Best Sleeping Direction: ಸುಖ ನಿದ್ದೆ ಮಾಡಬೇಕಾದರೆ ಯಾವಾಗಲೂ ಈ ವಿಷಯಗಳ ಬಗ್ಗೆ ಇರಲಿ ಗಮನ

ಕೆಲವು ನಿಯಮಗಳನ್ನು ಅನುಸರಿಸಿದರೆ ನೆಮ್ಮದಿಯಿಂದ ನಿದ್ದೆ ಮಾಡಬಹುದು ಎನ್ನುತ್ತಾರೆ ಹಿರಿಯರು.  ಹಾಗಿದ್ದರೆ ಆ ನಿಯಮಗಳು ಯಾವುವು ನೋಡೋಣ .. .

Written by - Ranjitha R K | Last Updated : Aug 12, 2021, 08:33 PM IST
  • ಮಲಗುವಾಗ ಸರಿಯಾದ ದಿಕ್ಕನ್ನು ಆರಿಸುವುದು ಮುಖ್ಯ
  • ಉತ್ತಮ ನಿದ್ರೆಯ ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ
  • ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿನಲ್ಲಿ ಮಲಗಿಸುವುದು ಪ್ರಯೋಜನಕಾರಿ
Best Sleeping Direction: ಸುಖ ನಿದ್ದೆ ಮಾಡಬೇಕಾದರೆ ಯಾವಾಗಲೂ ಈ ವಿಷಯಗಳ ಬಗ್ಗೆ ಇರಲಿ ಗಮನ  title=
ಮಲಗುವಾಗ ಸರಿಯಾದ ದಿಕ್ಕನ್ನು ಆರಿಸುವುದು ಮುಖ್ಯ (file photo)

ನವದೆಹಲಿ : ದಿನವಿಡೀ ಕೆಲಸದ ನಂತರ ರಾತ್ರಿ ಹೊತ್ತು ಜನ ನೆಮ್ಮದಿಯಿಂದ ನಿದ್ದೆ ಮಾಡಲು ಬಯಸುತ್ತಾರೆ. ಕೆಲವರಿಗೆ ಹಾಸಿಗೆಗೆ ಒರಗಿಕೊಂಡರೂ ಸಾಕು ನಿದ್ದೆ ಬರುತ್ತದೆ. ಆದರೆ ಇನ್ನು ಕೆಲವರು, ಏನು ಮಾಡಿದರೂ ನಿದ್ದೆ ಹತ್ತಿರವೂ ಸುಳಿಯುವುದಿಲ್ಲ. ಸನಾತನ ಸಂಪ್ರದಾಯದಲ್ಲಿ, ಮಲಗುವುದಕ್ಕೂ ಕೆಲವು ನಿಯಮಗಳನ್ನು ಸೂಚಿಸಲಾಗಿದೆ. ಆ ನಿಯಮಗಳನ್ನು (Sleeping tips) ಅನುಸರಿಸಿದರೆ ನೆಮ್ಮದಿಯಿಂದ ನಿದ್ದೆ ಮಾಡಬಹುದು ಎನ್ನುತ್ತಾರೆ ಹಿರಿಯರು.  ಹಾಗಿದ್ದರೆ ಆ ನಿಯಮಗಳು ಯಾವುವು ನೋಡೋಣ .
 

ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗಿ : 
ಪೂರ್ವದ ಅಧಿಪತಿ ಇಂದ್ರ. ಇಂದ್ರ  ದೇವತೆಗಳಿಗೆ ರಾಜ. ಈ ದಿಕ್ಕಿನಲ್ಲಿಯೇ  ಸೂರ್ಯ ದೇವ (Sun)  ಮೂಡುತ್ತಾನೆ. ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ, ನೆನಪಿನ ಶಕ್ತಿ (memory) ಮತ್ತು ಏಕಾಗ್ರತೆ ಹೆಚ್ಚುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಪೂರ್ವಕ್ಕೆ ತಲೆ ಇಟ್ಟು ಮಲಗುವುದರಿಂದ ಆಧ್ಯಾತ್ಮಿಕತೆಯ ಕಡೆಗೆ ವ್ಯಕ್ತಿಯ ಒಲವು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ: Pillow Cleaning Tips : ಮನೆಯಲ್ಲಿ ಸುಲಭವಾಗಿ ಸ್ವಚ್ಛಗೊಳಿ ದಿಂಬುಗಳನ್ನ : ಕೊಳಕನ್ನ ನಿಮಿಷಗಳಲ್ಲಿ ತೆಗೆಯಲು ಈ ಟ್ರಿಕ್ ಬಳಸಿ

ಮಲಗುವಾಗ ಮುಖ ಪಶ್ಚಿಮ ದಿಕ್ಕಿಗಿರಲಿ : 
ಪಶ್ಚಿಮ ದಿಕ್ಕಿನ ಅಧಿಪತಿ ವರುಣ ದೇವ. ವರುಣ ದೇವ ನಮ್ಮ ಆತ್ಮ, ಭಾವನೆ ಮತ್ತು ಆಲೋಚನೆಗಳಿಗೆ ಸಂಬಂಧಿಸಿದ್ದಾಗಿದೆ.  ವಾಸ್ತುವಿನ ಪ್ರಕಾರ (Vastu tips) , ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಮಲಗಿದರೆ, ವ್ಯಕ್ತಿಯ ಪ್ರತಿಷ್ಠೆ ಹೆಚ್ಚುತ್ತದೆ. 

ದಕ್ಷಿಣದ ಕಡೆಗೆ ತಲೆ ಇಟ್ಟು ಮಲಗಿ : 
ಯಮದೇವ ದಕ್ಷಿಣ ದಿಕ್ಕಿನ ಅಧಿಪತಿ. ಈ ದಿಕ್ಕಿನಲ್ಲಿ ನಿಮ್ಮ ತಲೆಯಿಟ್ಟು ಮಲಗುವುದು (Sleeping directions) ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ, ಯಾವಾಗಲೂ ಉತ್ತಮ ಜೀವನ ಮತ್ತು ಉತ್ತಮ ಆರೋಗ್ಯಕ್ಕಾಗಿ ಈ ದಿಕ್ಕಿಗೆ ತಲೆ ಇಟ್ಟು ಮಲಗಬೇಕು. ಈ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದು ಒಳ್ಳೆಯ ನಿದ್ರೆ ತರುತ್ತದೆಯಲ್ಲದೆ, ಸಂತೋಷ, ಸಮೃದ್ಧಿ ಮತ್ತು ಖ್ಯಾತಿಯನ್ನು ತರುತ್ತದೆ.

ಇದನ್ನೂ ಓದಿ: ಈ ರಾಶಿಯವರಿಗೆ ಕಂಕಣ ಭಾಗ್ಯ ಬೇಗ ಕೂಡಿ ಬರುತ್ತದೆ..! ನಿಮ್ಮ ರಾಶಿ ಯಾವುದು ನೋಡಿ ..

ಉತ್ತಮ ನಿದ್ದೆಗಾಗಿ ಈ ಪರಿಹಾರಗಳನ್ನು ಮಾಡಿ :
ದಿನವಿಡೀ ಕೆಲಸದ ನಂತರ ಎಲ್ಲರೂ ಶಾಂತಿಯಿಂದ ನಿದ್ದೆ ಮಾಡಲು ಬಯಸುತ್ತಾರೆ. ಉತ್ತಮ ನಿದ್ದೆ ಮಾಡಲು, ಮೊದಲು ಸಮಯಕ್ಕೆ ಸರಿಯಾಗಿ ಮಲಗುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಮುಂಜಾನೆ ತಡವಾಗಿ ಏಳುವುದನ್ನು ತಪ್ಪಿಸಿ. ಅದೇ ಸಮಯದಲ್ಲಿ, ರಾತ್ರಿ ಮಲಗುವ ಎರಡು ಗಂಟೆಗಳ ಮೊದಲು ಊಟ ಮಾಡಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News