Belly Fat Reduce Tips: ಒಂದೇ ವಾರದಲ್ಲಿ ಬಳಕುವ ಬಳ್ಳಿಯಂತಹ ಸೊಂಟ ನಿಮ್ಮದಾಗಿಸಲು ಈ 3 ಜ್ಯೂಸ್ ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ!

Tips To Reduce Belly Fat: ಹೆಚ್ಚುತ್ತಿರುವ ದೇಹದ ತೂಕವನ್ನು ನಿಯಂತ್ರಿಸಲು ಜ್ಯೂಸ್ ಸೇವನೆಯು ಉತ್ತಮ ಆಯ್ಕೆಯಾಗಿದೆ. ಕೆಲವು ಆರೋಗ್ಯಕರ ಜ್ಯೂಸ್ ಪಾಕವಿಧಾನಗಳನ್ನು ತಿಳುದುಕೊಳ್ಳೋಣ ಬನ್ನಿ  (Lifestyle News In Kannada)  

Written by - Nitin Tabib | Last Updated : Feb 16, 2024, 01:10 PM IST
  • ಸೋರೆಕಾಯಿ ಜ್ಯೂಸ್ ನಿಮ್ಮ ತೂಕ ಇಳಿಕೆ ಮಾಡಲು ಒಂದು ಮ್ಯಾಜಿಕಲ್ ಡ್ರಿಂಕ್ ಆಗಿದೆ. ಆಯುರ್ವೇದದ ಪ್ರಕಾರ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಬೊಜ್ಜು ಬಹಳ ಬೇಗ ಕಡಿಮೆಯಾಗುತ್ತದೆ.
  • ಸೋರೆಕಾಯಿ ಜ್ಯೂಸ್ ಕೊಬ್ಬು-ಮುಕ್ತವಾಗಿರುವುದರಿಂದ, ಇದು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ,
  • ಇದು ದೇಹವನ್ನು ತಂಪಾಗಿಡುವುದರ ಜೊತೆಗೆ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಇದು ನಿಮ್ಮ ತೂಕವನ್ನು ವೇಗವಾಗಿ ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ
Belly Fat Reduce Tips: ಒಂದೇ ವಾರದಲ್ಲಿ ಬಳಕುವ ಬಳ್ಳಿಯಂತಹ ಸೊಂಟ ನಿಮ್ಮದಾಗಿಸಲು ಈ 3 ಜ್ಯೂಸ್ ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ! title=

Belly Fat Reduce Tips: ತೂಕ ಇಳಿಕೆಗಾಗಿ ಹಲವು ಜನರು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ ಮತ್ತು ಅಷ್ಟಾಗ್ಯೂ ಕೂಡ ಅವರಿಗೆ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಇದಕ್ಕೆ ಕಾರಣ ಅವರು ಮಾಡಿದ ತಪ್ಪುಗಳಾಗಿರಬಹುದು. ಹಸಿವನ್ನು ನಿಯತ್ರಿರುವ ಮೂಲಕ ನೀವು ತೂಕ ಇಳಿಸಿಕೊಳ್ಳಬಹುದು ಎಂದು ಯೋಚಿಸುತ್ತಿದ್ದರೆ, ಅದು ತಪ್ಪು. ತೂಕವನ್ನು ಕಳೆದುಕೊಳ್ಳಲು, ಸರಿಯಾದ ಆಹಾರವನ್ನು ಆಯ್ಕೆ ಮಾಡುವುದು ಮುಖ್ಯ ಮತ್ತು ಖಾಲಿ ಹೊಟ್ಟೆ ಅಲ್ಲ. ನೀವು ವೇಗವಾಗಿ ತೂಕವನ್ನು ಇಳಿಸಿಕೊಳ್ಳಲು ಬಯಸಿದರೆ, ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸಿ. ಮುಖ್ಯವಾಗಿ ಫೈಬರ್ ಸಮೃದ್ಧವಾಗಿರುವ ಆಹಾರ ಸೇವನೆ ತುಂಬಾ ಮುಖ್ಯ. ಸಂಪೂರ್ಣ ಹಣ್ಣುಗಳು ಮತ್ತು ತರಕಾರಿಗಳ ಮೂಲಕ ನೀವು ಎಲ್ಲಾ ಪೋಷಕಾಂಶಗಳನ್ನು ಪಡೆಯಬಹುದು. ಆದರೆ ಕೆಲವೊಮ್ಮೆ ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳು, ಕೊಬ್ಬು ಮತ್ತು ಪ್ರೋಟೀನ್‌ಗಳ ಕೊರತೆ ಇರುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಜ್ಯೂಸ್ ಅನ್ನು ಪರ್ಯಾಯವಾಗಿ ತೆಗೆದುಕೊಳ್ಳಬಹುದು. ನಿಮ್ಮ ಸೊಂಟವನ್ನು ಬಳಕುವ ಬಳ್ಳಿಯಂತೆ ಮಾಡಲು ನೀವು ಬಯಸುತ್ತಿದ್ದರೆ, ಜ್ಯೂಸ್ ನಿಮಗೆ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಪ್ರತಿದಿನ 1 ಗ್ಲಾಸ್ ಜ್ಯೂಸ್ ಕುಡಿಯುವುದರಿಂದ ಅದು ನಿಮ್ಮ ದೇಹದ ಶಕ್ತಿಯನ್ನು ಕಾಪಾಡುತ್ತದೆ. ಈ ಲೇಖನದಲ್ಲಿ ನಾವು ನಿಮಗೆ ಕೆಲವು ಜ್ಯೂಸ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವು ನಿಮ್ಮ ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಹೆಚ್ಚುತ್ತಿರುವ ದೇಹದ ತೂಕವನ್ನು ಕಡಿಮೆ ಮಾಡಲು ಯಾವ ಜ್ಯೂಸ್ ಕುಡಿಯುವುದು ಆರೋಗ್ಯಕರ ತಿಳಿದುಕೊಳ್ಳೋಣ ಬನ್ನಿ (Lifestyle News In Kannada)

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಕ್ಯಾರೆಟ್ ಜ್ಯೂಸ್ ಬಳಸಿ
ಹೆಚ್ಚುತ್ತಿರುವ ದೇಹದ ತೂಕವನ್ನು ಕಡಿಮೆ ಮಾಡಲು ಕ್ಯಾರೆಟ್ ಜ್ಯೂಸ್ ಕುಡಿಯುವುದು ತುಂಬಾ ಲಾಭಕಾರಿ ಮತ್ತು ಆರೋಗ್ಯಕರ ಆಯ್ಕೆಯಾಗಿದೆ. ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಒಂದು ಲೋಟ ಕ್ಯಾರೆಟ್ ಜ್ಯೂಸ್ ಅನ್ನು ಕುಡಿಯುವುದರಿಂದ ನಿಮ್ಮ ತೂಕವನ್ನು ನೀವು ವೇಗವಾಗಿ ಕಳೆದುಕೊಳ್ಳಬಹುದು.  ಏಕೆಂದರೆ ಇದರಿಂದ ನಿಮ್ಮ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ. ಅಲ್ಲದೆ ಇದು ಪಿತ್ತರಸ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ, ನಿಮಗೆ ಉತ್ತಮ ಫಲಿತಾಂಶ ಬೇಕಾದರೆ, ಕ್ಯಾರೆಟ್ ಜ್ಯೂಸ್‌ಗೆ ಸ್ವಲ್ಪ ಶುಂಠಿ ಮತ್ತು ಕಿತ್ತಳೆ ರಸವನ್ನು ಸೇರಿಸಿ ಮತ್ತು ಕುಡಿಯಿರಿ. ಇದರಿಂದ ನಿಮ್ಮ ತೂಕವನ್ನು ಬಹುಬೇಗ ಕಡಿಮೆ ಮಾಡಬಹುದು.

ಸೊಂಟ ಸ್ಲಿಮ್ ಮಾಡಲು ಸೋರೆಕಾಯಿ ಜ್ಯೂಸ್
ಸೋರೆಕಾಯಿ ಜ್ಯೂಸ್ ನಿಮ್ಮ ತೂಕ ಇಳಿಕೆ ಮಾಡಲು ಒಂದು ಮ್ಯಾಜಿಕಲ್ ಡ್ರಿಂಕ್ ಆಗಿದೆ.  ಆಯುರ್ವೇದದ ಪ್ರಕಾರ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಬೊಜ್ಜು ಬಹಳ ಬೇಗ ಕಡಿಮೆಯಾಗುತ್ತದೆ. ಸೋರೆಕಾಯಿ ಜ್ಯೂಸ್ ಕೊಬ್ಬು-ಮುಕ್ತವಾಗಿರುವುದರಿಂದ, ಇದು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ, ಇದು ದೇಹವನ್ನು ತಂಪಾಗಿಡುವುದರ ಜೊತೆಗೆ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಇದು ನಿಮ್ಮ ತೂಕವನ್ನು ವೇಗವಾಗಿ ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.

ಇದನ್ನೂ ಓದಿ-Taming Diabetes: ಕೇವಲ ಮಸಾಲೆ ಅಷ್ಟೇ ಅಲ್ಲ, ಆಯುರ್ವೇದ ಔಷಧಿಯೂ ಹೌದು ಈ ಚಕ್ಕೆ, ಮಧುಮೆಹಿಗಳಿಗೆ ರಾಮಬಾಣ!

ತೂಕ ಇಳಿಕೆಗೆ ಗೋಧಿ ಹುಲ್ಲಿನ ಜ್ಯೂಸ್
ಹೆಚ್ಚುತ್ತಿರುವ ದೇಹದ ತೂಕವನ್ನು ನಿಯಂತ್ರಿಸಲು ಗೋಧಿ ಹುಲ್ಲಿನ ಜ್ಯೂಸ್ ತುಂಬಾ ಆರೋಗ್ಯಕರ ಆಯ್ಕೆಯಾಗಿದೆ. ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ಕ್ಯಾಲೊರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸುಡಲು ಮಾಡಲು ಸಹಾಯ ಮಾಡುತ್ತದೆ. ವೀಟ್ ಗ್ರಾಸ್ ಹೆಚ್ಚಿನ ಫೈಬರ್ ನಿಂದ ಸಮೃದ್ಧವಾಗಿದೆ, ಇದು ಹಸಿವನ್ನು ನಿಗ್ರಹಿಸುವಲ್ಲಿ ಪರಿಣಾಮಕಾರಿ ಸಾಬೀತಾಗುತ್ತದೆ. 

ಇದನ್ನೂ ಓದಿ-Weight Loss Fruit: ತೂಕ ಇಳಿಕೆಗೆ ರಾಮಬಾಣ ಉಪಾಯ ಈ ಶಬರಿ ಹಣ್ಣು! ಇನ್ನೇನು ಸೀಸನ್ ಮುಗಿತಾ ಬಂತು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News