ್ ಬದಲಾಯಿಸುವುದರಿಂದಲೂ ಯಾವುದೇ ಪ್ರಯೋಜನವಾಗುವುದಿಲ್ಲ. 

ದ್ರವ ಸೇವನೆಯ ಬಗ್ಗೆ ಗಮನ ಹರಿಸಬೇಕು : 
ಇಂದಿನ ಬಿಡುವಿಲ್ಲದ ಜೀವನದಲ್ಲಿ ಮಾಲಿನ್ಯ, ಸೂರ್ಯನ ಬೆಳಕಿನಿಂದ ಮಾತ್ರವಲ್ಲದೆ ಕಡಿಮೆ ನೀರು ಕುಡಿಯುವುದರಿಂದಲೂ ಕೂದಲು ಒಡೆಯುತ್ತದೆ. ಹೌದು, ದೇಹದಲ್ಲಿ ನೀರಿನ ಕೊರತೆ ಎದುರಾದರೆ ಚರ್ಮ ಹಾಗೂ ಕೂದಲಿನ ಮೇಲೆ ನೇರ ಪರಿಣಾಮ ಬೀರುತ್ತದೆ. ತಜ್ಞರು ಹೇಳುವ ಪ್ರಕಾರ, ನೀರಿನ ಕೊರತೆಯಿಂದಾಗಿ ಕೂದಲು ನಿರ್ಜೀವವಾಗಿ, ಒರಟಾಗಿ, ಬೇಗ ಒಡೆಯಬಹುದು. ಹಾಗಿದ್ದರೆ ನೀರಿನ ಕೊರತೆ ಮತ್ತು ಕೂದಲು ಉದುರುವಿಕೆಗೆ ಏನು ಸಂಬಂಧ ? ಕೂದಲು ಉದುರುವುದನ್ನು ತಡೆಯಲು ಎಷ್ಟು ನೀರು ಸೇವಿಸಬಹುದು  ನೋಡೋಣ. 

ಇದನ್ನೂ ಓದಿ : ಕೂದಲು ವೇಗವಾಗಿ ಬೆಳೆಯಲು ಅಕ್ಕಿ ನೀರನ್ನು ಹೀಗೆ ಬಳಸಿ

ದೇಹದಲ್ಲಿ ನೀರಿನ ಕೊರತೆಯಿಂದಲೂ ಕೂದಲು ಉದುರುತ್ತದೆ : 
ನಿರ್ಜಲೀಕರಣ ಮತ್ತು ಕೂದಲು ಉದುರುವಿಕೆ ಯಾವುದೇ ಸಂಬಂಧವಿಲ್ಲ ಎಂದೇ ನಾವು ಭಾವಿಸುವುದು. ಆದರೆ ವಾಸ್ತವದಲ್ಲಿ  ದೇಹದಲ್ಲಿರುವ ನೀರಿನ ಪ್ರಮಾಣ ಮತ್ತು ಕೂದಲು ಉದುರುವುದು ಎರಡಕ್ಕೂ ಪರಸ್ಪರ ಸಂಬಂಧವಿದೆ. ನಿರ್ಜಲೀಕರಣ ಎಂದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು.  ಇದು ದೇಹದ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅವುಗಳಲ್ಲಿ ಒಂದು ಕೂದಲು ಉದುರುವಿಕೆ. ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿ ಇದ್ದಾಗ ಕೂದಲಿನಲ್ಲಿ ತೇವಾಂಶ ಉಳಿಯುತ್ತದೆ. ಕೂದಲಿನ ಬೆಳವಣಿಗೆಗೆ ತೇವಾಂಶವು ತುಂಬಾ ಮುಖ್ಯವಾಗಿದೆ ಎನ್ನುತ್ತಾರೆ ತಜ್ಞರು. ಕೂದಲಿನ ಬೆಳವಣಿಗೆಗೆ ಇದು ಪ್ರಮುಖ ಅಂಶವಾಗಿದೆ. 

ನೀರು ಕುಡಿಯದಿದ್ದರೆ, ಕೂದಲು ನಿರ್ಜೀವವಾಗುತ್ತದೆ :
ನಾವು ಸಾಕಷ್ಟು ನೀರು ಕುಡಿಯದಿದ್ದರೆ, ಕೂದಲು ನಿರ್ಜೀವವಾಗುತ್ತದೆ, ಒಣಗುತ್ತದೆ ಮತ್ತು ಸುಲಭವಾಗಿ ಒಡೆಯುತ್ತದೆ.  ನಿರ್ಜಲೀಕರಣವು ನೆತ್ತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ದೇಹದಲ್ಲಿ ನೀರಿನ ಕೊರತೆ ಉಂಟಾದಾಗ, ನೆತ್ತಿ ಒಣಗಬಹುದು, ತುರಿಕೆ ಮತ್ತು ಸಿಪ್ಪೆ ಏಳಬಹುದು. ಇದು ತಲೆಹೊಟ್ಟು ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಕೂದಲು ಉದುರುವ ಸಮಸ್ಯೆ ಎದುರಾಗಬಹುದು. ಕೆಲವೊಮ್ಮೆ ಅತಿಯಾದ ಶುಷ್ಕತೆ ಮತ್ತು ನೆತ್ತಿಯ ಕಿರಿಕಿರಿಯು ಕೂದಲು ಕಿರುಚೀಲಗಳನ್ನು ಹಾನಿಗೊಳಿಸುತ್ತದೆ. ಕೂದಲು ಕಿರುಚೀಲಗಳ ಒಣಗಿಸುವಿಕೆಯಿಂದಾಗಿ  ಕೂದಲು ದುರ್ಬಲಗೊಂಡು ಉದುರಲು ಆರಂಭವಾಗುತ್ತದೆ.

ಇದನ್ನೂ ಓದಿ : ಬಿಳಿ ಕೂದಲನ್ನು ಒಂದೇ ವಾರದಲ್ಲಿ ಶಾಶ್ವತವಾಗಿ ಕಪ್ಪಾಗಿಸುತ್ತದೆ ಈ ಹೂವಿನ ಹೇರ್‌ ಮಾಸ್ಕ್‌!

ನಿರ್ಜಲೀಕರಣವು ಒತ್ತಡದ ಮಟ್ಟವನ್ನು ಹೆಚ್ಚಿಸಬಹುದು : 
ನಿರ್ಜಲೀಕರಣವು ದೇಹದ ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ದೀರ್ಘಕಾಲದ ನಿರ್ಜಲೀಕರಣವು ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನ್‌ಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಹೆಚ್ಚಿದ ಒತ್ತಡವು ನೈಸರ್ಗಿಕ ಕೂದಲು ಬೆಳವಣಿಗೆಯ ಚಕ್ರವನ್ನು ಅಡ್ಡಿಪಡಿಸುತ್ತದೆ.

ಈ ರೀತಿಯ ಕೂದಲನ್ನು ನೋಡಿಕೊಳ್ಳಿ  : 
ನಿರ್ಜಲೀಕರಣವನ್ನು ತಪ್ಪಿಸಲು ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯಿರಿ. ಯಾವಾಗಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ. ನೀವು ಎಲ್ಲಿಯಾದರೂ ಹೊರಗೆ ಹೋದರೆ, ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ. ಒಂದು ವೇಳೆ ನೀರು ಇಲ್ಲ ಎಂದಾದರೆ ತಾಜಾ ಹಣ್ಣಿನ ರಸವನ್ನು ತೆಗೆದುಕೊಳ್ಳಬಹುದು. ಬಾಯಾರಿಕೆಯಾಗದಿದ್ದರೂ, ಅಲಾರಂ ಹೊಂದಿಸಿ ಮತ್ತು ಕೆಲವು ಗಂಟೆಗಳ ಮಧ್ಯಂತರದಲ್ಲಿ ನೀರನ್ನು ಕುಡಿಯಿರಿ. ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಹೆಚ್ಚಿಸಲು ಕೆಲವು ಅಗತ್ಯ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಹೊಂದಿರುವುದು ಮುಖ್ಯ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News