Broom Vastu Tips: ಮನೆಯ ಈ ಸ್ಥಳದಲ್ಲಿ ‘ಪೊರಕೆ’ ಇಟ್ಟರೆ ಬಡತನ ಬರುತ್ತೆ!

Vastu for using Broom: ಕುಟುಂಬ ಸದಸ್ಯರು ಮನೆಯಿಂದ ಹೊರಗೆ ಹೋಗುವಾಗ ಪೊರಕೆಯನ್ನು ಅಡ್ಡಲಾಗಿ ತರಬಾರದು ಮತ್ತು ಕಸವನ್ನು ಗುಡಿಸುತ್ತಿರಬಾರದು. ಆ ವೇಳೆ ಪೊರಕೆಯನ್ನು ಅಡ್ಡಲಾಗಿ ಮಲಗಿಸಬೇಕು. ಅದರಂತೆ ಸೂರ್ಯಾಸ್ತದ ಬಳಿಕ ಪೊರಕೆಯಿಂದ ಕಸವನ್ನು ಗುಡಿಸಬಾರದು.

Written by - Puttaraj K Alur | Last Updated : Jul 20, 2023, 09:53 AM IST
  • ವಾಸ್ತು ಪ್ರಕಾರ ಪೊರಕೆಯನ್ನು ಈಶಾನ್ಯ ದಿಕ್ಕಿನಲ್ಲಿಡಬಾರದು, ಇದರಿಂದ ಹಣದ ಆಗಮನ ನಿಲ್ಲುತ್ತದೆ
  • ಮಲಗುವ ಕೋಣೆಯಲ್ಲಿ ಮತ್ತು ಅಡುಗೆ ಮನೆಯಲ್ಲಿ ಅಪ್ಪಿತಪ್ಪಿಯೂ ಪೊರಕೆಯನ್ನು ಇಡಬಾರದು.
  • ಪೊರಕೆಯನ್ನು ಕಾಲಿನಲ್ಲಿ ತುಳಿಯುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ
Broom Vastu Tips: ಮನೆಯ ಈ ಸ್ಥಳದಲ್ಲಿ ‘ಪೊರಕೆ’ ಇಟ್ಟರೆ ಬಡತನ ಬರುತ್ತೆ! title=
ಪೊರಕೆಯನ್ನು ಯಾವ ಸ್ಥಳದಲ್ಲಿ ಇಡಬೇಕು?

ನವದೆಹಲಿ: ಮನೆ ಮತ್ತು ಕಚೇರಿಯಲ್ಲಿ ಸ್ವಚ್ಛತೆ ತುಂಬಾ ಮುಖ್ಯ. ಹೀಗಾಗಿ ವಾಸ್ತುಶಾಸ್ತ್ರದಲ್ಲಿ ಪೊರಕೆಗೆ ವಿಶೇಷವಾದ ಸ್ಥಾನವಿದೆ. ಇದರಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆಂಬ ನಂಬಿಕೆ ಇದೆ. ಹೀಗಾಗಿ ಪೊರಕೆಯನ್ನು ಸರಿಯಾದ ಸ್ಥಳದಲ್ಲಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಇದರಿಂದ ಧನಾತ್ಮಕ ಶಕ್ತಿ ಮನೆಯಲ್ಲಿ ನೆಲೆಸಿರುತ್ತದೆ. ಇಲ್ಲವಾದರೆ ಮನೆಯಲ್ಲಿ ನಕರಾತ್ಮಕತೆ ತುಂಬಿ ಬಡತನ ಕಾಡುತ್ತದೆ.

ಪೊರಕೆಯನ್ನು ಯಾವ ಸ್ಥಳದಲ್ಲಿ ಇಡಬೇಕು?

-ವಾಸ್ತು ಪ್ರಕಾರ ಪೊರಕೆಯನ್ನು ಈಶಾನ್ಯ ದಿಕ್ಕಿನಲ್ಲಿಡಬಾರದು. ಇದರಿಂದ ಹಣದ ಆಗಮನ ನಿಲ್ಲುತ್ತದೆ. ಹೀಗಾಗಿ ಪೊರಕೆಯನ್ನು ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿ ಇಡುವುದು ಸೂಕ್ತ.

-ಪೊರಕೆಯನ್ನು ಯಾವಾಗಲೂ ಇತರರ ಕಣ್ಣಿಗೆ ಕಾಣದಂತಹ ಸ್ಥಳದಲ್ಲಿ ಇಡಬೇಕು. ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಪೊರಕೆಯನ್ನು ಇಡಬಾರದು. ಅಡುಗೆ ಮನೆಯಲ್ಲೂ ಪೊರಕೆ ಇಡುವುದನ್ನು ಆದಷ್ಟು ತಪ್ಪಿಸಿ, ಇದರಿಂದ ಸಂಪತ್ತಿನಲ್ಲಿ ಇಳಿಕೆ ಕಂಡುಬರುತ್ತದೆ.

ಇದನ್ನೂ ಓದಿ: ಹಾಲಿನ ಚಹಾ ಅಲ್ಲ, ನಿತ್ಯ ಈ ಚಹಾ ಸೇವಿಸಿ ಕೆಲವೇ ದಿನಗಳಲ್ಲಿ ತೂಕ ಹೆಚ್ಚಳ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ!

-ಪೊರಕೆಯನ್ನು ಕಾಲಿನಲ್ಲಿ ತುಳಿಯಬೇಡಿ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.

-ಕುಟುಂಬ ಸದಸ್ಯರು ಮನೆಯಿಂದ ಹೊರಗೆ ಹೋಗುವಾಗ ಪೊರಕೆಯನ್ನು ಅಡ್ಡಲಾಗಿ ತರಬಾರದು ಮತ್ತು ಕಸವನ್ನು ಗುಡಿಸುತ್ತಿರಬಾರದು. ಆ ವೇಳೆ ಪೊರಕೆಯನ್ನು ಅಡ್ಡಲಾಗಿ ಮಲಗಿಸಬೇಕು. ಅದರಂತೆ ಸೂರ್ಯಾಸ್ತದ ಬಳಿಕ ಪೊರಕೆಯಿಂದ ಕಸವನ್ನು ಗುಡಿಸಬಾರದು.

-ಮನೆಯಲ್ಲಿ ಹಾಳಾಗಿರುವ ಪೊರಕೆಯನ್ನು ಬಳಸಬಾರದು ಮತ್ತು ಶನಿವಾರ ಮನೆಯಲ್ಲಿ ಹೊಸ ಪೊರಕೆಯನ್ನು ಖರೀದಿಸಬಾರದು.

– ಹಳೆಯ ಪೊರಕೆಯನ್ನು ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಗೆ ಹಾಕಬಾರದು.

ಇದನ್ನೂ ಓದಿ: ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಈ ತರಕಾರಿಯ ಹೇರ್ ಮಾಸ್ಕ್.!

ಇವಿಷ್ಟು ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡರೆ ಮನೆಯಲ್ಲಿ ಎಂದಿಗೂ ತೊಂದರೆಗಳಿರುವುದಿಲ್ಲ. ಮನೆಗೆ ಬಡತನ ಕಾಡುವುದಿಲ್ಲ, ಮನೆಯಲ್ಲಿ ಯಾವಾಗಲೂ ಪಾಸಿಟಿವ್ ಮನೋಭಾವನೆ ಇರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News