Daily Horoscope: ದಿನಭವಿಷ್ಯ 30-05-2021 Today astrology

ಶ್ರೀಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇವಿ  ತಾಯಿಯ  ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯತಿಳಿದುಕೊಳ್ಳಿ.   

Written by - Ranjitha R K | Last Updated : May 30, 2021, 07:25 AM IST
  • ಮೇಷ ರಾಶಿಯವರ ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ
  • ಕರ್ಕಾಟಕ ರಾಶಿಯವರ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ
  • ಕನ್ಯಾ ರಾಶಿಯವರು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಒಳಿತು
Daily Horoscope: ದಿನಭವಿಷ್ಯ 30-05-2021 Today astrology   title=
Daily horoscope 30-05-2021 (file photo)

ಬೆಂಗಳೂರು : ಶ್ರೀಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇವಿ  ತಾಯಿಯ  ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯತಿಳಿದುಕೊಳ್ಳಿ. 

ಮೇಷ: ಈ ದಿನ ಗೃಹ ನಿರ್ಮಾಣ ಕೆಲಸ ಕಾರ್ಯಗಳಿಗೆ ಚಾಲನೆ ಸಿಗಲಿದೆ ಹಾಗೆಯೇ ಈ ದಿನ ಮಾನಸಿಕ ಕೋರಿಕೆಗಳು ಸಿದ್ದಿ ಸಹ ಆಗುತ್ತದೆ. ಈ ದಿನ ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಏನೇ ಇದ್ದರು ಅವುಗಳಿಂದ ಮುಕ್ತಿ ಪಡೆಯುತ್ತೀರಿ. ಈ ದಿನದ ನಿಮ್ಮ ಶುಭ ಸಂಖ್ಯೆ ೬. 

ವೃಷಭ: ಈ ದಿನ ಮನೆಯಲ್ಲಿ ಕೆಲವೊಂದು ಮಾತುಗಳು ಅಶಾಂತಿ ಉಂಟು ಮಾಡಲು ಕಾರಣ ಆಗಬಹುದು, ಈ ದಿನ ಹೊಸ ವಸ್ತುಗಳ ಖರೀದಿಗೆ ಹೆಚ್ಚಿನ ಮಹತ್ವ ನೀಡುತ್ತೀರಿ. ಈ ದಿನ ಮಾತಾ ಪಿತೃ ಆಶಿರ್ವಾದ ನಿಮಗೆ ಹೆಚ್ಚಿಗೆ ಸಿಗುತ್ತದೆ. ಈ ದಿನದ ನಿಮ್ಮ ಶುಭ ಸಂಖ್ಯೆ ೨. 

ಮಿಥುನ: ಈ ದಿನ ತಾಯಿ ಕಡೆಯ ಕೆಲವು ಕುಟುಂಬ ಸದಸ್ಯರು ನಿಮಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ನೀವು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು ನಿಮ್ಮ ಆತ್ಮ ತೃಪ್ತಿ ಉಂಟು ಮಾಡುತ್ತದೆ, ಆರೋಗ್ಯದಲ್ಲಿ ಕಾಳಜಿ ಇರಲಿ. ಈ ದಿನದ ನಿಮ್ಮ ಶುಭ ಸಂಖ್ಯೆ ೯. 

ಇದನ್ನೂ ಓದಿ : Vastu Tips: ಮನೆಯಲ್ಲಿ ಅನಗತ್ಯವಾಗಿ ಜಗಳವಾಗುತ್ತಿದೆಯೇ? ಅದನ್ನು ಈ ರೀತಿ ತಪ್ಪಿಸಿ

ಕರ್ಕಾಟಕ: ಈ ದಿನ ಸ್ನೇಹಿತರ ಜೊತೆಗೆ ಹಲವು ಹೊಸ ವಿಚಾರಗಳ ಬಗ್ಗೆ ಚಿಂತನೆ ನಡೆಸುತ್ತೀರಿ. ಈ ದಿನ ಆಧ್ಯಾತ್ಮಿಕ ಒಲವು ಹೆಚ್ಚಿಗೆ ಸಿಗಲಿದೆ. ಈ ದಿನ ಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸ ಸಹ ಕಂಡು ಬರುತ್ತದೆ ಸಂಜೆ ನಂತರ ವ್ಯವಹಾರದಲ್ಲಿ ಉತ್ತಮ ರೀತಿಯ ಲಾಭ ಸಹ ಮಾಡುತ್ತೀರಿ. 

ಸಿಂಹ: ಈ ದಿನ ಸಂಸಾರಿಕ ಜೀವನದಲ್ಲಿ ಹೆಚ್ಚಿನ ಸುಖವನ್ನು ಕಾಣುತ್ತೀರಿ, ಈ ದಿನ ಆರ್ಥಿಕವಾಗಿ ಹೆಚ್ಚಿನ ಅಭಿವೃದ್ದಿ ಸಹ ಕಾಣುತ್ತೀರಿ. ಈ ದಿನ ಸಹೋದರಿಯಿಂದ ನಿಮಗೆ ಒಂದು ಉಡುಗೊರೆ ಸಿಗುವ ಸಾಧ್ಯತೆ ಸಹ ಇರುತ್ತದೆ. ಈ ದಿನದ ನಿಮ್ಮ ಶುಭ ಸಂಖ್ಯೆ ೭. 

ಕನ್ಯಾ: ಈ ದಿನ ಬರಹಗಾರರ  ಕೀರ್ತಿ ಹೆಚ್ಚಿಸುತ್ತದೆ. ಈ ದಿನ ಕೃಷಿ ಉತ್ಪನ್ನಗಳು ನಿಮಗೆ ಹೆಚ್ಚಿನ ಲಾಭ ನೀಡುತ್ತದೆ. ನಿಮ್ಮ ಮಾತುಗಳು ಕೆಲವೊಬ್ಬರಿಗೆ ಬೇಸರ ತರಿಸಬಹುದು ಆದ್ದರಿಂದ ಮಾತಿನ ಮೇಲೆ ಹಿಡಿತ ಇರಲಿ ಒಳ್ಳೆಯದು. ಈ ದಿನದ ನಿಮ್ಮ ಶುಭ ಸಂಖ್ಯೆ ೧. 

ಇದನ್ನೂ ಓದಿ : ಪ್ರತಿನಿತ್ಯ ಈ ಕೆಲಸಗಳನ್ನು ಮಾಡುತ್ತಾ ಬಂದರೆ ಸಿಗಲಿದೆ ಭಾರೀ ಪ್ರಯೋಜನ ತಿಳಿಯಿರಿ

ತುಲಾ: ಈ ದಿನ ವೃತ್ತಿಯಲ್ಲಿ ನಿಮಗೆ ಮಾನಸಿಕ ಸಂತೃಪ್ತಿ ದೊರೆಯುತ್ತದೆ. ಈ ದಿನ ವಿದ್ವಾಂಸರಿಗೆ ಸಾಮಾಜಿಕ ಗೌರವ ಹೆಚ್ಚಿಗೆ ಸಿಗುತ್ತದೆ.  ಪಾಲುದಾರಿಕೆ ಮತ್ತು ಹಣಕಾಸಿನ ವಿಷಯದಲ್ಲಿ ಮನಸ್ತಾಪಗಳು ಹೆಚ್ಚಿಗೆ ಬರಲಿದೆ. ಈ ದಿನದ ನಿಮ್ಮ ಶುಭ ಸಂಖ್ಯೆ ೬. 

ವೃಶ್ಚಿಕ: ಈ ದಿನ ಹೊಸ ವ್ಯವಹಾರಗಳ ಬಗ್ಗೆ ಹೆಚ್ಚಿನ ಚಿಂತನೆ ಮಾಡುತ್ತೀರಿ ಹಲವು ಜನರ ಸಲಹೆಗಳು ಸಹ ಪಡೆಯುತ್ತೀರಿ. ಈ ದಿನ ಮಹಿಳೆಯರಿಗೆ ಹೆಚ್ಚಿನ ಯಶಸ್ಸು ಮತ್ತು ಕೀರ್ತಿ ಲಭಿಸುತ್ತದೆ. ಈ ದಿನ ಮನೆಯಲ್ಲಿ ತಂದೆ ಹೇಳಿದ ಮಾತುಗಳು ಅಂತಿಮ ಆಗಿರುತ್ತದೆ. 

ಧನಸ್ಸು: ಹೊಸ ವ್ಯವಹಾರಗಳ ಬಗ್ಗೆ ಸ್ನೇಹಿತರು ಮತ್ತು ಕುಟುಂಬ ಜನರ ಹತ್ತಿರ ಚಿಂತನೆ ನಡೆಸುತ್ತೀರಿ. ಈ ದಿನ ಆರ್ಥಿಕ ಸಮಸ್ಯೆಗಳು ಅಲ್ಪ ಮಟ್ಟಿಗೆ ಪರಿಹಾರ ಆಗುತ್ತದೆ. ಈ ದಿನ ದಾಂಪತ್ಯ ಜೀವನದಲ್ಲಿ ನಯ ಮತ್ತು ನಾಜೂಕು ವರ್ತನೆ ಮಾಡಿರಿ. ಈ ದಿನದ ನಿಮ್ಮ ಶುಭ ಸಂಖ್ಯೆ ೮. 

ಇದನ್ನೂ ಓದಿ : Vastu Tips: ಸಂತಾನ ಪ್ರಾಪ್ತಿ, ಸುಖ-ಶಾಂತಿಗಾಗಿ ಮನೆಯಲ್ಲಿರಲಿ ಈ ರೀತಿಯ ಚಿತ್ರ

ಮಕರ: ಈ ದಿನ ನಿವೇಶನ ಮತ್ತು ಇನ್ನಿತರೇ ಮುಖ್ಯವಾದ ಖರೀದಿಸಲು ಹೆಚ್ಚಿನ ಹಣಕಾಸು ಖರ್ಚು ಆಗುತ್ತದೆ. ಈ ದಿನ ವಿವಾದಾತ್ಮಕ ಹೇಳಿಕೆ ನೀಡಿ ನೀವು ಸುದ್ದಿ ಸಹ ಆಗುತ್ತೀರಿ, ಹಾಗೆಯೇ ಈ ದಿನ ಉದ್ಯೋಗ ಹುಡುಕಿದರೆ ಒಳ್ಳೆಯ ಉದ್ಯೋಗ ದೊರೆಯುವ ವಿಶ್ವಸ ಸಹ ಇದೆ. 

ಕುಂಭ: ಈ ದಿನ ಶಿಕ್ಷಣದಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದು. ಈ ದಿನ ಸಂಗಾತಿ ನೀಡುವ ಹಲವು ಸಲಹೆಗಳು ನಿಮಗೆ ಸಾಕಷ್ಟು ಉಪಯೋಗಕ್ಕೆ ಬರುತ್ತದೆ. ಈ ದಿನ ಹೊಸ ಉದ್ಯಮಗಳು ನಿಮಗೆ ಹೆಚ್ಚಿನ ಲಾಭ ಉಂಟು ಮಾಡುತ್ತದೆ. ಈ ದಿನದ ನಿಮ್ಮ ಶುಭ ಸಂಖ್ಯೆ ೩. 

ಮೀನ: ಈ ದಿನ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಸಾಕಷ್ಟು ಒಳಿತು ಆಗುತ್ತದೆ. ಈ ದಿನ ಖರ್ಚುಗಳ ಮೇಲೆ ಹಿಡಿತ ಸಾಧನೆ ಮಾಡಿರಿ. ದಿನ ಅಪರಿಚಿತ ವ್ಯಕ್ತಿಗಳಿಂದ ನಿಮಗೆ ತೊಂದರೆ ಆಗಬಹುದು ಅಂತಹ ಜನರಿಂದ ಜಾಗ್ರತೆ ವ್ಯವಹರಿಸಿ. ಈ ದಿನದ ನಿಮ್ಮ ಶುಭ ಸಂಖ್ಯೆ ೪. 

ಇದನ್ನೂ ಓದಿ : Watch Vastu Tips: ಯಮರಾಜನ ದಿಕ್ಕಂತೆ ಇದು; ಇಲ್ಲಿ ಗಡಿಯಾರ ಹಾಕುವ ತಪ್ಪು ಮಾಡದಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News