Budh Gochar 2023: ಬುಧನಿಂದ ರಾಜಯೋಗ, ಈ 3 ರಾಶಿಯವರಿಗೆ ಅದೃಷ್ಟದ ಜೊತೆಗೆ ಧನಲಾಭ!

ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವು ಮಾರ್ಚ್ 16ರಂದು ಸಂಚರಿಸಿದ ನಂತರ ಮೀನ ರಾಶಿಯನ್ನು ಪ್ರವೇಶಿಸಿದೆ. ಬುಧ ರಾಶಿಯ ಬದಲಾವಣೆಯಿಂದಾಗಿ ರಾಜಯೋಗವು ರೂಪುಗೊಳ್ಳುತ್ತಿದೆ. ಇದು 4 ರಾಶಿಯವರಿಗೆ ಬಂಪರ್ ಲಾಭವನ್ನು ನೀಡುತ್ತದೆ.

Written by - Puttaraj K Alur | Last Updated : Mar 19, 2023, 05:08 PM IST
  • ವೃಷಭ ರಾಶಿಯವರಿಗೆ ನೀಚ ರಾಜಯೋಗವು ಶುಭಫಲ ನೀಡಲಿದ್ದು, ಆದಾಯದಲ್ಲಿ ಏರಿಕೆಯಾಗಲಿದೆ
  • ಮೀನ ರಾಶಿಯ ಜನರು ಉದ್ಯೋಗ-ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ
  • ನೀಚ ರಾಜಯೋಗವು ಕನ್ಯಾ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ
Budh Gochar 2023: ಬುಧನಿಂದ ರಾಜಯೋಗ, ಈ 3 ರಾಶಿಯವರಿಗೆ ಅದೃಷ್ಟದ ಜೊತೆಗೆ ಧನಲಾಭ! title=
ಬುಧ ಗೋಚರ 2023

ನವದೆಹಲಿ: ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಗ್ರಹಗಳ ರಾಜಕುಮಾರನೆಂದು ಕರೆಯಲಾಗುತ್ತದೆ. ಇತ್ತೀಚೆಗಷ್ಟೇ ಬುಧ ಸಂಕ್ರಮಣದಿಂದ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಮಾರ್ಚ್ 16ರಂದು ಗುರುವಿನ ರಾಶಿ ಮೀನದಲ್ಲಿ ಬುಧದ ಸಂಕ್ರಮಣವು ನೀಚ ರಾಜಯೋಗವನ್ನು ಸೃಷ್ಟಿಸುತ್ತಿದೆ. ಈ ಯೋಗವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಇದು 4 ರಾಶಿಯ ಜನರಿಗೆ ಅದ್ಭುತ ಪ್ರಯೋಜನವನ್ನು ನೀಡುತ್ತದೆ. ಈ ರಾಶಿಯವರು ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯುತ್ತಾರೆ. ಈ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.

ವೃಷಭ ರಾಶಿ: ವೃಷಭ ರಾಶಿಯವರಿಗೆ ನೀಚ ರಾಜಯೋಗವು ಶುಭಫಲ ನೀಡಲಿದೆ. ಈ ರಾಶಿಯ ಜನರ ಆದಾಯದಲ್ಲಿ ಭಾರಿ ಏರಿಕೆಯಾಗಬಹುದು. ಹಣಕಾಸಿನ ಸಮಸ್ಯೆಗಳೆಲ್ಲವೂ ದೂರವಾಗುತ್ತವೆ. ಆರ್ಥಿಕ ಪರಿಸ್ಥಿತಿಗಳು ಬಲವಾಗಿರುತ್ತವೆ. ಮನೆಯಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯಬಹುದು.

ಇದನ್ನೂ ಓದಿ: Black Thread: ಕಪ್ಪು ದಾರ ಧರಿಸುವುದರ ಅದ್ಭುತ ಪ್ರಯೋಜನಗಳಿವು, ಈ ಜನರಿಗೆ ಗರಿಷ್ಠ ಲಾಭ!

ಮಿಥುನ ರಾಶಿ: ಬುಧ ಸಂಕ್ರಮಣದಿಂದ ಉಂಟಾಗುವ ನೀಚ ರಾಜಯೋಗವು ಲಾಭದಾಯಕವೆಂದು ಸಾಬೀತುಪಡಿಸಬಹುದು. ಈ ಜನರು ಉದ್ಯೋಗ-ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ. ಉದ್ಯೋಗಸ್ಥರಿಗೆ ಬಡ್ತಿ-ಇನ್ಕ್ರಿಮೆಂಟ್ ಪಡೆಯಬಹುದು. ನಿಮ್ಮ ಆಸೆಗಳು ಪೂರೈಸಬಹುದು. ಬಯಸಿದ ಸ್ಥಳಕ್ಕೆ ವರ್ಗಾವಣೆ ಭಾಗ್ಯ ಸಿಗಬಹುದು. ವಿದೇಶ ಪ್ರವಾಸಕ್ಕೆ ಹೋಗಬಹುದು.

ಕನ್ಯಾ ರಾಶಿ: ನೀಚ ರಾಜಯೋಗವು ಕನ್ಯಾ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಇದರಿಂದ ನಿಮಗೆ ದುಪ್ಪಟ್ಟು ಲಾಭ ಸಿಗಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. ಸಮಾಜದಲ್ಲಿ ಗೌರವವೂ ಸಿಗಲಿದೆ. ಬರವಣಿಗೆ, ಭಾಷಣ ಮತ್ತು ಕಲಾತ್ಮಕ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಈ ಸಮಯವು ವಿಶೇಷವಾಗಿ ಮಂಗಳಕರವಾಗಿದೆ.

ಧನು ರಾಶಿ: ನೀಚ ರಾಜಯೋಗವು ಧನು ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡಲಿದೆ. ಆಸ್ತಿಯಿಂದ ಲಾಭವಾಗಲಿದೆ. ಹೊಸ ಕಾರು ಅಥವಾ ಯಾವುದೇ ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ಉದ್ಯೋಗಸ್ಥರ ಸಮಸ್ಯೆಗಳು ದೂರವಾಗುತ್ತವೆ. ಎದುರಾಳಿಗಳು ಸೋಲುತ್ತಾರೆ.

ಇದನ್ನೂ ಓದಿ: Kharmas 2023 : ಮುಂದಿನ 26 ದಿನ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ, ಇಲ್ಲದಿದ್ದರೆ ಭಾರಿ ಅಪಾಯ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News