ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವಶೈಲಿಯ ಕಾರಣದಿಂದಾಗಿ ದೈಹಿಕ ವ್ಯಾಯಾಮಕ್ಕೆ ಸಮಯವೇ ಇಲ್ಲದಂತಾಗಿದೆ. ಅಲ್ಲದೆ ಎಲ್ಲಾ ಕೆಲಸಗಳಿಗೂ ಮೆಷಿನ್, ಮತ್ತು ಕೆಲಸದವರನ್ನು ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ದೇಹಕ್ಕೆ ಎಳ್ಳಷ್ಟೂ ವ್ಯಾಯಾಮ ಸಿಗುವುದೇ ಇಲ್ಲ. ನಾನಾ ರೀತಿಯ ಕಾಯಿಲೆಗಳಿಗೆ ಗುರಿಯಾಗಲು ಇದೇ ಪ್ರಮುಖ ಕಾರಣ. ಅಧಿಕ ರಕ್ತದೊತ್ತಡ ಕೂಡಾ ಇಂಥಹ ರೋಗಗಳಲ್ಲಿ ಒಂದು. ಅಧಿಕ ರಕ್ತದೊತ್ತಡವಿದ್ದರೆ ಇದು ಕೇವಲ ಒಂದೇ ರೋಗಕ್ಕೆ ಸೀಮಿತವಾಗಿರುವುದಿಲ್ಲ. ಇದರ ಜೊತೆಗೆ ಬೇರೆ ಬೇರೆ ರೋಗಗಳನ್ನು ಕೂಡಾ ಹೊತ್ತು ತರುತ್ತದೆ. ಅಧಿಕ ರಕ್ತದೊತ್ತಡ, ಹೃದಯಾಘಾತ, ಮಧುಮೇಹ ಮುಂತಾದ ರೋಗಗಳು ಜೊತೆ ಜೊತೆಯಾಗಿಯೇ ಬರುತ್ತದೆ. ಹೀಗಾಗಿ ರಕ್ತದೊತ್ತಡವನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗಿರುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬೇಕಾದರೆ ಕೆಲವೊಂದು ಆಹಾರ ವಸ್ತುಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ಅಧಿಕ ರಕ್ತದೊತ್ತಡದಲ್ಲಿ ಈ ವಸ್ತುಗಳನ್ನು ತಿನ್ನಬಾರದು :
ಪ್ಯಾಕ್ ಮಾಡಿದ ಅಥವಾ ಸಂಸ್ಕರಿಸಿದ ಆಹಾರ ಬೇಡವೇ ಬೇಡ :
ಮೊದಲನೆಯದಾಗಿ, ಪ್ಯಾಕ್ ಮಾಡಿದ ಅಥವಾ ಸಂಸ್ಕರಿಸಿದ ಆಹಾರವನ್ನು ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ವೈದ್ಯರ ಪ್ರಕಾರ, ಇಂತಹ ಪ್ಯಾಕ್ ಮಾಡಿದ ಆಹಾರಗಳನ್ನು ತಾಜಾವಾಗಿಡಲು ಹಲವಾರು ರೀತಿಯ ಮಸಾಲೆಗಳನ್ನು ಸೇರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಆದುದರಿಂದ ಈ ಆಹಾರಗಳಿಂದ ದೂರವಿರುವುದು ಉತ್ತಮ.
ಇದನ್ನೂ ಓದಿ : Hair Care Tips: ಕೂದಲು ಉದುರುವಿಕೆ ತಡೆಗೆ ಅಕ್ಕಿ ಹಿಟ್ಟನ್ನು ಇದರ ಜೊತೆ ಬಳಿಸಿ
ಕರಿದ ಆಹಾರದಿಂದ ದೂರವಿರಿ :
ಹೆಚ್ಚು ಉಪ್ಪು, ಮಸಾಲೆಗಳನ್ನು ಒಳಗೊಂಡಿರುವ ಆಹಾರ ಅಥವಾ ಹುರಿದ ಆಹಾರವನ್ನು ಹೆಚ್ಚು ಸೇವಿಸಬಾರದು. ಇವುಗಳಲ್ಲಿ ಸೋಡಿಯಂ ಪ್ರಮಾಣ ಅಧಿಕವಾಗಿದ್ದು, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಈ ಸೋಡಿಯಂ ಕಾರಣದಿಂದಾಗಿ, ರಕ್ತ ಪೂರೈಕೆಯ ನರಗಳು ಕುಗ್ಗಲು ಪ್ರಾರಂಭಿಸುತ್ತವೆ. ಇದರಿಂದಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು, ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ.
ಉಪ್ಪು ಪದಾರ್ಥಗಳು ಹಾನಿಯನ್ನುಂಟುಮಾಡುತ್ತವೆ :
ಉಪ್ಪಿನಕಾಯಿ ಕೂಡಾ ಅಧಿಕ ಬಿಪಿಯ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿ ಉಪ್ಪು ಮತ್ತು ಎಣ್ಣೆಯನ್ನು ಬಳಸಲಾಗುತ್ತದೆ. ಈ ಕಾರಣದಿಂದಾಗಿ ರಕ್ತದೊತ್ತಡ (ಹೆಚ್ಚಾಗುತ್ತದೆ. ಊಟದ ರುಚಿ ಹೆಚ್ಚಿಸಲು ಅಪರೂಪಕ್ಕೆ ಸ್ವಲ್ಪ ಉಪ್ಪಿನಕಾಯಿ ಬಳಸಿದರೆ ತಪ್ಪಿಲ್ಲ. ಆದರೆ ಪ್ರತಿನಿತ್ಯ ಉಪ್ಪಿನಕಾಯಿ ಬಳಕೆ ಒಳ್ಳೆಯದಲ್ಲ.
ಇದನ್ನೂ ಓದಿ : ಮೌತ್ ಅಲ್ಸರ್ ಗೆ ತಕ್ಷಣದ ಪರಿಹಾರ ಈ ಮೂರು ಮನೆಮದ್ದುಗಳು
ಚಹಾ ಮತ್ತು ಕಾಫಿ ಸೇವನೆಯೊಂದಲೂ ಬಿಪಿ ಹೆಚ್ಚಾಗುತ್ತದೆ :
ಕಾಫಿಯಲ್ಲಿ ಕೆಫೀನ್ ಎಂಬ ಅಂಶವಿದ್ದು, ಇದು ರಕ್ತದೊತ್ತಡವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಬಿಪಿ ಕಡಿಮೆ ಇದ್ದರೆ ಚಹಾ ಮತ್ತು ಕಾಫಿ ಕುಡಿಯಲು ಸಲಹೆ ನೀಡಲಾಗುತ್ತದೆ. ಯಾಕೆಂದರೆ ರಕ್ತದೊತ್ತಡ ಕಡಿಮೆಯಿದ್ದಾಗ ಚಹಾ ಕಾಫಿ ಕುಡಿಯುವುದರಿಂದ ರಕ್ತದೊತ್ತಡ ಅಧಿಕವಾಗುತ್ತದೆ. ಆದರೆ ಬಿಪಿ ನಾರ್ಮಲ್ ಅಥವಾ ಅಧಿಕವಾಗಿರುವವರು ಈ ಎರಡನ್ನೂ ಸಂಪೂರ್ಣವಾಗಿ ತ್ಯಜಿಸಬೇಕು. ಅವುಗಳನ್ನು ಕುಡಿಯುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.