Do Not Eat These With Empty Stomach: ಖಾಲಿ ಹೊಟ್ಟೆ ಬೈ ಮಿಸ್ಟೇಕ್ ಕೂಡ ಇವುಗಳನ್ನು ಸೇವಿಸಬೇಡಿ

Do Not Eat These With Empty Stomach - ಬೆಳಗಿನ ಉಪಹಾರ ನಿಮ್ಮ ಆರೋಗ್ಯವನ್ನು ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಕೆಲವೊಮ್ಮೆ ಸಮಯದ ಕೊರತೆ ಅಥವಾ ಕೆಟ್ಟ ಆಹಾರ ಪದ್ಧತಿಯಿಂದಾಗಿ, ಜನರು ಬೆಳಗ್ಗೆ ಉಪಾಹಾರವನ್ನು ಬಿಟ್ಟುಬಿಡುತ್ತಾರೆ ಅಥವಾ ಖಾಲಿ ಹೊಟ್ಟೆಯಲ್ಲಿ ಹಸಿವನ್ನು ನೀಗಿಸಲು ಏನನ್ನಾದರೂ ತಿನ್ನುತ್ತಾರೆ. ನೀವೂ ಒಂದು ವೇಳೆ ಇದೆ ಕೆಲಸ ಮಾಡುತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ.

Written by - Nitin Tabib | Last Updated : Jul 12, 2021, 06:27 PM IST
  • ಬೆಳಗಿನ ಉಪಹಾರ ನಿಮ್ಮ ಆರೋಗ್ಯವನ್ನು ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
  • ಆದರೆ ಸಮಯದ ಕೊರತೆ ಅಥವಾ ಕೆಟ್ಟ ಆಹಾರ ಪದ್ಧತಿಯಿಂದಾಗಿ, ಜನರು ಬೆಳಗ್ಗೆ ಉಪಾಹಾರವನ್ನು ಬಿಟ್ಟುಬಿಡುತ್ತಾರೆ.
  • ನಿಮ್ಮ ಸಣ್ಣ ತಪ್ಪು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು.
Do Not Eat These With Empty Stomach: ಖಾಲಿ ಹೊಟ್ಟೆ ಬೈ ಮಿಸ್ಟೇಕ್ ಕೂಡ ಇವುಗಳನ್ನು ಸೇವಿಸಬೇಡಿ title=
Do Not Eat These With Empty Stomach (File Photo)

Do Not Eat These With Empty Stomach - ಬೆಳಗಿನ ಉಪಹಾರ ನಿಮ್ಮ ಆರೋಗ್ಯವನ್ನು ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಕೆಲವೊಮ್ಮೆ ಸಮಯದ ಕೊರತೆ ಅಥವಾ ಕೆಟ್ಟ ಆಹಾರ ಪದ್ಧತಿಯಿಂದಾಗಿ, ಜನರು ಬೆಳಗ್ಗೆ ಉಪಾಹಾರವನ್ನು ಬಿಟ್ಟುಬಿಡುತ್ತಾರೆ ಅಥವಾ ಖಾಲಿ ಹೊಟ್ಟೆಯಲ್ಲಿ ಹಸಿವನ್ನು ನೀಗಿಸಲು ಏನನ್ನಾದರೂ ತಿನ್ನುತ್ತಾರೆ. ನೀವೂ ಒಂದು ವೇಳೆ ಇದೆ ಕೆಲಸ ಮಾಡುತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ,  ನಿಮ್ಮ ಸಣ್ಣ ತಪ್ಪು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಹಲವಾರು ಗಂಟೆಗಳ ಕಾಲ ಉಪವಾಸದ ನಂತರ ಬೆಳಿಗ್ಗೆ ಎದ್ದ ತಕ್ಷಣ ವ್ಯಕ್ತಿಯು ಖಾಲಿ ಹೊಟ್ಟೆ ಏನನ್ನು ತಿನ್ನಬಾರದು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

ಖಾಲಿ ಹೊಟ್ಟೆ ಇವುಗಳನ್ನು ಸೇವಿಸಬಾರದು (Health Tips)
1. ಟೀ (Tea)ಹಾಗೂ ಕಾಫಿ (Coffee) - ಸಾಮಾನ್ಯವಾಗಿ ಜನರು ತಮ್ಮ ದಿನದ ಆರಂಭವನ್ನು ಚಹಾ ಅಥವಾ ಕಾಫಿ ಸೇವಿಸುವರ ಮೂಲಕ ಮಾಡುತ್ತಾರೆ. ಒಂದು ವೇಳೆ ನೀವೂ ಕೂಡ ಇದೇ ರೀತಿ ಮಾಡುತ್ತಿದ್ದರೆ, ಕೂಡಲೇ ಈ ಅಭ್ಯಾಸವನ್ನು ಬದಲಾಯಿಸಿ. ಖಾಲಿ ಹೊಟ್ಟೆ ಚಹಾ ಅಥವಾ ಕಾಫಿ ಸೇವನೆಯಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ (Gastric) ಉದ್ಭವಿಸುತ್ತದೆ. ಬೆಳಗ್ಗೆ ಚಹಾ ಸೇವಿಸುವ ಮೊದಲು ಬ್ರೆಡ್ ಅಥವಾ ಬಿಸ್ಕೆಟ್ ತಿನ್ನುವುದು ಒಳ್ಳೆಯ ಅಭ್ಯಾಸ.

2. ಟೊಮೇಟೊ (Tomato) - ಖಾಲಿ ಹೊಟ್ಟೆ ಟೊಮೇಟೊ ಸೇವಿಸುವುದರಿಂದ ಹೊಟ್ಟೆಯಲ್ಲಿ ಟ್ಯಾನಿಕ್ ಆಸಿಡ್ ಪ್ರಮಾಣ ಹೆಚ್ಚಾಗುತ್ತದೆ. ಇದು ಹೊಟ್ಟೆ ಅಥವಾ ಎದೆಯುರಿತದ ಸಮಸ್ಯೆ ಹುಟ್ಟುಹಾಕುತ್ತದೆ.

ಇದನ್ನೂ ಓದಿ- Banana peel: ಮುಖದ ಮೇಲಿನ ಕಲೆ, ಮೊಡವೆ ನಿವಾರಣೆಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಈ ರೀತಿ ಬಳಸಿ

3. ಸೀಬೆಹಣ್ಣು (Guava) - ಪಚನಕ್ರಿಯೆಗೆ ಸೀಬೆಹಣ್ಣು ಸೇವನೆ ಉತ್ತಮ. ಆದರೆ, ಸೀಬೆಹಣ್ಣಿನಲ್ಲಿರುವ ವಿಟಮಿನ್ ಸಿ, ಖಾಲಿ ಹೊಟ್ಟೆ ಸೇವಿಸುವುದರಿಂದ ಹೊಟ್ಟೆನೋವಿಗೆ ಕಾರಣವಾಗಬಹುದು.

4. ಮೊಸರು (Curd) - ಉತ್ತಮ ಆರೋಗ್ಯಕ್ಕಾಗಿ ಮೊಸರನ್ನು ದಿನನಿತ್ಯದ ಡಯಟ್ ನಲ್ಲಿ ಸೇರಿಸಲು ಸಲಹೆ ನೀಡಲಾಗುತ್ತದೆ. ಆದರೆ, ಬೆಳಗ್ಗೆ ಖಾಲಿ ಹೊಟ್ಟೆ ಮೊಸರಿನ ಸೇವನೆ ಆರೋಗ್ಯಕ್ಕೆ ಲಾಭ ನೀಡುವ ಬದಲು ಹಾನಿ ತಲುಪಿಸಬಹುದು. ಬೆಳಗ್ಗೆ ಖಾಲಿ ಹೊಟ್ಟೆ ಮೊಸರು ಸೇವಿಸುವುದರಿಂದ ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಸಿಡ್ (Acitity) ನಿರ್ಮಾಣಗೊಳ್ಳುತ್ತದೆ. ಇದು ಹೊಟ್ಟೆಯಲ್ಲಿರುವ ಲ್ಯಾಕ್ಟಿಕ್ ಆಸಿಡ್ ಅನ್ನು ಹಾಳುಮಾಡುತ್ತದೆ. ಇದು ಅಸಿಡಿಟಿಗೆ ಕಾರಣವಾಗಬಹುದು. 

ಇದನ್ನೂ ಓದಿ- Betel Leaf Benefits For Men: ವಿವಾಹಿತ ಪುರುಷರು ರಾತ್ರಿ ಮಲಗುವ ಮುನ್ನ ವಿಳ್ಳೆದೆಲೆ ಸೇವಿಸುವುದರಿಂದ ಸಿಗುತ್ತೆ ಈ ಲಾಭ

5. ಸಲಾಡ್ (Salad) - ಸಲಾಡ್ ಸೇವನೆ ಆರೋಗ್ಯಕ್ಕೆ ಗುಣಕಾರಿ ಎಂದು ಹೇಳಲಾಗುತ್ತದೆ. ಸಲಾಡ್ ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬ ಸಲಹೆ ನೀಡಲಾಗುತ್ತದೆ. ಆದರೆ, ಬೆಳಗಿನ ಹೊತ್ತು ಖಾಲಿ ಹೊಟ್ಟೆ ಸಲಾಡ್ ಸೇವನೆಯಿಂದ ದೂರ ಉಳಿಯಿರಿ. ಬೆಳಗ್ಗೆ ಖಾಲಿ ಹೊಟ್ಟೆ ಸಲಾಡ್ ಸೇವಿಸುವುದರಿಂದ ಅಸ್ವಸ್ಥತೆ ಹಾಗೂ ವಾಂತಿ ಸಮಸ್ಯೆ ಉಂಟಾಗಬಹುದು. ಇದರಿಂದ ಹಾರ್ಟ್ ಬರ್ನ್ (Heart Burn) ನಂತಹ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು. ಏಕೆಂದರೆ ಸಲಾಡ್ ನಲ್ಲಿ ಹೇರಳ ಪ್ರಮಾಣದಲ್ಲಿ ನಾರಿನಂಶ ಇರುತ್ತದೆ. ಇದರಿಂದ ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. 

ವೈದ್ಯರು ಹೇಳುವ ಪ್ರಕಾರ, ಬೆಳಗ್ಗೆ ಎದ್ದು ಖಾಲಿ ಹೊಟ್ಟೆ ಹುಳಿ ಪದಾರ್ಥ ಸೇವನೆಯಿಂದ ಕೂಡ ದೂರ ಉಳಿಯಬೇಕು. ಖಾಲಿ ಹೊಟ್ಟೆ ಹುಳಿ  ಸೇವನೆ ಅಜೀರ್ಣತೆ  ಮತ್ತು ಮಲಬದ್ಧತೆಗೆ ಕಾರಣವಾಗಬಹುದು.

ಇದನ್ನೂ ಓದಿ- Curry Leaf Benefits: ಕರಿಬೇವಿನ ಎಲೆ ರಸ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯ ನಿಖರತೆ, ಸಮಯಬದ್ಧತೆ ಹಾಗೂ ವಾಸ್ತವಿಕತೆಯನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ. ಯಾವುದೇ ಉಪಾಯವನ್ನು ಅನುಸರಿಸುವ ಮೊದಲು ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆಯುವುದು ಉತ್ತಮ. ಮಾಹಿತಿ ತಮ್ಮತ್ತ ತಲುಪಿಸುವುದು ಮಾತ್ರ ನಮ್ಮ ಉದ್ದೇಶ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News