ಬೆಂಗಳೂರು : ಮಧುಮೇಹ ರೋಗಿಗಳಿಗೆ ಕೆಲವು ಹಣ್ಣುಗಳನ್ನೂ ಸೇವಿಸುವಂತೆ ಸೂಚಿಸಲಾಗುತ್ತದೆ. ಇನ್ನು ಕೆಲವು ಹಣ್ಣುಗಳ ಹತ್ತಿರವೂ ಸುಳಿಯದಂತೆ ಎಚ್ಚರಿಕೆ ನೀಡಲಾಗುತ್ತದೆ. ಹಾಗೆಯೇ ಕೆಲವು ಮನೆ ಮದ್ದುಗಳ ಮೂಲಕ ಮಧುಮೇಹ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಹೇಳಲಾಗುತ್ತದೆ. ಹೌದು ಈ ಮನೆ ಮದ್ದುಗಳ ಸಾಲಿನಲ್ಲಿ ಬರುವುದೇ ಈ ಎಲೆ. ಅದುವೇ ಮಾನಿವ ಎಲೆ. ಮಾವಿನ ಎಲೆಯನ್ನು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ಮಾವಿನ ಎಲೆಗಳಲ್ಲಿ ಈ ಗುಣಗಳಿರುತ್ತವೆ :
ಮಾವಿನ ಎಲೆಗಳಲ್ಲಿ ಪೆಕ್ಟಿನ್, ವಿಟಮಿನ್ ಸಿ ಮತ್ತು ಫೈಬರ್ ಇದ್ದು, ಇದು ಮಧುಮೇಹ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಅಂದರೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಕೂಡ ಇದನ್ನು ಸೇವಿಸಬಹುದು. ಅದೇ ರೀತಿ ತೂಕ ಇಳಿಸಿಕೊಳ್ಳಲು ಬಯಸುವವರು ಕೂಡಾ ಮಾವಿನ ಎಲೆಗಳನ್ನು ಬಳಸಬಹುದು. ಇದನ್ನೂ ಬಳಸುವುದರಿಂದ ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನು ದೃಷ್ಟಿ ಕಡಿಮೆ ಇರುವವರು ಕೂಡ ಮಾವಿನ ಎಲೆಗಳನ್ನು ಸೇವಿಸಬಹುದು. ಇದರ ಸೇವನೆಯು ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಮಧುಮೇಹ ರೋಗಿಗಳು ನಿತ್ಯ ಸೇವಿಸಿದರೆ ಈ ಹಣ್ಣು ಕಡಿಮೆಯಾಗುತ್ತದೆ ಬ್ಲಡ್ ಶುಗರ್
ಮಾವಿನ ಎಲೆಗಳನ್ನು ಬಳಸುವುದು ಹೇಗೆ ?
1. ಮೊದಲನೆಯದಾಗಿ ರೋಗಿಗಳು 10-15 ಮಾವಿನ ಎಲೆಗಳನ್ನು ತೆಗೆದುಕೊಳ್ಳಬೇಕು.
2. ನಂತರ ಅದನ್ನು ನೀರಿನಲ್ಲಿ ಸರಿಯಾಗಿ ಕುದಿಸಬೇಕು.
3. ರಾತ್ರಿಯಿಡೀ ಅದನ್ನು ಹಾಗೆಯೇ ಬಿಡಿ.
4. ಬೆಳಿಗ್ಗೆ ಈ ನೀರನ್ನು ಸೋಸಿಕೊಂಡು ಸೇವಿಸಿ.
5. ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.
ನಿಯಮಿತವಾಗಿ ಈ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ.
ಇದನ್ನೂ ಓದಿ : Diabetes Mellitus: ಸಕ್ಕರೆ ಕಾಯಿಲೆ ಇರುವವರಿಗೆ ಈ ನೀರು ಒಂದು ವರದಾನವೇ ಇದ್ದಂತೆ
(ಸೂಚನೆ : ಈ ಮೇಲಿನ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.