Daily Horoscope: ದಿನಭವಿಷ್ಯ 28-03-2021 Today astrology

ನಿಮ್ಮ ಇಷ್ಟ ದೇವರನ್ನು ನೆನೆಸಿಕೊಂಡು ಇಂದಿನ ದಿನವನ್ನು ಆರಂಭಿಸಿ ....  

Written by - Zee Kannada News Desk | Last Updated : Mar 28, 2021, 08:45 AM IST
  • ಮೇಷ ರಾಶಿಯವರು ಸಹೋದರ- ಸಹೋದರಿಯರ ಸಹಾಯದಿಂದ ನೀವು ಅರ್ಥಿಕವಾಗಿ ಲಾಭವನ್ನು ಪಡೆಯಬಹುದು.
  • ಮಿಥುನ ರಾಶಿಯವರು ತಾಯಿ ಅಥವಾ ತಂದೆಯ ಆರೋಗ್ಯಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು.
  • ಕರ್ಕಾಟಕ ರಾಶಿಯವರಿಗೆ ಆರ್ಥಿಕ ನಷ್ಟ ಸಂಭವಿಸಬಹುದು
Daily Horoscope: ದಿನಭವಿಷ್ಯ 28-03-2021 Today astrology title=
daily horoscope 28 -03-2021 (File photo)

ಬೆಂಗಳೂರು : ನಿಮ್ಮನಿಮ್ಮ ರಾಶಿಗನುಗುಣವಾಗಿ ನಿಮ್ಮ ದಿನ ಭವಿಷ್ಯ ಹೀಗಿದೆ ..

ಮೇಷ ರಾಶಿ
ನೀವು ವಿಶ್ರಾಂತಿ ಪಡೆಯಲು ಸಾಧ್ಯವಾಗುವ ಒಂದು ದಿನ. ಸಹೋದರ- ಸಹೋದರಿಯರ ಸಹಾಯದಿಂದ ನೀವು ಅರ್ಥಿಕವಾಗಿ ಲಾಭವನ್ನು ಪಡೆಯಬಹುದು. ಪ್ರಯಾಣದಲ್ಲಿ ಪ್ರಣಯ ಸಂಪರ್ಕದ ಸಾಧ್ಯತೆಯಿದೆ. ನಿಮ್ಮ ಕೆಲಸದ ಮೇಲೆ ಗಮನ ಹರಿಸಿದಲ್ಲಿ ಯಶಸ್ಸು ಮತ್ತು ಮನ್ನಣೆ ನಿಮ್ಮದಾಗುತ್ತದೆ. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ತ

ವೃಷಭ ರಾಶಿ
ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ನಿಮಗೆ ನೆರವು ಮತ್ತು ಪ್ರೀತಿ ಒದಗಿಸುತ್ತಾರೆ. ನಿಮ್ಮ ಪ್ರೀತಿ ಸಂಗಾತಿಯ ಸಾಮಾಜಿಕ ಮಾಧ್ಯಮದ ಕಳೆದ ಕೆಲವು ಸ್ಟೇಟಸ್‌ಗಳನ್ನು ಪರಿಶೀಲಿಸಿ, ನೀವು ಒಂದು ಸುಂದರ ಅಚ್ಚರಿಯನ್ನು ಪಡೆಯುತ್ತೀರಿ. ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. 

ಮಿಥುನ ರಾಶಿ
ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ನಿಮ್ಮ ತಾಯಿ ಅಥವಾ ತಂದೆಯ ಆರೋಗ್ಯಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು. ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಹದಗೆಡಿಸುತ್ತದೆ. ಆದರೆ ಸಂಬಂಧವನ್ನು ಬಲಪಡಿಸುತ್ತದೆ. ನಿಮ್ಮ ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡಿ. ನಿಮ್ಮ ಕಾರ್ಯಗಳು ದುರಾಶೆಯಿಂದಲ್ಲದೇ ಪ್ರೀತಿ ಮತ್ತು ಸಕಾರಾತ್ಮಕ ದೃಷ್ಟಿಯಿಂದ ನಡೆಯಬೇಕು. ನೀವು ನಿಮ್ಮಲ್ಲೇ ಸಂತೋಷವಾಗಿರುತ್ತೀರಿ ಮತ್ತು ಬಿಡುವಿನ ಸಮಯದಲ್ಲಿ ನೀವು ಇಷ್ಟಪಡುವದನ್ನು ಮಾಡುವಿರಿ. 

ಇದನ್ನೂ ಓದಿ : Holi-2021: ಹೋಳಿ ಹಬ್ಬದ ದಿನ ನಿರ್ಮಾಣಗೊಳ್ಳುತ್ತಿದೆ 'ಧ್ರುವಯೋಗ', ಕನ್ಯಾರಾಶಿಯಲ್ಲಿ ಚಂದ್ರ ಗೋಚರ

ಕರ್ಕಾಟಕ ರಾಶಿ
ಜೀವನದಲ್ಲಿ ಒತ್ತಡದ ಮನೋಭಾವವನ್ನು ತಪ್ಪಿಸಿ. ಹಣದ ನಷ್ಟವು ಸಂಭವಿಸಬಹುದು. ಆದ್ದರಿಂದ ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಎಷ್ಟು ಜಾಗರೂಕರಾಗಿರುತ್ತಿರೋ ಅಷ್ಟೇ ನಿಮಗೆ ಉತ್ತಮವಾಗಿರುತ್ತದೆ.  ಕೆಲಸದಲ್ಲಿ ನಿಮಗೆ ನಿಜಕ್ಕೂ ಒಳ್ಳೆಯದಾಗಬಹುದು. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯುವಿರಿ ಮತ್ತು ಅವರ ಮುಂದೆ ನಿಮ್ಮ ಭಾವನೆಗಳನ್ನು ಇಡಲು ಸಾಧ್ಯವಾಗುತ್ತದೆ. 

ಸಿಂಹ ರಾಶಿ
ಕೆಲಸ ಮತ್ತು ಮನೆಯಲ್ಲಿನ ಕೆಲವು ಒತ್ತಡ ನಿಮ್ಮ ಸಹನೆಯನ್ನು ಪರೀಕ್ಷಿಸುತ್ತದೆ. ಸುಮ್ಮನೆ ಕುಳಿತುಕೊಳ್ಳುವ ಬದಲು ಏಕೆ ಏನನ್ನಾದರೂ ಮಾಡಬಾರದು, ಇದು ನಿಮ್ಮ ಗಳಿಕೆಯ ಶಕ್ತಿಯನ್ನು ಸುಧಾರಿಸುತ್ತದೆ. ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗೊಳ್ಳಬಹುದು. ನಿಮ್ಮ ಕಣ್ಣೀರನ್ನು ಒಬ್ಬ ವಿಶೇಷ ಸ್ನೇಹಿತ ಒರೆಸಬಹುದು. ಜಂಟಿ ಯೋಜನೆಗಳು ಮತ್ತು ಪಾಲುದಾರಿಕೆಗಳಿಂದ ದೂರವಿರಿ. ಬಿಡುವಿನ ಸಮಯದ ಸರಿಯಾದ ಬಳಕೆಯನ್ನು ನೀವು ಕಲಿಯಲೇ ಬೇಕು. ಇಲ್ಲದಿದ್ದರೆ ಜೀವನದಲ್ಲಿ ಅನೇಕ ಜನರಿಂದ ಹಿಂದೆ ಉಳಿಯುತ್ತಿರಿ. 

ಕನ್ಯಾ ರಾಶಿ
ನಿಮ್ಮ ಆರೋಗ್ಯ ಸುಧಾರಿಸಲು ಸಹಕಾರಿಯಾಗುವ ಕೆಲಸಗಳನ್ನು ಮಾಡಬಹುದಾದ ಒಂದು ದಿನ. ನೀವು ಸುಲಭವಾಗಿ ಬಂಡವಾಳ ಪಡೆಯಬಹುದು. ಬಾಕಿಯಿರುವ ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಿಗೆ ಕೆಲಸ ಮಾಡಲು ಹಣ ಕೇಳಬಹುದು. ನಿಮ್ಮ ಕುಟುಂಬ ಸದಸ್ಯರಿಗೆ ಧನಾತ್ಮಕ ಪ್ರಯೋಜನಗಳ ಸಲಹೆಗಳನ್ನು ನೀಡುವ ಮೂಲಕ ನಿಮ್ಮ ಉಪಯುಕ್ತತೆಯ ಬಲವನ್ನು ಅಭಿವೃದ್ಧಿಪಡಿಸಿ. ನೀವು ನಿಮ್ಮ ಜೀವನದ ತೊಂದರೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಬಯಸುವಿರಿ ಆದರೆ ಅವರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮನ್ನು ಇನ್ನಷ್ಟು ತೊಂದರೆಗೊಳಿಸಬಹುದು. 

ಇದನ್ನೂ ಓದಿ : Holi 2021: ಹೋಳಿ ಹಬ್ಬದಂದು ಈ ಕೆಲಸ ಮಾಡಿದ್ರೆ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ!

ತುಲಾ ರಾಶಿ
ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಆಶೀರ್ವಾದ ಮಾಡುತ್ತಾರೆ ಮತ್ತು ಮನಸ್ಸಿಗೆ  ಶಾಂತಿ ತರುತ್ತಾರೆ. ಹಣದ ಪ್ರಾಮುಖ್ಯತೆ ನಿಮಗೆ ಚೆನ್ನಾಗಿ ಗೊತ್ತಿದೆ, ಆದ್ದರಿಂದ ನಿಮ್ಮ ಮೂಲಕ ಉಳಿಸಲಾಗಿರುವ ಹಣ ನಿಮ್ಮ ತುಂಬಾ ಕೆಲಸಕ್ಕೆ ಬರಬಹುದು ಮತ್ತು ನೀವು ಯಾವುದೇ ದೊಡ್ಡ ಸಮಸ್ಯೆಯಿಂದ ಹೊರಬರಬಹುದು. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಪ್ರಯತ್ನ ಮತ್ತು ಸಮರ್ಪಣೆಯನ್ನು ಪ್ರಶಂಸಿಸುತ್ತಾರೆ. ನೀವು ಒಂದು ಕಠಿಣ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದರಿಂದ ಸ್ನೇಹಿತರು ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. 

ವೃಶ್ಚಿಕ ರಾಶಿ
ಸ್ವತಃ ಔಷಧಿ ತೆಗೆದುಕೊಳ್ಳುವುದು ಔಷಧ ಅವಲಂಬನೆಯನ್ನು ಉಂಟುಮಾಡಬಹುದು. ಯಾವುದೇ ಔಷಧ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಇಲ್ಲದಿದ್ದಲ್ಲಿ ಔಷಧ ಅವಲಂಬನೆಯ ಸಾಧ್ಯತೆ ಅಧಿಕವಾಗಿದೆ.  ನಿಮ್ಮ ಮಕ್ಕಳಿಗಾಗಿ ಯೋಜನೆಗಳು ಮಾಡಲು ಅತ್ಯುತ್ತಮ ದಿನ. ನೀವು ಯಾವುದೇ ದುಬಾರಿ ಸಾಹಸಕ್ಕೆ ಕೈಹಾಕುವ ಮೊದಲು ನಿಮ್ಮ ವಿವೇಚನೆ ಬಳಸಿ. 

ಧನುಸ್ಸು ರಾಶಿ
ಒಬ್ಬ ಸ್ನೇಹಿತ ನಿಮ್ಮ ಮುಕ್ತ ಮನಸ್ಸು ಮತ್ತು ಸಹಿಷ್ಣುತೆಯ ಪರಮಾವಧಿಯನ್ನು ಪರೀಕ್ಷಿಸಬಹುದು. ನೀವು ನಿಮ್ಮ ಮೌಲ್ಯಗಳೊಂದಿಗೆ ರಾಜಿಯಾಗದಿರುವಂತೆ ಮತ್ತು ಸಕಾರಣವಾದ ನಿರ್ಧಾರಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ವಹಿಸಬೇಕು. ಬಹಳ ಪ್ರಯೋಜನಕಾರಿ ದಿನವಲ್ಲ. ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ವೆಚ್ಚಗಳ ಮೇಲೆ ಮಿತಿ ಹೇರಿ. ಕೌಟುಂಬಿಕ ಸಂತೋಷ ಕಾಣುತ್ತಿಲ್ಲ. ಒಂದು ಸ್ಥಳದಲ್ಲಿ ನಿಂತಾಗ ಪ್ರೀತಿ ನಿಮ್ಮನ್ನು ಒಂದು ಹೊಸ ಜಗತ್ತಿಗೆ ತೆಗೆದುಕೊಂಡು ಹೋಗಬಹುದು. ಇದು ನೀವು ಪ್ರಣಯಭರಿತ ಪ್ರವಾಸಕ್ಕೆ ಹೋಗುವ ದಿನ. 

ಇದನ್ನೂ ಓದಿ : ಹೋಳಿ ದಿನ ಈ ತಪ್ಪನ್ನು ಮಾಡಿದರೆ ವರ್ಷ ಪೂರ್ತಿ ಹಣದ ಸಮಸ್ಯೆ ಎದುರಾಗಬಹುದು

ಮಕರ ರಾಶಿ
ನೀವು ಯೋಗ ಧ್ಯಾನದೊಂದಿಗೆ ದಿನವನ್ನು ಪ್ರಾರಂಭಿಸಬಹುದು. ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನಕಾರಿಯಾಗುತ್ತದೆ . ಮತ್ತು ದಿನವಿಡೀ ನಿಮ್ಮಲ್ಲಿ ಶಕ್ತಿ ಉಳಿದಿರುತ್ತದೆ. ಕೆಲಸದ ಸ್ಥಳದಲ್ಲಿ ಅಥವಾ ವ್ಯಾಪಾರದಲ್ಲಿ ನಿಮ್ಮ ಯಾವುದೇ ಅಜಾಗರೂಕತೆ ನಿಮಗೆ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ಸಿಗಲಿವೆ. . ಹಣಕಾಸಿನ ಲಾಭದ ಬಗ್ಗೆ ಯೋಚಿಸಬೇಡಿ.  ನೀವು ಎಲ್ಲಾ ಜನರಿಂದ ದೂರವಾಗಿ ಏಕಾಂತದಲ್ಲಿ ಸಮಯವನ್ನು ಕಳೆಯಲು ಇಷ್ಟಪಡುವಿರಿ. 

ಕುಂಭ ರಾಶಿ
ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಯಾರಾದರೊಬ್ಬರನ್ನು ನಿಮಗೆ ಪರಿಚಯಿಸುತ್ತಾರೆ. ವಿದೇಶದಲ್ಲಿ ವ್ಯಾಪಾರ ಮಾಡುವ ಈ ರಾಶಿಚಕ್ರದ ಜನರಿಗೆ ಸಾಕಷ್ಟು ಹಣದ ಲಾಭವನ್ನು ಪಡೆಯಬಹುದು. ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು. ಕೆಲಸದ ಸ್ಥಳದಲ್ಲಿ ನೀವು ಉತ್ತಮವಾಗಿ ಮಾಡಲು ಬಯಸಿದರೆ, ನಿಮ್ಮ ಕೆಲಸದಲ್ಲಿ ಆಧುನಿಕತೆಯನ್ನು ತರಲು ಪ್ರಯತ್ನಿಸಿ. ಇದರೊಂದಿಗೆ, ಹೊಸ ತಂತ್ರಜ್ಞಾನದೊಂದಿಗೆ ನವೀಕರಿಸಿಕೊಳ್ಳಿ. 

ಮೀನ ರಾಶಿ
ಭಾವನಾತ್ಮಕವಾಗಿ ನೀವು ತುಂಬ ಸ್ಥಿರವಾಗಿರುವುದಿಲ್ಲ ಆದ್ದರಿಂದ ನೀವು ಇತರರ ಮುಂದೆ ಹೇಗೆ ವರ್ತಿಸುತ್ತೀರಿ ಮತ್ತು ಏನು ಹೇಳುತ್ತೀರಿ ಎನ್ನುವ ಬಗ್ಗೆ ಎಚ್ಚರದಿಂದಿರಿ. ಜೀವನದಲ್ಲಿ ಹಣದ ಏನು ಮೌಲ್ಯವಿದೆ ಎಂದು ನಿಮಗೆ ಅರ್ಥವಾಗಬಹುದು. ಕೌಟುಂಬಿಕ ಸಂತೋಷ ಕಾಣುತ್ತಿಲ್ಲ. ಸಾಮಾಜಿಕ ಅಡೆತಡೆಗಳನ್ನು ದಾಟಲು ಸಾಧ್ಯವಾಗುವುದಿಲ್ಲ. ಕಾರ್ಯಸ್ಥಾನಗಳಲ್ಲಿ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ ನೀವು ವಿಷಯಗಳನ್ನು ಸಭ್ಯತೆಯಿಂದ ನಿರ್ವಹಿಸದಿದ್ದಲ್ಲಿ.

ಇದನ್ನೂ ಓದಿ : ಇದು ಶನಿ ದೇವನ ವಕ್ರ ದೃಷ್ಟಿಯಿಂದ ತಪ್ಪಿಸಿಕೊಳ್ಳುವ ಸರಳ ವಿಧಾನ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News