Budh Gochar: ವೃತ್ತಿ-ವ್ಯವಹಾರದಲ್ಲಿ ಪ್ರಗತಿಶೀಲ ಗ್ರಹ ಸಂಚಾರ, ಇದು ನಿಮಗೆ ಶುಭವೋ ಅಶುಭವೋ ತಿಳಿಯಿರಿ

Budh Gochar: ಬುಧ ಗ್ರಹವು ತನ್ನ ರಾಶಿಯನ್ನು ಬದಲಾಯಿಸುತ್ತಿದೆ ಮತ್ತು ಮೇಷ ರಾಶಿಯನ್ನು ಪ್ರವೇಶಿಸುತ್ತಿದೆ. ಬುಧದ ರಾಶಿ ಬದಲಾವಣೆಯು ಉದ್ಯೋಗ-ವ್ಯವಹಾರದಲ್ಲಿನ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಈ ಸಂಕ್ರಮವು ಹೇಗೆ ಪ್ರಭಾವ ಬೀರಲಿದೆ ಎಂದು ತಿಳಿಯಿರಿ. 

Written by - Yashaswini V | Last Updated : Apr 8, 2022, 08:26 AM IST
  • ಬುಧ ರಾಶಿಯ ಬದಲಾವಣೆ
  • ಬುಧನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ
  • ಉದ್ಯೋಗ-ವ್ಯವಹಾರದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ
Budh Gochar: ವೃತ್ತಿ-ವ್ಯವಹಾರದಲ್ಲಿ ಪ್ರಗತಿಶೀಲ ಗ್ರಹ ಸಂಚಾರ, ಇದು ನಿಮಗೆ ಶುಭವೋ ಅಶುಭವೋ ತಿಳಿಯಿರಿ  title=
Budha In Mesha Rashi effects on zodiac signs

Budh Gochar: ಇಂದು ಅಂದರೆ 8ನೇ ಏಪ್ರಿಲ್ 2022 ರಂದು ಗ್ರಹಗಳ ರಾಜಕುಮಾರ ಬುಧನು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಇದರೊಂದಿಗೆ ಅವರ ನೀಚ ರಾಶಿಯ ಯೋಗವೂ ಅಂತ್ಯವಾಗಲಿದೆ. ಏಪ್ರಿಲ್ 24 ರ ವರೆಗೆ ಮೇಷ ರಾಶಿಯಲ್ಲಿ ಬುಧ ಸಂಕ್ರಮಣ ಮಾಡಲಿದ್ದು ನಂತರ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧ ರಾಶಿಯ ಬದಲಾವಣೆಯ ಪರಿಣಾಮವು ವೃತ್ತಿ-ವ್ಯವಹಾರ, ಬುದ್ಧಿವಂತಿಕೆ, ಮಾತಿನ ಮೇಲೆ ಪ್ರಭಾವ ಬೀರುತ್ತದೆ. ಬುಧದ ಸಂಚಾರವು ಎಲ್ಲಾ 12 ರಾಶಿಚಕ್ರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ. 

ದ್ವಾದಶ ರಾಶಿಗಳ ಮೇಲೆ ಬುಧನ ರಾಶಿ ಬದಲಾವಣೆ ಪ್ರಭಾವ ಹೇಗಿರಲಿದೆ?
ಮೇಷ ರಾಶಿ:
ಬುಧ ಗ್ರಹವು ಮೇಷ ರಾಶಿಯನ್ನು ಪ್ರವೇಶಿಸುತ್ತಿದೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ಗೌರವ ಸಿಗಲಿದೆ. ಕೆಲಸಕ್ಕೆ ಮೆಚ್ಚುಗೆ ದೊರೆಯಲಿದೆ. ನಿಮ್ಮ ಯೋಜನೆಗಳನ್ನು ರಹಸ್ಯವಾಗಿಟ್ಟುಕೊಂಡು ಕೆಲಸ ಮಾಡಿದರೆ, ನೀವು ಯಶಸ್ವಿಯಾಗುತ್ತೀರಿ. ಇಲ್ಲದಿದ್ದರೆ ಶತ್ರುಗಳು ನಿಮ್ಮನ್ನು ಅವಮಾನಿಸಲು ಅಥವಾ ಹಾನಿ ಮಾಡಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಸಾಲ ನೀಡಬೇಡಿ ಅಥವಾ ತೆಗೆದುಕೊಳ್ಳಬೇಡಿ. 

ವೃಷಭ ರಾಶಿ: ಬುಧ ಸಂಕ್ರಮಣದಿಂದ (Budh Gochar) ವೃಷಭ ರಾಶಿಯವರಿಗೆ ಖರ್ಚು ಹೆಚ್ಚಾಗುವುದು. ಕೆಲವು ಕೆಟ್ಟ ಸುದ್ದಿ ಇರಬಹುದು. ಆದರೆ, ವಿದೇಶಿ ಕಂಪನಿಯಲ್ಲಿ ಉದ್ಯೋಗ ಪಡೆಯುವ ಅಥವಾ ವಿದೇಶದಲ್ಲಿ ನೆಲೆಸುವ ಕನಸು ನನಸಾಗಬಹುದು. ಲವ್ ಮ್ಯಾರೇಜ್ ಆಗಲು ಬಯಸುವವರಿಗೆ ಇದು ಉತ್ತಮ ಸಮಯ. 

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಕೆಲಸದಲ್ಲಿ ಪ್ರಗತಿ ಸಿಗಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. ಹಳೆಯ ಹಣ ಸಿಗಬಹುದು. ಮನೆಯವರ ಸಹಕಾರವಿರುತ್ತದೆ. ಹೊಸದಾಗಿ ಮದುವೆಯಾದ ದಂಪತಿಗಳು ಮಕ್ಕಳಿಗೆ ಸಂಬಂಧಿಸಿದ ಉತ್ತಮ ಮಾಹಿತಿಯನ್ನು ಪಡೆಯಬಹುದು. 

ಕರ್ಕಾಟಕ ರಾಶಿ: ಈ ಸಮಯವು ಕರ್ಕ ರಾಶಿಯವರಿಗೆ ಗೌರವವನ್ನು ತರುತ್ತದೆ. ಬಡ್ತಿ ಸಿಗುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸವನ್ನು ಸುಧಾರಿಸಲು ಪ್ರಯತ್ನಿಸಿದರೆ, ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ನೀವು ಮನೆ ಕಾರು ಖರೀದಿಸಬಹುದು. ಸವಾಲುಗಳನ್ನು ಜಯಿಸಲು ಸಾಧ್ಯವಾಗುತ್ತದೆ.  

ಇದನ್ನೂ ಓದಿ- Astrology: ಸದಾ ಗೆಲ್ಲುವ ಉತ್ಸಾಹ ಹೊಂದಿರುತ್ತಾರೆ ಈ 4 ರಾಶಿಯ ಜನ

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ಬಾರಿ ಬಡ್ತಿ-ಹೆಚ್ಚಳ ಅಥವಾ ಹೊಸ ಉದ್ಯೋಗ ದೊರೆಯಬಹುದು. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ. ಸವಾಲುಗಳನ್ನು ಜಯಿಸಲು ಸಾಧ್ಯವಾಗುತ್ತದೆ. ಪರೀಕ್ಷೆ-ಸಂದರ್ಶನದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಯಾವುದೇ ವಿದೇಶಿ ಕೆಲಸವು ಪೂರ್ಣಗೊಳ್ಳುತ್ತದೆ. ನ್ಯಾಯಾಲಯದಲ್ಲಿ ಪ್ರಕರಣವಿದ್ದರೆ ಅದು ಯಶಸ್ವಿಯಾಗುತ್ತದೆ. 

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟಗಳು ಎದುರಾಗಬಹುದು. ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಆರೋಗ್ಯ ಸಮಸ್ಯೆ ಇರಬಹುದು. ಕೆಲಸದ ಸ್ಥಳದಲ್ಲಿ ಯಾರಾದರೂ ನಿಮ್ಮ ವಿರುದ್ಧ ಪಿತೂರಿ ನಡೆಸಬಹುದು. ಆದ್ದರಿಂದ ಎಚ್ಚರಿಕೆಯಿಂದಿರಿ ಮತ್ತು ಸಾಲದ ವ್ಯವಹಾರಗಳನ್ನು ಮಾಡಬೇಡಿ. 

ತುಲಾ ರಾಶಿ: ವಿವಾಹಕ್ಕಾಗಿ ಪ್ರಯತ್ನಿಸುತ್ತಿರುವವ ತುಲಾ ರಾಶಿಯವರಿಗೆ ಬುಧ ಸಂಕ್ರಮಣ ಬಹಳ ಶುಭಕರವಾಗಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೂ ಯಶಸ್ಸು ಸಿಗುತ್ತದೆ. ದೊಡ್ಡ ಆರ್ಡರ್ ಗಳನ್ನು ಕಾಣಬಹುದು. ಉದ್ಯೋಗಾಕಾಂಕ್ಷಿಗಳಿಗೆ ಬಡ್ತಿ, ಸಂಬಳ ಹೆಚ್ಚಳವಾಗಬಹುದು. 

ವೃಶ್ಚಿಕ ರಾಶಿ: ಮೇಷ ರಾಶಿಯಲ್ಲಿ ಬುಧ ಪ್ರವೇಶದಿಂದಾಗಿ (Budh In Mesha Rashi) ವೃಶ್ಚಿಕ ರಾಶಿಯವರಿಗೆ ಹೊಟ್ಟೆ ಅಥವಾ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಬಲಿಯಾಗಬಹುದು. ರಹಸ್ಯ ಶತ್ರುಗಳನ್ನು ತಪ್ಪಿಸಿ. ನ್ಯಾಯಾಲಯದಲ್ಲಿ ವಿಷಯವಿದ್ದರೆ ಅದನ್ನು ಹೊರಗೆ ಇತ್ಯರ್ಥಪಡಿಸಿಕೊಳ್ಳಿ. ಆಸ್ತಿ ವಿಷಯಗಳನ್ನು ಇತ್ಯರ್ಥಗೊಳಿಸಲು ಅಥವಾ ಖರೀದಿಸಲು ಇದು ಉತ್ತಮ ಸಮಯ. 

ಇದನ್ನೂ ಓದಿ- 30 ವರ್ಷಗಳ ನಂತರ ಸ್ವರಾಶಿಗೆ ಮರಳುತ್ತಿರುವ ಶನಿ ಅಲ್ಲೋಲ ಕಲ್ಲೋಲ ಮಾಡಲಿದ್ದಾನೆ ಈ ರಾಶಿಯವರ ಜೀವನ

ಧನು ರಾಶಿ : ಬುಧ ಸಂಕ್ರಮಣವು ಧನು ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ತರುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಈ ಸಮಯವು ತುಂಬಾ ಮಂಗಳಕರವಾಗಿದೆ. ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಮದುವೆಯಾಗಲು ಬಯಸುವವರು ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಈ ಸಮಯ ಸರಾಸರಿಯಾಗಿರಲಿದೆ. ಕೆಲವು ವಸ್ತುಗಳು ಕಳ್ಳತನವಾಗಬಹುದು, ಆದ್ದರಿಂದ ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ವಿದೇಶಿ ಸಂಬಂಧಿತ ಕೆಲಸಗಳು ಪೂರ್ಣಗೊಳ್ಳಲಿವೆ. ಮನೆ ಆಸ್ತಿಯಿಂದ ಲಾಭವಾಗಲಿದೆ. ನೀವು ಹೊಸ ಕಾರು ಖರೀದಿಸಬಹುದು. 

ಕುಂಭ ರಾಶಿ: ಬುಧ ಸಂಕ್ರಮಣದಿಂದಾಗಿ ಕುಂಭ ರಾಶಿಯವರಿಗೆ ಧೈರ್ಯ ಹೆಚ್ಚಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಈ ಸಮಯವು ಧರ್ಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಬಹುದು. ನಿಮ್ಮ ಶ್ರಮ ಮತ್ತು ಸಾಮರ್ಥ್ಯದ ಆಧಾರದ ಮೇಲೆ, ನೀವು ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸುತ್ತೀರಿ. 

ಮೀನ ರಾಶಿ: ಬುಧ ಸಂಕ್ರಮಣವು ಮೀನ ರಾಶಿಯವರಿಗೆ ಅನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ಹಣವು ಪ್ರಯೋಜನಕಾರಿಯಾಗಲಿದೆ. ಹಳೆಯ ಹಣವನ್ನು ಮರಳಿ ಪಡೆಯಬಹುದು. ವೃತ್ತಿಯಲ್ಲಿ ಲಾಭವಾಗಲಿದೆ. ಯಾವುದೇ ಪ್ರಮುಖ ಕೆಲಸವನ್ನು ಮಾಡುವ ಮೊದಲು ಇತರರೊಂದಿಗೆ ಹಂಚಿಕೊಳ್ಳದಂತೆ ನೋಡಿಕೊಳ್ಳಿ. 

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News