Akshaya Tritiya: ಅಕ್ಷಯ ತೃತೀಯದಲ್ಲಿ ನಿಮ್ಮ ರಾಶಿಗನುಗುಣವಾಗಿ ಈ ವಸ್ತುಗಳನ್ನು ಖರೀದಿಸಿ

Akshaya Tritiya: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನ ಎಂದು ಪರಿಗಣಿಸಲಾಗಿದೆ. ಈ ಶುಭ ದಿನದಂದು ಕೆಲವು ವಸ್ತುಗಳನ್ನು ಖರೀದಿಸುವುದನ್ನು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ, ಅಕ್ಷಯ ತೃತೀಯ ದಿನ ಯಾವ ರಾಶಿಯವರು ಏನೆನ್ನು ಖರೀದಿಸಿದರೆ ಒಳಿತು ಎಂದು ತಿಳಿಯಿರಿ. 

Written by - Yashaswini V | Last Updated : Apr 20, 2023, 01:35 PM IST
  • ಈ ವರ್ಷ 22 ಏಪ್ರಿಲ್ 2023 ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ.
  • ಅಕ್ಷಯ ತೃತೀಯದಲ್ಲಿ ರಾಶಿಗೆ ಅನುಗುಣವಾಗಿಯೇ ವಸ್ತುಗಳನ್ನು ಖರೀದಿಸುವುದನ್ನು ಶುಭ ಎನ್ನಲಾಗುತ್ತದೆ.
  • ಅಕ್ಷಯ ತೃತೀಯದಲ್ಲಿ ನಿಮ್ಮ ರಾಶಿಗೆ ಅನುಗುಣವಾಗಿಯೇ ಯಾವ ವಸ್ತುಗಳನ್ನು ಖರೀದಿಸಬೇಕು ತಿಳಿಯಿರಿ.
Akshaya Tritiya: ಅಕ್ಷಯ ತೃತೀಯದಲ್ಲಿ ನಿಮ್ಮ ರಾಶಿಗನುಗುಣವಾಗಿ ಈ ವಸ್ತುಗಳನ್ನು ಖರೀದಿಸಿ  title=

What To Buy On Akshaya Tritiya: ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವನ್ನು ಅಕ್ಷಯ ತೃತೀಯ ಎಂದು ಆಚರಿಸಲಾಗುತ್ತದೆ. ಈ ವರ್ಷ 22 ಏಪ್ರಿಲ್ 2023 ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಈ ಆಚರಣೆಗೆ ಬಹಳ ಮಹತ್ವವಿದ್ದು, ಈ ದಿನ ಮನೆಗೆ ಕೆಲವು ವಸ್ತುಗಳನ್ನು ತರುವುದನ್ನು ತುಂಬಾ ಮಂಗಳಕರ ಎಂದು ನಂಬಲಾಗಿದೆ. ಹಾಗಿದ್ದರೆ,  ಅಕ್ಷಯ ತೃತೀಯ ದಿನ ಯಾವ ರಾಶಿಯವರು ಏನೆನ್ನು ಖರೀದಿಸಿದರ ಶುಭ ಎಂದು ತಿಳಿಯಿರಿ. 

ಅಕ್ಷಯ ತೃತೀಯದಲ್ಲಿ ಯಾವ ರಾಶಿಯವರು ಏನನ್ನು ಖರೀದಿಸಬೇಕು?
ಮೇಷ ರಾಶಿ:  

ಶಾಸ್ತ್ರಗಳ ಪ್ರಕಾರ, ಅಕ್ಷಯ ತೃತೀಯ ದಿನ ಮೇಷ ರಾಶಿಯವರು ಚಿನ್ನ ಮತ್ತು ಹಿತ್ತಾಳೆ ಪದಾರ್ಥಗಳನ್ನು ಖರೀದಿಸಿದರೆ ಒಳಿತು. 

ವೃಷಭ ರಾಶಿ:  
ಈ ದಿನ ವೃಷಭ ರಾಶಿಯವರು ಬೆಳ್ಳಿ ಮತ್ತು ಉಕ್ಕಿನ ಪದಾರ್ಥಗಳನ್ನು ಮನೆಗೆ ತರುವುದು ಶುಭ. 

ಮಿಥುನ ರಾಶಿ:   
ಮಿಥುನ ರಾಶಿಯವರು ಅಕ್ಷಯ ತೃತೀಯದಂಡು ಚಿನ್ನ, ಬೆಳ್ಳಿ ಮತ್ತು ಹಿತ್ತಾಳೆ ಪದಾರ್ಥಗಳನ್ನು ತರುವುದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. 

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ಈ ದಿನ ಬೆಳ್ಳಿ ತಟ್ಟೆಯನ್ನು ಖರೀದಿಸುವುದನ್ನು ಶುಭ ಎನ್ನಲಾಗುತ್ತದೆ. 

ಇದನ್ನೂ ಓದಿ- Akshaya Tritiya 2023: ತಾಯಿ ಮಹಾಲಕ್ಷ್ಮೀ ಆಶೀರ್ವಾದಕ್ಕಾಗಿ ಅಕ್ಷಯ ತೃತೀಯದಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ

ಸಿಂಹ ರಾಶಿ:   
ಅಕ್ಷಯ ತೃತೀಯ ದಿನದಂದು ಚಿನ್ನ ಮತ್ತು ತಾಮ್ರದ ಪದಾರ್ಥಗಳನ್ನು ಖರೀದಿಸುವುದರಿಂದ ಸಿಂಹ ರಾಶಿಯವರ ಅದೃಷ್ಟವೇ ಬದಲಾಗುತ್ತದೆ ಎಂದು ನಂಬಲಾಗಿದೆ. 

ಕನ್ಯಾ ರಾಶಿ: 
ಈ ಶುಭ ದಿನದಂದು ಕನ್ಯಾ ರಾಶಿಯವರು ಚಿನ್ನ, ಬೆಳ್ಳಿ ಇಲ್ಲವೇ ಹಿತ್ತಾಳೆ ಪದಾರ್ಥಗಳನ್ನು ಖರೀದಿಸುವುದು ಮಂಗಳಕರ. 

ತುಲಾ ರಾಶಿ:  
ಅಕ್ಷಯ ತೃತೀಯ ದಿನದಂದು ತುಲಾ ರಾಶಿಯ ಜನರು ಬೆಳ್ಳಿ, ಎಲೆಕ್ಟ್ರಾನಿಕ್ಸ್ ಮತ್ತು ಪೀಠೋಪಕರಣಗಳನ್ನು ಖರೀದಿಸುವುದರಿಂದ ನಿಮ್ಮ ಅದೃಷ್ಟ ಬದಲಾಗಬಹುದು. 

ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರಿಗೆ ಅಕ್ಷಯ ತೃತೀಯ ದಿನದಂದು ಚಿನ್ನ ಇಲ್ಲವೇ ಹಿತ್ತಾಳೆ ಪದಾರ್ಥಗಳನ್ನು ಖರೀದಿಸಲು ಸೂಚಿಸಲಾಗುತ್ತದೆ. 

ಇದನ್ನೂ ಓದಿ- Akshaya Tritiya 2023: ಅಕ್ಷಯ ತೃತೀಯದಂದು ಈ ಕೆಲಸ ಮಾಡಿದ್ರೆ ಎಂದಿಗೂ ಖಾಲಿಯಾಗಲ್ಲ ಖಜಾನೆ

ಧನು ರಾಶಿ:  
ಧನು ರಾಶಿಯವರಿಗೆ ಅಕ್ಷಯ ತೃತೀಯ ದಿನದಲ್ಲಿ ಚಿನ್ನ, ಹಿತ್ತಾಳೆ, ಫ್ರಿಜ್, ವಾಟರ್ ಕೂಲರ್ ನಂತಹ ವಸ್ತುಗಳನ್ನು ಖರೀದಿಸುವುದನ್ನು ಪ್ರಯೋಜನಕಾರಿ ಎನ್ನಲಾಗುತ್ತದೆ. 

ಮಕರ ರಾಶಿ:  
ಮಕರ ರಾಶಿಯವರು ಅಕ್ಷಯ ತೃತೀಯ ದಿನದಂದು  ಚಿನ್ನ, ಹಿತ್ತಾಳೆ, ಬೆಳ್ಳಿ ಮತ್ತು ಉಕ್ಕಿನ ವಸ್ತುಗಳನ್ನು ಖರೀದಿಸುವುದನ್ನು ಮಂಗಳಕರ ಎಂದು ಪರಿಗಣಿಸಲಾಗಿದೆ.  

ಕುಂಭ ರಾಶಿ:  
ಕುಂಭ ರಾಶಿಯವರಿಗೆ ಅಕ್ಷಯ ತೃತೀಯ ದಿನ ಚಿನ್ನ, ಬೆಳ್ಳಿ, ಹಿತ್ತಾಳೆ, ಉಕ್ಕು ಇಲ್ಲವೇ ವಾಹನಗಳನ್ನು ಖರೀದಿಸುವುದು ಹೆಚ್ಚು ಪ್ರಯೋಜನಕಾರಿ ಎನ್ನಲಾಗುವುದು. 

ಮೀನ ರಾಶಿ: 
ಮೀನ ರಾಶಿಯವರು ಅಕ್ಷಯ ತೃತೀಯ ದಿನ ಚಿನ್ನ, ಹಿತ್ತಾಳೆ, ಪೂಜಾ ಸಾಮಗ್ರಿಗಳು ಮತ್ತು ಪಾತ್ರೆಗಳನ್ನು ಖರೀದಿಸುವುದನ್ನು ಶುಭ ಎನ್ನಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News