ಊಟದ ಸಮಯದಲ್ಲಿ ಮಾಡುವ ಈ ತಪ್ಪುಗಳು ಮನೆಯ ಸುಖ-ಶಾಂತಿ-ಸಮೃದ್ಧಿಯನ್ನೇ ಹಾಳು ಮಾಡಿ ಬಿಡುತ್ತವೆ.!

Vastu Tips : ಊಟ ಮಾಡುವ ವೇಳೆ ಮಾಡುವ ಕೆಲವು ತಪ್ಪುಗಳು ವ್ಯಕ್ತಿಯ ಆರೋಗ್ಯ, ಪ್ರಗತಿ, ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಆಹಾರವನ್ನು ಸೇವಿಸುವಾಗ ಈ ತಪ್ಪುಗಳಾಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. 

Written by - Ranjitha R K | Last Updated : Sep 19, 2022, 12:41 PM IST
  • ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ
  • ಇದರಲ್ಲಿ ಆಹಾರಕ್ಕೆ ಸಂಬಂಧಿಸಿದ ವಿಷಯಗಳು ಬಹಳ ಮುಖ್ಯ.
  • ಆಹಾರ ಸೇವಿಸುವಾಗ ಈ ತಪ್ಪುಗಳನ್ನು ಮಾಡಬೇಡಿ
ಊಟದ ಸಮಯದಲ್ಲಿ ಮಾಡುವ ಈ ತಪ್ಪುಗಳು ಮನೆಯ ಸುಖ-ಶಾಂತಿ-ಸಮೃದ್ಧಿಯನ್ನೇ ಹಾಳು ಮಾಡಿ ಬಿಡುತ್ತವೆ.! title=
Vastu Tips (file photo)

ಬೆಂಗಳೂರು : ವಾಸ್ತು ಶಾಸ್ತ್ರದಲ್ಲಿ ಹೇಳಿರುವ ನಿಯಮಗಳನ್ನು ಸಾಧ್ಯವಾದಷ್ಟು ಅನುಸರಿಸಬೇಕು. ಇಲ್ಲದಿದ್ದರೆ, ಈ ತಪ್ಪುಗಳಿಂದ ಉಂಟಾಗುವ ವಾಸ್ತು ದೋಷವು ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ದೈನಂದಿನ ಕಾರ್ಯಗಳಲ್ಲಿ ಅನುಸರಿಸಬೇಕಾದ ಕೆಲವು ಪ್ರಮುಖ ವಿಷಯಗಳನ್ನು ಕೂಡಾ ಹೇಳಲಾಗಿದೆ. ಇದರಲ್ಲಿ ಆಹಾರಕ್ಕೆ ಸಂಬಂಧಿಸಿದ ವಿಷಯಗಳು ಬಹಳ ಮುಖ್ಯ.  ಆಹಾರವನ್ನು ಸೇವಿಸುವಾಗ ಮಾಡುವ ಕೆಲವು ತಪ್ಪುಗಳ ಬಗ್ಗೆ  ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ತಪ್ಪುಗಳು ವ್ಯಕ್ತಿಯ ಆರೋಗ್ಯ, ಪ್ರಗತಿ, ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಆಹಾರವನ್ನು ಸೇವಿಸುವಾಗ ಈ ತಪ್ಪುಗಳಾಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. 

ಆಹಾರ ಸೇವಿಸುವಾಗ ಈ ತಪ್ಪುಗಳನ್ನು ಮಾಡಬೇಡಿ  :
ವಾಸ್ತು ಶಾಸ್ತ್ರದ ಪ್ರಕಾರ, ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಆಹಾರವನ್ನು ಸೇವಿಸಬೇಕು. ದಕ್ಷಿಣ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸುವ ತಪ್ಪನ್ನು ಯಾವತ್ತೂ ಮಾಡಬೇಡಿ. ಇದು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. 

ಇದನ್ನೂ ಓದಿ : ಹಸ್ತದಲ್ಲಿ ಈ ಒಂದು ಗುರುತು ಇದ್ದ ವ್ಯಕ್ತಿ ಐಶಾರಾಮಿ ಬದುಕು ಬದುಕುತ್ತಾರೆ .!

ಡೈನಿಂಗ್ ಟೇಬಲ್ ಅನ್ನು ಎಂದಿಗೂ ಖಾಲಿ ಬಿಡಬೇಡಿ. ಅದರ ಮೇಲೆ ಯಾವಾಗಲೂ ಹಣ್ಣುಗಳು, ಸಿಹಿತಿಂಡಿಗಳು ಅಥವಾ ಆಹಾರ ಪದಾರ್ಥಗಳನ್ನು ಇರಿಸಿ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. 

ಹಾಸಿಗೆಯ ಮೇಲೆ ಕುಳಿತು ಆಹಾರವನ್ನು ಸೇವಿಸಬೇಡಿ. ಹಾಗೆ ಮಾಡುವುದರಿಂದ ಯಶಸ್ಸಿನ ಹಾದಿಯಲ್ಲಿ ಅಡಚಣೆಯಾಗುತ್ತದೆ. ಹಾಗೆಯೇ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದರಿಂದ ಸಾಲ ಹೆಚ್ಚಾಗುತ್ತದೆ ಎಂಡು ಹೇಳಲಾಗುತ್ತದೆ. ಇಂಥವರನ್ನು ಹಣದ ಸಮಸ್ಯೆ ಕಾಡುತ್ತಲೇ ಇರುತ್ತದೆ. ಜೊತೆಗೆ, ರೋಗ ಬಾಧೆ ಕೂಡಾ ಹೆಚ್ಚುತ್ತದೆ.  

ಇದನ್ನೂ ಓದಿ : Samudrik Shastra: ಹುಬ್ಬಿನ ಆಕಾರದಿಂದ ನಿಮ್ಮ ಅದೃಷ್ಟ ತಿಳಿಯಿರಿ! ಇದು ಶ್ರೀಮಂತರಾಗುವ ಸಂಕೇತ

ಆಹಾರ ಸೇವಿಸುವಾಗ ಕೋಣೆಯಲ್ಲಿ ತಟ್ಟೆಯಲ್ಲಿ ಉಪ್ಪು ಉಳಿದರೆ ಅದನ್ನು ಹಾಗೆಯೇ ಬಿಡಬೇಡಿ. ಉಪ್ಪಿನ ಮೇಲೆ ಸ್ವಲ್ಪ ನೀರು ಹಾಕಿ. ಉಪ್ಪನ್ನು ಎಸೆಯುವುದು ಅಥವಾ ಉಪ್ಪನ್ನು ದಾನ ಮಾಡುವುದರಿಂದ ಮನೆಯಲ್ಲಿ ಬಡತನ ಉಂಟಾಗುತ್ತದೆ. ಅಲ್ಲದೆ, ಜಗಳಗಳಿಗೂ ಇದು ಕಾರಣವಾಗುತ್ತದೆ. 

ಆಹಾರವನ್ನು ಸೇವಿಸಿದ ನಂತರ ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ಬಿಡಬೇಡಿ. ಇದರಿಂದ ತಾಯಿ ಅನ್ನಪೂರ್ಣೆ ಹಾಗೂ ಲಕ್ಷ್ಮೀ ದೇವಿ  ಕೋಪಗೊಳ್ಳುತ್ತಾರೆ. ಇದರಿಂದ ಮನೆಯಲ್ಲಿ ಧನಹಾನಿ, ಬಡತನ ಎದುರಾಗುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.

Trending News