Dhanatrayodashi 2022 ದಿನದಿಂದ ಈ ನಾಲ್ಕು ರಾಶಿಗಳ ಭಾಗ್ಯೋದಯ ಪಕ್ಕಾ

Dhanatrayodashi 2022: ಈ ವರ್ಷ ಅಕ್ಟೋಬರ್ 23 ರಿಂದ ಧನತ್ರಯೋದಶಿಯನ್ನು ಆಚರಿಸಲಾಗುತ್ತಿದೆ. ಇದೇ ದಿನದಿಂದ ಶನಿ ತನ್ನ ನೇರ ನಡೆಯನ್ನು ಅನುಸರಿಸಲಿದ್ದಾನೆ. ಪ್ರಸ್ತುತ ಶನಿ ಮಕರರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಅಕ್ಟೋಬರ್ 23 ರಿಂದ ಶನಿ ಮಕರರಾಶಿಯಲ್ಲಿಯೇ ಪುನಃ ತನ್ನ ನೇರ ನಡೆಯನ್ನು ಅನುಸರಿಸಲಿದ್ದಾನೆ.  

Written by - Nitin Tabib | Last Updated : Oct 8, 2022, 03:09 PM IST
  • ಅಕ್ಟೋಬರ್ 23 ರಿಂದ ಶನಿ ಮಕರರಾಶಿಯಲ್ಲಿಯೇ ಪುನಃ ತನ್ನ ನೇರ ನಡೆಯನ್ನು ಅನುಸರಿಸಲಿದ್ದಾನೆ.
  • ಶನಿಯ ಈ ನೇರ ನಡೆಯಿಂದ ಕೆಲ ರಾಶಿಗಳ ಭಾಗ್ಯೋದಯವಾಗಲಿದೆ.
  • ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನಿಗೆ ವಿಶೇಷ ಸ್ಥಾನ ಪ್ರಾಪ್ತಿ ಇದೆ.
Dhanatrayodashi 2022 ದಿನದಿಂದ ಈ ನಾಲ್ಕು ರಾಶಿಗಳ ಭಾಗ್ಯೋದಯ ಪಕ್ಕಾ title=
Shani Margi 2022

Dhanteras 2022 Rashifal: ಈ ವರ್ಷ ಅಕ್ಟೋಬರ್ 23 ರಿಂದ ಧನತ್ರಯೋದಶಿಯನ್ನು ಆಚರಿಸಲಾಗುತ್ತಿದೆ. ಇದೇ ದಿನದಿಂದ ಶನಿ ತನ್ನ ನೇರ ನಡೆಯನ್ನು ಅನುಸರಿಸಲಿದ್ದಾನೆ. ಪ್ರಸ್ತುತ ಶನಿ ಮಕರರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಅಕ್ಟೋಬರ್ 23 ರಿಂದ ಶನಿ ಮಕರರಾಶಿಯಲ್ಲಿಯೇ ಪುನಃ ತನ್ನ ನೇರ ನಡೆಯನ್ನು ಅನುಸರಿಸಲಿದ್ದಾನೆ. ಶನಿಯ ಈ ನೇರ ನಡೆಯಿಂದ ಕೆಲ ರಾಶಿಗಳ ಭಾಗ್ಯೋದಯವಾಗಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನಿಗೆ ವಿಶೇಷ ಸ್ಥಾನ ಪ್ರಾಪ್ತಿ ಇದೆ. ಸಾಮಾನ್ಯವಾಗಿ ಶನಿಯನ್ನು ಪಾಪಿ ಗ್ರಹ ಎಂದು ಕರೆಯಲಾಗುತ್ತದೆ. ಏಕೆಂದರೆ, ಶನಿಯ ಅಶುಭ ಪ್ರಭಾವಗಳಿಗೆ ಎಲ್ಲರು ಭಯಪಡುತ್ತಾರೆ. ಆದರೆ, ಇದು ನಿಜವಲ್ಲ. ಶನಿ ಕೇವಲ ಅಶುಭ ಫಲಗಳನ್ನೇ ನೀಡುತ್ತಾನೆ ಎಂದಲ್ಲ. ಶನಿ ಶುಭ ಫಲಗಳನ್ನು ಕೂಡ ನೀಡುತ್ತಾನೆ. ಜಾತಕದಲ್ಲಿ ಒಂದು ವೇಳೆ ಶನಿ ಶುಭ ಸ್ಥಾನದಲ್ಲಿದ್ದರೆ. ವ್ಯಕ್ತಿಯ ಮಲಗಿರುವ ಭಾಗ್ಯ ಕೂಡ ಪುಟಿದೇಳುತ್ತದೆ. ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಶನಿ ತನ್ನ ನೇರ ನಡೆಯನ್ನು ಅನುಸರಿಸುವುದರಿಂದ ಕೆಲ ರಾಶಿಗಳ ಜನರ ಭಾಗ್ಯ ಪರಿವರ್ತನೆಯಾಗಲಿದೆ ಎನ್ನಲಾಗಿದೆ. ಹಾಗಾದರೆ ಬನ್ನಿ ಶನಿ ತನ್ನ ನೇರ ನಡೆ ಅನುಸರಿಸುವುದರಿಂದ ಯಾವ ರಾಶಿಗಳ ಜನರಿಗೆ ಲಾಭವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ. 

ಮೇಷ ರಾಶಿ-  ಶನಿಯ ಈ ನೇರ ನಡೆ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಲಾಭ ನಿಮ್ಮದಾಗಲಿದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ.ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹೊಸ ವಾಹನ ಅಥವಾ ಮನೆಯನ್ನು ಖರೀದಿಸುವ ಸಾಧ್ಯತೆಯೂ ಇದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ.

ಮಿಥುನ ರಾಶಿ- ಧನಲಾಭ ಇರಲಿದೆ. ಇದರಿಂದಾಗಿ ಹಣಕಾಸಿನ ಸ್ಥಿತಿ ಉತ್ತಮವಾಗಲಿದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಮಿಥುನ ರಾಶಿಯವರಿಗೆ ಈ ಸಮಯ ಒಂದು ವರದಾನಕ್ಕೆ ಸಮಾನ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಘನತೆ ಗೌರವದಲ್ಲಿ ಹೆಚ್ಚಳವಾಗಲಿದೆ. ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಗಳಿವೆ.

ಕರ್ಕ ರಾಶಿ-  ಕರ್ಕ ರಾಶಿಯ ಜಾತಕದವರ ಪಾಲಿಗೆ ಸಮಯವು ತುಂಬಾ ಫಲಪ್ರದವಾಗಲಿದೆ. ಈ ಸಮಯವು ಉದ್ಯೋಗ ಮತ್ತು ವ್ಯವಹಾರಕ್ಕೆ ಮಂಗಳಕರವಾಗಿರುತ್ತದೆ. ನೀವು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ. ಲಾಭ ಇರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯುವಿರಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ.

ಇದನ್ನೂ ಓದಿ-December 2 ರವರೆಗೆ ಈ ರಾಶಿಗಳ ಜನರ ಜೀವನದಲ್ಲಿ ಅಪಾರ ಸುಖ-ಸಮೃದ್ಧಿ ಇರಲಿದೆ, ನಿಮ್ಮ ರಾಶಿ ಯಾವುದು?

ವೃಶ್ಚಿಕ ರಾಶಿ- ಧನಲಾಭ ಇರಲಿದೆ, ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಬಲಪಡಿಸಲಿದೆ. ಪ್ರತಿಷ್ಠೆ ಮತ್ತು ಸ್ಥಾನಮಾನದಲ್ಲಿ ಸುಧಾರಣೆ ಇರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭದ ಸಾಧ್ಯತೆಗಳಿವೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಎಲ್ಲರಿಂದ ನಿಮ್ಮ ಕೆಲಸಕ್ಕೆ  ಪ್ರಶಂಸೆ ವ್ಯಕ್ತವಾಗಲಿದೆ. ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುವಿರಿ.

ಇದನ್ನೂ ಓದಿ-Sharad Purnima 2022: ಸಕಲ 16 ಕಲಾವಲ್ಲಭನಾಗಲಿದ್ದಾನೆ ಚಂದ್ರ, ಇಲ್ಲಿದೆ ಪೂಜಾ ವಿಧಿ-ಮುಹೂರ್ತಗಳ ಮಾಹಿತಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News