ಮಧುಮೇಹ ಇರುವವರು ಈ ಹಳದಿ ಚಪಾತಿ ತಿಂದರೆ ನಿಯಂತ್ರಣಕ್ಕೆ ಬರುತ್ತದೆ ರಕ್ತದಲ್ಲಿನ ಸಕ್ಕರೆ ಮಟ್ಟ

ಕಡಲೆ ಹಿಟ್ಟು ನಮ್ಮ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ಅದರ ಸಹಾಯದಿಂದ ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.  ಆದರೆ ಅದರಿಂದ ತಯಾರಿಸಿದ ಚಪಾತಿ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.    

Written by - Ranjitha R K | Last Updated : Jun 13, 2022, 10:20 AM IST
  • ಕಡಲೆ ಹಿಟ್ಟು ಪ್ರೋಟೀನ್ ನ ಸಮೃದ್ಧ ಮೂಲವಾಗಿದೆ.
  • ಮಧುಮೇಹಿಗಳಿಗೆ ಬೆಸ್ಟ್ ಕಡಲೆಹಿಟ್ಟಿನ ಚಪಾತಿ
  • ಸಕ್ಕರೆ ಕಾಯಿಲೆಗೆ ಬೇಳೆ ಹಿಟ್ಟು ಹೇಗೆ ಪ್ರಯೋಜನಕಾರಿ?
ಮಧುಮೇಹ ಇರುವವರು ಈ ಹಳದಿ ಚಪಾತಿ ತಿಂದರೆ ನಿಯಂತ್ರಣಕ್ಕೆ ಬರುತ್ತದೆ  ರಕ್ತದಲ್ಲಿನ ಸಕ್ಕರೆ ಮಟ್ಟ title=
Gram Flour benefits for diabetec (file photo)

ಬೆಂಗಳೂರು : ಕಡಲೆ ಹಿಟ್ಟನ್ನು ಸಾಮಾನ್ಯವಾಗಿ ಬಹುತೇಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಇನ್ನು ಈ ಹಿಟ್ಟು ಬಳಸಿ ತಯಾರಿಸುವ ಬೋಂಡಾ ಬಜ್ಜಿಯನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಇದು ಪ್ರೋಟೀನ್ ನ ಸಮೃದ್ಧ ಮೂಲವಾಗಿದೆ. ಕಡಲೆ ಹಿಟ್ಟು ಬಳಸುವ, ಮೂಲಕ ಮಧುಮೇಹಿಗಳ ಆರೋಗ್ಯವನ್ನು ಸುಧಾರಿಸಬಹುದು. 

ಮಧುಮೇಹಿಗಳಿಗೆ ಬೆಸ್ಟ್ ಕಡಲೆಹಿಟ್ಟಿನ ಚಪಾತಿ : 
ಡಯಾಬಿಟೀಸ್ ರೋಗಿಗಳು ತಮ್ಮ ಆಹಾರ ಪದ್ಧತಿಯಾ ಬಗ್ಗೆ ಬಹಳ ಕಾಳಜಿ ವಹಿಸಬೇಕು. ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ ಅವರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರಾಗುತ್ತದೆ. ಹೀಗಾಗಿ  ಮಧುಮೇಹಿಗಳು  ಕಡಲೆಹಿಟ್ಟಿನ ಚಪಾತಿ ತಿಂದರೆ ಅವರ ಆರೋಗ್ಯ ಚೆನ್ನಾಗಿರುತ್ತದೆ.

ಇದನ್ನೂ ಓದಿ : Anemia: ಇದನ್ನು ಸೇವಿಸಿದರೆ ದೇಹದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ, ಆದರೆ ಸರಿಯಾದ ಕ್ರಮ ತಿಳಿದಿರಲಿ

ಕಡಲೆ ಹಿಟ್ಟಿನಲ್ಲಿ ಕಂಡುಬರುವ ಪೋಷಕಾಂಶಗಳು :
ಕಡಲೆ ಹಿಟ್ಟಿನಿಂದ ತಯಾರಿಸಿದ ಚಪಾತಿಯನ್ನು ಸೇವಿಸಿದರೆ, ದೇಹವು ಅನೇಕ ರೀತಿಯ ಪೋಷಕಾಂಶಗಳನ್ನು ಪಡೆಯುತ್ತದೆ. ಇದು ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸುಧಾರಿಸುತ್ತದೆ. ಇದು ಸಾಮಾನ್ಯ ಹಿಟ್ಟಿಗಿಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದರ ಹೊರತಾಗಿ, ಪೊಟ್ಯಾಸಿಯಮ್, ಮ್ಯಾಂಗನೀಸ್, ತಾಮ್ರ, ಸತು, ವಿಟಮಿನ್ ಬಿ 6 ಮತ್ತು ಥಯಾಮಿನ್, ಫೈಬರ್, ಕಬ್ಬಿಣ, ರಂಜಕ, ಮೆಗ್ನೀಸಿಯಮ್ ಮತ್ತು ಫೋಲೇಟ್ ಮುಂತಾದ ಪೋಷಕಾಂಶಗಳು  ಈ ಹಿಟ್ಟಿನಲ್ಲಿ ಹೇರಳವಾಗಿ ಕಂಡುಬರುತ್ತವೆ.

ಸಕ್ಕರೆ ಕಾಯಿಲೆಗೆ ಬೇಳೆ ಹಿಟ್ಟು ಹೇಗೆ ಪ್ರಯೋಜನಕಾರಿ?:
ಕಡಲೆ ಹಿಟ್ಟಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆಯಾಗಿರುತ್ತದೆ.  ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಚಪಾತಿ ತಿನ್ನಲು ಸಲಹೆ ನೀಡುತ್ತಾರೆ.

ಇದನ್ನೂ ಓದಿ : Omicron BA.5 Variant: ಮಹಾರಾಷ್ಟ್ರದ ಪುಣೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯಲ್ಲಿ ಒಮಿಕ್ರಾನ್ ಉಪ-ರೂಪಾಂತರಿ BA.5 ಪತ್ತೆ

ಈ ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಿ :
ಡಯಾಬಿಟೀಸ್ ರೋಗಿಗಳಿಗೆ ಕಡಲೆ ಹಿಟ್ಟು ಆರೋಗ್ಯಕರ ಆಯ್ಕೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅದರ ಚಪಾತಿಯನ್ನು ಮಾತ್ರ ತಿನ್ನಿರಿ, ಪಕೋಡಾ ಅಥವಾ ಪರೋಟಾಗಳನ್ನು  ಈ ಹಿಟ್ಟಿನಿಂದ ತಯಾರಿಸಿ ಸೇವಿಸಿದರೆ ಈ ಹಿಟ್ಟಿನ ಜೊತೆಗೆ ಅತಿಯಾದ ಎಣ್ಣೆಯ ಅಂಶ ಕೂಡಾ ನಿಮ್ಮ ದೇಹ ಸೇರುತ್ತದೆ. ಇದರಿಂದ ಕೊಲೆಸ್ಟ್ರಾಲ್ ಸಮಸ್ಯೆ ಕಾಣಿಸಿಕೊಳ್ಳಬಹುದು. 

 

( ಸೂಚನೆ : ಈ ಮೇಲೆ ನೀಡಲಾದ ಲೇಖನವು  ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News