Health Tips: ಮೆಟ್ಟಿಲುಗಳನ್ನು ಹತ್ತುವಾಗ, ಇಳಿಯುವಾಗ ನಿಮಗೂ ಏದುಸಿರು ಬರುತ್ತಾ? ಈ ಬಗ್ಗೆ ಹುಷಾರಾಗಿರಿ!

Health Tips: ಪ್ರತಿ ನಿತ್ಯ ನೀವೂ ಕೂಡ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದು ಯಾವುದಾದರೂ ರೋಗದ ಲಕ್ಷಣವಾಗಿರಬಹುದು. ಹಾಗಾಗಿ ಇಂತಹ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ.

Written by - Yashaswini V | Last Updated : Sep 9, 2021, 01:31 PM IST
  • ಕೆಲವು ಜನರು ಮೆಟ್ಟಿಲುಗಳನ್ನು ಹತ್ತುವಾಗ ಮಾತ್ರವಲ್ಲ ಇಳಿಯುವಾಗ ಕೂಡ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ
  • ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ
  • ದೇಹದಲ್ಲಿ ರಕ್ತದ ಹರಿವಿನ ಕೊರತೆ ಅಥವಾ ಕೆಂಪು ರಕ್ತ ಕಣಗಳ ಕೊರತೆಯಿಂದಾಗಿ ಚರ್ಮವು ಹಳದಿ ಬಣ್ಣಕ್ಕೆ ತಿರುಗಬಹುದು
Health Tips: ಮೆಟ್ಟಿಲುಗಳನ್ನು ಹತ್ತುವಾಗ, ಇಳಿಯುವಾಗ ನಿಮಗೂ ಏದುಸಿರು ಬರುತ್ತಾ? ಈ ಬಗ್ಗೆ ಹುಷಾರಾಗಿರಿ! title=
Anemia Symptoms

Health Tips: ಸಾಮಾನ್ಯವಾಗಿ ಕೆಲವರಿಗೆ ಮೆಟ್ಟಿಲುಗಳನ್ನು ಹತ್ತುವಾಗ ತಲೆತಿರುಗುವಿಕೆ ಅಥವಾ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಕೆಲವು ಜನರು ಮೆಟ್ಟಿಲುಗಳನ್ನು ಹತ್ತುವಾಗ ಮಾತ್ರವಲ್ಲ ಇಳಿಯುವಾಗ ಕೂಡ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ, ಬಹುತೇಕ ಜನರಿಗೆ ಏದುಸಿರು ಬರುತ್ತದೆ. ನೀವು ಕೂಡ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದು ಯಾವುದಾದರೂ ರೋಗದ ಲಕ್ಷಣವಾಗಿರಬಹುದು. ಹಾಗಾಗಿ ಇಂತಹ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ.

ಸಾಮಾನ್ಯವಾಗಿ ನಡೆಯುವಾಗ, ಇಲ್ಲವೇ ಮೆಟ್ಟಿಲುಗಳನ್ನು ಹತ್ತುವಾಗ, ಇಳಿಯುವಾಗ ಹೆಚ್ಚಾಗಿ (ಸಾಮಾನ್ಯಕ್ಕಿಂತ ಅಧಿಕ) ಉಸಿರು ಬರುತ್ತದೆ. ಆದರೆ ಇದು ರಕ್ತಹೀನತೆಯ ಲಕ್ಷಣಗಳಲ್ಲಿ (Anemia Symptoms) ಒಂದಾಗಿದೆ ಎಂದು ನಿಮಗೆ ತಿಳಿದಿದೆಯೇ? ದೇಹದಲ್ಲಿ ರಕ್ತದ ಕೊರತೆ ಉಂಟಾದಾಗ ಸ್ನಾಯುಗಳು ಮತ್ತು ಮೂಳೆಗಳು ದುರ್ಬಲಗೊಳ್ಳಲು ಆರಂಭವಾಗುತ್ತವೆ. ಹಾಗಾಗಿಯೇ ಕೆಲವು ಸ್ವಲ್ಪವೇ ದೂರ ನಡೆದರೂ ಕೂಡ ಬೇಗ ಆಯಾಸಗೊಳ್ಳುತ್ತಾರೆ.

ಇದನ್ನೂ ಓದಿ- Soaking Almonds Benefits: ಹಸಿ, ಹುರಿದ ಅಥವಾ ನೆನೆಸಿದ ಬಾದಾಮಿ, ಇವುಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ?

ಇಷ್ಟೇ ಅಲ್ಲದೆ ರಕ್ತಹೀನತೆಯ (Anemia) ಇತರ ಹಲವು ಲಕ್ಷಣಗಳಿವೆ. ನೀವು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ದಿನಗಳೆದಂತೆ ಇದರಿಂದ ಭಾರೀ ಸಮಸ್ಯೆ ಎದುರಾಗಬಹುದು. ಅಂತಹ ಕೆಲವು ಲಕ್ಷಣಗಳ ಬಗ್ಗೆ ತಿಳಿಯೋಣ...

- ಮೆಟ್ಟಿಲು ಹತ್ತುವಾಗ ಅಥವಾ ಜಿಮ್‌ನಲ್ಲಿ ಕಸರತ್ತು ಮಾಡುವಾಗ ಸಾಮಾನ್ಯಕ್ಕಿಂತ ಹೆಚ್ಚಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು.

- ಚರ್ಮವು ಅತಿಯಾಗಿ ಹಳದಿ ಅಥವಾ ಬಿಳಿ ಬಣ್ಣಕ್ಕೆ ತಿರುಗುವುದು: ದೇಹದಲ್ಲಿ ರಕ್ತದ ಹರಿವಿನ ಕೊರತೆ ಅಥವಾ ಕೆಂಪು ರಕ್ತ ಕಣಗಳ ಕೊರತೆಯಿಂದಾಗಿ ಚರ್ಮವು (Skin) ಹಳದಿ ಬಣ್ಣಕ್ಕೆ ತಿರುಗಬಹುದು. ಹಾಗಾಗಿ ಈ ಲಕ್ಷಣವನ್ನು ನಿರ್ಲಕ್ಷಿಸಬೇಡಿ.

ಇದನ್ನೂ ಓದಿ- Dark Underarms Treatment: ಮನೆಯಲ್ಲೇ ಇರುವ ಈ ಪದಾರ್ಥಗಳನ್ನು ಬಳಸಿ ಐದೇ ನಿಮಿಷದಲ್ಲಿ ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಯಿಂದ ಪರಿಹಾರ ಪಡೆಯಿರಿ

- ತ್ರಾಣ ಕಳೆದುಕೊಂಡ ಭಾವನೆ: ಇದು ಕಬ್ಬಿಣದ ಕೊರತೆಯ ಲಕ್ಷಣವೂ ಆಗಿರಬಹುದು. ಇದು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

- ನೀವು ಏಕಾಗ್ರತೆಯ ಕೊರತೆಯನ್ನು ಅನುಭವಿಸಿದರೆ ಮತ್ತು ಯಾವುದೇ ಕೆಲಸದಲ್ಲಿ ನಿಮ್ಮ ಗಮನವನ್ನು  ಕೇಂದ್ರೀಕರಿಸಲು ನಿಮಗೆ ತೊಂದರೆ ಇದ್ದರೆ, ಇದಕ್ಕೆ ರಕ್ತಹೀನತೆ ಕೂಡ ಒಂದು ಕಾರಣವಾಗಿರಬಹುದು.

ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News